ಬೋಟ್‌ ಸಂಸ್ಥೆಯ ಹೊಸ ವಾಯರ್‌ಲೆಸ್‌ ಇಯರ್‌ಫೋನ್‌ ಬಿಡುಗಡೆ!..ಬೆಲೆ 2,999ರೂ!

|

ಇಂದಿನ ದಿನಗಳಲ್ಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಹೊಸ ಟ್ರೆಂಡ್‌ ಹುಟ್ಟುಹಾಕಿದ್ದು, ಪ್ರಮುಖ ಕಂಪನಿಗಳ ತರಹೇವಾರಿ ಇಯರ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಇವೆ. ಮ್ಯೂಸಿಕ್‌ಪ್ರಿಯರು ಜನಪ್ರಿಯ ಕಂಪನಿಗಳ ವಾಯರ್‌ಲೆಸ್‌ ಇಯರ್‌ಫೋನ್‌ಗಳ ಸೆಳೆತಕ್ಕೆ ಒಳಗಾಗಿದ್ದು, ಅವುಗಳಲ್ಲಿ 'ಬೋಟ್‌ ಕಂಪನಿ'ಯ ಇಯರ್‌ಫೋನ್‌ಗಳು ಸೇರಿಕೊಂಡಿವೆ. ಇದೀಗ ಬೋಟ್‌ ಕಂಪನಿಯು ಮತ್ತೆ ಹೊಸದೊಂದು ವಾಯರ್‌ಲೆಸ್‌ ಇಯರ್‌ಫೋನ್‌ ಲಾಂಚ್ ಮಾಡಿದೆ.

ಬೋಟ್‌ ಸಂಸ್ಥೆಯ ಹೊಸ ವಾಯರ್‌ಲೆಸ್‌ ಇಯರ್‌ಫೋನ್‌ ಬಿಡುಗಡೆ!..ಬೆಲೆ 2,999ರೂ!

ಹೌದು, ಬೋಟ್‌ ಕಂಪನಿಯು 'ಏರ್‌ಡೋಪ್ಸ್‌ 411' (Airdopes 411) ಹೆಸರಿನ ವಾಯರ್‌ಲೆಸ್‌ ಇಯರ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಇಯರ್‌ಫೋನ್‌ ಕಂಪನಿಯ ಈ ಹಿಂದಿನ 'ಏರ್‌ಡೋಪ್ಸ್‌ 211' ಇಯರ್‌ಫೋನ್‌ ಮಾದರಿಯ ಮುಂದುವರಿದ ಭಾಗವಾಗಿದೆ. ಅತ್ಯುತ್ತಮ ಬ್ಯಾಟರಿ ಲೈಫ್‌ ಶಕ್ತಿಯನ್ನು ಹೊಂದಿದ್ದು, 6ಎಂಎಂ ಸಾಮರ್ಥ್ಯದ ಡ್ರೈವರ್‌ಗಳನ್ನು ನೀಡಲಾಗಿದೆ.

ಬೋಟ್‌ ಸಂಸ್ಥೆಯ ಹೊಸ ವಾಯರ್‌ಲೆಸ್‌ ಇಯರ್‌ಫೋನ್‌ ಬಿಡುಗಡೆ!..ಬೆಲೆ 2,999ರೂ!

ಬೋಟ್‌ನ ಈ ಹೊಸ ಇಯರ್‌ಫೋನ್‌ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯವನ್ನು ಒಳಗೊಂಡಿದ್ದು, ಇದರೊಂದಿಗೆ 'IPX4' ವಾಟರ್‌ ರೆಸಿಸ್ಟನ್ಸ್ ಸಾಮರ್ಥ್ಯವನ್ನು ಪಡೆದಿಕೊಂಡಿದೆ. ಡಿವೈಸ್‌ಗೆ ಸರಳವಾಗಿ ಕನೆಕ್ಟ್‌ ಮಾಡಬಹುದಾಗಿದ್ದು, ಬ್ಲೂಟೂತ್‌ 5.0 ಸಾಮರ್ಥ್ಯದಲ್ಲಿದೆ. ಹಾಗಾದರೇ ಬೋಟ್‌ 'ಏರ್‌ಡೋಪ್ಸ್‌ 411' ಇಯರ್‌ಫೋನ್‌ ಒಳಗೊಂಡಿರುವ ಸ್ಪೆಷಲ್‌ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಓದಿರಿ : ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!ಓದಿರಿ : ರೆಡ್ಮಿ ನೋಟ್‌ 7ಎಸ್‌ ಲಾಂಚ್!..48ಎಂಪಿ ಕ್ಯಾಮೆರಾ ಫೀಚರ್ ಸ್ಪೆಷಲ್!

ಡೈನಾಮಿಕ್ ಸೌಂಡ್‌

ಡೈನಾಮಿಕ್ ಸೌಂಡ್‌

ಬೋಟ್‌ ಏರ್‌ಡೋಪ್ಸ್‌ 411 ವಾಯರ್‌ಲೆಸ್‌ ಇಯರ್‌ಫೋನ್ ಸೌಂಡ್‌ ಗುಣಮಟ್ಟವು ಅತ್ಯುತ್ತಮವಾಗಿದ್ದು, 6ಎಂಎಂ ಸಾಮರ್ಥ್ಯದ ಎರಡು ಡೈನಾಮಿಕ್ ಡ್ರೈವರ್‌ಗಳನ್ನು ಒಳಗೊಂಡಿದೆ. ಇವು ಇಯರ್‌ಫೋನ್‌ಗಳ ಬಾಸ್‌ ಸೌಂಡ್‌ ಅನ್ನು ಪರಿಣಾಮಕಾರಿಯಾಗಿ ಹೊರಹಾಕಲಿವೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಈ ಸಾಧನವು 500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಶೇ. 80% ಬ್ಯಾಟರಿ ಬಾಳಿಕೆ ಒದಗಿಸಲಿದೆ. ಈ ಇಯರ್‌ಫೋನ್‌ ಒಮ್ಮೆ ಸಂಪೂರ್ಣವಾಗಿ ಚಾರ್ಜ್‌ ಪಡೆದುಕೊಳ್ಳಲು ಸುಮಾರು ಒಂದು ಅಥವಾ ಒಂದುವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಒಟ್ಟಾರೆ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ.

ವಾಯಿಸ್‌ ಅಸಿಸ್ಟಂಟ್

ವಾಯಿಸ್‌ ಅಸಿಸ್ಟಂಟ್

ಏರ್‌ಡೋಪ್ಸ್‌ 411 ಇಯರ್‌ಫೋನ್‌ ವಾಯರ್‌ಲೆಸ್‌ ಆಗಿರುವ ಜೊತೆಗೆ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಪಡೆದಿದೆ. ಈ ಡಿವೈಸ್‌ಗೆ ಕನೆಕ್ಟ್‌ ಮಾಡಿರುವ ಸ್ಮಾರ್ಟ್‌ಫೋನ್‌ವೊಂದಿಗೆ ವಾಯಿಸ್‌ ಅಸಿಸ್ಟಂಟ್ ಕನೆಕ್ಟ್‌ ಮಾಡುವ ಆಯ್ಕೆಯು ಗ್ರಾಹಕರಿಗೆ ಲಭ್ಯ.

ಇತರೆ ಆಯ್ಕೆಗಳು

ಇತರೆ ಆಯ್ಕೆಗಳು

ಬೋಟ್‌ ಕಂಪನಿಯ ಇಯರ್‌ಫೋನ್‌ಗಳು IPX4 ಸಾಮರ್ಥ್ಯದಲ್ಲಿ ಬೆವರು ಮತ್ತು ವಾಟರ್‌ ರೆಸಿಸ್ಟನ್ಸ್ ಆಯ್ಕೆಯನ್ನು ಹೊಂದಿದ್ದು, ಮಳೆಗಾಲದಲ್ಲಿ ಡಿವೈಸ್‌ ಹಾನಿಯಾಗದೆ ರಚನೆ ಒಳಗೊಂಡಿದೆ. ಇದರೊಂದಿಗೆ ಬ್ಲೂಟೂತ್‌ ಸಾಮರ್ಥ್ಯವು 5.0 ಆಗಿದ್ದು, ಸ್ಮಾರ್ಟ್‌ಫೋನ್‌ಗೆ ಸುಲಭವಾಗಿ ಕನೆಕ್ಟ್‌ ಮಾಡಬಹುದಾಗಿದೆ.

ಬೆಲೆ

ಬೆಲೆ

ಬೋಟ್‌ ಕಂಪನಿಯ ಏರ್‌ಡೋಪ್ಸ್‌ 411 ವಾಯರ್‌ಲೆಸ್‌ ಇಯರ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ರಿಲೀಸ್‌ ಆಗಿದ್ದು, ಇದರ ಬೆಲೆಯು 2,999ರೂ.ಗಳು ಆಗಿದೆ. ಬೋಟ್‌ನ ಈ ಇಯರ್‌ಫೋನ್‌ ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಅಮೆಜಾನ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ! ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!

Best Mobiles in India

English summary
Boat Airdopes 411 Truly Wireless Earphones Launched, Priced at Rs. 2,999.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X