Home
ಸುದ್ದಿಜಾಲ

108ಎಂಪಿ ಕ್ಯಾಮೆರಾ ಇರುವ ಈ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಲೀಡಿಂಗ್ ಇ ಕಾಮರ್ಸ್‌ ತಾಣ ಎನಿಸಿರುವ ಅಮೆಜಾನ್‌ ಒಂದಿಲ್ಲೊಂದು ವಿಶೇಷ ಮಾರಾಟದ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಮುಖ್ಯವಾಗಿ ಆಯ್ದ ಮೊಬೈಲ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಿಸುತ್ತದೆ ಹಾಗೂ ಇದರೊಂದಿಗೆ ಬ್ಯಾಂಕ್‌ ಆಫರ್‌ ಸಹ ದೊರೆಯುತ್ತದೆ. ಸದ್ಯ ಅಮೆಜಾನ್‌ ತಾಣದಲ್ಲಿ ಟೆಕ್ನೋ ಡೇಸ್‌ ಸೇಲ್‌ ಚಾಲ್ತಿ ಇದ್ದು, ಟೆಕ್ನೋ ಸಂಸ್ಥೆಯ ಮೊಬೈಲ್‌ಗಳಿಗೆ ಆಕರ್ಷಕ ರಿಯಾಯಿತಿ ತಿಳಿಸಿದೆ. ಆ ಪೈಕಿ ಟೆಕ್ನೋ ಪೋವಾ 6 ಪ್ರೊ 5G ಮೊಬೈಲ್‌ ಅತ್ಯುತ್ತಮ ಕೊಡುಗೆಯೊಂದಿಗೆ ಖರೀದಿಗೆ ಲಭ್ಯ ಇದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ ನಲ್ಲಿ ಟೆಕ್ನೋ ಪೋವಾ 6 ಪ್ರೊ 5G ಮೊಬೈಲ್‌ ಶೇ. 13% ರಷ್ಟು ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 16GB*+256GB ಸ್ಟೋರೇಜ್ ವೇರಿಯಂಟ್‌ 19,999ರೂ. ಗಳ ಆಫರ್‌ ಬೆಲೆ ಖರೀದಿಗೆ ಲಭ್ಯ ಇದೆ. ಲಭ್ಯ ಇರುವ ಇತರೆ ಆಫರ್‌ ಪಡೆದುಕೊಂಡರೆ, 18,499ರೂ. ಗಳಿಗೆ ಖರೀದಿಸಲು ಚಾನ್ಸ್‌ ಇದೆ. ಇನ್ನು ಈ ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಹ ಪಡೆದುಕೊಂಡಿದೆ.

108ಎಂಪಿ ಕ್ಯಾಮೆರಾ ಇರುವ ಈ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಅಂದಹಾಗೆ ಈ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದ್ದು, ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಈ ಫೋನ್‌ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಪಿ ಕ್ಯಾಮೆರಾ ಅನ್ನು ಪಡೆದುಕೊಂಡಿದೆ. ಹಾಗಾದರೆ ಟೆಕ್ನೋ ಪೋವಾ 6 ಪ್ರೊ 5G ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಪೋವಾ 6 ಪ್ರೊ 5G ಫೀಚರ್ಸ್‌

ಟೆಕ್ನೋ ಪೋವಾ 6 ಪ್ರೊ 5G ಸ್ಮಾರ್ಟ್‌ಫೋನ್‌ 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1,300 ನಿಟ್ಸ್‌ ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಮತ್ತು 100% DCI-P3 ಬಣ್ಣದ ಹರವು ಕವರೇಜ್ ಅನ್ನು ಈ ಫೋನ್‌ ಬೆಂಬಲಿಸಲಿದೆ.

ಟೆಕ್ನೋ ಪೋವಾ 6 ಪ್ರೊ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ ಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಎರಡು ಸ್ಟೋರೇಜ್‌ ವೇರಿಯಂಟ್‌ನಲ್ಲಿ ಈ ಫೋನ್‌ ಲಭ್ಯ ಇದೆ. ಹಾಗೆಯೇ ಆಂಡ್ರಾಯ್ಡ್‌ 14 ಆಧಾರಿತ HiOS ಅನ್ನು ಈ ಸ್ಮಾರ್ಟ್‌ಫೋನ್ ರನ್ ಮಾಡಲಿದೆ.

ಟೆಕ್ನೋ ಪೋವಾ 6 ಪ್ರೊ 5G ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 108 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಆಯ್ಕೆ ಸಹ ಪಡೆದಿದೆ. ತೃತೀಯ ಕ್ಯಾಮೆರಾವು 0.08 ಮೆಗಾಪಿಕ್ಸೆಲ್‌ ಸಹಾಯಕ ಲೆನ್ಸ್ ಪಡೆದಿದೆ. ಅಲ್ಲದೆ ಸಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಇದರಲ್ಲಿ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಟೆಕ್ನೋ ಪೋವಾ 6 ಪ್ರೊ 5G ಸ್ಮಾರ್ಟ್‌ಫೋನ್ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಪಡೆದಿದ್ದು, 70W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಹಾಗೆಯೇ ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಮತ್ತು ಸ್ಪ್ಲಾಶ್‌ ಮತ್ತು ಧೂಳಿನ ಪ್ರತಿರೋಧಕ್ಕಾಗಿ IP53 ರೇಟಿಂಗ್ ಅನ್ನು ಈ ಫೋನ್‌ ಹೊಂದಿದೆ. ಇದರ ಜೊತೆಗೆ ನೀವು ಈ ಫೋನ್‌ ಅನ್ನು ಕಾಮೆಟ್ ಗ್ರೀನ್ ಮತ್ತು ಮೆಟಿಯೊರೈಟ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
Biggest Price cut on Tecno Pova 6 Pro 5G on Tecno Days Sale in Amazon India. Check offer price, features and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+