ಬೋಟ್ ಸಂಸ್ಥೆಯಿಂದ ಅಗ್ಗದ ಇಯರ್‌ಬಡ್ಸ್ ಬಿಡುಗಡೆ!
ಸ್ಮಾರ್ಟ್‌ಫೋನ್ ಜೊತೆಗೆ ಬಹುತೇಕರು ಮ್ಯೂಸಿಕ್ ಕೇಳಲು ಹಾಗೂ ಮಾತನಾಡಲು ಹೆಡ್‌ಫೋನ್/ಇಯರ್‌ಫೋನ್ ಬಳಕೆ ಮಾಡುತ್ತಾರೆ. ಆದ್ರೆ ಬಳಕೆದಾರರು ಈಗಂತೂ ಸಾದಾ ಹೆಡ್‌ಫೋನ್ ಬದಲಿಗೆ ವಾಯರ್‌ಲೆಸ್ ಹೆಡ್‌ಫೋನ್ ಮತ್ತು ಇಯರ್‌ಬಡ್ಸ್ ಡಿವೈಸ್‌ಗಳಿಗೆ ಹೆಚ್ಚು ಅಟ್ರ್ಯಾಕ್ಟ್ ಆಗಿದ್ದಾರೆ. ಈ ನಿಟ್ಟಿನಲ್ಲಿ ನಾನಾ ಕಂಪನಿಯ ತರಹೇವಾರಿ ಇಯರ್‌ಬಡ್ಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಆ ಸಾಲಿಗಿಗ ಬೋಟ್ ಸಂಸ್ಥೆಯ ಹೊಸ ಇಯರ್‌ಬಡ್ಸ್ ಸಹ ಸೇರಿಕೊಂಡಿದೆ.

ಹೌದು, ಜನಪ್ರಿಯ ಆಡಿಯೊ ಸಂಸ್ಥೆ ಬೋಟ್ ಈಗ ಹೊಸದಾಗಿ 'ಬೋಟ್ ಏರ್‌ಡೂಪ್ಸ್ 441' ಹೆಸರಿನ ವಾಯರ್‌ಲೆಸ್ ಇಯರ್‌ಬಡ್ಸ್ ಡಿವೈಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಡಿವೈಸ್ ವಾಟರ್ ರೆಸಿಸ್ಟನ್ಸ್ ಹಾಗೂ ಸ್ವೇಟ್ ರೆಸಿಸ್ಟನ್ಸ್ ಸೌಲಭ್ಯಗಳನ್ನು ಹೊಂದಿರುವುದು ಪ್ರಮುಖ ಹೈಲೈಟ್ ಆಗಿದೆ. ಹಾಗೆಯೇ ಸುಮಾರು 25 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಪಡೆದುಕೊಂಡಿರುವುದು ವಿಶೇಷ ಅನಿಸಲಿದೆ. ಈ ಡಿವೈಸ್‌ನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬೋಟ್ ಏರ್‌ಡೋಪ್ಸ್ 441 ಟ್ರೂಲಿ ವಾಯರ್‌ಲೆಸ್ ಅನುಭವ ಒದಗಿಸಲಿದ್ದು, ಸಂಪರ್ಕಕ್ಕಾಗಿ ಬ್ಲೂಟೂತ್ 5.0 ಅನ್ನು ಹೊಂದಿದೆ. ಈ ಡಿವೈಸ್ IWP(Insta Wake N' Pair) ತಂತ್ರಜ್ಞಾನವನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್ ಮುಚ್ಚಳವನ್ನು ತೆರೆದ ತಕ್ಷಣ, ಇಯರ್‌ಬಡ್‌ಗಳು ಪವರ್ ಆನ್ ಆಗುತ್ತವೆ ಮತ್ತು ಸಂಪರ್ಕ ಮೋಡ್‌ಗೆ ಬರುತ್ತವೆ. ಹಾಗೆಯೇ ಈ ಡಿವೈಸ್ 6ಎಂಎಂ ಆಡಿಯೊ ಡ್ರೈವರ್‌ಗಳ ಸೌಲಭ್ಯ ಪಡೆದಿದೆ.

ಬೋಟ್ ಏರ್‌ಡೋಪ್ಸ್ 411 ಇಯರ್‌ಬಡ್ಸ್ ಡಿವೈಸ್ 35 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಪ್ರತಿ ಚಾರ್ಜ್‌ಗೆ ಸುಮಾರು 5 ಗಂಟೆ ಸೌಂಡ್ ಬ್ಯಾಕ್‌ಅಪ್ ಲಭ್ಯವಿದ್ದು, ಇನ್ನು ಈ ಡಿವೈಸ್‌ನ ಕ್ಯಾರಿ ಕಮ್ ಚಾರ್ಜ್ ಕೇಸ್ ಸುಮಾರು 25 ಗಂಟೆಗಳ ಬ್ಯಾಟರಿ ಬಾಳಿಕೆಯ ಸೌಲಭ್ಯವನ್ನು ಒದಗಿಸಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ಡಿವೈಸ್ ಆಂಡ್ರಾಯ್ಡ್ ಫೋನ್ಸ್, ಐಓಎಸ್ ಐಫೋನ್, ಲ್ಯಾಪ್‌ಟಾಪ್ ಹಾಗೂ ಇತರೆ ಬ್ಲೂಟೂತ್ ಸಂಪರ್ಕ್ ಸಾಧನಗಳೊಂದಿಗೆ ಕನೆಕ್ಟ್ ಆಗುವ ಆಯ್ಕೆ ಹೊಂದಿದೆ.

ಬೋಟ್ ಏರ್‌ಡೋಪ್ಸ್ 411 ಇಯರ್‌ಬಡ್ಸ್ ಡಿವೈಸ್ 2,499ರೂ. ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಇನ್ನೂ ಈ ಡಿವೈಸ್ ಇ-ಕಾಮರ್ಸ್ ಅಮೆಜಾನ್ ವೆಬ್‌ಸೈಟ್ ನಲ್ಲಿ ಲಭ್ಯವಿದ್ದು, ಈ ಡಿವೈಸ್ ಒಟ್ಟು ಐದು ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ. ಕ್ರಮವಾಗಿ ರೇಜಿಂಗ್ ರೆಡ್, ಬಂಬಲ್ಬೀ ಹಳದಿ, ಆಕ್ಟಿವ್ ಬ್ಲ್ಯಾಕ್, ಸ್ಪಿರಿಟ್ ಲೈಮ್ ಮತ್ತು ಸ್ಪೋರ್ಟಿ ಬ್ಲೂ ಬಣ್ಣಗಳ ಆಯ್ಕೆ ಇದೆ.


Click it and Unblock the Notifications








