ಬೋಟ್ ಏರ್‌ಡೋಪ್ಸ್161 ಇಯರ್‌ಬಡ್ಸ್‌ಗೆ ಬೃಹತ್ ರಿಯಾಯಿತಿ!
ಇಯರ್‌ಬಡ್ಸ್‌ಗಳು ಸುಧಾರಿತ ಫೀಚರ್ಸ್‌ನೊಂದಿಗೆ ಲಭ್ಯ ಇದ್ದು, ಈ ನಡುವೆ ವಿವಿಧ ತಯಾರಿಕಾ ಕಂಪೆನಿಗಳು ಆಗಾಗ್ಗೆ ಹೊಸ ಹೊಸ ಇಯರ್‌ಬಡ್ಸ್‌ಗಳನ್ನೂ ಸಹ ಲಾಂಚ್ ಮಾಡುತ್ತಿವೆ. ಅದರಲ್ಲೂ ಬೋಟ್‌ನ ಇಯರ್‌ಬಡ್ಸ್‌ಗಳಿಗೆ ಭಾರೀ ಬೇಡಿಕೆ ಇದ್ದು, ಈಗ ಈ ಜನಪ್ರಿಯ ಇಯರ್‌ಬಡ್ಸ್‌ಗೆ 59% ರಿಯಾಯಿತಿ ನೀಡಲಾಗಿದೆ.
ಹೌದು, ಬೋಟ್ (BoAt) ಸಂಸ್ಥೆಯ ಇಯರ್‌ಬಡ್ಸ್‌ಗಳು ಇತರೆ ಇಯರ್‌ಬಡ್ಸ್‌ಗಳಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತವೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ವೊಂದರಲ್ಲಿ ಬೋಟ್ ಏರ್‌ಡೋಪ್ಸ್161 (BoAt Airdopes 161)ಗೆ ದೊಡ್ಡ ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ಆನ್‌ಲೈನ್ ಮಾರುಕಟ್ಟೆಯಲ್ಲಿ ಇದು ಹೆಚ್ಚು ಸೇಲ್ ಆಗುತ್ತಿದೆ. ಅದರಂತೆ ಈ ಇಯರ್‌ಬಡ್ಸ್ 10mm ಡೈನಾಮಿಕ್ ಡ್ರೈವರ್ ಆಯ್ಕೆ ಹಾಗೂ 17 ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ವಿಶೇಷ ಎನಿಸಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ತಿಳಿಯೋಣ ಬನ್ನಿ.

ಬೋಟ್ ಏರ್‌ಡೋಪ್ಸ್161 ಫೀಚರ್ಸ್: TWS ಇಯರ್‌ಬಡ್ಸ್ ಡೀಪ್ ಬೇಸ್ ಆಯ್ಕೆ ಹೊಂದಿದ್ದು, ಇದಕ್ಕಾಗಿ 10mm ಡೈನಾಮಿಕ್ ಡ್ರೈವರ್ ಪಡೆದಿದೆ. ಜೊತೆಗೆ ಮ್ಯೂಸಿಕ್ ಪ್ಲೇ ಮಾಡಲು/ವಿರಾಮಗೊಳಿಸಲು, ಕರೆಗಳಿಗೆ ಉತ್ತರಿಸಲು/ನಿರಾಕರಿಸಲು ಮತ್ತು ವಾಯ್ಸ್ ಅಸಿಸ್ಟೆಂಟ್ ಆಕ್ಟಿವ್ ಮಾಡಲು ಟಚ್ ಆಯ್ಕೆ ಪಡೆದುಕೊಂಡಿದೆ.
ಇದರೊಂದಿಗೆ IPX5 ರೇಟಿಂಗ್ ಅನ್ನು ಹೊಂದಿದ್ದು, ಇದರ ಮೊಗ್ಗುಗಳನ್ನು ಸ್ಪ್ಲಾಶ್‌ಗಳಿಂದ ರಕ್ಷಿಸಲ್ಪಡುತ್ತವೆ. ಹಾಗೆಯೇ IWPTM ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಕೇಸ್ ಮುಚ್ಚಳವನ್ನು ತೆರೆದಾಗ ಸಂಪರ್ಕಿತ ಡಿವೈಸ್‌ನೊಂದಿಗೆ ಕ್ಷಣದಲ್ಲೇ ಸಂಪರ್ಕಗೊಳ್ಳುತ್ತವೆ. ಮತ್ತು ಬ್ಲೂಟೂತ್ ಆವೃತ್ತಿ v5.3 ಇದ್ದು, 10 ಮೀಟರ್ ವಾಯರ್‌ಲೆಸ್ ರೇಂಜ್ ಆಯ್ಕೆ ಪಡೆದುಕೊಂಡಿದೆ.
ಬೋಟ್ ಏರ್‌ಡೋಪ್ಸ್161 ಬ್ಯಾಟರಿ ಸಾಮರ್ಥ್ಯ: ಇದು ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 17 ಗಂಟೆಗಳವರೆಗೆ ಬ್ಯಾಕಪ್ ನೀಡಲಿದ್ದು, ಇದರೊಂದಿಗೆ ಫಾಸ್ಟ್ ಚಾರ್ಜಿಂಗ್‌ಗೂ ಬೆಂಬಲ ಪಡೆದಿದೆ. ಅಂದರೆ ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 180 ನಿಮಿಷಗಳ ಪ್ಲೇ ಬ್ಯಾಕ್ ಸಮಯವನ್ನು ಪಡೆಯಬಹುದು.
ಬೋಟ್ ಏರ್‌ಡೋಪ್ಸ್161 ಬೆಲೆ ಹಾಗೂ ಆಫರ್ ವಿವರ: ಇದರ ಪ್ರಮುಖ ವಿಚಾರಕ್ಕೆ ಬರುವುದಾದರೆ ಈ ಇಯರ್‌ಬಡ್ಸ್ 2,490ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಇದನ್ನು ಈಗ 999ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್‌ಗೆ ಬರೋಬ್ಬರಿ 59% ರಿಯಾಯಿತಿ ನೀಡಲಾಗಿದೆ.
ಈ ನಡುವೆ ಡೈರೆಕ್ಟ್ ಮಲ್ಟಿ ಚಾನೆಲ್ ಮತ್ತು 360 ಇಮ್ಮರ್ಸಿವ್ ಆಡಿಯೋ ಫೀಚರ್ಸ್ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊಗೆ 20% ಡಿಸ್ಕೌಂಟ್ ನೀಡಲಾಗಿದೆ. ಇದು 2-ವೇ ಸ್ಪೀಕರ್, ವೂಫರ್ ಆಯ್ಕೆ ಹೊಂದಿದ್ದು, ಆರು ಮೈಕ್ರೊಫೋನ್‌ಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಅನುಭವ ನೀಡಲಿದೆ.
ಇದರೊಂದಿಗೆ ಇಯರ್‌ಬಡ್‌ಗಳು ಸ್ಮಾರ್ಟ್ ANC ಅನ್ನು ಹೊಂದಿದ್ದು, ಇದನ್ನು ಆಫ್ ಮಾಡಿದಾಗ ಆಂಬಿಯೆಂಟ್ ಸೌಂಡ್ ಅನ್ನು ಆಟೋಮ್ಯಾಟಿಕ್ ಆಗಿ ಸಕ್ರಿಯಗೊಳಿಸುವ ಸೌಂಡ್ ಫೈಂಡ್ ಮೋಡ್ ಅನ್ನು ಸಹ ಹೊಂದಿದೆ. ಜೊತೆಗೆ ಟಚ್ ಗೆಸ್ಚರ್ ಆಯ್ಕೆ ಪಡೆದಿದ್ದು, ಇದು ಒಳಬರುವ ಕರೆಗಳನ್ನು ಮತ್ತು ಮ್ಯೂಸಿಕ್ ಪ್ಲೇಯರ್ ಅನ್ನು ಕೆಲವೇ ಟ್ಯಾಪ್‌ಗಳೊಂದಿಗೆ ನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ.

ಈ ಇಯರ್‌ಬಡ್ಸ್ ಪ್ರಸ್ತುತ 19,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವು ಇದನ್ನು 15,990ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಯಾಕೆಂದರೆ ಅಮೆಜಾನ್ ಹಾಗೂ ಇತರೆ ಇ-ಕಾಮರ್ಸ್ ಸೈಟ್‌ಗಳು ಇದಕ್ಕೆ 20% ರಿಯಾಯಿತಿ ನೀಡಿವೆ. ಅದಾಗ್ಯೂ ನೀವು ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಲು ಬ್ಯಾಂಕ್ ಆಫರ್ ಬಳಕೆ ಮಾಡಿಕೊಳ್ಳಬಹುದು.


Click it and Unblock the Notifications








