Home
ಸುದ್ದಿಜಾಲ

Black Shark: ಬ್ಲ್ಯಾಕ್ ಶಾರ್ಕ್ S1 ಪ್ರೊ, S1 ಕ್ಲಾಸಿಕ್ ಸ್ಮಾರ್ಟ್‌ವಾಚ್‌ ಲಾಂಚ್‌! ಆಕರ್ಷಕ ಫೀಚರ್ಸ್, ಬೆಲೆ ಎಷ್ಟು?

ಸ್ಮಾರ್ಟ್‌ವಾಚ್‌ಗಳು (Smartwatches) ಇಂದು ಬಳಕೆದಾರರಿಗೆ ಭಿನ್ನ ಅನುಭವ ನೀಡಲಿವೆ. ಈ ಕಾರಣಕ್ಕೆ ಸ್ಮಾರ್ಟ್‌ವಾಚ್‌ ತಯಾರಿಕಾ ಬ್ರ್ಯಾಂಡ್‌ಗಳು ಹೊಸ ಹೊಸ ವಾಚ್‌ಗಳಲ್ಲಿ ಆಗಾಗ್ಗೆ ಅನಾವರಣ ಮಾಡಿಕೊಂಡು ಬರುತ್ತಲೇ ಇರುತ್ತವೆ. ಅದರಂತೆ ಈಗ ಈ ಹೊಸ ವಾಚ್‌ಗಳ ಸಾಲಿಗೆ ಬ್ಲ್ಯಾಕ್ ಶಾರ್ಕ್‌ ಮತ್ತೆರಡು ಆಕರ್ಷಕ ವಾಚ್‌ಗಳನ್ನು ಸೇರಿಸಿದೆ.

ಹೌದು, ಬ್ಲ್ಯಾಕ್ ಶಾರ್ಕ್‌ (Black Shark) ಇದೀಗ ಹೊಸ ವಾಚ್‌ಗಳನ್ನು ಅನಾವರಣ ಮಾಡಿದ್ದು, ಈ ವಾಚ್‌ಗಳು ವಿಶೇಷ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ. ಈ ವಿಭಾಗದಲ್ಲಿ ಬ್ಲ್ಯಾಕ್ ಶಾರ್ಕ್ S1 ಪ್ರೊ ಮತ್ತು S1 ಕ್ಲಾಸಿಕ್ (Black Shark S1 Pro, S1 Classic) ವಾಚ್‌ಗಳಿದ್ದು, ಈ ಎರಡೂ ವಾಚ್‌ಗಳು ಸಹ 1.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿವೆ. ಹಾಗಿದ್ರೆ, ಈ ವಾಚ್‌ಗಳು ಹೊಂದಿರುವ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬ್ಲ್ಯಾಕ್ ಶಾರ್ಕ್ S1 ಪ್ರೊ, S1 ಕ್ಲಾಸಿಕ್ ಸ್ಮಾರ್ಟ್‌ವಾಚ್‌ ಲಾಂಚ್‌!...

ಬ್ಲ್ಯಾಕ್ ಶಾರ್ಕ್ S1 ಪ್ರೊ ಮತ್ತು S1 ಕ್ಲಾಸಿಕ್ ಸ್ಮಾರ್ಟ್‌ವಾಚ್ ವಿನ್ಯಾಸ: ಈ ವಾಚ್‌ಗಳು 466 x 466 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ 1.43 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿವೆ. ಹಾಗೆಯೇ ವೃತ್ತಾಕಾರದ ಡಯಲ್ ವಿನ್ಯಾಸವನ್ನು ಈ ವಾಚ್‌ಗಳು ಪಡೆದಿದ್ದು, S1 ಪ್ರೊ ಮೆಟಾಲಿಕ್ ಫ್ರೇಮ್, ಎರಡು ಪುಶ್ ಬಟನ್‌ ಮತ್ತು ರೊಟೇಟ್‌ ಕ್ರೌನ್‌ ಬಟನ್‌ ಆಯ್ಕೆ ಪಡೆದಿದೆ. ಇನ್ನು S1 ಕ್ಲಾಸಿಕ್ ಕ್ರೌನ್‌ ಬಟನ್‌ ಅಯ್ಕೆ ಪಡೆದಿದ್ದು, ಇದರೊಂದಿಗೆ ಫಂಕ್ಷನ್ ಬಟನ್ ಸಹ ಇದೆ. ಇದೆಲ್ಲದರ ಜೊತೆಗೆ ಈ ಎರಡೂ ವಾಚ್‌ಗಳು ಸಹ 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿವೆ.

ಬ್ಲ್ಯಾಕ್ ಶಾರ್ಕ್ S1 ಪ್ರೊ ಮತ್ತು S1 ಕ್ಲಾಸಿಕ್ ಸ್ಮಾರ್ಟ್‌ವಾಚ್ ಪ್ರಮುಖ ಫೀಚರ್ಸ್‌: ಈ ಸ್ಮಾರ್ಟ್‌ವಾಚ್‌ಗಳು 100+ ಸ್ಪೋರ್ಟ್ಸ್ ಮೋಡ್‌ಗಳು, ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಮಾನಿಟರಿಂಗ್, 100+ ವಾಚ್ ಫೇಸ್‌ಗಳು, ENC ಬ್ಲೂಟೂತ್ ಕರೆ ಸೇರಿದಂತೆ ವಿವಿಧ ಫೀಚರ್ಸ್‌ ಅನ್ನು ಪಡೆದುಕೊಂಡಿವೆ. ಇದರೊಂದಿಗೆ ಇನ್‌ಬಿಲ್ಟ್‌ ಮೈಕ್ ಮತ್ತು ಸ್ಪೀಕರ್ ಆಯ್ಕೆ ಪಡೆದಿದ್ದು, ಇದರಿಂದ ಕರೆಯಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಳ್ಳಬಹುದಾಗಿದೆ.

ಬ್ಲ್ಯಾಕ್ ಶಾರ್ಕ್ S1 ಪ್ರೊ, S1 ಕ್ಲಾಸಿಕ್ ಸ್ಮಾರ್ಟ್‌ವಾಚ್‌ ಲಾಂಚ್‌!...

ಉಳಿದಂತೆ ಈ ಶಾರ್ಕ್‌ S1 ಪ್ರೊ ಚಾಟ್‌ ಜಿಪಿಟಿ ಯೊಂದಿಗೆ ಕಾಣಿಸಿಕೊಂಡಿದ್ದು, ನಿಮ್ಮ ಮಣಿಕಟ್ಟಿನಿಂದ ನೇರವಾಗಿ ವೈಯಕ್ತಿಕಗೊಳಿಸಿದ ಮತ್ತು ಸಂವಾದಾತ್ಮಕ ಅನುಭವವನ್ನು ನೀಡುವ ಕೆಲಸ ಮಾಡುತ್ತದೆ. ಜೊತೆಗೆ ಎರಡೂ ವಾಚ್‌ಗಳು ಸಹ ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲ, ಕ್ಯಾಲ್ಕುಲೇಟರ್, ಕ್ಯಾಮೆರಾ ಕಂಟ್ರೋಲ್‌, ಮೆಸೆಜ್‌ ನೋಟಿಫಿಕೇಶನ್‌, ಸ್ಟಾಪ್‌ವಾಚ್, ವರ್ಲ್ಡ್‌ ಗಡಿಯಾರ ಸೇರಿದಂತೆ ಆಕರ್ಷಕ ಫೀಚರ್ಸ್‌ ಮೂಲಕ ಪ್ಯಾಕ್‌ ಆಗಿವೆ. ಅಲ್ಲದೆ IP68 ರೇಟಿಂಗ್ ಹೊಂದಿದ್ದು, ಬೆವರು, ಧೂಳಿನಿಂದ ಯಾವುದೇ ಸಮಸ್ಯೆಗಳು ಆಗುವುದಿಲ್ಲ.

ಈ ಸ್ಮಾರ್ಟ್‌ವಾಚ್‌ಗಳು ಭಿನ್ನ ಬ್ಯಾಟರಿ ಬ್ಯಾಕಪ್‌ ಅನ್ನು ಪಡೆದುಕೊಂಡಿವೆ. ಅಂದರೆ, ಶಾರ್ಕ್‌ S1 ಪ್ರೊ ಸ್ಮಾರ್ಟ್‌ವಾಚ್‌ ಅನ್ನು ಒಂದು ಬಾರಿ ಫೂರ್ಣವಾಗಿ ಚಾರ್ಜಿಂಗ್ ಮಾಡಿದ್ರೆ 15 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಶಾರ್ಕ್‌ S1 ಕ್ಲಾಸಿಕ್ ಸ್ಮಾರ್ಟ್ವಾಚ್‌ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 12 ದಿನಗಳ ಬ್ಯಾಟರಿ ಬ್ಯಾಕಪ್‌ ಅನ್ನು ನೀಡಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಶಾರ್ಕ್‌ S1 ಪ್ರೊ, S1 ಕ್ಲಾಸಿಕ್ ಬೆಲೆ ಹಾಗೂ ಲಭ್ಯತೆ: S1 ಪ್ರೊ ಬೆಲೆ USD 76.90 (ಭಾರತದಲ್ಲಿ ಅಂದಾಜು 6,410 ರೂ.ಗಳು) ಮತ್ತು S1 ಕ್ಲಾಸಿಕ್‌ ಬೆಲೆ USD 66.90 (ಭಾರತದಲ್ಲಿ ಅಂದಾಂಜು 5,575 ರೂ.ಗಳು) ಬೆಲೆ ನಿಗದಿ ಮಾಡಲಾಗಿದೆ. ಈ ವಾಚ್‌ಗಳು ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಕಂಡು ಬಂದಿವೆ. ಅದಾಗ್ಯೂ ಈ ವಾಚ್‌ಗಳಿಗೆ ದೇಶವಾರು ಭಿನ್ನ ಆಫರ್ ನೀಡಲಾಗಿದೆ.

ಬ್ಲ್ಯಾಕ್ ಶಾರ್ಕ್ S1 ಪ್ರೊ, S1 ಕ್ಲಾಸಿಕ್ ಸ್ಮಾರ್ಟ್‌ವಾಚ್‌ ಲಾಂಚ್‌!...

ಯುಎಸ್‌ ಮತ್ತು ಯೂರೋಪ್‌ನಲ್ಲಿರುವ ಗ್ರಾಹಕರು ಈ ಸ್ಮಾರ್ಟ್‌ವಾಚ್‌ಗಳನ್ನು ಕಂಪನಿಯ ವೆಬ್‌ಸೈಟ್‌ ಮೂಲಕ USD 49.90 (4,160 ರೂ.ಗಳು) ಗೆ S1 ಕ್ಲಾಸಿಕ್ ಹಾಗೂ USD 69 ( 5,753 ರೂ.ಗಳು) ಗೆ S1 ಪ್ರೊ ಅನ್ನು ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಬ್ರೆಜಿಲ್, ರಷ್ಯಾ, ಉಕ್ರೇನ್, ಸ್ಪೇನ್, ಫ್ರಾನ್ಸ್, ಕೊರಿಯಾ, ಜಪಾನ್ ಮತ್ತು ಮೆಕ್ಸಿಕೋದಲ್ಲಿರುವ ಗ್ರಾಹಕರು S1 ಪ್ರೊ ಅನ್ನು USD 39.9 (3,325 ರೂ.ಗಳು) ನಲ್ಲಿ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Black Shark has now unveiled new watches, in this category Black Shark S1 Pro and S1 Classic will be available, both of these watches have got 1.43 inch AMOLED display option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+