Home
ಸುದ್ದಿಜಾಲ

ಅತ್ಯುತ್ತಮ ಕ್ಯಾಮೆರಾ ಇರುವ ಈ ವಿವೋ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಲೀಡಿಂಗ್ ಶಾಪಿಂಗ್‌ ಪ್ಲಾಟ್‌ಫಾರ್ಮ್ ಎನಿಸಿರುವ ಫ್ಲಿಪ್‌ಕಾರ್ಟ್‌ನಲ್ಲಿ ( Flipkart ) ಮೊಬೈಲ್‌ಗಳಿಗೆ ವಿಶೇಷ ಸೇಲ್‌ ಆಯೋಜಿಸುವ ಮೂಲಕ ಹೆಚ್ಚಿನ ಆಫರ್‌ ನೀಡುತ್ತಾ ಗ್ರಾಹಕರನ್ನು ಸೆಳೆಯುತ್ತದೆ. ಆ ಪೈಕಿ ಸದ್ಯ ವಿವೋ T3 ಅಲ್ಟ್ರಾ (Vivo T3 Ultra) ಸ್ಮಾರ್ಟ್‌ಫೋನ್‌ ಬೊಂಬಾಟ್‌ ಬೆಲೆ ಇಳಿಕೆಯಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಅಚ್ಚರಿಯಿಂದ ಹಿಂತಿರುಗಿ ನೋಡುವಂತೆ ಆಗಿದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ವಿವೋ T3 ಅಲ್ಟ್ರಾ (Vivo T3 Ultra) ಮೊಬೈಲ್‌ ಶೇ. 10% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 8 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 33,999ರೂ. ಗಳ ಕೊಡುಗೆಯ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ದೊರೆಯುತ್ತದೆ.

ಅತ್ಯುತ್ತಮ ಕ್ಯಾಮೆರಾ ಇರುವ ಈ ವಿವೋ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಮೀಡಿಯಾಟೆಕ್ ಡೈಮೆನ್ಸಿಟಿ 9200+ SoC ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡುವ ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ವ್ಯವಸ್ಥೆ ಪಡೆದಿದೆ. ಇನ್ನುಳಿದಂತೆ ವಿವೋ T3 ಅಲ್ಟ್ರಾ ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ವಿವೋ T3 ಅಲ್ಟ್ರಾ - ಫೀಚರ್ಸ್‌

ವಿವೋ T3 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.78 ಇಂಚಿನ 3D ಕರ್ವ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 2800 x 1260 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಅಲ್ಲದೇ 120Hz ರಿಫ್ರೆಶ್ ರೇಟ್‌ ಆಯ್ಕೆ ಒಳಗೊಂಡಿದ್ದು, ಇದು ಮೀಡಿಯಾಟೆಕ್ ಡೈಮೆನ್ಸಿಟಿ 9200+ SoC ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದೆ. ಅಲ್ಲದೇ ಇದು ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್ ಸಹ ಹೊಂದಿದೆ.

ವಿವೋ T3 ಅಲ್ಟ್ರಾ ಸ್ಮಾರ್ಟ್‌ಫೋನ್‌ 8GB + 128GB, 8GB + 256GB ಮತ್ತು 12GB + 256GB ಸ್ಟೋರೇಜ್‌ ಆಯ್ಕೆಗಳನ್ನು ಹೊಂದಿದೆ. ಅಲ್ಲದೇ ಇದು ಎರಡು ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಮೊಬೈಲ್‌ನ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಇನ್ನು ಇದರ ಸೆಲ್ಫಿ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಸೌಲಭ್ಯ ಪಡೆದಿದೆ.

ವಿವೋ T3 ಅಲ್ಟ್ರಾ ಸ್ಮಾರ್ಟ್‌ಫೋನ್‌ 5500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಕೂಡಾ ಪಡೆದಿದ್ದು, ಇದಕ್ಕೆ ಅನುಗುಣವಾಗಿ 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಸಹ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ ಫೈ 6, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಸೈಡ್‌ ಮೌಂಟ್‌ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿದೆ.

ವಿವೋ T3 ಅಲ್ಟ್ರಾ ಸ್ಮಾರ್ಟ್‌ಫೋನ್‌ 8GB + 128GB ಸ್ಟೋರೇಜ್‌ ವೇರಿಯಂಟ್‌, 8GB + 256GB ವೇರಿಯಂಟ್‌ ಮತ್ತು 12GB + 256GB ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಆಸಕ್ತ ಗ್ರಾಹಕರು ಈ ಮೊಬೈಲ್‌ ಅನ್ನು ಗ್ರೀನ್‌ ಹಾಗೂ ಗ್ರೇ ಕಲರ್‌ ಆಯ್ಕೆಯಲ್ಲಿ ಖರೀದಿ ಮಾಡಬಹುದು.

Best Mobiles in India

English summary
biggest price cut on vivo T3 Ultra on flipkart sale. Check offer Price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+