Home
ಸುದ್ದಿಜಾಲ

ಬೋಟ್‌ನಿಂದ ಅಗ್ಗದ ಬೆಲೆಯ ಇಯರ್‌ಬಡ್ಸ್‌ ಲಾಂಚ್‌; ಇದರ ವಿಶೇಷತೆ ಏನು?

ಸ್ಮಾರ್ಟ್‌ ಗ್ಯಾಜೆಟ್‌ ಮಾರುಕಟ್ಟೆಯಲ್ಲಿ ಬಳಕೆದಾರರ ಅಗತ್ಯಗಳನ್ನು ಪೂರೈಕೆ ಮಾಡುವ ವಿವಿಧ ಆಯ್ಕೆಯ ಇಯರ್‌ಬಡ್ಸ್‌ಗಳು ಲಭ್ಯ ಇವೆ. ಅದಾಗ್ಯೂ ಸುಧಾರಿತ ಹೊಸ ಫೀಚರ್ಸ್‌ ಇರುವ ಇಯರ್‌ಬಡ್ಸ್‌ಗಳನ್ನು ಆಗಾಗ್ಗೆ ಪ್ರಮುಖ ಕಂಪೆನಿಗಳು ಲಾಂಚ್‌ ಮಾಡಿಕೊಂಡು ಬರುತ್ತಿದ್ದು, ಈ ಸಾಲಿಗೆ ಈಗ ಬೋಟ್‌ನ ಈ ಹೊಸ ಇಯರ್‌ಬಡ್ಸ್‌ ಸೇರಿಕೊಳ್ಳಲಿದೆ.

ಹೌದು, ಬೋಟ್‌ ಧರಿಸಬಹುದಾದ ಸ್ಮಾರ್ಟ್ ಗ್ಯಾಜೆಟ್‌ಗಳ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿದೆ. ಅದರಂತೆ ಈಗ ಬೋಟ್‌ ಏರ್‌ಡೋಪ್ಸ್‌ ಆಲ್ಫಾ(boAt Airdopes Alpha) ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದ್ದು, ಇದು ಬರೋಬ್ಬರಿ 35 ಗಂಟೆಗಳ ಬ್ಯಾಕಪ್‌ ನೀಡಲಿದೆ ಎಂದು ಕಂಪೆನಿ ದೃಢಪಡಿಸಿದೆ. ಹಾಗಿದ್ರೆ, ಇದರ ಕೊಡುಗೆ ಬೆಲೆ ಎಷ್ಟು?, ಪ್ರಮುಖ ಫೀಚರ್ಸ್‌ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬೋಟ್‌ನಿಂದ ಅಗ್ಗದ ಬೆಲೆಯ ಇಯರ್‌ಬಡ್ಸ್‌ ಲಾಂಚ್‌; ಇದರ ವಿಶೇಷತೆ ಏನು?

ಬೋಟ್‌ ಏರ್‌ಡೋಪ್ಸ್‌ ಆಲ್ಫಾ ಫೀಚರ್ಸ್‌: ಬೋಟ್‌ ಕಳೆದ ತಿಂಗಳು ಇಮ್ಮಾರ್ಟಲ್ 150 TWS ಅನ್ನು ಲಾಂಚ್‌ ಮಾಡಲಾಗಿತ್ತು. ಇದಾದ ನಂತರ ಈಗ ಏರ್‌ಡೋಪ್ಸ್ ಸರಣಿಯ ಹೊಸ ಕೈಗೆಟುಕುವ ಡಿವೈಸ್‌ಗಳ ಲಿಸ್ಟ್‌ನಲ್ಲಿ ಈ ಹೊಸ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದೆ. ಇದು ಓಪನ್‌ ಫಿಟ್ ಇಯರ್‌ಬಡ್ಸ್ ಶೈಲಿ ಹೊಂದಿದ್ದು, 13mm ಡ್ರೈವರ್‌ಗಳು ಮತ್ತು ಬೋಟ್ ಸಿಗ್ನೇಚರ್ ಸೌಂಡ್ ತಂತ್ರಜ್ಞಾನ ಮೂಲಕ ಬಳಕೆದಾರರಿಗೆ ವಿಭಿನ್ನ ಅನುಭವ ಸಿಗಲಿದೆ.

ಇದರೊಂದಿಗೆ ಈ ಇಯರ್‌ಬಡ್‌ಗಳು ಡ್ಯುಯಲ್ ಮೈಕ್ ENx ತಂತ್ರಜ್ಞಾನದಿಂದ ಕಾರ್ಯನಿರ್ವಹಿಸಲಿದ್ದು ಈ ಮೂಲ ವರ್ಧಿತ ಕರೆ ಗುಣಮಟ್ಟವನ್ನು ಬಳಕೆದಾರರು ನಿರೀಕ್ಷೆ ಮಾಡಬಹುದು. ಜೊತೆಗೆ 50ms ಕಡಿಮೆ ಲೇಟೆನ್ಸಿ ಮೋಡ್, ಆಟೋಮ್ಯಾಟಿಕ್‌ ಡಿವೈಸ್‌ ಕನೆಕ್ಟ್ ಸೌಲಭ್ಯ ಮಾತ್ರ ಬಳಕೆದಾರರನ್ನು ತಲ್ಲೀನಗೊಳಿಸುತ್ತದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ v5.3 ಹೊಂದಿದ್ದು, ಈ ಮೂಲಕ ಉತ್ತಮ ಸಂಪರ್ಕ ಸಾಧ್ಯವಾಗಲಿದೆ.

ಟಚ್‌ ಕಂಟ್ರೋಲ್‌ ಆಯ್ಕೆ ಹೊಂದಿರುವ ಈ ಬಡ್ಸ್‌ಗಳ ಮೂಲಕ ಫೋನ್ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಅಂದರೆ ಕರೆ ಹಾಗೂ ಮ್ಯೂಸಿಕ್‌ ಕಂಟ್ರೋಲ್‌ ಮಾಡಬಹುದಾಗಿದ್ದು, ಇದರಿಂದಾಗಿ ಫೋನ್‌ ಅನ್ನು ಜೇಬಿನಿಂದ ತೆಗೆಯುವ ಅವಶ್ಯಕತೆ ಇರುವುದಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಡಿವೈಸ್‌ IPX5 ರೇಟ್‌ ಆಯ್ಕೆ ಪಡೆದುಕೊಂಡಿದ್ದು, ಧೂಳು ಹಾಗೂ ಬೆವರಿನಿಂದ ಹಾಳಾಗುತ್ತದೆ ಎಂಬ ಭಯ ಸಹ ಬೇಡ.

ಬೋಟ್‌ ಏರ್‌ಡೋಪ್ಸ್‌ ಆಲ್ಫಾ ಬ್ಯಾಟರಿ ಸಾಮರ್ಥ್ಯ: ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 300mAh ಸಾಮರ್ಥ್ಯದ ಕೇಸ್ ಅನ್ನು ಹೊಂದಿದ್ದು, ಇದರ ಇಯರ್‌ಬಡ್ಸ್‌ಗಳು 35mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಹೊಂದಿವೆ. ಇದರೊಂದಿಗೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 35 ಗಂಟೆಗಳವರೆಗೆ ಪ್ಲೇಬ್ಯಾಕ್ ಟೈಮ್‌ ನೀಡಲಿವೆ. ಉಳಿದಂತೆ ಟೈಪ್-ಸಿ ಕನೆಕ್ಟರ್‌ನೊಂದಿಗೆ ASAP ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದ್ದು, ಈ ಮೂಲಕ ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ 120 ನಿಮಿಷಗಳ ಪ್ಲೇಬ್ಯಾಕ್ ಪಡೆಯಬಹುದು.

ಬೋಟ್‌ನಿಂದ ಅಗ್ಗದ ಬೆಲೆಯ ಇಯರ್‌ಬಡ್ಸ್‌ ಲಾಂಚ್‌; ಇದರ ವಿಶೇಷತೆ ಏನು?

ಬೋಟ್‌ ಏರ್‌ಡೋಪ್ಸ್‌ ಆಲ್ಫಾ ಬೆಲೆ ಹಾಗೂ ಲಭ್ಯತೆ: ಈ ಡಿವೈಸ್‌ನ ಬೆಲೆ ಬಗ್ಗೆ ಹೇಳುವುದಾದರೆ ಕೊಡುಗೆ ಬೆಲೆಯಾಗಿ ಇದಕ್ಕೆ 799 ರೂ.ಗಳನ್ನು ನಿಗದಿ ಮಾಡಲಾಗಿದೆ. ಅಂತೆಯೇ ಇದನ್ನು ಬೋಟ್‌ನ ಅಧಿಕೃತ ವೆಬ್‌ಸೈಟ್‌ ಹಾಗೂ ಫ್ಲಿಪ್‌ಕಾರ್ಟ್‌ ಮೂಲಕ ಖರೀದಿ ಮಾಡಬಹುದು. ಇದರೊಂದಿಗೆ ಈ ಇಯರ್‌ಬಡ್ಸ್‌ ಜೆಟ್ ಬ್ಲಾಕ್, ಸ್ವೀಡಿಷ್ ವೈಟ್ ಮತ್ತು ಡಾರ್ಕ್ ಸಯಾನ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಇನ್ನು ಬೋಟ್‌ನ ಸ್ಮಾರ್ಟ್‌ವಾಚ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಡಿಸ್ಕೌಂಟ್‌ ನೀಡಲಾಗಿತ್ತಿದ್ದು, ಅದರಲ್ಲಿ ಬೋಟ್‌ ವೇವ್‌ ಲೈಟ್‌ ಸ್ಮಾರ್ಟ್‌ವಾಚ್‌ಗೆ ಅಮೆಜಾನ್‌ 81 % ರಿಯಾಯಿತಿ ನೀಡಿದೆ. ಈ ಮೂಲಕ ಖರೀದಿದಾರರು ಈ ವಾಚ್‌ ಅನ್ನು ಕೇವಲ 1,299ರೂ.ಗಳಿಗೆ ಕೊಂಡುಕೊಳ್ಳಬಹುದು. ಇದರ ಸಾಮಾನ್ಯ ದರ 6,990 ರೂ.ಗಳಾಗಿದೆ. ಇದಿಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್ ಕಾರ್ಡ್‌ಗಳ ಮೇಲೂ ಆಫರ್‌ ನೀಡಲಾಗಿದೆ.

Best Mobiles in India

English summary
boAt have unveiled the boAt Airdopes Alpha Earbuds, which will offer up to 35 hours of backup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+