ನಾಳೆಯಿಂದ ಈ ಫೋನ್‌ಗಳ ಕಥೆ ಮುಕ್ತಾಯ!..ಕರೆ, ಡೇಟಾ, ಎಸ್‌ಎಮ್‌ಎಸ್ ಎಲ್ಲವೂ ಸ್ಥಗಿತ!

|

ಸ್ಮಾರ್ಟ್‌ಫೋನ್ ಪ್ರಿಯರಿಗೆ ಬ್ಲ್ಯಾಕ್‌ಬೆರಿ (BlackBerry) ಫೋನ್‌ಗಳ ಬಗ್ಗೆ ಗೊತ್ತೆ ಇರುತ್ತದೆ. ಈ ಫೋನ್‌ಗಳು ಆಪಲ್‌ ಸಂಸ್ಥೆಯ ಐಫೋನ್‌ಗಳಂತೆ ಹೆಚ್ಚಿನ ಡಿಮ್ಯಾಂಡ್ ಪಡೆದಿದ್ದವು. ಸಂಸ್ಥೆಯ QWERTY ಕೀಪ್ಯಾಡ್ ರಚನೆಯ ಫೋನ್‌ಗಳು ಹೆಚ್ಚು ಗಮನ ಸೆಳೆದಿದ್ದವು. ಅದಾಗ್ಯೂ ಇನ್ನೂ, ಕೆಲವು ಜನರು ಬ್ಲ್ಯಾಕ್‌ಬೆರಿ ಫೋನ್ ಅನ್ನು ಬಳಸುತ್ತಿರಬಹುದು. ಬ್ಲ್ಯಾಕ್‌ಬೆರಿ ಫೋನ್‌ ಬಳಸುವವರಿಗೆ ಶಾಕಿಂಗ್ ಸುದ್ದಿ ಇದೆ. ಕಂಪನಿಯು ತನ್ನ ಕ್ಲಾಸಿಕ್ ಫೋನ್ ನಾಳೆ (4 ಜನವರಿ 2022) ಯಿಂದ ಬೆಂಬಲಿಸುವುದನ್ನು ನಿಲ್ಲಿಸುತ್ತದೆ. ಈ ಬಗ್ಗೆ ಬ್ಲ್ಯಾಕ್‌ಬೆರಿ ಅಧಿಕೃತ ಘೋಷಣೆ ಸಹ ಮಾಡಲಾಗಿದೆ.

ನಾಳೆಯಿಂದ ಈ ಫೋನ್‌ಗಳ ಕಥೆ ಮುಕ್ತಾಯ!..ಕರೆ, ಡೇಟಾ, ಎಸ್‌ಎಮ್‌ಎಸ್ ಎಲ್ಲವೂ ಸ್ಥಗಿತ!

ಹೌದು, ಜನವರಿ 4 ರಿಂದ, ಬ್ಲ್ಯಾಕ್‌ಬೆರಿ 7.1 OS ಮತ್ತು ಅದಕ್ಕಿಂತ ಹಿಂದಿನ, ಬ್ಲ್ಯಾಕ್‌ಬೆರಿ 10 ಸಾಫ್ಟ್‌ವೇರ್ (BlackBerry 10 software), ಬ್ಲ್ಯಾಕ್‌ಬೆರಿ ಪ್ಲೇಬುಕ್ OS 2.1 (BlackBerry PlayBook OS 2.1) ಮತ್ತು ಅದಕ್ಕಿಂತ ಹಿಂದಿನ ಆವೃತ್ತಿಗಳ ಬೆಂಬಲ ಪಡೆದ ಫೋನ್‌ಗಳು ಇನ್ನು ಮುಂದೆ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ನವೀಕರಿಸಿದ ಟಿಪ್ಪಣಿಯಲ್ಲಿ ತಿಳಿಸಿದೆ.

ನಾಳೆಯಿಂದ ಈ ಫೋನ್‌ಗಳ ಕಥೆ ಮುಕ್ತಾಯ!..ಕರೆ, ಡೇಟಾ, ಎಸ್‌ಎಮ್‌ಎಸ್ ಎಲ್ಲವೂ ಸ್ಥಗಿತ!

ನಾಳೆಯಿಂದ ಈ ಫೋನ್‌ಗಳಿಂದ ವಾಯಿಸ್ ಕರೆಗಳನ್ನು ಮಾಡಲು ಮತ್ತು ಡೇಟಾ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಫೋನ್‌ನಲ್ಲಿ ಎಸ್‌ಎಂಎಸ್ ಮತ್ತು ತುರ್ತು ಸೇವೆಗಳ ಬಳಕೆ ಕೂಡ ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಹಾಗೆಯೇ ವೈ-ಫೈ ಸಂಪರ್ಕದ ಮೂಲಕ ಡೇಟಾ ಬಳಕೆ ಸಾಧ್ಯತೆಗಳ ಬಗ್ಗೆಯು ಗ್ಯಾರಂಟಿ ಇಲ್ಲ ಎನ್ನಲಾಗಿದೆ. ಇನ್ನು ಬ್ಲ್ಯಾಕ್‌ಬೆರಿ ಕಂಪನಿಯು ಈ ಬಗ್ಗೆ ಕಳೆದ ಸೆಪ್ಟೆಂಬರ್ 2020 ರಲ್ಲಿ ಘೋಷಿಸಿತು. ಬ್ಲ್ಯಾಕ್‌ಬೆರಿ ಲಿಮಿಟೆಡ್ ಎಂಬ ಹೆಸರಿನಲ್ಲಿ ಕಂಪನಿಯು ವಿಶ್ವದಾದ್ಯಂತ ಉದ್ಯಮಗಳು ಮತ್ತು ಸರ್ಕಾರಗಳಿಗೆ ಭದ್ರತಾ ಸಾಫ್ಟ್‌ವೇರ್ ಮತ್ತು ಸೇವೆಗಳನ್ನು ಒದಗಿಸುವತ್ತ ಹೆಚ್ಚಿನ ಒಲವು ಹರಿಸಲು ಉದ್ದೇಶಿಸಿದೆ.

ಇನ್ನು 2013 ರಲ್ಲಿ, ಸಂಸ್ಥೆಯು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರನ್ನು ಆಕರ್ಷಿಸಲು ಹಳೆಯ ಬ್ಲ್ಯಾಕ್‌ಬೆರಿ ಓಎಸ್‌ನ ಬದಲಿಯಾಗಿ ಬ್ಲ್ಯಾಕ್‌ಬೆರಿ 10 ಅನ್ನು ತಂದಿತು. ಕಂಪನಿಯು ಅಂತಿಮವಾಗಿ 2015 ರಲ್ಲಿ ಆಂಡ್ರಾಯ್ಡ್‌ಗೆ ಸ್ಥಳಾಂತರಗೊಂಡಿತು. ಬಳಿಕ ಆಪಲ್ ಮತ್ತು ಸ್ಯಾಮ್‌ಸಂಗ್‌ನ ಫ್ಲ್ಯಾಗ್‌ಶಿಪ್‌ಗಳಿಗೆ ಪೈಪೋಟಿ ನೀಡಲು ಬ್ಲ್ಯಾಕ್‌ಬೆರಿ ಪ್ರೈವ್ ಅನ್ನು ಹೊಸ ಸ್ಲೈಡರ್ ಫೋನ್‌ನಂತೆ ತಂದಿತು. ಆದಾಗ್ಯೂ, ಅದೆಲ್ಲವೂ ಯಾವುದೇ ಯಶಸ್ಸನ್ನು ಗಳಿಸಲು ಸಹಾಯ ಮಾಡಲಿಲ್ಲ.

ನಾಳೆಯಿಂದ ಈ ಫೋನ್‌ಗಳ ಕಥೆ ಮುಕ್ತಾಯ!..ಕರೆ, ಡೇಟಾ, ಎಸ್‌ಎಮ್‌ಎಸ್ ಎಲ್ಲವೂ ಸ್ಥಗಿತ!

ಹಾಗೆಯೇ 2016 ರಲ್ಲಿ, ಬ್ಲ್ಯಾಕ್‌ಬೆರಿ ಕಂಪನಿಯು ಅಂತಿಮವಾಗಿ ಜಾಗತಿಕ ಮಾರುಕಟ್ಟೆಗಳಿಗಾಗಿ TCL ಸಂವಹನ ಮತ್ತು ಭಾರತದಲ್ಲಿ ತನ್ನ ಬ್ರ್ಯಾಂಡ್ ಹೆಸರನ್ನು ಮೂರನೇ ವ್ಯಕ್ತಿಯ ಸಾಧನಗಳೊಂದಿಗೆ ಉಳಿಸಿಕೊಳ್ಳಲು Optiemus Infracom ಸೇರಿದಂತೆ ಪರವಾನಗಿ ಪಾಲುದಾರರನ್ನು ತಂದಿತು. ಪರವಾನಗಿ ಪಾಲುದಾರರು ಬ್ಲ್ಯಾಕ್‌ಬೆರಿ KeyOne ಮತ್ತು Key2 ಸೇರಿದಂತೆ ಮಾದರಿಗಳನ್ನು ಪರಿಚಯಿಸಿದರು. ಆದಾಗ್ಯೂ, ಫೆಬ್ರವರಿ 2020 ರಲ್ಲಿ TCL ಇನ್ನು ಮುಂದೆ ಬ್ಲ್ಯಾಕ್‌ಬೆರಿ (BlackBerry) ಫೋನ್‌ಗಳನ್ನು ಉತ್ಪಾದಿಸುವುದಿಲ್ಲ ಎಂದು ಘೋಷಿಸಿತು. ಇತರೆ ಬ್ರ್ಯಾಂಡ್ ಪರವಾನಗಿದಾರರು ಸಹ ಅಕ್ಟೋಬರ್ 2018 ರಿಂದ ಮೌನವನ್ನು ಕಾಯ್ದುಕೊಂಡಿದ್ದಾರೆ. ಹೀಗಾಗಿ ಬ್ಲ್ಯಾಕ್‌ಬೆರಿ ಕೀ2 LE ಬ್ರಾಂಡ್‌ನ ಅಡಿಯಲ್ಲಿ ಬಿಡುಗಡೆ ಮಾಡಿದ ಕೊನೆಯ ಫೋನ್ ಆಗಿದೆ.

Most Read Articles
Best Mobiles in India

English summary
BlackBerry OS Smartphone Will Stop Working Properly from 4th January.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X