ಹಾನರ್ 90 5G ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಹೊಸ ಸ್ಮಾರ್ಟ್‌ಫೋನ್‌ಗಳಿಗೂ ಒಂದಿಲ್ಲೊಂದು ರಿಯಾಯಿತಿ ಆಫರ್ ಲಭ್ಯ ಮಾಡುತ್ತ ಸಾಗಿದೆ. ಹಾಗೆಯೇ ಇದೀಗ ಹಾನರ್ ಬ್ರ್ಯಾಂಡ್‌ನ ಹಾನರ್ 90 5G ಮೊಬೈಲ್‌ಗೆ ಈಗ ಭರ್ಜರಿ ರಿಯಾಯಿತಿ ಪಡೆದಿದ್ದು, ಮೊಬೈಲ್ ಪ್ರಿಯ ಗ್ರಾಹಕರಿಗೆ ಸಿಹಿಸುದ್ದಿ ಎನಿಸಿದೆ.
ಹೌದು, ಫ್ಲಿಪ್‌ಕಾರ್ಟ್ ತಾಣದಲ್ಲಿ ಹಾನರ್ 90 5G ಫೋನ್ ಶೇ. 44% ರಿಯಾಯಿತಿ ಪಡೆದಿದೆ. ಈ ಫೋನ್ 12 GB RAM + 512 GB ವೇರಿಯಂಟ್ 27,990ರೂ. ಗಳ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆಗಳು ಹಾಗೂ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ಸಿಗಲಿವೆ.

ಅಂದಹಾಗೆ ಈ ಬಜೆಟ್ ಬೆಲೆಯ ಮೊಬೈಲ್ ಸ್ನಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್ ಬಲವನ್ನು ಪಡೆದಿದೆ. ಹಾಗೆಯೇ ಇದು 66W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಸಹ ಒಳಗೊಂಡಿದೆ. ಇನ್ನುಳಿದಂತೆ ಹಾನರ್ 90 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಹಾನರ್ 90 5G ಸ್ಮಾರ್ಟ್‌ಫೋನ್ ಫೀಚರ್ಸ್
ಹಾನರ್ 90 5G ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಜೊತೆಗೆ ಈ ಫೋನ್ 1,200 x 2,664 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 120Hz ನ ರಿಫ್ರೆಶ್ ರೇಟ್ ಸಪೋರ್ಟ್ ಪಡೆದಿದ್ದು, 1,600 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಪಡೆದುಕೊಂಡಿದೆ.
ಹಾನರ್ ಸಂಸ್ಥೆಯ ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್ ಒಎಸ್ 7.1 ಸಪೋರ್ಟ್ ಹೊಂದಿದೆ. ಇನ್ನು ಇದು 8 + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.
ಅದೇ ರೀತಿ ಹಾನರ್ ಕಂಪನಿಯ ಈ 5G ಸ್ಮಾರ್ಟ್‌ಫೋನ್ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಹಾಗೆಯೇ 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.
ಅಲ್ಲದೇ ಹಾನರ್ 90 5G ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಕೂಡಾ ಪಡೆದುಕೊಂಡಿದ್ದು, ಇದಕ್ಕೆ ಸಪೋರ್ಟ್ ಆಗಿ 66W ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ 5G, 4G, Wi-Fi 6, ಬ್ಲೂಟೂತ್ 5.2, ಜಿಪಿಎಸ್, NFC, ಮತ್ತು ಯುಎಸ್‌ಬಿ ಟೈಪ್-C ಪೋರ್ಟ್ ಅನ್ನು ಸಪೋರ್ಟ್ ಒಳಗೊಂಡಿದೆ.
ಅಂದಹಾಗೆ ಗ್ರಾಹಕರು ಹಾನರ್ 90 5G ಮೊಬೈಲ್ 8 + 256 GB ಹಾಗೂ 12 GB + 512 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿ ಮಾಡಬಹುದು. ಹಾಗೆಯೇ ಗ್ರಾಹಕರು ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ಡಿಸ್ಕೌಂಟ್ ಪ್ರೈಸ್ ಟ್ಯಾಗ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಈ ಫೋನ್ ಗ್ರೀನ್, ಸಿಲ್ವರ್ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








