Home
ಸುದ್ದಿಜಾಲ

ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ...ಪರೀಕ್ಷಾ ಕೇಂದ್ರಕ್ಕೆ ಸರಿಯಾಗಿ ತಲುಪಲು ಈ ಆಪ್‌ಗಳು ಸಹಕಾರಿ!

ಸಿಬಿಎಸ್‌ಸಿ ಮತ್ತು ಐಎಸ್‌ಸಿ ಶಾಲೆಗಳಲ್ಲಿ ಓದುತ್ತಿರುವ 12 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿವೆ. ಐಎಸ್‌ಸಿ ಬೋರ್ಡ್ ಪರೀಕ್ಷೆಗಳು ಇಂದು (ಫೆಬ್ರವರಿ 13) ಪ್ರಾರಂಭವಾಗಿದ್ದರೆ, 12 ನೇ ತರಗತಿಯ ಸಿಬಿಎಸ್‌ಸಿ ಪರೀಕ್ಷೆ ಫೆಬ್ರವರಿ 15 ರಿಂದ ನಡೆಯಲಿದೆ. ಈಗಾಗಲೇ ವಿದ್ಯಾರ್ಥಿಗಳು ಎಲ್ಲಾ ರೀತಿಯಲ್ಲೂ ಪರೀಕ್ಷಾ ಪೂರ್ವ ತಯಾರಿ ನಡೆಸಿದ್ದಾರೆ. ಆದರೆ, ಎಷ್ಟೇ ತಯಾರಿ ನಡೆಸಿದರೂ ಪರೀಕ್ಷಾ ಸಮಯಕ್ಕೆ ಸರಿಯಾಗಿ ತಲುಪದಿದ್ದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಹಾಗೆಯೇ ಮನಸ್ಸು ಗೊಂದಲಕ್ಕೆ ಒಳಗಾಗಿ ಪರೀಕ್ಷೆಯನ್ನು ಸರಿಯಾದ ರೀತಿಯಲ್ಲಿ ಬರೆಯಲೂ ಸಹ ಆಗುವುದಿಲ್ಲ.

ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ;ಪರೀಕ್ಷಾ ಕೇಂದ್ರಕ್ಕೆ ತಲುಪಲು ಈ ಆಪ್‌ಗಳು ಸಹಕಾರಿ

ಹೌದು, ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಅವರ ಮುಂದಿನ ಜೀವನವನ್ನು ನಿರ್ಣಯಿಸಲು ಸಹಕಾರಿಯಾಗುವ ಸಮಯ. ಆದರೆ, ಇನ್ನೇನು ಕೆಲವು ದಿನಗಳಲ್ಲಿ ನಡೆಯಲಿರುವ ಬೋರ್ಡ್ ಎಕ್ಸಾಮ್ಸ್‌ಗೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪುತ್ತೇವೆ ಎಂದು ಪೂರ್ವದಲ್ಲೇ ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕೆಂದು ನೀವು ಮೊದಲೇ ಆ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಮನೆಯಿಂದ ಪರೀಕ್ಷಾ ಕೇಂದ್ರ ಇಷ್ಟು ದೂರ ಇದೆ, ಈ ಸಮಯಕ್ಕೆ ಮನೆ ಬಿಟ್ಟರೆ ನಿಗದಿತ ಸಮಯಕ್ಕೆ ಕೇಂದ್ರ ತಲುಪಬಹುದು ಎಂಬ ತ್ರಾಸದ ಕೆಲಸ ನಿಮಗೆ ಬೇಡ. ಯಾಕೆಂದರೆ ಈ ಮೂರು ಆಪ್‌ಗಳು ನಿಮ್ಮ ಮೊಬೈಲ್‌ನಲ್ಲಿ ಇದ್ದರೆ ಸಾಕು.


ಗೂಗಲ್ ಮ್ಯಾಪ್‌

ಗೂಗಲ್ ಮ್ಯಾಪ್‌ ಸಾಮಾನ್ಯ ಗಮ್ಯಸ್ಥಾನವನ್ನಷ್ಟೇ ತಲುಪಲು ಸಹಾಯ ಮಾಡುವುದಿಲ್ಲ. ಬದಲಾಗಿ ಹಲವಾರು ಮಾಹಿತಿ ಇದರಿಂದ ಲಭ್ಯವಾಗುತ್ತವೆ. ಇನ್ನು ಗೂಗಲ್ ಮ್ಯಾಪ್‌ ಭಾರತದಲ್ಲಿನ ಅತ್ಯಂತ ವಿಶ್ವಾಸಾರ್ಹ ಆಪ್‌ಗಳಲ್ಲಿ ಒಂದಾಗಿದ್ದು, ವಿವಿಧ ಭಾಷೆಗಳ ಮೂಲಕ ಇದರ ಸೇವೆ ಪಡೆದುಕೊಳ್ಳಬಹುದು. ಅದರಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ, ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣದ ಸಮಯವನ್ನು ಟ್ರ್ಯಾಕ್ ಮಾಡಲು ಈ ಗೂಗಲ್‌ ಮ್ಯಾಪ್ ಹೆಚ್ಚು ಉಪಯುಕ್ತವಾಗಲಿದೆ. ಇದರಿಂದ ಯಾವ ಸಮಯದಲ್ಲಿ ಟ್ರಾಫಿಕ್‌ ಇರಲಿದೆ, ಯಾವೆಲ್ಲಾ ಮಾರ್ಗದ ಮೂಲಕ ಬೇಗನೆ ಕೇಂದ್ರವನ್ನು ತಲುಪಬಹುದು ಎಂಬುದನ್ನು ಸುಲಭವಾಗಿ ಕಂಡುಕೊಂಡು ಅದರಂತೆ ಹೊರಡಲು ಸಿದ್ಧತೆ ಮಾಡಿಕೊಳ್ಳಬಹುದಾಗಿದೆ.

ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ;ಪರೀಕ್ಷಾ ಕೇಂದ್ರಕ್ಕೆ ತಲುಪಲು ಈ ಆಪ್‌ಗಳು ಸಹಕಾರಿ

ಕ್ಯಾಬ್‌ ಬುಕಿಂಗ್‌ ಆಪ್‌

ಮಹಾನಗರಗಳಲ್ಲಿ ಹಲವಾರು ಕ್ಯಾಬ್‌ ಬುಕಿಂಗ್‌ ಆಪ್‌ಗಳು ಸೇವೆಯಲ್ಲಿವೆ. ಈ ಆಪ್‌ಗಳಲ್ಲಿ ಪ್ರಮುಖವಾಗಿ ಓಲಾ, ಊಬರ್ ಇನ್‌ಡ್ರೈವ್‌ ಸೇರಿದಂತೆ ಇನ್ನಿತರೆ ಆಪ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಕ್ಷಣಕ್ಕೆ ವಾಹನಗಳನ್ನು ಹುಡುಕಲು ಈ ಆಪ್‌ಗಳನ್ನು ಬಳಕೆ ಮಾಡಬಹುದು. ಈ ಆಪ್‌ಗಳ ಮೂಲಕ ಯಾವ ಸಮಯಕ್ಕೆ ಎಲ್ಲಿಂದ ಎಲ್ಲಿಯವರೆಗೆ ಸಂಚಾರ ಮಾಡಬೇಕು ಎಂಬುದನ್ನು ಪೂರ್ವದಲ್ಲೇ ನಿಗದಿಪಡಿಸಿಕೊಳ್ಳಬಹುದಾಗಿದ್ದು, ಪರೀಕ್ಷಾ ದಿನ ಸರಳವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಹಾಯಕಾರಿಯಾಗಲಿದೆ.

ಇನ್ನು ಈ ಓಲಾ ಹಾಗೂ ಊಬರ್‌ ಆಪ್‌ನಲ್ಲಿ ಬೆಲೆ ಬಗ್ಗೆ ನೀವು ಅಸಮಾಧಾನ ಹೊಂದಿದ್ದರೆ ಇನ್‌ಡ್ರೈವ್‌ ಆಪ್‌ ಬಳಕೆ ಮಾಡಬಹುದು. ಯಾಕೆಂದರೆ ಈ ಆಪ್‌ ಮೂಲಕ ಡ್ರೈವರ್‌ ಜೊತೆಗೆ ನೀವು ಮಾತುಕತೆ ನಡೆಸಬಹುದಾಗಿದ್ದು, ದರ ನಿಗದಿ ಮಾಡಿಕೊಳ್ಳಬಹುದಾಗಿದೆ. ಆದರೆ, ಈ ಇನ್‌ಡ್ರೈವ್‌ ಮೂಲಕ ಬುಕ್‌ ಮಾಡಿದರೆ ಕ್ಯಾಬ್‌ಗಳು ನಿಗದಿತ ಸಮಯಕ್ಕೆ ಬರುವುದು ತಡವಾಗುವ ಸಾಧ್ಯತೆ ಹೆಚ್ಚಿದ್ದು, ಇದು ನಿಮ್ಮ ಗಮನಕ್ಕಿರಲಿ.

ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ;ಪರೀಕ್ಷಾ ಕೇಂದ್ರಕ್ಕೆ ತಲುಪಲು ಈ ಆಪ್‌ಗಳು ಸಹಕಾರಿ

ಮೆಟ್ರೋ ಹಾಗೂ ಬಸ್ ಆಪ್‌ಗಳು

ಸಂಚಾರಕ್ಕಾಗಿ ನೀವೇನಾದರೂ ಮೆಟ್ರೋ ಹಾಗೂ ಬಸ್‌ಗಳನ್ನು ಅವಲಂಬಿಸಿದ್ದೀರಾ ಎಂದಾದರೆ ಮೆಟ್ರೋ ಹಾಗೂ ಬಸ್ ಆಪ್‌ಗಳು ಬಹಳ ಪ್ರಯೋಜನಕಾರಿ. ಈ ಆಪ್‌ಗಳ ಮೂಲಕ ಯಾವೆಲ್ಲಾ ಬಸ್‌ಗಳು ಹಾಗೂ ಮೆಟ್ರೊ ರೈಲುಗಳು ಯಾವ ಮಾರ್ಗವಾಗಿ ಹೋಗುತ್ತವೆ, ಬಸ್‌ ನಂಬರ್‌ ಎಷ್ಟು, ಮೆಟ್ರೋ ಲೈನ್‌ ಕಲರ್‌ ಯಾವುದು, ದರ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಉದಾಹರಣೆಗೆ ಬೆಂಗಳೂರಿನ ಮೆಟ್ರೋದಲ್ಲಿ ಸಂಚಾರ ಮಾಡಬೇಕಾದರೆ ನಮ್ಮ ಮೆಟ್ರೋ ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು. ಈ ಆಪ್‌ ಮೂಲಕ ಎಲ್ಲಿಗೆ ಎಷ್ಟು ದರ, ಎಷ್ಟು ಸಮಯಕ್ಕೆ ನಿಲ್ದಾಣಕ್ಕೆ ಟ್ರೈನ್‌ ಬರಲಿದೆ, ಬೆಳಗ್ಗೆ ಎಷ್ಟಕ್ಕೆ ಕಾರ್ಯಾರಂಭ, ಎಷ್ಟೊತ್ತಿಗೆ ಸಂಚಾರ ನಿಲ್ಲುತ್ತದೆ ಎಂಬೆಲ್ಲಾ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

Best Mobiles in India

English summary
there are a bunch of apps to help you plan your travel efficiently, and reach exam centers on time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+