Home
ಸುದ್ದಿಜಾಲ

ಗೂಗಲ್ ಟಿವಿಯೊಂದಿಗೆ ಬ್ಲೂಪಂಕ್ಟ್ ನಿಂದ ಎರಡು ಸ್ಮಾರ್ಟ್‌ಟಿವಿ ಲಾಂಚ್‌; ಬೆಲೆ ಎಷ್ಟು?

ಸ್ಮಾರ್ಟ್‌ಟಿವಿಗಳ (Smart TV) ಬೇಡಿಕೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಪ್ರಮುಖ ಸ್ಮಾರ್ಟ್‌ಟಿವಿ ತಯಾರಿಕಾ ಕಂಪೆನಿಗಳು ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ಟಿವಿ ಅನಾವರಣ ಮಾಡಿಕೊಂಡು ಬರುತ್ತಿದ್ದು, ಈ ನಡುವೆ ಜನಪ್ರಿಯ ಕಂಪೆನಿ ಆಗಿರವ ಬ್ಲೂಪಂಕ್ಟ್(Blaupunkt) ಎರಡು ಸ್ಮಾರ್ಟ್‌ಟಿವಿಗಳನ್ನು ಲಾಂಚ್‌ ಮಾಡಿದೆ.

ಹೌದು, ಬ್ಲೂಪಂಕ್ಟ್ (Blaupunkt) ಭಾರತದಲ್ಲಿ ಎರಡು ಹೊಸ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಅಂದರೆ 43 ಇಂಚಿನ QLED ಟಿವಿ ಮತ್ತು 55 ಇಂಚಿನ 4K ಗೂಗಲ್ ಟಿವಿಯನ್ನು ಲಾಂಚ್‌ ಮಾಡಲಾಗಿದ್ದು, ಬಿಗ್ ಬಿಲಿಯನ್ ಡೇಸ್ ಸೇಲ್ 2023 ಮತ್ತು ಹಬ್ಬದ ಋತುವಿನಲ್ಲಿ ಫ್ಲಿಪ್‌ಕಾರ್ಟ್‌ನೊಂದಿಗೆ ವಿಶೇಷ ಪಾಲುದಾರಿಕೆ ಮೂಲಕ ಸೇಲ್‌ ಆಗಲಿದ್ದು, ಆಫರ್‌ ಬೆಲೆಗೆ ಲಭ್ಯ ಇರಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿಗಳ ಪ್ರಮುಖ ಫೀಚರ್ಸ್ ಮತ್ತು ಬೆಲೆ ವಿವರವನ್ನು ತಿಳಿಯೋಣ ಬನ್ನಿ.

ಗೂಗಲ್ ಟಿವಿಯೊಂದಿಗೆ ಬ್ಲೂಪಂಕ್ಟ್ ನಿಂದ ಎರಡು ಸ್ಮಾರ್ಟ್‌ಟಿವಿ ಲಾಂಚ್‌

ಬ್ಲೂಪಂಕ್ಟ್ ನ 43 ಇಂಚಿನ QLED TV (43QD7050) : ಈ ಸ್ಮಾರ್ಟ್‌ಟಿವಿ HDR10+ ಮತ್ತು ಡಾಲ್ಬಿ ವಿಶನ್‌ಬೆಂಬಲದೊಂದಿಗೆ 4K ರೆಸಲ್ಯೂಶನ್‌ನಲ್ಲಿ ಕಾಣಿಸಿಕೊಂಡಿದ್ದು, 1.1 ಶತಕೋಟಿ ಬಣ್ಣಗಳೊಂದಿಗೆ ಬೆರಗುಗೊಳಿಸುವ ಶೋಗಳನ್ನು ವೀಕ್ಷಣೆ ಮಾಡಲು ಅನುವು ಮಾಡಿಕೊಡುತ್ತದೆ. ಇದರ ನಯವಾದ ಕಪ್ಪು ವಿನ್ಯಾಸವು ವಿಶೇಷ ನೋಟವನ್ನು ನೀಡಲಿದ್ದು, ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ಒಳಗೊಂಡಿರುವ ಡಾಲ್ಬಿ-ಪ್ರಮಾಣೀಕೃತ ಆಡಿಯೊ ಬೆಂಬಲ ಪಡೆದಿದೆ.

ಇದರೊಂದಿಗೆ ಕಡಿಮೆ ಬೆಜೆಲ್‌ ಆಯ್ಕೆ ಪಡೆದುಕೊಂಡಿದ್ದು, 3840 × 2160 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 550 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಮೂಲಕ ಈ ಸ್ಮಾರ್ಟ್‌ಟಿವಿ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದ್ದು, 5000:1 ಕಾಂಟ್ರಾಸ್ಟ್ ಅನುಪಾತ, 178 ಡಿಗ್ರಿ ವೀಕ್ಷಣೆ ಸೌಲಭ್ಯ, 16:09 ಆಕಾರ ಅನುಪಾತದೊಂದಿಗೆ 60Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದುಕೊಂಡಿದೆ.

ಉಳಿದಂತೆ ಈ ಟಿವಿ ಮೀಡಿಯಾ ಟೆಕ್ MT9602 ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ-G52MC1 ಜಿಪಿಯು ಬಲದೊಂದಿಗೆ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಜೊತೆಗೆ 2GBRAM ಹಾಗೂ 16GB ಇಂಟರ್‌ ಸ್ಟೋರೇಜ್‌ ಆಯ್ಕೆ ಇದ್ದು, ಬಳಕೆಯ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲಿದೆ ಮತ್ತು ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌ ಮತ್ತು ಏರ್‌ಪ್ಲೇನೊಂದಿಗೆ ಸ್ಮಾರ್ಟ್ ರಿಮೋಟ್ ಕಂಟ್ರೋಲ್ ಆಯ್ಕೆ ಇದರಲ್ಲಿದೆ.

ಇಷ್ಟೇ ಅಲ್ಲದೆ ಗೂಗಲ್ ಟಿವಿ, ಗೂಗಲ್ ಅಸಿಸ್ಟೆಂಟ್, ಕಿಡ್ಸ್ ಮೋಡ್ ಸೌಲಭ್ಯ ಇದ್ದು, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ ಸೌಲಭ್ಯದ ಮೂಲಕ ಸುಲಭ ಕನೆಕ್ಟಿವಿಟಿಗೆ ಅನುವು ಮಾಡಿಕೊಡುತ್ತದೆ. ಪ್ರಮುಖವಾಗಿ 50W ಆಡಿಯೋ ಔಟ್‌ಪುಟ್‌ ನೀಡಲಿದ್ದು, ಇದು ಡಾಲ್ಬಿ ಅಟ್ಮಾಸ್, ಡಾಲ್ಬಿ ಡಿಜಿಟಲ್, ಡಿಟಿಎಸ್ ಟ್ರೂಸರೌಂಡ್ ಮೂಲಕ ಉತ್ತಮ ಆಡಿಯೋ ಅನುಭವವನ್ನು ನೀಡಲಿದೆ.

ಬ್ಲೂಪಂಕ್ಟ್ 55 ಇಂಚಿನ 4K ಗೂಗಲ್‌ ಟಿವಿ (55CSGT7023) :ಈ ಸ್ಮಾರ್ಟ್‌ಟಿವಿ 3840 × 2160 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದ್ದು, 500 ನಿಟ್ಸ್ ಬ್ರೈಟ್ನೆಸ್ ಆಯ್ಕೆ ಹಾಗೂ 5000:1 ಕಾಂಟ್ರಾಸ್ಟ್ ಅನುಪಾತ, 178 ಡಿಗ್ರಿ ವೀಕ್ಷಣೆ ಸೌಲಭ್ಯ, 16:09 ಆಕಾರ ಅನುಪಾತ, 1 ಬಿಲಿಯನ್ ಬಣ್ಣದ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಟಿವಿ ಹೊಂದಿದೆ. ಜೊತೆಗೆ ಈ ಟಿವಿಯಲ್ಲೂ ಸಹ HDR10+, ಡಾಲ್ಬಿ ವಿಷನ್ ಆಯ್ಕೆ ಇದ್ದು 60Hz ರಿಫ್ರೆಶ್‌ ರೇಟ್‌ ಪಡೆದಿದೆ.

ದೃಢವಾದ 60W ಸ್ಟೀರಿಯೋ ಬಾಕ್ಸ್ ಸ್ಪೀಕರ್ ಸಿಸ್ಟಮ್ ಮತ್ತು DTS ಟ್ರೂಸರೌಂಡ್ ತಂತ್ರಜ್ಞಾನವನ್ನು ಪ್ಯಾಕ್‌ ಆಗಿರುವ ಈ ಸ್ಮಾರ್ಟ್‌ಟಿವಿ ಬ್ಲೂಟೂತ್ ಆವೃತ್ತಿ 5.0 ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ ಮೂಲಕ ಸುಲಭ ಸಂಪರ್ಕಕ್ಕೆ ಅನುವು ಮಾಡಿಕೊಡಲಾಗಿದೆ. ನ್ಯಾವಿಗೇಶನ್‌ಗಾಗಿ ಗೂಗಲ್‌ ಅಸಿಸ್ಟೆಂಟ್‌ ಚಾಲಿತ ರಿಮೋಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಮೂರು ಹೆಚ್‌ಡಿಎಮ್‌ಐ ಪೋರ್ಟ್‌ಗಳೊಂದಿಗೆ (ARC ಮತ್ತು CEC ಸೇರಿದಂತೆ), ಎರಡು ಯುಎಸ್‌ಬಿ ಪೋರ್ಟ್‌ ಆಯ್ಕೆ ಹಾಗೂ DVB-C/DVB-T/T2 ನೊಂದಿಗೆ ಹೊಂದಾಣಿಕೆ ಮಾಡಲು ಅನುಮತಿಸುತ್ತದೆ.

ಇಷ್ಟೇ ಅಲ್ಲದೆ ಈ ಸ್ಮಾರ್ಟ್‌ಟಿವಿ ಗೂಗಲ್‌ ಟಿವಿ ಯಿಂದ ಚಾಲಿತವಾಗಿದ್ದು, ಪ್ಲೇ ಸ್ಟೋರ್‌ ಮೂಲಕ 10,000 ಕ್ಕೂ ಹೆಚ್ಚು ಆಪ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇನ್‌ಬಿಲ್ಟ್‌ ಕ್ರೋಮಾಕಾಸ್ಟ್‌ ಮತ್ತು ಏರ್‌ಪ್ಲೇ ಬೆಂಬಲವನ್ನು ನೀಡಲಿದ್ದು, 2GB RAM, 16GB ROM ನೊಂದಿಗೆ MT9062 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ-G52 ಜಿಪಿಯು ಬಲದ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ಗೂಗಲ್ ಟಿವಿಯೊಂದಿಗೆ ಬ್ಲೂಪಂಕ್ಟ್ ನಿಂದ ಎರಡು ಸ್ಮಾರ್ಟ್‌ಟಿವಿ ಲಾಂಚ್‌

ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿಗಳ ಬೆಲೆ ಹಾಗೂ ಲಭ್ಯತೆ: 43 ಇಂಚಿನ 4K QLED TV (43QD7050) ಸ್ಮಾರ್ಟ್‌ಟಿವಿಗೆ 28,999 ರೂ. ಬೆಲೆ ಇದ್ದರೆ ಬ್ಲೂಪಂಕ್ಟ್ 55 ಇಂಚಿನ 4K ಗೂಗಲ್‌ ಟಿವಿ (55CSGT7023) ಬೆಲೆ 34,999ರೂ.ಗಳಾಗಿದೆ. ಇಂದು ಸಂಜೆ 4 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಲು ಅನುವು ಮಾಡಿಕೊಡಲಾಗಿದ್ದು,ICICI, ಕೊಟಕ್‌ ಅಥವಾ ಆಕ್ಸಿಸ್‌ ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿದ್ರೆ 10% ತ್ವರಿತ ರಿಯಾಯಿತಿ ಪಡೆಯಬಹುದು.

Best Mobiles in India

English summary
Blaupunkt has introduced two new SmartTVs in India. That is, 43-inch QLED TV and 55-inch 4K Google TV have been launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+