Home
ಸುದ್ದಿಜಾಲ

ಸಾಕು ಪ್ರಾಣಿಗಳಿಗೆ ಹಾನಿಕಾರಕ ನಿಮ್ಮ ಮನೆಯ ಬ್ಲೂಟೂತ್‌ ಸ್ಪೀಕರ್! ಹೇಗೆ ಅಂತೀರಾ?

ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ಬ್ಲೂಟೂತ್‌ ಸ್ಪೀಕರ್‌ (Bluetooth speaker) ಇದ್ದೇ ಇರುತ್ತದೆ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಈ ಡಿವೈಸ್‌ಗಳು ಜನಪ್ರಿಯತೆ ಪಡೆದುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಭಿನ್ನ ಫೀಚರ್ಸ್‌ ಆಯ್ಕೆ ಪಡೆಯುವ ಮೂಲಕ ಬಳಕೆದಾರರಿಗೆ ಸಿನಿಮಾ ಹಾಲ್‌ನಲ್ಲಿ ಸಿಗುವ ಅನುಭವವನ್ನು ನೀಡಲಿವೆ.

ಹೌದು, ಯಾವುದೇ ತಂತ್ರಜ್ಞಾನ ಹೆಚ್ಚು ಹೆಚ್ಚು ಬಳಕೆಯಾದಂತೆ ಪರಿಸರಕ್ಕೆ ಅಥವಾ ಪ್ರಾಣಿ ಪಕ್ಷಿಗಳಿಗೆ ಹಾನಿ ಮಾಡುವುದು ಹೊಸತೇನಲ್ಲ. ಅದರಲ್ಲೂ ಅಲ್ಲೋ ಇಲ್ಲೋ ಒಂದು ಗುಬ್ಬಚ್ಚಿ ಕಾಣಿಸಿಕೊಳ್ಳುವುದೇ ಈಗ ದೊಡ್ಡ ವಿಷಯವಾಗಿದೆ. ಇದೇ ರೀತಿಯ ಸಮಸ್ಯೆ ಮನೆಯಲ್ಲಿ ಸಾಕುವ ಪ್ರಾಣಿಗಳಿಗೂ ಉಂಟಾಗಲಿದೆ ಎಂದರೆ ನೀವು ನಂಬಲೇ ಬೇಕು. ಅಂದರೆ ಬ್ಲೂಟೂತ್‌ ಸ್ಪೀಕರ್‌ಗಳು ಈ ಪ್ರಾಣಿಗಳಿಗೆ ಹಾನಿಕಾರಕ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಿದ್ರೆ, ಯಾವ ಪ್ರಾಣಿಗಳಿಗೆ ಏನು ಸಮಸ್ಯೆ ಆಗಲಿದೆ?, ಬ್ಲೂಟೂತ್‌ ಸ್ಪೀಕರ್‌ಗಳಲ್ಲಿ ಅಂತಹುದ್ದೇನಿದೆ ಅನ್ನೋದನ್ನು ನೋಡೋಣ ಬನ್ನಿ.

ಸಾಕು ಪ್ರಾಣಿಗಳಿಗೆ ಹಾನಿಕಾರಕ ನಿಮ್ಮ ಮನೆಯ ಬ್ಲೂಟೂತ್‌ ಸ್ಪೀಕರ್!  ಹೇಗೆ ಅಂತೀರಾ?

ಬ್ಲೂಟೂತ್‌ ಸ್ಪೀಕರ್‌ನಿಂದ ಸಮಸ್ಯೆ: ಬ್ಲೂಟೂತ್ ಸ್ಪೀಕರ್‌ಗಳು ಮಾನವರಿಗೆ ವಿವಿಧ ರೀತಿಯಲ್ಲಿ ಅನುಕೂಲಕರವಾಗಿದ್ದರೂ, ಅವುಗಳ ಕೇಳಿಸಲಾಗದ ಹೈ-ಫ್ರೀಕ್ವೆನ್ಸಿ ಟೋನ್‌ಗಳು (High-frequency tones) ಸಾಕುಪ್ರಾಣಿಗಳಿಗೆ ಒತ್ತಡವನ್ನು ಉಂಟುಮಾಡಬಹುದು. ಈ ಮೂಲಕ ಬೆಕ್ಕು ಹಾಗೂ ನಾಯಿ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಜಿನೋಡ್‌ನ ಇತ್ತೀಚಿನ ಅಧ್ಯಯನದ ಪ್ರಕಾರ ಈ ವಿಷಯ ಬಹಿರಂಗವಾಗಿದೆ.

ಮಾನವರೂ ಸೇರಿದಂತೆ ಸಾಕುಪ್ರಾಣಿಗಳಾದ ಬೆಕ್ಕುಗಳು ಮತ್ತು ನಾಯಿಗಳು ವಿವಿಧ ಶ್ರೇಣಿಗಳಲ್ಲಿ ಆಡಿಯೊ ಆವರ್ತನಗಳನ್ನು ಕೇಳುವ ಸಾಮರ್ಥ್ಯ ಪಡೆದಿದ್ದಾರೆ. ಅದರಲ್ಲಿ ಮನುಷ್ಯರು 20 Hz ನಿಂದ 20 kHz ವ್ಯಾಪ್ತಿಯಲ್ಲಿ ಆಡಿಯೊ ಆವರ್ತನಗಳನ್ನು ಆಲಿಸಬಹುದು. ಆದರೆ, ಸಾಕುಪ್ರಾಣಿಗಳು ವಿಶೇಷವಾಗಿ ಬೆಕ್ಕುಗಳು 65 kHz ವರೆಗೆ, ನಾಯಿಗಳು 45 kHz ವರೆಗೆ ಆಲಿಸುವ ಸಾಮರ್ಥ್ಯ ಪಡೆದುಕೊಂಡಿವೆ.

ಸಾಕು ಪ್ರಾಣಿಗಳಿಗೆ ಹಾನಿಕಾರಕ ನಿಮ್ಮ ಮನೆಯ ಬ್ಲೂಟೂತ್‌ ಸ್ಪೀಕರ್!  ಹೇಗೆ ಅಂತೀರಾ?

ಯಾವ ಸಮಸ್ಯೆ ಉಂಟುಮಾಡಲಿದೆ?: ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಸಾಕುಪ್ರಾಣಿಗಳು ನಮಗೆ ಕೇಳಲು ಸಾಧ್ಯವಾಗದ ಶಬ್ದಗಳನ್ನೂ ಸಹ ಆಲಿಸುವುದು. ಅಂದರೆ ಬ್ಲೂಟೂತ್ ಸ್ಪೀಕರ್ 23,000Hz ಗಿಂತ ಹೆಚ್ಚಿನ ಆವರ್ತನದಲ್ಲಿ ಐಡಲ್ ಟೋನ್ ಅನ್ನು ಹೊರಸೂಸುತ್ತದೆ. ಇದು ಮನುಷ್ಯರಿಗೆ ಕೇಳಿಸುವುದಿಲ್ಲ. ಆದರೆ, ಬೆಕ್ಕುಗಳು ಮತ್ತು ನಾಯಿಗಳು ಅದನ್ನು ಆಲಿಸಬಹುದಾಗಿದೆ. ಈ ಐಡಲ್ ಟೋನ್ ಅವುಗಳಲ್ಲಿ ಆತಂಕವನ್ನು ಉಂಟುಮಾಡಬಹುದು, ಅಲ್ಲದೆ ಅವುಗಳ ನಿದ್ರೆಯ ಮಾದರಿಗಳನ್ನು ಅಡ್ಡಿಪಡಿಸಬಹುದು ಮುಖ್ಯವಾಗಿ ಕಿವಿಯನ್ನು ಹಾನಿಗೊಳಿಸಬಹುದು.

ಈ ಹೆಚ್ಚಿನ ಆವರ್ತನದ ಶಬ್ದಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಸಾಕುಪ್ರಾಣಿಗಳಲ್ಲಿನ ನಡವಳಿಕೆ ಸಹ ಬದಲಾಗುತ್ತದಂತೆ. ಅಲ್ಲದೆ ಆರೋಗ್ಯ ಸಮಸ್ಯೆಗಳ ಬದಲಾವಣೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಈ ಸಮಸ್ಯೆಗಳ ವಿಭಾಗದಲ್ಲಿ ಸ್ಕ್ರಾಚಿಂಗ್ ಮತ್ತು ಚಡಪಡಿಕೆಯಿಂದ ಹಿಡಿದು ಹೆಚ್ಚು ಗಂಭೀರ ಸಮಸ್ಯೆಗಳಾದ ಆತಂಕ, ಆಕ್ರಮಣಶೀಲತೆ ಮತ್ತು ಬದಲಾಯಿಸಲಾಗದ ಶ್ರವಣ ಸಮಸ್ಯೆವರೆಗೆ ಇರಬಹುದು ಎಂದು ತಜ್ಞರು ತಮ್ಮ ವರದಿಯಲ್ಲಿ ಕಂಡುಕೊಂಡಿದ್ದಾರೆ.

ಸಾಕು ಪ್ರಾಣಿಗಳಿಗೆ ಹಾನಿಕಾರಕ ನಿಮ್ಮ ಮನೆಯ ಬ್ಲೂಟೂತ್‌ ಸ್ಪೀಕರ್!  ಹೇಗೆ ಅಂತೀರಾ?

ಇದಕ್ಕೆ ಪರಿಹಾರ ಏನು?: ಆದರೂ ಸಹ ಕೆಲವು ಅಭ್ಯಾಸಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಲಾಗಿದೆ. ಇದರಲ್ಲಿ ಸ್ಪೀಕರ್ ಅನ್ನು ಸಾಕುಪ್ರಾಣಿಗಳು ಮಲಗುವ ಪ್ರದೇಶ ಅಥವಾ ನೆಚ್ಚಿನ ಸ್ಥಳದಿಂದ ದೂರವಿಡುವುದೇ ಆಗಿದೆ. ಬ್ಲೂಟೂತ್ ಸ್ಪೀಕರ್‌ಗಳ ಬಳಕೆಯನ್ನು ಸೀಮಿತಗೊಳಿಸುವುದು ಮತ್ತು ಬಳಕೆಯಲ್ಲಿಲ್ಲದಿದ್ದಾಗ ಅವುಗಳನ್ನು ಸಂಪೂರ್ಣವಾಗಿ ಆಫ್ ಮಾಡುವುದು. ಹೆಚ್ಚುವರಿಯಾಗಿ, ಬ್ಲೂಟೂತ್ ಸ್ಪೀಕರ್‌ನ ಆವರ್ತನವನ್ನು ಸರಿಹೊಂದಿಸುವ ಕೆಲಸ ಮಾಡಬೇಕಿದೆ.

ನಿಮ್ಮ ಮನೆಯಲ್ಲಿ ನಾಯಿ ಅಥವಾ ಬೆಕ್ಕು ಸೇರಿದಂತೆ ಇತರೆ ಪ್ರಾಣಿಗಳು ಇದ್ದರೆ ಇಂದಿನಿಂದಲೇ ನಿಮ್ಮ ಬ್ಲೂಟೂತ್‌ ಸ್ಪೀಕರ್‌ನೊಂದಿಗೆ ಬೆಳೆಸಿಕೊಂಡಿರುವ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಈ ಮೂಲಕ ನಿಮ್ಮ ಪ್ರೀತಿಯ ಪ್ರಾಣಿಗಳು ನಿಮ್ಮ ಮನೆಯಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡು ಇರಲು ಅನುವು ಮಾಡಿಕೊಡಿ.

Best Mobiles in India

English summary
Bluetooth speakers are convenient for humans in many ways, but inaudible high-frequency tones can be stressful for pets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+