Home
ಸುದ್ದಿಜಾಲ

ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಲಾಂಚ್‌ ಮಾಡಿದ ಬ್ಲೂಪಂಕ್ಟ್; 6,499ರೂ. ಗಳಿಗೆ ಲಭ್ಯ!

ಬ್ಲೂಪಂಕ್ಟ್ ಕಂಪೆನಿಯು ಇಯರ್‌ಫೋನ್, ಸ್ಪೀಕರ್‌ ಹಾಗೂ ಹೆಡ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದರ ಭಾಗವಾಗಿ ಈಗ ಹೊಸದಾಗಿ ಬ್ಲೂಪಂಕ್ಟ್ ಕಂಪೆನಿಯಿಂದ ಸ್ಮಾರ್ಟ್‌ಟಿವಿಯನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಟಿವಿ ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿರುವುದು ಹಲವಾರು ಗ್ರಾಹಕರನ್ನು ಈ ಕಡೆ ತಿರುಗಿ ನೋಡುವಂತೆ ಮಾಡಿದೆ.

ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಲಾಂಚ್‌ ಮಾಡಿದ ಬ್ಲೂಪಂಕ್ಟ್;6,499ರೂ.ಗಳಿಗೆ ಲಭ್ಯ

ಹೌದು, ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಬ್ಲೂಪಂಕ್ಟ್ ಟಿವಿ (Blaupunkt TV ) ಲಾಂಚ್‌ ಮಾಡಲಾಗಿದ್ದು, ನೀವೇನಾದರೂ 10,000 ರೂ. ಗಳ ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಟಿವಿಗಳನ್ನು ಖರೀದಿ ಮಾಡಲು ಮುಂದಾದರೆ ಈ ಬ್ಲೂಪಂಕ್ಟ್ ಟಿವಿಯನ್ನು ಕೊಂಡುಕೊಳ್ಳಬಹುದಾಗಿದೆ. ಇನ್ನು ಈ ಹೊಸ ಸ್ಮಾರ್ಟ್‌ಟಿವಿ 3 ಇನ್ 1 ಡಿವೈಸ್‌ ಸಹ ಆಗಿದ್ದು, ಅಗತ್ಯಕ್ಕೆ ತಕ್ಕಂತೆ ಬೇಕಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ ವಿವರ

ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ 24 ಇಂಚಿನ HD ರೆಡಿ ಡಿಸ್‌ಪ್ಲೇ ಹೊಂದಿದ್ದು, 300nits ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಎಂತಹ ಪ್ರಕಾಶಮಾನವಾದ ಬೆಳಕಿನಲ್ಲೂ ಸ್ಪಷ್ಟ ವೀಕ್ಷಣೆ ಇದರಿಂದ ಲಭ್ಯವಾಗಲಿದೆ.

ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ ಪ್ರಮುಖ ಫೀಚರ್ಸ್‌

ಇದರೊಂದಿಗೆ ಈ ಸ್ಮಾರ್ಟ್‌ಟಿವಿ 20 ವ್ಯಾಟ್ ಸೌಂಡ್ ಔಟ್‌ಪುಟ್ ನೀಡಲಿದ್ದು, ಇದಕ್ಕಾಗಿ ಎರಡು ಬಾಟಮ್-ಫೈರಿಂಗ್ ಸ್ಪೀಕರ್‌ಗಳು ಮತ್ತು ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಸರೌಂಡ್ ಸೌಂಡ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಹಾಗೆಯೇ ಈ ಟಿವಿ ಏರ್ ಸ್ಲಿಮ್ ವಿನ್ಯಾಸವನ್ನು ಪಡೆದಕೊಂಡಿದ್ದು, ಈ ಮೂಲಕ ಅತ್ಯುತ್ತಮ ನೋಟವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಲಾಂಚ್‌ ಮಾಡಿದ ಬ್ಲೂಪಂಕ್ಟ್;6,499ರೂ.ಗಳಿಗೆ ಲಭ್ಯ

3 ಇನ್ 1 ಡಿವೈಸ್‌ ಈ ಬ್ಲೂಪಂಕ್ಟ್ ಟಿವಿ

3 ಇನ್ 1 ಡಿವೈಸ್‌ ಆಗಿಯೂ ಈ ಸ್ಮಾರ್ಟ್‌ಟಿಯನ್ನು ಬಳಕೆ ಮಾಡಬಹುದಾಗಿದೆ. ಅಂದರೆ ಇದನ್ನು ಟಿವಿಯಾಗಿಯೂ ಬಳಕೆ ಮಾಡಬಹುದು, ಮಾನಿಟರ್‌ ಆಗಿಯೂ ಬಳಸಬಹುದು ಹಾಗೂ ಸ್ಮಾರ್ಟ್ ಫೀಚರ್ಸ್‌ಗಳಿಗೂ ಪ್ರವೇಶ ಪಡೆಯಬಹುದಾಗಿದೆ.

ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ ಪ್ರೊಸೆಸರ್ ಮಾಹಿತಿ

ಈ ಹೊಸ ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿ A35*4 ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 2.4 GHz ವೈಫೈ ವೇಗವು ಈ ಟಿವಿಯ ಕಾರ್ಯಕ್ಷಮತೆಯನ್ನು ಹೆಚ್ಚಿಗೆ ಮಾಡಿದೆ. ಇದರ ಜೊತೆಗೆ 512 MB RAM ಹಾಗೂ 4 GB ಇಂಟರ್ನಲ್‌ ಸ್ಟೋರೇಜ್‌ ಉತ್ತಮ ಕಾರ್ಯಕ್ಷಮತೆಗೆ ಅನುವು ಮಾಡಿಕೊಟ್ಟಿದೆ.

ಇನ್ನು ಚಿತ್ರ ಗುಣಮಟ್ಟಕ್ಕಾಗಿ ಡಿಜಿಟಲ್ ನಾಯ್ಸ್ ಫಿಲ್ಟರ್ ಮತ್ತು A+ ಪ್ಯಾನೆಲ್ ಆಯ್ಕೆ ಇದರಲ್ಲಿದ್ದು, ಟಿವಿಯು ಪಿಸಿಗಳು, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಬಹು ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ. ಹಾಗೆಯೇ ಯುಟ್ಯೂಬ್ ಸೇರಿದಂತೆ ರಿಮೋಟ್‌ನಲ್ಲಿ ಮೀಸಲಾದ ಶಾರ್ಟ್‌ಕಟ್ ಕೀಗಳ ಆಯ್ಕೆ ಇರುವುದರಿಂದ ಬಳಕೆದಾರರಿಗೆ ಉತ್ತಮ ಅನುಭವ ಸಿಗಲಿದೆ.

ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಲಾಂಚ್‌ ಮಾಡಿದ ಬ್ಲೂಪಂಕ್ಟ್;6,499ರೂ.ಗಳಿಗೆ ಲಭ್ಯ

ಈ ಸ್ಮಾರ್ಟ್‌ಟಿವಿ ಸ್ಮಾರ್ಟ್‌ ಪ್ರೀಮಿಯಂ ಟಿವಿ, ಪ್ರೈಮ್ ವಿಡಿಯೋ, ಝೀ5, ವೂಟ್‌ ಹಾಗೂ ಸೋನಿ ಲೀವ್‌ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಸುಲಭ ಪ್ರವೇಶವನ್ನು ಪಡೆಯಬಹುದಾಗಿದೆ. ಈ ಮೂಲಕ ನೀವೇನಾದರೂ ಹೆಚ್ಚು ಮನರಂಜನಾ ದೃಷ್ಟಿಯಿಂದ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಮುಂದಾದರೆ ಈ ಟಿವಿ ಹಲವಾರು ಅನುಕೂಲ ನೀಡಲಿದೆ.

ಬ್ಲೂಪಂಕ್ಟ್ 24 ಇಂಚಿನ ಸ್ಮಾರ್ಟ್‌ಟಿವಿ ಬೆಲೆ ಮತ್ತು ಲಭ್ಯತೆ

ಬ್ಲೂಪಂಕ್ಟ್ ಈ ಸ್ಮಾರ್ಟ್‌ಟಿವಿಯನ್ನು ಅತ್ಯಂತ ಅಗ್ಗದ ದರದಲ್ಲಿ ಮಾರಾಟ ಮಾಡಲು ಮುಂದಾಗಿದೆ. ಅಂದರೆ 7,499 ರೂ. ಗಳ ಬೆಲೆಗೆ ಮಾರಲು ಮುಂದಾಗಿದ್ದು, ಇದರ ಹೊರತಾಗಿಯೂ ಆಫರ್‌ನಲ್ಲಿ ಈ ಸ್ಮಾರ್ಟ್‌ಟಿವಿಯನ್ನು ಕೇವಲ 6,499 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದು ಎಂದು ಕಂಪೆನಿ ತಿಳಿಸಿದೆ. ಆದರೆ, ಈ ವಿಶೇಷ ಮಾರಾಟವು ಫೆಬ್ರವರಿ 7 ರಿಂದ ಫೆಬ್ರವರಿ 12 ರವರೆಗೆ ಮಾತ್ರ ಇರುತ್ತದೆ. ಅಂದರೆ ಇಂದಿನಿಂದ ಇನ್ನು ಆರು ದಿನಗಳ ವರೆಗೆ ಆಫರ್‌ನಲ್ಲಿ ನೀವು ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Blaupunkt launched new smart TV with 3-in-1 device features. which can be used as a Monitor, and experience smart features, and television.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+