Home
ಸುದ್ದಿಜಾಲ

Scam calls: ಸ್ಕ್ಯಾಮ್‌ ಕರೆಗಳಿಗೆ ಗುಡ್‌ ಬೈ ಹೇಳಿ: ನಮ್ಮನ್ನೆಲ್ಲಾ ರಕ್ಷಣೆ ಮಾಡಲಿವೆ ಚಕ್ಷು ಹಾಗೂ ಡಿಐಪಿ!

ಸ್ಮಾರ್ಟ್‌ಫೋನ್‌ಗಳ (smartphones) ಬಳಕೆ ಹೆಚ್ಚಾದಂತೆ ಅವುಗಳನ್ನು ಬಳಕೆ ಮಾಡಿಕೊಂಡು ಮಾಡಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗಿದೆ. ಈ ಮೂಲಕ ಸಾಕಷ್ಟು ಜನರು ಹಣ ಕಳೆದುಕೊಂಡಿದ್ದಾರೆ. ಆದರೆ, ಇನ್ಮುಂದೆ ಈ ಸ್ಕ್ಯಾಮ್‌ ಕರೆಗಳ ಆಟ ನಡೆಯುವುದಿಲ್ಲ.

ಹೌದು, ಸ್ಕ್ಯಾಮ್‌ ಕರೆಗಳಿಗೆ (Scam calls) ಕಡಿವಾಣ ಹಾಕಲು ಸರ್ಕಾರ ವಿವಿಧ ರೀತಿಯಲ್ಲಿ ತನ್ನದೇ ಆದ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆಯಾದರೂ ಸ್ಕ್ಯಾಮರ್‌ಗಳು ಬಣ್ಣ ಬದಲಿಸಿಕೊಂಡು ಮತ್ತೊಂದು ಕಳ್ಳ ಮಾರ್ಗ ಹುಡುಕಿಕೊಂಡು ಜನರನ್ನು ವಂಚನೆ ಮಾಡುತ್ತಿದ್ದಾರೆ. ಇದರ ವಿರುದ್ಧ ಸಮರ ಸಾರಲಾಗಿದ್ದು, ಚಕ್ಷು ಮತ್ತು ಡಿಐಪಿ (Chakshu and DIP) ಬಳಕೆ ಮಾಡಿಕೊಂಡು ಸ್ಕ್ಯಾಮ್‌ ಕರೆಗಳನ್ನು ಕಂಟ್ರೋಲ್‌ ಮಾಡಲು ಎಲ್ಲಾ ತಯಾರಿ ನಡೆದಿದೆ. ಹಾಗಿದ್ರೆ, ಬನ್ನಿ ಚಕ್ಷು ಮತ್ತು ಡಿಐಪಿ ಏನೆಂದು ತಿಳಿಯೋಣ.

ಸ್ಕ್ಯಾಮ್‌ ಕರೆಗಳಿಗೆ ಗುಡ್‌ ಬೈ ಹೇಳಿ: ರಕ್ಷಣೆ ಮಾಡಲಿವೆ ಚಕ್ಷು ಹಾಗೂ ಡಿಐಪಿ!

ಸ್ಕ್ಯಾಮ್‌ ಕರೆಗಳ ವಿರುದ್ಧ ಚಕ್ಷು ಮತ್ತು ಡಿಐಪಿ: ಭಾರತದ ಹೊಸ ಪ್ಲಾಟ್‌ಫಾರ್ಮ್, ಚಕ್ಷು ಮತ್ತು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ (DIP) ಇದೀಗ ವಂಚನೆ ಕರೆಗಳು ಮತ್ತು ಟೆಕ್ಸ್ಟ್‌ ಮೆಸೆಜ್‌ ಅನ್ನು ವರದಿ ಮಾಡಲು ನಾಗರಿಕರಿಗೆ ಅಧಿಕಾರ ನೀಡಲಿದೆ. ಈ ಮೂಲಕ ಟೆಲಿಕಾಂ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈ ಉಪಕ್ರಮವು ಡಿಜಿಟಲ್ ಅಪರಾಧಿಗಳಿಂದ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ರಕ್ಷಿಸುವಲ್ಲಿ ಗಮನಾರ್ಹವಾದ ಕೆಲಸ ಮಾಡಲಿದೆ. ಅದರಲ್ಲೂ ಸಂಚಾರ ಸಾಥಿ (Sanchar Saathi Portal) ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚುವ ಮೂಲಕ ಚಕ್ಷುವಿಗೆ ಪೂರಕವಾಗಿ ಕೆಲಸ ಮಾಡಲಿದೆ.

ಚಕ್ಷು ಮತ್ತು ಡಿಐಪಿ ಎಂದರೇನು?: ಚಕ್ಷು ಮತ್ತು ಡಿಐಪಿ ಸಂಚಾರ ಸಾಥಿ ಪೋರ್ಟಲ್‌ನ ಭಾಗವಾಗಿದೆ. ಜನರು ತಮ್ಮ ಫೋನ್‌ಗಳು ಮತ್ತು ಸಂಪರ್ಕಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಹಾಯ ಪಡೆಯಲು ಇದನ್ನು ಬಳಕೆ ಮಾಡಬಹುದಾಗಿದೆ. ಈ ಹೊಸ ಸೇರ್ಪಡೆಗಳು ಫೋನ್ ಕಂಪನಿಗಳು, ಪೊಲೀಸ್‌, ಬ್ಯಾಂಕ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಸೈಟ್‌ಗಳಂತಹ ವಿವಿಧ ವಿಭಾಗಗಳ ನಡುವೆ ತ್ವರಿತವಾಗಿ ಮಾಹಿತಿಯನ್ನು ಶೇರ್‌ ಮಾಡಿಕೊಳ್ಳಲು ಅನುಮತಿಸುತ್ತದೆ.

ಸ್ಕ್ಯಾಮ್‌ ಕರೆಗಳಿಗೆ ಗುಡ್‌ ಬೈ ಹೇಳಿ: ರಕ್ಷಣೆ ಮಾಡಲಿವೆ ಚಕ್ಷು ಹಾಗೂ ಡಿಐಪಿ!

ಹಾಗಿದ್ರೆ ಈ ಚಕ್ಷು ಹೇಗೆ ಕೆಲಸ ಮಾಡುತ್ತದೆ?: ವಾಟ್ಸಾಪ್‌ (Whatsapp) ರೀತಿಯ ಆಪ್‌ಗಳಲ್ಲಿ ಹಗರಣ ಕರೆ, ಅನುಮಾನಾಸ್ಪದ ಟೆಕ್ಸ್ಟ್‌ ಮೆಸೆಜ್‌ ಅಥವಾ ಮೋಸದ ಮೆಸೆಜ್‌ಗಳನ್ನು ವರದಿ ಮಾಡಲು ಭಾರತದಲ್ಲಿ ಎಲ್ಲರಿಗೂ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದು, ಪ್ಲಾಟ್‌ಫಾರ್ಮ್ ಈ ವರದಿಯನ್ನು ಪಡೆದ ನಂತರ, ಮತ್ತೊಮ್ಮೆ ಪರಿಶೀಲನೆಗೆ ಒಳಲಾಗುತ್ತದೆ. ಅದರಲ್ಲಿ ಏನಾದರೂ ತಪ್ಪು ಕಂಡುಬಂದರೆ ಆ ಅನುಮಾನಾಸ್ಪದ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ ಜೊತೆಗೆ ವಂಚಕರು ಯಾವುದೇ ಹಾನಿ ಮಾಡದಂತೆ ತಡೆಯುತ್ತದೆ ಎಂದು ವಿವರಿಸಿದ್ದಾರೆ.

ಅದೇ ರೀತಿ ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಸಹ ಈ ಸಂಬಂಧ ಕೆಲಸ ಮಾಡಲಿದೆ. ಅಂದರೆ ಈ ಡಿಐಪಿ ಫೋನ್ ಮತ್ತು ಇಂಟರ್ನೆಟ್ ಸೇವೆಗಳ ದುರುಪಯೋಗವನ್ನು ನಿಲ್ಲಿಸಲು ವಿವಿಧ ಗ್ರೂಪ್‌‌ಗಳ ನಡುವೆ ಒಟ್ಟಾಗಿ ಕೆಲಸ ಮಾಡಲಿದೆ. ಅಪರಾಧಿಗಳು ಜನರನ್ನು ಹೇಗೆ ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದರ ಕುರಿತು ಎಲ್ಲಾ ರೀತಿಯ ಮಾಹಿತಿಯನ್ನು ಇದು ನೀಡುತ್ತದೆ.

ಸ್ಕ್ಯಾಮ್‌ ಕರೆಗಳಿಗೆ ಗುಡ್‌ ಬೈ ಹೇಳಿ: ರಕ್ಷಣೆ ಮಾಡಲಿವೆ ಚಕ್ಷು ಹಾಗೂ ಡಿಐಪಿ!

ಟೆಕ್ ಕಂಪನಿಗಳೊಂದಿಗೆ ಹೊಂದಾಣಿಕೆ: ಇನ್ನು ಈ ರೀತಿಯ ಹಗರಣಗಳನ್ನು ಪತ್ತೆಹಚ್ಚುವಲ್ಲಿ ಚಕ್ಷುವನ್ನು ಇನ್ನಷ್ಟು ಉತ್ತಮಗೊಳಿಸಲು ಟ್ರೂಕಾಲರ್‌ನಂತಹ ಕಂಪನಿಗಳೊಂದಿಗೆ ಕೆಲಸ ಮಾಡಲು ಸರ್ಕಾರ ಯೋಜಿಸಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಸಹ ಚಕ್ಷುವಿಗಾಗಿ ಆಪ್‌ ಅನ್ನು ರಚಿಸುತ್ತಿದೆ. ಈ ಮೂಲಕ ಜನರು ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ವರದಿ ಮಾಡಬಹುದಾಗಿದೆ.

ಸಂಚಾರ ಸಾಥಿ ಪೋರ್ಟಲ್‌ನಲ್ಲೇ ಈ ಸೌಲಭ್ಯ ಲಭ್ಯ: ಸಂಚಾರ ಸಾಥಿ ಪೋರ್ಟಲ್‌ನಲ್ಲಿ ಈ ಚಕ್ಷು ಮತ್ತು ಡಿಐಪಿ ಎರಡೂ ಸೌಲಭ್ಯಗಳು ಲಭ್ಯ ಇವೆ. ಕಳೆದುಹೋದ ಫೋನ್‌ಗಳು, ಅನುಮಾನಾಸ್ಪದ ಕರೆಗಳು ಅಥವಾ ಗುರುತಿನ ಕಳ್ಳತನದ ವಿಷಯಕ್ಕೆ ಸಂಬಂಧಿಸಿದಂತೆ ಇನ್ಮುಂದೆ ನೀವು ಸುಲಭವಾಗಿ ದೂರು ದಾಖಲು ಮಾಡಬಹುದಾಗಿದೆ. ಅಲ್ಲದೆ ಸಹಾಯದ ಅಗತ್ಯವಿರುವ ಜನರಿಗೆ ಈ ಸೈಟ್ ಗೋ-ಟು ಸಂಪನ್ಮೂಲವಾಗಿದೆ. ತಡ ಯಾಕೆ ನಿಮಗೆ ಈ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ಶೀಘ್ರವೇ ವರದಿ ಮಾಡಿ ಹಾಗೂ ಸಮಸ್ಯೆ ಬಗೆಹರಿಸಿಕೊಳ್ಳಿ.

Best Mobiles in India

English summary
Chakshu and DIP tools have been introduced to take action against scam calls. This has increased telecom security.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+