ಫೋನ್‌ನಲ್ಲಿ ಚಾರ್ಜ್ ಇಲ್ಲವೇ ಇನ್ನು ಚಿಂತೆಯೇ ಬೇಡ!!
ದುಬಾರಿ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತಲೂ ಅವುಗಳ ಬ್ಯಾಟರಿ ಬಾಳ್ವಿಕೆ ಚೆನ್ನಾಗಿ ಬರುವಂತೆ ಮಾಡಬೇಕಾಗಿರುವುದು ನಮ್ಮ ಕೈಯಲ್ಲಿದೆ. ನೀವು ದುಬಾರಿ ಫೋನ್ ಖರೀದಿಸಿ ಅದು ಬ್ಯಾಟರಿ ಬಾಳ್ವಿಕೆಯನ್ನು ನೀಡುತ್ತಿಲ್ಲ ಎಂದಾದಲ್ಲಿ ನಿಮ್ಮ ಫೋನ್ ವ್ಯರ್ಥ ಎಂಬ ಭಾವನೆ ನಿಮ್ಮಲ್ಲಿ ಬರುವುದು ಸಾಮಾನ್ಯವಾಗಿದೆ.
ಓದಿರಿ: ರೀಟೈಲ್ ತಾಣಗಳಿಂದ ಗ್ರಾಹಕರಿಗೆ ಚಳ್ಳೆಹಣ್ಣು!!!
ಇನ್ನು ನಿಮ್ಮ ಫೋನ್ ಹೆಚ್ಚಿನ ಬ್ಯಾಟರಿ ದೀರ್ಘತೆಯನ್ನು ನೀಡುತ್ತಿಲ್ಲ ಎಂದು ನೀವು ಚಿಂತಿಸುವ ಕಾಲ ಮುಗಿಯಿತು. ನಮ್ಮ ಇಂದಿನ ಲೇಖನದಲ್ಲಿ ದೀರ್ಘ ಬ್ಯಾಟರಿ ಬ್ಯಾಕಪ್ ಒದಗಿಸುವ ಸ್ಮಾರ್ಟ್‌ಫೋನ್‌ಗಳೊಂದಿಗೆ ನಾವು ಬಂದಿದ್ದು ಇದು ನಿಮಗೆ ಆಪತ್ಬಾಂಧವ ಎಂದೆನಿಸಲಿದೆ. ಕಡಿಮೆ ದರದಲ್ಲಿ ದೊರಕುವ ಈ ಬ್ಯಾಟರಿ ಪ್ಯಾಕ್‌ಗಳು ಖರೀದಿಸಿದ ದುಡ್ಡಿಗೆ ಸರಿಯಾಗಿ ಕಾರ್ಯನಿರ್ವಹಿಸಬಲ್ಲ ಶಕ್ತಿಯುಳ್ಳದ್ದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಶ್ಯೋಮಿ ಪವರ್ ಬ್ಯಾಂಕ್
ಜಲ ಮತ್ತು ಧೂಳು ಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡಿರುವ ಶ್ಯೋಮಿ ಪವರ್ ಬ್ಯಾಂಕ್ ಅನ್ನು ಸರಾಸರಿ ಬಳಕೆದಾರರ ಖರೀದಿಸಿದ್ದಾರೆ. ಇದರ 999 ರೂಗಳ ಬ್ಯಾಟರಿ ಪ್ಯಾಕ್‌ನೊಂದಿಗೆ ಐಫೋನ್ ಅನ್ನು 4-5 ಬಾರಿ ಚಾರ್ಜ್ ಮಾಡಬಹುದಾಗಿದೆ.

ಚೀರೋ ಪವರ್ ಬ್ಯಾಂಕ್
ಚೀರೋ 12000 mAh ಬ್ಯಾಟರಿ ಬ್ಯಾಂಕ್ ಉತ್ತಮ ಗುಣಮಟ್ಟದ ಯುಎಸ್‌ಬಿ ಕೇಬಲ್‌ನೊಂದಿಗೆ ಬಂದಿದ್ದು ವೇಗದ ಚಾರ್ಜಿಂಗ್ ಅನ್ನು ನಿಮಗೆ ಒದಗಿಸುತ್ತದೆ. ವೆಲ್ವೆಟ್ ಪೌಚ್ ಕೂಡ ಇದು ಹೊಂದಿದೆ.

TYLT ಪವರ್ ಪ್ಲಾಂಟ್
ಉತ್ತಮ ರಚನಾ ಸಾಮರ್ಥ್ಯವನ್ನು ಹೊಂದಿರುವ ಈ ಪವರ್ ಬ್ಯಾಂಕ್ ವೇಗದ ಚಾರ್ಜಿಂಗ್ ಅನ್ನು ನಿಮಗೆ ಒದಗಿಸುತ್ತದೆ. 6 ಗಂಟೆಗಳ ಸಂಪೂರ್ಣ ಚಾರ್ಜಿಂಗ್ ಅನ್ನು ಇದು ನಿಮಗೆ ನೀಡುತ್ತದೆ. ಇದನ್ನು ಬಳಸಿಕೊಂಡು ಎರಡು ಡಿವೈಸ್‌ಗಳನ್ನು ಒಮ್ಮೆಲೆ ಚಾರ್ಜ್ ಮಾಡಬಹುದಾಗಿದೆ.

ಅಂಬ್ರೇನ್ P1040
ಡಿಜಿಟಲ್ ಡಿಸ್‌ಪ್ಲೇಯನ್ನು ಹೊಂದಿರುವ ಪವರ್ ಬ್ಯಾಂಕ್ ಇದಾಗಿದ್ದು, ಸೂಕ್ತವಾದ ಚಾರ್ಜ್ ಹಂತವನ್ನು ಇದು ನಿಮಗೆ ನೀಡುತ್ತದೆ. ಸ್ಯಾಮ್‌ಸಂಗ್ ಬ್ಯಾಟರಿ ಇದಕ್ಕೆ ಫಿಟ್ ಆಗುತ್ತಿದ್ದು 2.1 ಪ್ರಸ್ತುತ ವೇಗ ಚಾರ್ಜ್ ಅನ್ನು ನೀಡುತ್ತದೆ.

Lenovo PA 10400
ಗಂಭೀರ ಮತ್ತು ಸರಳ ಪವರ ಬ್ಯಾಂಕ್ ಎಂದೇ ಕರೆಯಿಸಿಕೊಂಡಿರುವ Lenovo PA 10400 5 ಗಂಟೆಗಳಲ್ಲಿ ಪೂರ್ಣ ಚಾರ್ಜ್ ಅನ್ನು ಪಡೆದುಕೊಳ್ಳುತ್ತದೆ.

TPLINK
ಪೋರ್ಟೇಬಲ್ ಚಾರ್ಜರ್ ಆಗಿರುವ TPLINK 10400mAH ಶಕ್ತಿಯುಳ್ಳದ್ದು. ಇದು ದೀರ್ಘ ಬ್ಯಾಟರಿಯನ್ನು ಒಳಗೊಂಡಿದ್ದು ಡ್ಯುಯಲ್ ಚಾರ್ಜಿಂಗ್ ಪೋರ್ಟ್‌ಗಳನ್ನು ಒದಗಿಸುತ್ತಿದೆ. ಇದು ಫ್ಲ್ಯಾಶ್ ಲೈಟ್ ಅನ್ನು ಒಳಗೊಂಡಿದ್ದು ಟಾರ್ಚ್ ರೀತಿಯಲ್ಲಿ ಇದನ್ನು ಬಳಸಬಹುದಾಗಿದೆ.

Romoss
ಸರಳ ನೋಟವನ್ನು ಹೊಂದಿರುವ, Romoss 10000mAH ಪವರ್ ಬ್ಯಾಂಕ್ ರೂ 1,150 ಗೆ ನಿಮಗೆ ದೊರೆಯಲಿದೆ. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ನಿಂದ ಇದನ್ನು ತಯಾರಿಸಿದ್ದು, ನಿಜಕ್ಕೂ ಬಳಕೆದಾರ ಸ್ನೇಹಿ ಎಂದೆನಿಸಿದೆ.

ಲೆನೊವೊ ಪವರ್ ಬ್ಯಾಂಕ್ PB410
ಉತ್ತಮ ಗುಣಮಟ್ಟದ ರಚನೆಯನ್ನು ಪಡೆದುಕೊಂಡಿರುವ ಬ್ಯಾಟರಿ ಪ್ಯಾಕ್ ಇದಾಗಿದ್ದು ಮೆಟಾಲಿಕ್ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಹುರವಾಗಿದ್ದು 2 ರಿಂದ 3 ಗಂಟೆಗಳ ಚಾರ್ಜ ಅನ್ನು ಒದಗಿಸುತ್ತದೆ.

ಪ್ರೊಟ್ರೊನಿಕ್ಸ್ POR310
ರಬ್ಬರ್ ವಿನ್ಯಾಸವನ್ನು ಈ ಪವರ್ ಬ್ಯಾಂಕ್ ಹೊಂದಿದ್ದು ಸಾಗಾಟಕ್ಕೆ ಹೇಳಿ ಮಾಡಿಸಿರುವಂಥದ್ದಾಗಿದೆ. ಈ ಪವರ್ ಬ್ಯಾಂಕ್ 3 ಎಲ್‌ಇಡಿ ಇಂಟಿಕೇಟರ್‌ಗಳನ್ನು ಒಳಗೊಂಡಿದ್ದು ಚಾರ್ಜಿಂಗ್ ಹಂತಗಳನ್ನು ತೋರಿಸುತ್ತದೆ ಮತ್ತು ಒಂದು ಡಿವೈಸ್ ಅನ್ನು ಚಾರ್ಜ್ ಮಾಡಬಲ್ಲುದು.

ಕಾರ್ಬನ್ ಪೋಲಿಮರ್ 10 ಪವರ್ ಬ್ಯಾಂಕ್
ಇದು ಎರಡು ಪೋರ್ಟ್‌ಗಳನ್ನು ಹೊಂದಿದ್ದು 1.5 ಏಂಪರ್ ಮತ್ತು 2.1 ಏಂಪರ್‌ಗಳನ್ನು ಪ್ರಸ್ತುತ ಹೊಂದಿದೆ. ಡ್ಯುಯಲ್ ಪವರ್ ಮೋಡ್ ಇದರಲ್ಲಿದ್ದು, ಎಲ್‌ಇಡಿ ಇಂಡಿಕೇಟರ್, ಮತ್ತು ಆರು ತಿಂಗಳ ವಾರಂಟಿಯನ್ನು ಇದು ಪಡೆದುಕೊಂಡಿದೆ.


Click it and Unblock the Notifications





