ಈ ಎಂಟ್ರಿ ಲೆವೆಲ್ ಮೊಬೈಲ್‌ಗೂ ಭರ್ಜರಿ ರಿಯಾಯಿತಿ; ಗ್ರಾಹಕರು ಖುಷ್!
ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್ ಎಲ್ಲ ಮಾದರಿಯ ಮೊಬೈಲ್‌ಗಳಿಗೂ ಏನಾದರೊಂದು ರಿಯಾಯಿತಿ ಘೋಷಿಸುತ್ತದೆ. ಇನ್ನು ಯಾವುದಾದರೂ ವಿಶೇಷ ಮಾರಾಟಗಳಲ್ಲಿ ಆಕರ್ಷಕ ಡಿಸ್ಕೌಂಟ್ ಅಧಿಕವಾಗಿರುತ್ತದೆ. ಸದ್ಯ ಟೆಕ್ನೋ ಸಂಸ್ಥೆಯ ಪೊಕೊ C65 (POCO C65) ಮೊಬೈಲ್ ಗಮನಾರ್ಹ ದರ ಇಳಿಕೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತನ್ನ ವೆಬ್‌ಸೈಟ್‌ನಲ್ಲಿ ಪೊಕೊ ಸಂಸ್ಥೆಯ ಪೊಕೊ C65 (POCO C65) ಮೊಬೈಲ್ ಶೇ. 38% ರಷ್ಟು ನೇರ ರಿಯಾಯಿತಿ ದರದಲ್ಲಿ ಪಡೆದುಕೊಂಡಿದೆ. ಈ ಮೊಬೈಲ್‌ನ 4 GB RAM + 128 GB ವೇರಿಯಂಟ್ ಆಫರ್‌ನಲ್ಲಿ 6,799ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಲಭ್ಯ ಇರುವ ಎಲ್ಲ ಕೊಡುಗೆ ಪಡೆದುಕೊಂಡರೇ, ಇದನ್ನು ಮತ್ತಷ್ಟು ಡಿಸ್ಕೌಂಟ್‌ಗೆ ಪಡೆಯಬಹುದಾಗಿದೆ.

ಅಂದಹಾಗೆ ಈ ಎಂಟ್ರಿ ಲೆವೆಲ್ ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್ ಸೌಲಭ್ಯವನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಪೊಕೊ C65 ಸ್ಮಾರ್ಟ್‌ಫೋನಿನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಪೊಕೊ C65 ಫೋನ್ - ಫೀಚರ್ಸ್
ಪೊಕೊ C65 ಸ್ಮಾರ್ಟ್‌ಫೋನ್ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಅಲ್ಲದೇ 90 Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಸೇರಿದಂತೆ ಡಿಸ್‌ಪ್ಲೇ ಸಂಬಂಧ ವಿವಿಧ ಅಪ್‌ಡೇಟ್ ಫೀಚರ್ಸ್ ಅನ್ನು ಈ ಫೋನ್ ಒಳಗೊಂಡಿದೆ.
ಪೊಕೊ C65 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್ ಅನ್ನು ಹೊಂದಿದ್ದು, ಇದರೊಂದಿಗೆ ಮಾಲಿ G52 MC2 GPU ಗ್ರಾಫಿಕ್ಸ್ ಕಾರ್ಡ್ ಆಯ್ಕೆ ಪಡೆದಿದೆ. ಅಲ್ಲದೇ ಈ ಫೋನ್ MIUI 14 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.
ಪೊಕೊ C65 ಸ್ಮಾರ್ಟ್‌ಫೋನ್ 4GB RAM + 128GB ಆಂತರೀಕ ಸ್ಟೋರೇಜ್ ಆಯ್ಕೆ ಹಾಗೂ 6GB RAM + 128GB ಆಂತರೀಕ ಸ್ಟೋರೇಜ್ ಆಯ್ಕೆ ಮೆಮೊರಿ ಹಾಗೂ 8GB RAM + 256GB ಆಂತರೀಕ ಸ್ಟೋರೇಜ್ ಆಯ್ಕೆಯ ಮೂರು ವೇರಿಯಂಟ್ ಆಯ್ಕೆ ಹೊಂದಿದೆ.
ಪೊಕೊ C65 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಮುಖ್ಯ ಸೆನ್ಸರ್ ಸಾಮರ್ಥ್ಯದಲ್ಲಿ ಇದ್ದು, ಉಳಿದಂತೆ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ + ಎಐ ಲೆನ್ಸ್‌ನೊಂದಿಗೆ ಆಯ್ಕೆ ಪಡೆದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.
ಪೊಕೊ C65 ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಒಳಗೊಂಡಿದೆ. ಹಾಗೆಯೇ ಈ ಫೋನ್ 4G LTE, ಡ್ಯುಯಲ್-ಬ್ಯಾಂಡ್ ವೈ ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್- ಸಿ ಪೋರ್ಟ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಈ ಫೋನ್ ಬ್ಲ್ಯಾಕ್ ಮತ್ತು ಬ್ಲೂ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇವೆ.


Click it and Unblock the Notifications








