ವಾಹನಗಳಲ್ಲಿ ಬ್ಲ್ಯೂಟೂತ್ ನಿಯಂತ್ರಿಸಲಿದೆ ಟ್ರಾಫಿಕ್

Written By:

ವಾಹನಗಳಲ್ಲಿರುವ ಬ್ಲ್ಯೂಟೂತ್ ಡಿವೈಸ್ ಅನ್ನು ಪತ್ತೆಹಚ್ಚುವ ಮೂಲಕ ನಗರಗಳ ಮತ್ತು ರಸ್ತೆಗಳಲ್ಲಿರುವ ಟ್ರಾಫಿಕ್ ಮಾಹಿತಿಯನ್ನು ತಿಳಿಸುವ ಹೊಸ ಅಪ್ಲಿಕೇಶನ್ ಅನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಓದಿರಿ: ಫೋನ್‌ನಲ್ಲಿ ಚಾರ್ಜ್ ಇಲ್ಲವೇ ಇನ್ನು ಚಿಂತೆಯೇ ಬೇಡ!!

ವಾಹನಗಳಲ್ಲಿ ಬ್ಲ್ಯೂಟೂತ್ ನಿಯಂತ್ರಿಸಲಿದೆ ಟ್ರಾಫಿಕ್

ಸ್ಪೇನ್‌ನ ವಿಶ್ವವಿದ್ಯಾನಿಲಯದ ಸಂಶೋಧಕರು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ವಾಹನಗಳಲ್ಲಿರುವ ಬ್ಲ್ಯೂಟೂತ್ ವಾಹನ ದಟ್ಟಣೆಯ ಮಾಹಿತಿಯನ್ನು ನೀಡುತ್ತದೆ. ವಾಹನ ದಟ್ಟಣೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ತಿಳಿಸುವುದರ ಜೊತೆಗೆ ವಾಹನಗಳ ಸಂಘರ್ಷಣೆಯನ್ನು ತಪ್ಪಿಸುತ್ತದೆ.

ಓದಿರಿ: ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವ ಜಿಮೇಲ್ ತಂತ್ರ

ವಾಹನಗಳಲ್ಲಿ ಬ್ಲ್ಯೂಟೂತ್ ನಿಯಂತ್ರಿಸಲಿದೆ ಟ್ರಾಫಿಕ್

ಬ್ಲ್ಯೂಟಿಟಿ ಎಂಬ ಸಾಫ್ಟ್‌ವೇರ್ ಪ್ರೊಗ್ರಾಮ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದು, ರಸ್ತೆಗಳ ಸಂಪೂರ್ಣ ದಟ್ಟಣೆ ಮಾಹಿತಿ ಮತ್ತು ನಿಯಂತ್ರಣವನ್ನು ನೀಡಲಿದೆ. ಈ ಬ್ಲ್ಯೂಟಿಟಿ ವಾಹನಗಳಲ್ಲಿರುವ ಬ್ಲ್ಯೂಟೂತ್ ಡಿವೈಸ್ ಅನ್ನು ಪತ್ತೆಹಚ್ಚಿ ಆ ವಾಹನದ ಪ್ರಯಾಣ ಸಮಯವನ್ನು ಅಪ್‌ಡೇಟ್ ಮಾಡುತ್ತದೆ ಮತ್ತು ಟ್ರಾಫಿಕ್‌ನ ನಿರ್ದಿಷ್ಟ ಪರಿಸ್ಥಿತಿಗಳನ್ನು ಸ್ವಯಂಚಾಲಿತವಾಗಿ ತಿಳಿಸುತ್ತದೆ.

ಬ್ಲ್ಯೂಟಿಟಿ ಸಾವಿರಕ್ಕಿಂತಲೂ ಹೆಚ್ಚಿನ ಡಿಟೆಕ್ಟರ್‌ಗಳನ್ನು ಸಂಪರ್ಕಪಡಿಸಿ ಹೊಸ ಹೊಸ ಸೆನ್ಸಾರ್‌ಗಳನ್ನು ನೋಂದಾಯಿಸುತ್ತದೆ.

English summary
Researchers have developed a new application that generates traffic information of cities and roads by detecting the Bluetooth device boarded on vehicles.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot