Home
ಸುದ್ದಿಜಾಲ

ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್‌ ಲಾಂಚ್‌!

ಬೆಂಗಳೂರು ಟೆಕ್‌ ವಲಯದ ಆಶ್ರಯದ ತಾಣ. ಇದಿಷ್ಟೇ ಅಲ್ಲದೆ ಅದೆಷ್ಟೋ ಜನ ಉದ್ಯೋಗ ಸಂಬಂಧಿ ಹಾಗೂ ಇನ್ನಿತರೆ ಸಣ್ಣಪುಟ್ಟ ಕೆಲಸಕ್ಕೆ ಈ ನಗರಕ್ಕೆ ಬರುತ್ತಾರೆ. ಈ ಎಲ್ಲಾ ಕಾರಣದಿಂದ ನಗರದಲ್ಲಿ ಸಂಚರಿಸುವ ಜನರ ಸಂಖ್ಯೆ ತುಂಬಾನೇ ಹೆಚ್ಚಾಗಿರುತ್ತದೆ. ಈಗಾಗಲೇ ಮೆಟ್ರೋ ಹಾಗೂ ಇತರೆ ಬಸ್‌ಗಳು ಜನರಿಗೆ ಸೇವೆ ನೀಡುತ್ತಿದ್ದು, ಈ ಸೇವೆಯನ್ನು ಸುಧಾರಿಸಲು ಇನ್ನೇನು ಕೆಲವೇ ದಿನದಲ್ಲಿ ಬಿಎಮ್‌ಟಿಸಿಯ ಹೊಸ ಆಪ್‌ ಬಳಕೆದಾರರಿಗೆ ಲಭ್ಯವಾಗಲಿದೆ. ಇದರಿಂದ ಸಂಚಾರಿಗಳು ಹಲವು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್‌ ಲಾಂಚ್‌!

ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ತಿಂಗಳ ಕೊನೆಯಲ್ಲಿ NIMBUS ಆಪ್‌ ಅನ್ನು ಅನಾವರಣ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಅದರಂತೆ ಇನ್ನೇನು ಮುಂದಿನ ನಾಲ್ಕೈದು ದಿನಗಳಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಪ್‌ ಅನ್ನು ಅನ್ನು ಅಧಿಕೃತವಾಗಿ ಪ್ರಾರಂಭಿಸಲು ಬಿಎಂಟಿಸಿ ಯೋಜಿಸುತ್ತಿದ್ದು, ಈ ಆಪ್‌ನಿಂದಾಗುವ ಅನುಕೂಲ ಹಾಗೂ ಇನ್ನಿತರೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಹು ನಿರೀಕ್ಷಿತ NIMBUS ಆಪ್‌ ಅನ್ನು ಈ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಬಿಎಮ್‌ಟಿಸಿಯ ಮಾಹಿತಿ ಮತ್ತು ತಂತ್ರಜ್ಞಾನದ ನಿರ್ದೇಶಕ ಸೂರ್ಯ ಸೇನ್ ಮಾಹಿತಿ ನೀಡಿದ್ದಾರೆ. ಅದರಂತೆ ಮುಂದಿನ ನಾಲ್ಕೈದು ದಿನಗಳಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಪ್‌ ಅನ್ನು ಅಧಿಕೃತವಾಗಿ ಪ್ರಾರಂಭಿಸಲು ಬಿಎಂಟಿಸಿ ಮುಂದಾಗಿದೆ.

ಗಡುವು ವಿಸ್ತರಣೆ ಆಗುತ್ತಲೇ ಇದೆ...
ಈ ಆಪ್‌ ಅನ್ನು ಅನಾವರಣ ಮಾಡುವ ದಿನಾಂಕವನ್ನು ಈ ಹಿಂದಿನಿಂದಲೂ ಘೋಷಣೆ ಮಾಡಿಕೊಂಡು ಬರುತ್ತಿದೆಯಾದರೂ ದಿನಾಂಕ ಮಾತ್ರ ವಿಸ್ತರಣೆ ಆಗುತ್ತಲೇ ಇದೆ. ಅದರಂತೆ ಈ ಆಪ್‌ ಅನ್ನು ಡಿಸೆಂಬರ್ 13 ರಂದು ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಬಿಡುಗಡೆಯನ್ನು ಡಿಸೆಂಬರ್ 23 ಕ್ಕೆ ಮುಂದೂಡಲಾಯಿತು. ಆದರೂ ಕೆಲವು ಬಗ್‌ಗಳನ್ನು ಸರಿಪಡಿಸುವ ಹಿನ್ನೆಲೆ ಮತ್ತೆ ಅನಾವರಣವನ್ನು ಮುಂದೂಡಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಆಪ್‌ ಬಳಕೆದಾರರಿಗೆ ಲಭ್ಯವಾಗಲಿದೆ.

ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್‌ ಲಾಂಚ್‌!

ಈ ಆಪ್‌ನಿಂದ ಪ್ರಯೋಜನ ಏನು?
NIMBUS ಆಪ್‌ ಬಿಎಮ್‌ಸಿಟಿ ಬಸ್‌ಗಳ ನೈಜ-ಸಮಯದ ಟ್ರ್ಯಾಕಿಂಗ್ ಸೇವೆಯನ್ನು ನೀಡಲಿದೆ. ಹಾಗೆಯೇ ತುರ್ತು ಸಂದರ್ಭಗಳನ್ನು ಫ್ಲ್ಯಾಗ್ ಮಾಡಲು SOS ಎಚ್ಚರಿಕೆ ಫೀಚರ್ಸ್‌ಗಳನ್ನೂ ಸಹ ಈ ಆಪ್‌ ಒಳಗೊಂಡಿದ್ದು, ಬಳಕೆದಾರರಿಗೆ ಹಲವಾರು ಅನುಕೂಲ ಉಂಟಾಗಲಿದೆ.

ಇನ್ನು ಬಿಎಮ್‌ಟಿಸಿಯ ಒಟ್ಟಾರೆ 6,802 ಆಪ್‌ಗಳಲ್ಲಿ 5,000 ಬಸ್‌ಗಳ ನೈಜ ಸಮಯದ ಮಾಹಿತಿಯನ್ನು ಈ ಆಪ್‌ ಬಳಕೆದಾರರಿಗೆ ನೀಡಲಿದೆ. ಅದರಲ್ಲೂ ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಹೊಸ ಬಸ್‌ಗಳನ್ನು ಈ ವಿಭಾಗಕ್ಕೆ ಸೇರಿಸಿದಾಗ ಅದರ ವಿವರ ಹಾಗೂ ಇನ್ನಿತರೆ ಡೇಟಾವನ್ನು ಈ ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್‌ ಲಾಂಚ್‌!

ಇದು ತುಂಬಾ ಸಂಕೀರ್ಣವಾದ ಆಪ್‌ ಆಗಿದ್ದು, ನಾವು ವಿವಿಧ ಸಂದರ್ಭಗಳಲ್ಲಿ ಕೆಲವು ದೋಷಗಳನ್ನು ಪತ್ತೆ ಮಾಡಿದ್ದೇವೆ. ಯೋಜನೆ, ವೇಳಾಪಟ್ಟಿ ಮತ್ತು ಡಿಪೋ ನಿರ್ವಹಣೆ, ಇತರ ಫೀಚರ್ಸ್‌ಗಳ ಜೊತೆಗೆ, ಹಲವು ಸೇವೆಗಳನ್ನು ಆಪ್‌ಗೆ ಸೇರಿಸಬೇಕಿದೆ. ಅದರಂತೆ ಕೆಲವು ಯೋಜನೆ ಮತ್ತು ವೇಳಾಪಟ್ಟಿಯ ಭಾಗದಲ್ಲಿ ಸಮಸ್ಯೆಗಳನ್ನು ವಿಂಗಡಿಸಬೇಕಾಗಿದೆ. ಸಾರ್ವಜನಿಕ ಸಾರಿಗೆಯ ಸಮರ್ಥ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬಸ್ ಸೇವೆಗಳು ಮತ್ತು ಪ್ರಯಾಣಿಕರ ನಡುವಿನ ಮಾಹಿತಿ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ಆಪ್‌ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರೀಕ್ಷಾ ಹಂತದಲ್ಲಿ NIMBUS ಆಪ್‌
ಸದ್ಯಕ್ಕೆ 30 ರಿಂದ 40 ಬಳಕೆದಾರರು ಪ್ರಾಯೋಗಿಕ ಆಧಾರದ ಮೇಲೆ ಆಪ್‌ ಅನ್ನು ಪರೀಕ್ಷಿಸುತ್ತಿದ್ದು, ಬಸ್ ಸಂಖ್ಯೆ ಮತ್ತು ಬಸ್ ನಿಲ್ದಾಣದ ದೋಷಗಳಂತಹ ಸಮಸ್ಯೆಗಳನ್ನು ಫ್ಲ್ಯಾಗ್ ಮಾಡಿದ್ದಾರೆ. ಇದರೊಂದಿಗೆ ಇತರೆ ಸಮಸ್ಯೆಗಳನ್ನೂ ಸಹ ಗುರುತಿಸಿದ್ದಾರೆ. ಇದೆಲ್ಲದರ ಜೊತೆಗೆ ಈ ಆಪ್‌ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಲಭ್ಯವಿದ್ದು, ತಮ್ಮ ಫೋನ್ ಸಂಖ್ಯೆ ಮತ್ತು ಓಟಿಪಿ ಕೋಡ್ ಅನ್ನು ಬಳಕೆ ಮಾಡಿಕೊಂಡು ಆಪ್‌ಗೆ ಲಾಗಿನ್‌ ಆಗಬಹುದಾಗಿದೆ.

Best Mobiles in India

English summary
Bengaluru Metropolitan Transport Corporation is all set to launch the NIMBUS app later this month, through which passengers can easily get bus details. details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+