ಬ್ಲೂ ವೆಲ್ ಗೇಮ್: ಬೆಂಗಳೂರಲ್ಲಿ ಆತ್ಮಹತ್ಯಗೆ ಯತ್ನಿಸಿದ ಯುವಕನ ರಕ್ಷಣೆ
ಬಿಹಾರ ಮೂಲದ 25 ವರ್ಷದ ಅಜಯ್ ಎಂಬ ಯುವಕ ಬ್ಲೂ ವೆಲ್ ಆಟದ ಕೊನೆಯ ಹಂತವಾಗಿ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ವಿಂಡ್ಸರ್ ಮ್ಯಾನರ್ ಹೋಟೆಲ್ ಸೇತುವೇ ಮೇಲಿಂದ ಬಿಳಲು ಮುಂದಾಗಿದ್ದಾನೆ.
ಬೆಂಗಳೂರಿನಲ್ಲಿ ಬ್ಲೂ ವೆಲ್ ಆಟಕ್ಕೆ ಬಲಿಯಾಗುತ್ತಿದ್ದ ಯುವಕನೋರ್ವನನ್ನು ರಕ್ಷಿಸಲಾಗಿದೆ. ನಗರದ ಪ್ರತಿಷ್ಠಿತ ವಿಂಡ್ಸರ್ ಮ್ಯಾನರ್ ಹೋಟೆಲ್ ಬಳಿಯ ಸೇತವೆಯ ಮೇಲಿನಿಂದ ಕೆಳಗೆ ಹಾರಲು ಯುವಕ ಮುಂದಾಗಿದ್ದ ಎನ್ನಲಾಗಿದ್ದು, ಸ್ಥಳೀಯರು ಅದನ್ನು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿ ಆತನನ್ನು ರಕ್ಷಿಸಿದ್ದಾರೆ.
ಓದಿರಿ: ವೈದ್ಯಲೋಕದ ಆಚ್ಚರಿ: ಸೆಲ್ಫಿ ಮೂಲಕ ಕ್ಯಾನ್ಸರ್ ಕಂಡು ಹಿಡಿಯುವ ಆಪ್

ಬಿಹಾರ ಮೂಲದ 28 ವರ್ಷದ ಅಜಯ್ ಎಂಬ ಯುವಕ ಬ್ಲೂ ವೆಲ್ ಆಟದ ಕೊನೆಯ ಹಂತವಾಗಿ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದು, ವಿಂಡ್ಸರ್ ಮ್ಯಾನರ್ ಹೋಟೆಲ್ ಸೇತುವೇ ಮೇಲಿಂದ ಬಿಳಲು ಮುಂದಾಗಿದ್ದಾನೆ. ಇದನ್ನು ನೋಡಿದ ಪೊಲೀಸರು ಹಾಗೂ ಸಾರ್ವಜನಿಕರು ಆತನನ್ನು ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೈನಲ್ಲಿ ಬ್ಲೂ ವೆಲ್ ಗುರುತು:
ಅಜಯ್ ಕೈ ಹಾಗೂ ಎದೆ ಭಾಗದಲ್ಲಿ ಬ್ಲೇಡ್ ನಿಂದ ಕೊಯ್ದ ಗಾಯದ ಗುರುತುಗಳಿದ್ದು, ಆತ ಬ್ಲೂವೇಲ್ ಆಟ ಆಡುತ್ತಿರಬಹುದು ಎಂದು ಶಂಕಿಸಲಾಗಿದೆ.

ಎಂಬಿಎ ವಿದ್ಯಾರ್ಥಿ:
ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದ್ದು, ಹಾಸ್ಟೆಲೊಂದರಲ್ಲಿ ಉಳಿದುಕೊಂಡಿದ್ದಾನೆ. ಮೂರು ದಿನಗಳ ಹಿಂದೆ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಮನವೊಲಿಸಿದ ಪೊಲೀಸ್:
ಮಧ್ಯಾಹ್ನ 3.30ರ ಸಮಯದಲ್ಲಿ ಸೇತುವೆ ಮೇಲಿಂದ ಹಾರಲು ನಿಂತಿದ್ದ ಅಜಯ್ ಮನವೊಲಿಸಿ ಆತನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಪೊಲೀಸರು ಆತನಿಂದಿಗೆ ಮಾತನಾಡುತ್ತಿರುವಾಗಲೇ ಉಳಿದ ಸಿಬ್ಬಂದಿ ಸೇತುವೆ ಮೇಲತ್ತಿ ಆತನನ್ನು ಹಿಡಿದಿದ್ದಾರೆ.


Click it and Unblock the Notifications








