ಡಿಸ್ಕೌಂಟ್‌ನಲ್ಲಿ ರೆಡ್ಮಿ ಫೋನ್ ಬೇಕೆ?..ಹಾಗಿದ್ರೆ, ಈ ಆಫರ್ ಬಿಡಬೇಡಿ!
ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಮೊಬೈಲ್ ಕಂಪನಿಯು ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಬಜೆಟ್ ಬೆಲೆಯ ಹಾಗೂ ಅಗ್ಗದ ಪ್ರೈಸ್‌ಟ್ಯಾಗ್‌ನ ಮೊಬೈಲ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅವುಗಳಲ್ಲಿ ಒಂದಾದ ರೆಡ್ಮಿ 12C ಫೋನ್ ಈಗ ಭರ್ಜರಿ ಆಫರ್ ಪಡೆದಿದ್ದು, ಗ್ರಾಹಕರ OMG ಎನ್ನುವಂತೆ ಮಾಡಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ರೆಡ್ಮಿ 12C ಫೋನ್ ಶೇ. 41% ರಷ್ಟು ರಿಯಾಯಿತಿ ಪಡೆದಿದೆ. ಈ ಸ್ಮಾರ್ಟ್‌ಫೋನ್ 4GB RAM + 64GB ಸ್ಟೋರೇಜ್‌ನ ವೇರಿಯಂಟ್ ಮಾಡೆಲ್ ಬೆಲೆಯು 13,999ರೂ. ಗಳ ಆಗಿದ್ದು, ಆದ್ರೆ ಈಗ ವಿಶೇಷ ಕೊಡುಗೆಯಲ್ಲಿ 8,299ರೂ. ಗಳ ಡಿಸ್ಕೌಂಟ್ ಬೆಲೆಗೆ ಖರೀದಿ ಮಾಡಲು ಅವಕಾಶ ಇದೆ.

ಅಂದಹಾಗೆ ರೆಡ್ಮಿ 12C ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ವ್ಯವಸ್ಥೆಯನ್ನು ಸಪೋರ್ಟ್ ಮಾಡುತ್ತದೆ. ಇನ್ನು ಈ ಮೊಬೈಲ್ ಶಾಡೋ ಬ್ಲ್ಯಾಕ್, ಸೀ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಕಲರ್‌ಗಳ ಆಯ್ಕೆಗಳಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ. ಹಾಗಾದರೆ ರೆಡ್ಮಿ 12C ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ 12C ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರೆಡ್ಮಿ 12C ಮೊಬೈಲ್ 1650 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.71 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದ್ದು, 20.6:9 ಅನುಪಾತ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇಯು ಟಿನ್ನಿ ಡಿವ್ ಡ್ರಾಪ್ ನಾಚ್ ರಚನೆ ಹೊಂದಿದ್ದು, ಜೊತೆಗೆ 500 nits ಬ್ರೈಟ್ನೆಸ್ ಪಡೆದಿದೆ.
ರೆಡ್ಮಿ 12C ಪ್ರೊಸೆಸರ್ ಪವರ್
ರೆಡ್ಮಿ 12C ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್ ಅನ್ನು ಪಡೆದಿದೆ. ಆಂಡ್ರಾಯ್ಡ್ 12 ಓಎಸ್ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 4GB RAM + 128GB ಮತ್ತು 6GB + 128GB ಆಂತರೀಕ ಸ್ಟೋರೇಜ್ ವೇರಿಯಂಟ್ ಸಾಮರ್ಥ್ಯದ ಆಯ್ಕೆಗಳನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ರೆಡ್ಮಿ 12C ಕ್ಯಾಮೆರಾ ಸೆನ್ಸಾರ್ ಮಾಹಿತಿ
ರೆಡ್ಮಿ 12C ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ನಲ್ಲಿ ಇದೆ. ದ್ವಿತೀಯ ಕ್ಯಾಮೆರಾ ಸೆನ್ಸಾರ್ ಬಗ್ಗೆ ಮಾಹಿತಿ ತಿಳಿಸಿಲ್ಲ. ಹಾಗೆಯೇ ಈ ಮೊಬೈಲ್ ತನ್ನ ವರ್ಗದಲ್ಲೇ ಉತ್ತಮ ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ರೆಡ್ಮಿ 12C ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ ಮಾಹಿತಿ
ರೆಡ್ಮಿ 12C ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಅದಕ್ಕೆ ಸಪೋರ್ಟ್ ಆಗಿ ಇದು 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ಸಂಗ್ರಹಣೆ ವಿಸ್ತರಣೆಗೆ ಅವಕಾಶ ಇದೆ.
ಈ ಮೊಬೈಲ್ ಫೋನ್ ಹೈಬ್ರಿಡ್ ಸಿಮ್ ಸ್ಲಾಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 4G/5G VOLTE, ವೈ-ಫೈ, ಬ್ಲೂಟೂತ್ v5.0, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.
ರೆಡ್ಮಿ 12C ಮೆಮೊರಿ ಮತ್ತು ಕಲರ್ ಆಯ್ಕೆ
ರೆಡ್ಮಿ 12C ಮೊಬೈಲ್ 4GB RAM + 128GB ಮತ್ತು 6GB + 128GB ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಇನ್ನು ಈ ಫೋನ್ ಶಾಡೋ ಬ್ಲ್ಯಾಕ್, ಸೀ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಬಣ್ಣಗಳಲ್ಲಿ ಖರೀದಿ ಮಾಡಬಹುದು.


Click it and Unblock the Notifications








