Home
ಸುದ್ದಿಜಾಲ

ಈ ರೆಡ್ಮಿ ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ; ಗ್ರಾಹಕರು ಫುಲ್‌ ಖುಷ್!

ಲೀಡಿಂಗ್ ಇ ಕಾಮರ್ಸ್‌ ಎನಿಸಿರುವ ಫ್ಲಿಪ್‌ಕಾರ್ಟ್‌ ಮೊಬೈಲ್‌ಗಳಿಗೆ ಆಕರ್ಷಕ ಕೊಡುಗೆ ನೀಡುತ್ತದೆ. ಈ ಪ್ಲಾಟ್‌ಫಾರ್ಮ್ ಅಗ್ಗದ ಬೆಲೆಯ ಫೋನ್‌ಗಳಿಗೂ ಹಾಗೂ ದುಬಾರಿ ದರದ ಫೋನ್‌ಗಳಿಗೂ ರಿಯಾಯಿತಿ ಲಭ್ಯ ಮಾಡುತ್ತದೆ. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ರೆಡ್ಮಿ A3 ಮೊಬೈಲ್‌ ಬೊಂಬಾಟ್‌ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ರೆಡ್ಮಿ A3 ಸ್ಮಾರ್ಟ್‌ಫೋನ್‌ ಶೇ. 27% ರಷ್ಟು ಡಿಸ್ಕೌಂಟ್‌ ಪಡೆದಿದೆ. ಈ ಫೋನಿನ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಅನ್ನು ಖರೀದಿದಾರರು 7,933ರೂ. ಗಳ ಆಫರ್‌ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳಬಹುದು. ಇದಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳಿಂದ ಇತರೆ ರಿಯಾಯಿತಿ ಕೂಡಾ ಲಭ್ಯ.

ಈ ರೆಡ್ಮಿ ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ; ಗ್ರಾಹಕರು ಫುಲ್‌ ಖುಷ್!

ಇನ್ನು ರೆಡ್ಮಿ A3 ಫೋನ್‌ 5000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದ್ದು, ಹಾಗೆಯೇ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಪಡೆದಿದೆ. ಇದರೊಂದಿಗೆ ಮೊಬೈಲ್‌ನ ಮೊದಲ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಹಾಗಾದರೇ ರೆಡ್ಮಿ A3 ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ A3 ಫೋನ್‌ - ಫೀಚರ್ಸ್‌

ರೆಡ್ಮಿ A3 ಮೊಬೈಲ್‌ 6.71 ಇಂಚಿನ ಹೆಚ್‌ಡಿ ಪ್ಲಸ್‌ ಐಪಿಎಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಡಿಸ್‌ಪ್ಲೇ IPS LCD ಸ್ಕ್ರೀನ್‌ ಮೊಬೈಲ್‌ ಆಗಿದ್ದು, 90Hz ರಿಫ್ರೆಶ್ ರೇಟ್ ಸಪೋರ್ಟ್‌ ಹೊಂದಿದೆ. ಇದಲ್ಲದೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ.

ರೆಡ್ಮಿ A3 ಫೋನ್‌ 2.2 GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ) ಸಪೋರ್ಟ್‌ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 3GB RAM + 64 GB, 4GB RAM + 128 GB ಮತ್ತು 6GB RAM + 128 GB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಅಲ್ಲದೇ ಮೈಕ್ರೊ ಎಸ್‌ಡಿ ಮೂಲಕ 1TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಆಯ್ಕೆ ಇದೆ.

ರೆಡ್ಮಿ A3 ಮೊಬೈಲ್‌ ಹಿಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, 0.08ಎಂಪಿ ದ್ವಿತೀಯ ಕ್ಯಾಮೆರಾ ಸೆನ್ಸಾರ್‌ ಸಹ ಪಡೆದಿದೆ. ಅಲ್ಲದೇ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಹಾಗೆಯೇ ಇದರೊಂದಿಗೆ ಹಿಂಭಾಗದ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಷ್‌ ಅನ್ನು ಸಹ ನೀಡಲಾಗಿದೆ.

ರೆಡ್ಮಿ A3 ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 10 W ಚಾರ್ಜಿಂಗ್ ಅನ್ನು ಬೆಂಬಲ ನೀಡಲಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳು ಡ್ಯುಯಲ್ 4G VoLTE, Wi-Fi 802.11 b/g/n, ಬ್ಲೂಟೂತ್ 5.0, GPS + GLONASS, USB ಟೈಪ್ - C ಪೋರ್ಟ್ ಅನ್ನು ಪಡೆದುಕೊಂಡಿದೆ. ಇದಲ್ಲದೆ 3.5mm ಆಡಿಯೋ ಜಾಕ್, FM ರೇಡಿಯೋ, ಸೈಡ್ - ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

Best Mobiles in India

English summary
Biggest price cut on REDMI A3 in India. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+