Subscribe to Gizbot

ವಿಶ್ವದ ಶ್ರೀಮಂತ ಟೆಕ್‌ ಉದ್ಯಮಿಗಳು

Posted By:

ಮೆಕ್ಸಿಕೋದ ಟೆಲಿಕಾಂ ಉದ್ಯಮಿ ಕಾರ್ಲೋಸ್‌ ಸ್ಲಿಮ್‌‌ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಆದಾಯದಲ್ಲಿ ಹಿಂದಿಕ್ಕಿ ಮತ್ತೇ ನಂಬರ್‌ ಒನ್‌ ಶ್ರೀಮಂತ ಪಟ್ಟವನ್ನು ಆಲಂಕರಿಸಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್‌‌‌ ಸಮಿಕ್ಷೆಯಿಂದ 73 ಶತ ಕೋಟಿ ಸಂಪತ್ತಿಗೆ ಒಡೆಯರಾಗುವ ಮೂಲಕ ವಿಶ್ವದ ನಂಬರ್‌ ಒನ್‌ ಶ್ರೀಮಂತ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಅಮೆರಿಕದ ಶ್ರೀಮಂತರ ಪಟ್ಟಿಯಲ್ಲಿ ಬಿಲ್‌ಗೇಟ್ಸ್‌ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಬ್ಲೂಂಬರ್ಗ್‌ ಬಿಲೀಯನೆರ್ಸ ಇಂಡೆಕ್ಸ್‌ ಸಮೀಕ್ಷೆಯಲ್ಲಿ ಬಿಲ್‌ ಗೇಟ್ಸ್‌ ಕಾರ್ಲೋಸ್‌ ಸ್ಲಿಮ್‌ರನ್ನು ಆದಾಯದಲ್ಲಿ ಹಿಂದಿಕ್ಕಿ ನಂಬರ್‌ ಒನ್‌ ಪಟ್ಟವನ್ನುಗಳಿಸಿದ್ದರು. ಆದರೆ ಫೋರ್ಬ್ಸ್ ಹೊಸ ಸಮೀಕ್ಷೆಯಲ್ಲಿ ಬಿಲ್‌ ಗೇಟ್ಸ್‌ 67 ಶತಕೋಟಿ ಡಾಲರ್‍ ಆದಾಯವನ್ನು ಹೊಂದುವ ಮೂಲಕ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.

ಇನ್ನೂ ಟಾಪ್‌ 100 ಬಿಲಿಯನೇರ್‌ ಪಟ್ಟಿಯಲ್ಲಿ ಒರೆಕಲ್‌ ಸಂಸ್ಥಾಪಕ ಲಾರಿ ಎಲ್ಲಿಸನ್‌, ಡೆಲ್‌ ಸಂಸ್ಥಾಪಕ ಮೈಕಲ್‌ ಡೆಲ್‌, ಗೂಗಲ್‌ ಸಂಸ್ಥಾಪಕರಾದ ಲಾರಿ ಪೇಜ್‌ ಮತ್ತು ಸರ್ಜಿ ಬ್ರಿನ್‌, ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌,ಭಾರತದ ಮುಕೇಶ್‌ ಅಂಬಾನಿ, ಲಕ್ಷ್ಮಿ ಮಿತ್ತಲ್‌, ಅಜೀಂ ಪ್ರೇಂಜಿ, ಸ್ಥಾನವನ್ನುಗಳಿಸಿದ್ದಾರೆ. ಇನ್ನೂ ಟಾಪ್‌ ಸಾವಿರ ಪಟ್ಟಿಯಲ್ಲಿ ಎಚ್‌ಸಿಎಲ್‌ನ ಶಿವ್‌ ನಡಾರ್‌ ಮತ್ತು ಇನ್ಫೋಸಿಸ್‌ನ ನಾರಾಯಣ ಮೂರ್ತಿ‌ ಸ್ಥಾನವನ್ನು ಪಡೆದಿದ್ದಾರೆ.ಹೀಗಾಗಿ ಇಲ್ಲಿ ಟೆಕ್‌ ಮತ್ತು ಭಾರತದ ಬಿಲಿಯನೇರ್‌ಗಳ ರ್‍ಯಾಂಕ್‌ ಮತ್ತು ಅವರ ಆದಾಯದ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರ್‍ಯಾಂಕ್‌.1 ಕಾರ್ಲೋಸ್‌ ಸ್ಲಿಮ್‌

ಫೋರ್ಬ್ಸ್ ಬಿಲಿಯನೇರ್‌ಗಳು

ಆದಾಯ: 73 ಬಿಲಿಯನ್‌‌ ಡಾಲರ್‌
ದೇಶ: ಮೆಕ್ಸಿಕೋ
ಕಂಪೆನಿ: ಟೆಲಿಮೆಕ್ಸ್‌

 ರ್‍ಯಾಂಕ್‌.2 ಬಿಲ್‌ ಗೇಟ್ಸ್‌

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:67 ಬಿಲಿಯನ್‌‌ ಡಾಲರ್‌
ಕಂಪೆನಿ:ಮೈಕ್ರೋಸಾಫ್ಟ್‌
ದೇಶ:ಅಮೆರಿಕ

 ರ್‍ಯಾಂಕ್‌.5 ಲಾರಿ ಎಲ್ಲಿಸನ್‌

ಫೋರ್ಬ್ಸ್ ಬಿಲಿಯನೇರ್‌ಗಳು

ಆದಾಯ:43 ಬಿಲಿಯನ್‌‌ ಡಾಲರ್‌
ಕಂಪೆನಿ:ಒರೆಕಲ್‌
ದೇಶ:ಅಮೆರಿಕ

 ರ್‍ಯಾಂಕ್‌.19 ಜೆಫ್ ಬೆಜೊಸ್

ಫೋರ್ಬ್ಸ್ ಬಿಲಿಯನೇರ್‌ಗಳು

ಆದಾಯ:5.2ಬಿಲಿಯನ್‌‌ ಡಾಲರ್‌
ಕಂಪೆನಿ:ಅಮೆಜಾನ್‌.ಕಾಂ
ದೇಶ:ಅಮೆರಿಕ

 ರ್‍ಯಾಂಕ್‌.20 ಲಾರಿ ಪೇಜ್‌

ಫೋರ್ಬ್ಸ್ ಬಿಲಿಯನೇರ್‌ಗಳು

ಆದಾಯ:23 ಬಿಲಿಯನ್‌‌ ಡಾಲರ್‌
ಕಂಪೆನಿ:ಗೂಗಲ್‌
ದೇಶ: ಅಮೆರಿಕ

 ರ್‍ಯಾಂಕ್‌.20 ಸರ್ಜಿ ಬ್ರಿನ್‌

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:22.8 ಬಿಲಿಯನ್‌‌ ಡಾಲರ್‌
ಕಂಪೆನಿ:ಗೂಗಲ್‌
ದೇಶ: ಅಮೆರಿಕ

 ರ್‍ಯಾಂಕ್‌.22 ಮುಕೇಶ್‌ ಅಂಬಾನಿ

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:21.5 ಬಿಲಿಯನ್‌‌ ಡಾಲರ್‌
ಕಂಪೆನಿ: ರಿಲಾಯನ್ಸ್‌ ಪೆಟ್ರೋಕೆಮಿಕಲ್ಸ್‌ ಮತ್ತು ಗ್ಯಾಸ್‌
ದೇಶ:ಭಾರತ

 ರ್‍ಯಾಂಕ್‌.41 ಲಕ್ಷ್ಮಿ ಮಿತ್ತಲ್‌

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:16.5 ಬಿಲಿಯನ್‌ ಡಾಲರ್‌
ಕಂಪೆನಿ:ಮಿತ್ತಲ್‌ ಸ್ಟೀಲ್‌
ದೇಶ:ಭಾರತ

 ರ್‍ಯಾಂಕ್‌.49 ಮೈಕಲ್‌ ಡೆಲ್‌

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:15.3 ಬಿಲಿಯನ್‌ ಡಾಲರ್‌
ಕಂಪೆನಿ:ಡೆಲ್‌
ದೇಶ:ಅಮೆರಿಕ

 ರ್‍ಯಾಂಕ್‌: 51 ಸ್ಟಿವ್‌ ಬಲ್ಮರ್‌

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:15.2 ಬಿಲಿಯನ್ ಡಾಲರ್‌
ಕಂಪೆನಿ: ಮೈಕ್ರೋಸಾಫ್ಟ್‌
ದೇಶ: ಅಮೆರಿಕ

 ರ್‍ಯಾಂಕ್‌.53 ಪಾಲ್ ಅಲೆನ್

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:15ಬಿಲಿಯನ್‌ ಡಾಲರ್‌
ಕಂಪೆನಿ:ಮೈಕ್ರೋಸಾಫ್ಟ್‌ ಇನ್‌ವೆಸ್ಟ್‌ಮೆಂಟ್ಸ್‌
ದೇಶ:ಅಮೆರಿಕ

 ರ್‍ಯಾಂಕ್‌.66 ಮಾರ್ಕ್ ಜುಕರ್‌ ಬರ್ಗ್‌

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:13.3ಬಿಲಿಯನ್ ಡಾಲರ್‌
ಕಂಪೆನಿ:ಫೇಸ್‌ಬುಕ್‌
ದೇಶ: ಅಮೆರಿಕ

 ರ್‍ಯಾಂಕ್‌.91 ಅಜೀಂ ಪ್ರೇಂಜಿ

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:11.2 ಬಿಲಿಯನ್‌ ಡಾಲರ್‌
ಕಂಪೆನಿ:ವಿಪ್ರೋ
ದೇಶ:ಭಾರತ

 ರ್‍ಯಾಂಕ್‌.182 ಶಿವ್‌ ನಡಾರ್‌

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:6.5 ಬಿಲಿಯನ್‌ ಡಾಲರ್‌
ಕಂಪೆನಿ:ಎಚ್‌ಸಿಎಲ್‌
ದೇಶ:ಭಾರತ

 ರ್‍ಯಾಂಕ್‌.965 ನಾರಾಯಣ ಮೂರ್ತಿ ಮತ್ತು ಕುಟುಂಬ

ಫೋರ್ಬ್ಸ್ ಬಿಲಿಯನೇರ್‌ಗಳು


ಆದಾಯ:1.55 ಬಿಲಿಯನ್‌ ಡಾಲರ್‌
ಕಂಪೆನಿ:ಇನ್ಫೋಸಿ‌ಸ್‌
ದೇಶ:ಭಾರತ

ಫೋರ್ಬ್ಸ್ ಮ್ಯಾಗಜಿನ್‌ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್‌ ಮಾಡಬಹುದು:www.forbes.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot