7 ವರ್ಷದ ಹಿಂದೆ ರೂ.100 ಹೂಡಿಕೆ ಮಾಡಿದ್ರೆ ಇಂದಿಗೆ ಅದರ ಬೆಲೆ 2.3 ಕೋಟಿ‍: ಷೇರಿನಲ್ಲೂ ಇಷ್ಟು ಲಾಭವಿಲ್ಲ..!

|

ಬಿಟ್ ಕಾಯಿನ್‌ ಬಗ್ಗೆ ನೀವು ಕೇಳಿರಬಹುದು ಆದರೆ ಇದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಇರಲು ಸಾಧ್ಯವೇ ಇಲ್ಲ. ಇದೇ ಮೊದಲ ಬಾರಿಗೆ ಬಿಟ್‌ ಕಾಯಿನ್‌ ಮೌಲ್ಯ 10 ಸಾವಿರ ಡಾಲರ್‌ ಗಡಿ ದಾಟಿದ್ದು, ಇದರಲ್ಲಿ ಹೂಡಿಕೆ ಮಾಡಿದ್ದವರಿಗೆ ಬಂಪರ್ ಅದೃಷ್ಟ ಕುಲಾಯಿಸಿದೆ.

7 ವರ್ಷದ ಹಿಂದೆ ರೂ.100 ಹೂಡಿಕೆ ಮಾಡಿದ್ರೆ ಇಂದಿಗೆ ಅದರ ಬೆಲೆ 2.3 ಕೋಟಿ.!!

ಓದಿರಿ: ರೆಡ್‌ಮಿ 5 ಸ್ಮಾರ್ಟ್‌ಫೋನ್: ಫೋನ್ ಮಾತ್ರ ಟಾಪ್ಎಂಡ್ - ಬೆಲೆ ಮಾತ್ರ ಬಜೆಟ್‌ನಲ್ಲಿ..!

2009 ರಲ್ಲಿ ಹುಟ್ಟಿಕೊಂಡ ಬಿಟ್ ಕಾಯಿನ್ ಹಣ ವರ್ಗಾವಣೆ, ಸರಕು ಮತ್ತು ಸೇವೆ ಪಡೆಯಲು, ಷೇರು ಹೂಡಿಕೆಯ ಡಿಜಿಟಲ್‌ ಕರೆನ್ಸಿಯಾಗಿ ಬಳೆಕೆಯಾಗುತ್ತಿದೆ. ವಿಶ್ವದ ಆನ್‌ಲೈನ್‌ ಮಾರುಕಟ್ಟೆಯ ವ್ಯವಹಾರಕ್ಕೆ ಈ ಕರೆಸ್ಸಿ ಬಳಕೆಯಾಗುತ್ತಿದೆ ಎನ್ನಲಾಗಿದೆ.

ಏಷ್ಯಾದಲ್ಲಿ  ಭಾರೀ ಬೆಳವಣಿಗೆ:

ಏಷ್ಯಾದಲ್ಲಿ ಭಾರೀ ಬೆಳವಣಿಗೆ:

ಈ ಹಿಂದೆ ಯೂರೋಪ್-ಅಮೆರಿಕಾದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಬಿಟ್ ಕಾಯಿನ್ ಏಷ್ಯಾದಲ್ಲೂ ಹೆಚ್ಚು ಬಳಕೆಯಾಗುತ್ತಿದ್ದು, ಒಂದು ಬಿಟ್ ಕಾಯಿನ್ ಮೌಲ್ಯ 10,903 ಡಾಲರ್‌ ತಲುಪಿದೆ. ಈ ಒಂದೇ ವರ್ಷದಲ್ಲಿ ಇದರ ಮೌಲ್ಯ 14 ಪಟ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

ಶೇ 1000ದಷ್ಟು ಏರಿಕೆ:

ಶೇ 1000ದಷ್ಟು ಏರಿಕೆ:

ಇದೇ ಏಳು ವರ್ಷದ ಹಿಂದೆ 2010ರಲ್ಲಿ ರೂ 2.8 ಇದ್ದ ಬಿಟ್‌ ಕಾಯಿನ್‌ ಮೌಲ್ಯ ಈ ವರ್ಷ ಶೇ 1000ದಷ್ಟು ಏರಿಕೆ ಕಂಡಿದೆ. ಅಂದರೆ, 2010ರಲ್ಲಿ ಬಿಟ್ ಕಾಯಿನ್ ಮೇಲೆ ರೂ. 100 ಹೂಡಿಕೆ ಮಾಡಿದ್ದರೆ, ಇಂದಿಗೆ ಅದರ ಮೌಲ್ಯ ರೂ. 2.3 ಕೋಟಿಗಳಾಗಲಿದೆ ಎನ್ನಲಾಗಿದೆ.

ಒಂದು ಬಿಟ್ ಕಾಯಿನ್= 7ಲಕ್ಷ:

ಒಂದು ಬಿಟ್ ಕಾಯಿನ್= 7ಲಕ್ಷ:

ಭಾರತೀಯ ರೂಪಾಯಿ ಗಳಲ್ಲಿ ಒಂದು ಬಿಟ್‌ ಕಾಯಿನ್‌ಗೆ ಅಂದಾಜು ₹7 ಲಕ್ಷ ಎನ್ನಲಾಗಿದೆ. ಇದು ಒಂದು ಬಿಟ್ ಕಾಯಿನ್ ಮೇಲೆ ಹಣವನ್ನು ತೊಡಗಿಸಬೇಕು ಎಂದರೆ ಭಾರತೀಯ ರೂಪಾಯಿಗಳಲ್ಲಿ 7 ಲಕ್ಷ ನಿಮ್ಮ ಕೈನಲ್ಲಿ ಇರಬೇಕು.

Best Mobiles in India

English summary
Bitcoin surges past $10,000. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X