ಬ್ಲೂಪಂಕ್ಟ್ BH41 ವೈರ್‌ಲೆಸ್ ಓವರ್ ಇಯರ್ ಹೆಡ್‌ಫೋನ್ ಲಾಂಚ್: 24h ಪ್ಲೇಬ್ಯಾಕ್
ಬ್ಲೂಪಂಕ್ಟ್ ಈಗಾಗಲೇ ವಿವಿಧ ರೀತಿಯ ಡಿವೈಸ್‌ಗಳಾದ ಸೌಂಡ್ ಬಾರ್‌ಗಳು, ಹೆಡ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳನ್ನು ಭಾರತದಲ್ಲಿ ಕೈಗೆಟಕುವ ದರದಲ್ಲಿ ಲಾಂಚ್ ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಈ ನಡುವೆ ಹೆಡ್‌ಫೋನ್ (Headphone) ಅನ್ನು ಅನಾವರಣ ಮಾಡಲಾಗಿದ್ದು, ಇದು 24h ಪ್ಲೇಬ್ಯಾಕ್ ಸಾಮರ್ಥ್ಯ ಪಡೆದಿದೆ.
ಹೌದು, ಬ್ಲೂಪಂಕ್ಟ್ ಭಾರತದಲ್ಲಿ BH41 ಓವರ್ ಇಯರ್ ಹೆಡ್‌ಫೋನ್ (Blaupunkt BH41 wireless over ear headphones) ಪರಿಚಯಿಸಿದೆ. ಈ ಹೆಡ್‌ಫೋನ್ ವಿಶೇಷ ಆಕರ್ಷಕ ವಿನ್ಯಾಸ ಪಡೆದುಕೊಂಡಿದ್ದು, ಬಳಕೆದಾರರಿಗೆ ವಿಶೇಷವಾದ ಅನುಭವ ನೀಡಲಿದೆ. ಅಂದರೆ ಗೇಮಿಂಗ್‌ನಲ್ಲಿ ತಲ್ಲೀನವಾಗಿದ್ದಾಗ ಅಥವಾ ಸಿನಿಮಾ ವೀಕ್ಷಣೆಯಲ್ಲಿ ನೀವು ಹೊಸ ಲೋಕವನ್ನೇ ನೋಡುವಷ್ಟು ಸಾಮರ್ಥ್ಯ ಈ ಡಿವೈಸ್‌ನಿಂದ ಸಿಗಲಿದೆ. ಹಾಗಿದ್ರೆ ಈ ವಿಶೇಷ ಹೆಡ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬ್ಲೂಪಂಕ್ಟ್ BH41 ವೈರ್‌ಲೆಸ್ ಓವರ್ ಇಯರ್ ಹೆಡ್‌ಫೋನ್: ಈ ವಿಶೇಷ ಡಿವೈಸ್ ವಿನ್ಯಾಸದಲ್ಲಿ ಹೆಚ್ಚಿನ ಗಮನ ಸೆಳೆದಿದೆ. ಈ ಡಿವೈಸ್‌ನಲ್ಲಿನ ಇಯರ್‌ಪೀಸ್‌ಗಳಲ್ಲಿರುವ ಪ್ಲಶ್ ಪ್ರೊಟೀನ್ ಕುಶನ್‌ಗಳು (Plush protein cushion) ಉತ್ತಮವಾದ ಆಲಿಸುವ ಸೌಕರ್ಯ ಕಲ್ಪಿಸಿಕೊಡಲಿದ್ದು, ಈ ಮೂಲಕ ಶಬ್ದ ಪ್ರತ್ಯೇಕತೆಯನ್ನು ನೀಡುತ್ತದೆ. ಜತೆಗೆ ಹೊಂದಾಣಿಕೆಯ ಹೆಡ್‌ಬ್ಯಾಂಡ್ ಎಲ್ಲಾ ರೀತಿಯ ಬಳಕೆಗೆ ಅನುಕೂಲ ಆಗಿದೆ.
ಇದರ ಮಡಿಸಬಹುದಾದ ವಿನ್ಯಾಸವು ಸಹ ಈ ಡಿವೈಸ್‌ಗೆ ಇನ್ನಷ್ಟು ಸೊಬಗನ್ನು ನೀಡಿದ್ದು, ನಿಮ್ಮ ಪಾಕೆಟ್ಸ್ ಅಥವಾ ಬ್ಯಾಗ್‌ಗಳಲ್ಲಿ ಸುಲಭವಾಗಿ ಇಟ್ಟುಕೊಳ್ಳು ಅನುಮತಿಸುತ್ತದೆ. ಉತ್ತಮ ಗುಣಮಟ್ಟದ ವಸ್ತುಗಳಿಂದ ರಚಿಸಲಾದ ಈ ಹೆಡ್‌ಫೋನ್‌ಗಳು ಅಷ್ಟೇನು ಭಾರವಲ್ಲ ಅಂದರೆ ತುಂಬಾ ಹಗುರವಾಗಿದ್ದು, ದೀರ್ಘ ಬಾಳಿಕೆ ಬರುತ್ತವೆ. ಉಳಿದಂತೆ ಡೀಪ್ ಬೇಸ್ (Deep base) ಹೊಂದಿದ್ದು, ಕರೆ ಸಂದರ್ಭದಲ್ಲಿ ಅತ್ಯುತ್ತಮ ಅನುಭವ ಸಿಗಲಿದೆ.

ಈ ಹೆಡ್ ಫೋನ್‌ನಲ್ಲಿನ ಪ್ಯಾಡ್ಡ್ ಪ್ರೊಟೀನ್ ಕುಶನ್‌ಗಳು ಬಾಹ್ಯ ಶಬ್ದವನ್ನು ಕಡಿಮೆ ಮಾಡಲಿದ್ದು, ಇದರಲ್ಲಿನ ಮೈಕ್ರೊಫೋನ್‌ಗಳು ಎಂತಹ ಸವಾಲಿನ ಪರಿಸ್ಥಿತಿಗಳಲ್ಲಿಯೂ ಸಹ ಸ್ಪಷ್ಟವಾದ ಆಡಿಯೊವನ್ನು ನೀಡುವ ಕೆಲಸ ಮಾಡುತ್ತವೆ. ಈ ಮೂಲಕ ಸ್ಪಷ್ಟ ಸಂವಹನವನ್ನು ಖಾತರಿಪಡಿಸಲಾಗಿದೆ. ಮುಖ್ಯವಾಗಿ 40 ಎಂಎಂ ಡ್ರೈವರ್ ಆಯ್ಕೆ ಇದರಲ್ಲಿದ್ದು, ಉತ್ತಮ ಸೌಂಡ್ ಅನುಭವ ನಿಮ್ಮದಾಗಲಿದೆ.
ಬ್ಲೂಪಂಕ್ಟ್ BH41 ವೈರ್‌ಲೆಸ್ ಓವರ್ ಇಯರ್ ಹೆಡ್‌ಫೋನ್ ಬ್ಯಾಟರಿ ಹಾಗೂ ಇತರೆ: ಇನ್ನು ಈ ವಿಶೇಷ ಹೆಡ್ ಫೋನ್ ಉತ್ತಮ ಬ್ಯಾಟರಿ ಆಯ್ಕೆ ಪಡೆದಿದ್ದು, ಒಂದು ಪೂರ್ಣ ಚಾರ್ಜಿಗ್‌ನಲ್ಲಿ 24 ಗಂಟೆಗಳ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ. ಟರ್ಬೋವೋಲ್ಟ್ ಚಾರ್ಜಿಂಗ್ (TurboVolt charging) ಸೌಲಭ್ಯ ಹೊಂದಿದ್ದು, 10 ನಿಮಿಷಗಳ ಚಾರ್ಜ್ ನಲ್ಲಿ 3 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ.
ಇದಕ್ಕಾಗಿ 300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಪಡೆದಿದೆ. ಇದರೊಂದಿಗೆ ವೈರ್‌ಲೆಸ್ ಮತ್ತು ವೈರ್ಡ್ 3.5mm ಜ್ಯಾಕ್ (Wireless and wired) ಕನೆಕ್ಟಿವಿಟಿ ಬೆಂಬಲ ಪಡೆದಿದೆ. ಜೊತೆಗೆ ಬ್ಲೂಟೂತ್ ಆವೃತ್ತಿ 5.0 ಇದ್ದು, ಸುಲಭ ಕನೆಕ್ಟಿವಿಟಿಗೆ ಅನುಕೂಲ ಮಾಡಿಕೊಡಲಿದೆ.

ಬ್ಲೂಪಂಕ್ಟ್ BH41 ವೈರ್‌ಲೆಸ್ ಓವರ್ ಇಯರ್ ಹೆಡ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಹೆಡ್‌ಫೋನ್ ಅನ್ನು ಆರಂಭಿಕ ಆಫರ್ ಬೆಲೆಯಾಗಿ 1,499 ರೂ.ಗಳಿಗೆ ನೀಡಲಾಗುತ್ತಿದ್ದು, ಇದನ್ನು ಇಂದಿನಿಂದ ಖರೀದಿ ಮಾಡಬಹುದಾಗಿದೆ. ಇದಕ್ಕಾಗಿ ನೀವು ಅಮೆಜಾನ್ ಸೈಟ್‌ಗೆ ಬೇಟಿ ನೀಡಬಹುದು. ಈ ಡಿವೈಸ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯ ಇದೆ.


Click it and Unblock the Notifications








