Home
ಸುದ್ದಿಜಾಲ

ರೆಡ್ಮಿ ಫೋನ್‌ ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್‌; ಈ ಆಫರ್‌ಗೆ ನೀವು ಫಿದಾ ಆಗ್ತೀರಾ!

ರೆಡ್ಮಿ ಮೊಬೈಲ್‌ ಬ್ರ್ಯಾಂಡ್‌ ಭಾರತೀಯ ಮಾರುಕಟ್ಟೆಯಲ್ಲಿ ಭಿನ್ನ ರೇಂಜ್‌ನ ಫೋನ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದ್ದು, ಆ ಪೈಕಿ ಸಂಸ್ಥೆಯ ಬಜೆಟ್‌ ದರದ ಫೋನ್‌ಗಳು ಕೂಡಾ ಆಕರ್ಷಕ ಎನಿಸಿವೆ. ಸಂಸ್ಥೆಯ ರೆಡ್ಮಿ 12 5G ಮೊಬೈಲ್‌ ಬೊಂಬಾಟ್‌ ಫೀಚರ್ಸ್‌, ಲುಕ್‌ ಹಾಗೂ ಬಜೆಟ್‌ ದರ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್‌ ಇದೀಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಸಖತ್ ದರ ಇಳಿಕೆ ಹೊಮದಿದ್ದು, ಗ್ರಾಹಕರು ಖುಷಿ ಪಡೆವಂತೆ ಆಗಿದೆ.

ಹೌದು, ರೆಡ್ಮಿ 12 5G ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಶೇ. 36% ರಷ್ಟು ಭರ್ಜರಿ ಡಿಸ್ಕೌಂಟ್‌ ದರದಲ್ಲಿ ಕಾಣಬಹುದಾಗಿದೆ. ಈ ಮೊಬೈಲ್‌ನ 4 GB RAM + 128 GB ಸ್ಟೋರೇಜ್‌ ವೇರಿಯಂಟ್‌ 9,499ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಗ್ರಾಹಕರು ಆಯ್ದ ಕೆಲವು ಬ್ಯಾಂಕ್‌ಗಳ ಆಫರ್‌ ಕೂಡಾ ಪಡೆಯಲು ಅವಕಾಶ ಇದೆ.

ರೆಡ್ಮಿ ಫೋನ್‌ ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್‌; ಈ ಆಫರ್‌ಗೆ ನೀವು ಫಿದಾ!

ಇನ್ನು ರೆಡ್ಮಿ 12 5G ಸ್ಮಾರ್ಟ್‌ಫೋನ್‌ 4GB + 128GB, 6GB + 128GB ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಈ ಮೊಬೈಲ್‌ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದು 5,000 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಸಹ ಒಳಗೊಂಡಿದೆ. ಹಾಗಾದರೆ ರೆಡ್ಮಿ 12 5G ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 12 5G ಫೋನ್‌ - ಫೀಚರ್ಸ್‌

ರೆಡ್ಮಿ 12 5G ಸ್ಮಾರ್ಟ್‌ಫೋನ್‌ 6.79 ಇಂಚಿನ FHD ಡಿಸ್‌ಪ್ಲೇ ಪಡೆದಿದ್ದು, 90 Hz ನ ರಿಫ್ರೆಶ್ ರೇಟ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದರೊಂದಿಗೆ 1080 X 2400 ಪಿಕ್ಸೆಲ್‌ನ ಸ್ಕ್ರೀನ್ ರೆಸಲ್ಯೂಶನ್‌ ಹಾಗೂ 240Hz ಟಚ್‌ ಮಾದರಿ ರೇಟ್‌ ಆಯ್ಕೆ ಯಾವುದೇ ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್‌ ಸಂದರ್ಭದಲ್ಲಿ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ರೆಡ್ಮಿ 12 5G ಸ್ಮಾರ್ಟ್‌ಫೋನ್‌ ಉತ್ತಮ ಕಾರ್ಯಕ್ಷಮತೆಗಾಗಿ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಈ ಫೋನ್‌ ಮೂರು ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಅವು ಕ್ರಮವಾಗಿ 4GB + 128GB, 6GB + 128GB ಹಾಗೂ 8GB + 256GB ಆಗಿವೆ. ಅಲ್ಲದೇ 8GB RAM ನೊಂದಿಗೆ 8 GB ವರ್ಚುವಲ್ RAM ಆಯ್ಕೆ ಸಹ ಇದೆ.

ರೆಡ್ಮಿ 12 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಪ್ರೈಮರಿ ಶೂಟರ್ ಪಡೆದಿದೆ. ದ್ವಿತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ರೆಡ್ಮಿ 12 5G ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಹೊಂದಿದೆ. ಇದರ ಜೊತೆಗೆ ಈ ಫೋನ್‌ ಆಂಡ್ರಾಯ್ಡ್ 13 ಅನ್ನು ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, IP53 ರೇಟಿಂಗ್‌ ಪಡೆದುಕೊಂಡಿದ್ದು, ಧೂಳು ನಿರೋಧಕವಾಗಿದೆ. ಇನ್ನು ಖರೀದಿದಾರರು ಈ ಫೋನ್‌ ಅನ್ನು ಸಿಲ್ವರ್, ಬ್ಲ್ಯಾಕ್‌ ಹಾಗೂ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
Biggest Price Drop on Redmi 12 5G in Flipkart website. check other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+