ಬ್ಲ್ಯಾಕ್‌ ಫ್ರೈಡೇ ಸೇಲ್‌: ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್‌!

|

ಇ-ಕಾಮರ್ಸ್‌ ತಾಣಗಳು ವಿಶೇಷ ದಿನಗಳಲ್ಲಿ ರಿಯಾಯಿತಿ ಸೇಲ್‌ಗಳು ಮೂಲಕ ಆನ್‌ಲೈನ್‌ ಗ್ರಾಹಕರನ್ನ ಸೆಳೆಯುವುದು ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ದೀಪಾವಳಿ ಸೇಲ್‌ನಲ್ಲಿ ಭರ್ಜರಿ ರಿಯಾಯಿತಿ ನೀಡಿ ಗ್ರಾಹಕರ ಮನಗೆದ್ದಿದ್ದ ಆನ್‌ಲೈನ್‌ ತಾಣಗಳು ಇದೀಗ ಬ್ಲ್ಯಾಕ್‌ ಫ್ರೈಡೇ ಸೇಲ್‌ ಅನ್ನು ಆಯೋಜಿಸಿವೆ. ಇನ್ನು ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗಿದ್ದು, ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಸಲು ಇದುವೇ ಸೂಕ್ತ ಸಮಯವಾಗಿದೆ.

ಬ್ಲ್ಯಾಕ್‌ ಫ್ರೈಡೇ ಸೇಲ್

ಹೌದು, ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ಪ್ರಮುಖ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ತಮ್ಮ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡಿವೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ದೊರೆಯುತ್ತಿದೆ. ಇನ್ನು ಈ ಸೇಲ್‌ನಲ್ಲಿ ಯಾವೆಲ್ಲಾ ಕಂಪೆನಿಗಳು ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನ ಸೇಲ್‌ ಮಾಡ್ತಿವೆ ಅನ್ನೊದನ್ನ ತಿಳಿಸಿಕೊಡ್ತಿವಿ ಓದಿರಿ.

ಶಿಯೋಮಿ

ಶಿಯೋಮಿ

ಶಿಯೋಮಿ ಕಂಪೆನಿ ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಅಮೆಜಾನ್‌ನಲ್ಲಿ, ಶಿಯೋಮಿ ರೆಡ್‌ಮಿ ನೋಟ್ 9 ಪ್ರೊ ಅನ್ನು 17,999 ರೂಗಳ ಬದಲು 14,999 ರೂ.ಗಳಿಗೆ ನೀಡುತ್ತಿದೆ. 5,000 mAh ನ ಬೃಹತ್ ಬ್ಯಾಟರಿಯನ್ನು ಪ್ಯಾಕ್ ಮಾಡುವ ರೆಡ್ಮಿ 9 ಪ್ರೈಮ್ ಕೂಡ 3,000 ರೂ ರಿಯಾಯಿತಿಗೆ ಲಭ್ಯವಿದೆ. ಶಿಯೋಮಿಯ ಪ್ರೀಮಿಯಂ ಫೋನ್ ಮಿ10 5G ಕೂಡ ಅತ್ಯುತ್ತಮ ರಿಯಾಯಿತಿಯನ್ನು ಪಡೆದುಕೊಂಡಿದ್ದು, ಇದು 54,999 ರೂಗಳ ಬದಲು 44,999 ರೂಗಳಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್

ಇನ್ನು ನೀವು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ ಖರೀದಿಸುವುದಾರೆ, ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 +, ಮತ್ತು ಗ್ಯಾಲಕ್ಸಿ ನೋಟ್ 10+ ವಿನಿಮಯ ಕೊಡುಗೆಗಳನ್ನು 14,300 ರೂ.ಗಳ ರಿಯಾಯಿತಿಯೊಂದಿಗೆ ಹೊಂದಿದೆ. ಇದಲ್ಲದೆ, ಫ್ಲಿಪ್‌ಕಾರ್ಟ್‌ನ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ A70 ರ ಬೆಲೆಯನ್ನು 5,000 ರೂ.ಗಳಿಂದ ಕಡಿತಗೊಳಿಸಲಾಗಿದ್ದು, 6GB RAM + 128GB ರೂಪಾಂತರವನ್ನು 17,999 ರೂಗಳಿಗೆ ಮತ್ತು 8GB RAM ರೂಪಾಂತರವನ್ನು 25,999 ರೂಗಳಿಗೆ ಖರೀದಿಸಬಹುದಾಗಿದೆ.

ರಿಯಲ್‌ಮಿ

ರಿಯಲ್‌ಮಿ

ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ರಿಯಲ್‌ಮಿ 6i, ರಿಯಲ್‌ಮಿ 6, ರಿಯಲ್‌ಮಿ X3 ಸೂಪರ್‌ಜೂಮ್ ಮತ್ತು X 50 ಪ್ರೊ ಸೇರಿದಂತೆ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ರಿಯಲ್‌ಮಿ c3, ರಿಯಲ್‌ಮಿ 6, ರಿಯಲ್‌ಮಿ 6I ಮತ್ತು ನಾರ್ಜೊ 20 ರ ಮೇಲೆ ಸುಮಾರು 1,000 ರೂ.ಗಳ ರಿಯಾಯಿತಿ ಅನ್ವಯವಾಗುತ್ತದೆ. ಇನ್ನು ರಿಯಲ್‌ಮಿ X50 ಪ್ರೊ ಸ್ಮಾರ್ಟ್‌ಫೋನ್‌ ರಿಯಲ್‌ಮಿ ಬ್ಲ್ಯಾಕ್‌ ಪ್ರೈಡೇ ಸೇಲ್‌ನಲ್ಲಿ 7,000 ರೂ ಗಳ ವರೆಗೆ ರಿಯಾಯಿಯಿಯನ್ನ ಪಡೆದುಕೊಂಡಿದೆ.

Most Read Articles
Best Mobiles in India

English summary
Its a deal season on ecommerce platforms like Amazon and Flipkart have kicked off 'Black Friday' sale this week.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X