ಬ್ಲ್ಯಾಕ್‌ ಶಾರ್ಕ್‌ನಿಂದ ಎರಡು ದೈತ್ಯ ಗೇಮಿಂಗ್ ಸ್ಮಾರ್ಟ್‌ಫೋನ್‌ ಲಾಂಚ್‌!

|

ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳಿಗೂ ಇದೀಗ ಭಾರಿ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್ ಕಂಪೆನಿಗಳು ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿವೆ. ಆ ಪೈಕಿ ಬ್ಲ್ಯಾಕ್ ಶಾರ್ಕ್‌ ಈಗಾಗಲೇ ಕೆಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಬ್ಲ್ಯಾಕ್‌ ಶಾರ್ಕ್‌ ಕಂಪೆನಿ ಎರಡು ಹೊಸ ಆವೃತ್ತಿಯ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ.

ಸ್ಮಾರ್ಟ್‌ಫೋನ್‌

ಹೌದು, ಜನಪ್ರಿಯ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಕಂಪೆನಿ ಬ್ಲ್ಯಾಕ್‌ಶಾರ್ಕ್‌ ತನ್ನ ಹೊಸ ಆವೃತ್ತಿಯ ಬ್ಲ್ಯಾಕ್‌ ಶಾರ್ಕ್‌ 5 ಹಾಗೂ ಬ್ಲ್ಯಾಕ್‌ ಶಾರ್ಕ್‌ 5 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದೆ. ಇದರಲ್ಲಿ ಬ್ಲ್ಯಾಕ್‌ ಶಾರ್ಕ್‌ 5 ಫೋನ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಬ್ಲ್ಯಾಕ್‌ ಶಾರ್ಕ್‌ 5 ಪ್ರೊ ಫೋನ್ ಸ್ನಾಪ್‌ಡ್ರಾಗನ್ 8 ಜೆನ್‌ 1 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಹಾಗಾದರೇ ಬ್ಲ್ಯಾಕ್‌ ಶಾರ್ಕ್‌ 5 ಹಾಗೂ ಬ್ಲ್ಯಾಕ್‌ ಶಾರ್ಕ್‌ 5 ಪ್ರೊ ಫೋನ್‌ಗಳ ಇತರೆ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬ್ಲ್ಯಾಕ್‌ ಶಾರ್ಕ್‌ 5 ಫೋನಿನ ಫೀಚರ್ಸ್‌ಗಳು

ಬ್ಲ್ಯಾಕ್‌ ಶಾರ್ಕ್‌ 5 ಫೋನಿನ ಫೀಚರ್ಸ್‌ಗಳು

ಬ್ಲ್ಯಾಕ್‌ ಶಾರ್ಕ್‌ 5 ಗೇಮಿಂಗ್‌ ಸ್ಮಾರ್ಟ್‌ಫೋನ್‌ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್‌ ರೇಟ್‌ ಮತ್ತು 720Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಗೇಮಿಂಗ್‌ ಫೋನ್ Adreno 660 GPU ಜೊತೆಗೆ ಸ್ನಾಪ್‌ಡ್ರಾಗನ್ 8 ಜೆನ್‌ 1 SoC ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 4,650mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 120W ಹೈಪರ್ ಚಾರ್ಜ್ ವೇಗದ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ.

ಬ್ಲ್ಯಾಕ್ ಶಾರ್ಕ್ 5 ಪ್ರೊ ಫೋನಿನ ಫೀಚರ್ಸ್‌ಗಳು

ಬ್ಲ್ಯಾಕ್ ಶಾರ್ಕ್ 5 ಪ್ರೊ ಫೋನಿನ ಫೀಚರ್ಸ್‌ಗಳು

ಬ್ಲ್ಯಾಕ್ ಶಾರ್ಕ್ 5 ಪ್ರೊ ಗೇಮಿಂಗ್‌ ಸ್ಮಾರ್ಟ್‌ಫೋನ್‌ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್‌ ರೇಟ್‌ ಮತ್ತು 720Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಗೇಮಿಂಗ್‌ ಫೋನ್ Adreno 730 GPU ಜೊತೆಗೆ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 4,650mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 120W ಹೈಪರ್ ಚಾರ್ಜ್ ವೇಗದ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಬ್ಲ್ಯಾಕ್ ಶಾರ್ಕ್ 5 ಫೋನ್ ಬೆಲೆಯು $549 (ಭಾರತದಲ್ಲಿ ಅಂದಾಜು 43,000 ರೂ) ಆಗಿದೆ. ಅದೇ ರೀತಿ 12GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ $649 (ಭಾರತದಲ್ಲಿ ಅಂದಾಜು 60,000 ರೂ). ಇನ್ನು ಈ ಫೋನ್ ಎಕ್ಸ್‌ಪ್ಲೋರರ್ ಗ್ರೇ ಮತ್ತು ಮಿರರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಹಾಗೆಯೇ ಬ್ಲ್ಯಾಕ್ ಶಾರ್ಕ್ 5 ಪ್ರೊ ಫೋನ್‌ 8GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಬೆಲೆ $799 (ಭಾರತದಲ್ಲಿ ಅಂದಾಜು 62,000 ರೂ) ಆಗಿದೆ. ಇನ್ನು ಈ ಫೋನ್ ನೆಬ್ಯುಲಾ ವೈಟ್ ಮತ್ತು ಸ್ಟೆಲ್ಲರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಅಧಿಕೃತ ಬ್ಲ್ಯಾಕ್ ಶಾರ್ಕ್ ಸೈಟ್‌ನಲ್ಲಿ ಲಭ್ಯವಿದೆ.

Best Mobiles in India

English summary
Black Shark 5, Black Shark 5 Pro Gaming Smartphones Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X