ಏಕಕಾಲದಲ್ಲಿ ಮೂರು ಸ್ಮಾರ್ಟ್‌ವಾಚ್ ಲಾಂಚ್ ಮಾಡಿದ ಬೋಟ್, ಒಂದಕ್ಕಿಂದ ಒಂದು ವಿಶಿಷ್ಟ! ಬೆಲೆ ಎಷ್ಟು?
ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲಿ ಬೋಟ್ ವಾಚ್‌ಗಳು(boAt smartwatch) ಮುಂಚೂಣಿಯಲ್ಲಿವೆ. ಈ ಸ್ಮಾರ್ಟ್‌ವಾಚ್‌ಗಳು ಬಳಕೆದಾರರ ಆರೋಗ್ಯ, ಫಿಟ್‌ನೆಸ್ ಹಾಗೂ ಆರೋಗ್ಯ ಸಂಬಂಧಿ ಮೇಲ್ವಿಚಾರಣೆ ಮಾಡುವ ಮೂಲಕ ಗ್ರಾಹಕರ ನೆಚ್ಚಿನ ಡಿವೈಸ್‌ಗಳಾಗಿವೆ. ಈ ನಡುವೆ ಬೋಟ್ ಅಸ್ಟ್ರಾ, ಸೆಲೆಸ್ಟಿಯಲ್ ಮತ್ತು ಕಾನ್ವೆಕ್ಸ್ ವಾಚ್ ಅನ್ನು ಅನಾವರಣ ಮಾಡಲಾಗಿದೆ.
ಹೌದು, ಬೋಟ್ ಲೂನಾರ್ ಕಾಮೆಟ್ ಅನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಪ್ರತ್ಯೇಕವಾಗಿ ಮೂರು ಹೊಸ ಸ್ಮಾರ್ಟ್ ವಾಚ್‌ಗಳನ್ನು ಲಾಂಚ್ ಮಾಡಿದೆ. ಅದರಲ್ಲಿ ಅಸ್ಟ್ರಾ, ಸೆಲೆಸ್ಟಿಯಲ್ ಮತ್ತು ಕಾನ್ವೆಕ್ಸ್ ವಾಚ್‌ಗಳು (boAt Astra, Celestial, Convex) ಒಂದಕ್ಕೊಂದು ಭಿನ್ನ ಫೀಚರ್ಸ್ ಆಯ್ಕೆ ಪಡೆದಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಈ ವಾಚ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಮೂರು ವಾಚ್‌ಗಳ ಪ್ರಮುಖ ಫೀಚರ್ಸ್ ಏನು?, ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಬೋಟ್ ವೇವ್ ಅಸ್ಟ್ರಾ: ಈ ಸ್ಮಾರ್ಟ್‌ವಾಚ್ 1.83 ಇಂಚಿನ ಡಿಸ್ಪ್ಲೇ ಆಯ್ಕೆ ಪಡೆದಿದ್ದು, 1,000+ ಕ್ಲೌಡ್ ವಾಚ್ ಫೇಸ್‌ಮೂಲಕ ಆಕರ್ಷಕವಾಗಿದೆ. ಜೊತೆಗೆ ಗೆಸ್ಚರ್ ಕಂಟ್ರೋಲ್ ಆಯ್ಕೆ ಹಾಗೂ ಗೂಗಲ್ ಮತ್ತು ಸಿರಿ ವಾಯ್ಸ್ ಅಸಿಸ್ಟೆಂಟ್ ಈ ವಾಚ್‌ಗೆ ಇನ್ನಷ್ಟು ಶಕ್ತು ತುಂಬಿದೆ. ಇದರೊಂದಿಗೆ ಹೃದಯ, SpO2, ನಿದ್ರೆ, ಒತ್ತಡ ಇತ್ಯಾದಿ ಆರೋಗ್ಯ ಮೇಲ್ವಿಚಾರಣೆ ಫೀಚರ್ಸ್ ಪಡೆದಿದ್ದು, ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗಲಿದೆ.
ಉಳಿದಂತೆ ಈ ವಾಚ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟ್ ಹೊಂದಿದ್ದು, ಇದನ್ನು ಒಂದು ಬಾರಿ ಚಾರ್ಜ್ ಮಾಡಿದ್ರೆ ಐದು ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಬ್ಲೂಟೂತ್ ಕರೆ ನಿಸ್ಕ್ರಿಯವಾಗಿದ್ದಾಗ ಇನ್ನೂ ಹೆಚ್ಚಿನ ಸಮಯದ ಬ್ಯಾಕಪ್ ಲಭ್ಯ ಆಗಲಿದೆ.
ಬೋಟ್ ಪ್ರಿಮಿಯಾ ಸೆಲೆಸ್ಟಿಯಲ್: ಈ ಸ್ಮಾರ್ಟ್‌ವಾಚ್ 1.52 ಇಂಚಿನ ಹೆಚ್‌ಡಿ ಆಲ್‌ವೇಸ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 500 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಮೂಲಕ ವಿಶೇಷ ಎನಿಸಿದೆ. ಇದರೊಂದಿಗೆ 100 ಕ್ಕೂ ಹೆಚ್ಚು ಕ್ಲೌಡ್ ವಾಚ್ ಫೇಸ್ ಆಯ್ಕೆ ಹಾಗೂ ಕ್ರಿಯಾತ್ಮಕ ಕ್ರೌನ್ ಬಟನ್‌ನೊಂದಿಗೆ ಮೆನುಗಳನ್ನು ಕಂಟ್ರೋಲ್ ಮಾಡಬಹುದಾಗಿದೆ.
ಜೊತೆಗೆ ಈ ವಾಚ್‌ನಲ್ಲಿ ಕ್ರೀಡಾ ವಿಧಾನಗಳು, ಫಿಟ್ನೆಸ್ ಟ್ರ್ಯಾಕಿಂಗ್, SpO2, ನಿದ್ರೆ, ಒತ್ತಡ ಇತ್ಯಾದಿ ಆರೋಗ್ಯ ಸಂಬಂಧಿ ವಿಷಯಗಳನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೂ IP67 ರೇಟಿಂಗ್ ಹೊಂದಿದ್ದು ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಬಳಕೆದಾರರು 7 ದಿನಗಳವರೆಗೆ ಬ್ಯಾಕಪ್ ಪಡೆದುಕೊಳ್ಳಲಿದ್ದಾರೆ.
ಬೋಟ್ ವೇವ್ ಕಾನ್ವೆಕ್ಸ್: ಸ್ಮಾರ್ಟ್‌ವಾಚ್ 1.96 ಇಂಚಿನ ಆಲ್‌ವೇಸ್-ಆನ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 410 x 502 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ ಈ ವಾಚ್ ಅನನ್ಯ ವಾಚ್ ಫೇಸ್‌ಗಳನ್ನು ರಚಿಸಲು ಅಥವಾ ಪೂರ್ವ-ಸ್ಥಾಪಿತ ವಿನ್ಯಾಸಗಳ ಆಯ್ಕೆಯಿಂದ ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ.
ಸುಧಾರಿತ ಬ್ಲೂಟೂತ್ ಚಿಪ್ ಆಯ್ಕೆ ಇದರಲ್ಲಿದ್ದು, ಹೆಚ್‌ಡಿ ಮೈಕ್ ಮತ್ತು ಸ್ಪೀಕರ್‌ನೊಂಕಟ್ಟಿನಿಂದ ನೇರವಾಗಿ 10 ಸಂಪರ್ಕಗಳನ್ನು ಸೇವ್ ಮಾಡಲು ಹಾಗೂ ಡಯಲ್ ಮಾಡಲು ಅನುವು ಮಾಡಿಕೊಡುತ್ತದೆ. ವೇವ್ ಕಾನ್ವೆಕ್ಸ್ ಪ್ರಭಾವಶಾಲಿ 30 ದಿನಗಳ ಸ್ಟ್ಯಾಂಡ್ ಬೈ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ಬ್ಲೂಟೂತ್ ಕಾಲಿಂಗ್‌ನೊಂದಿಗೆ 2 ದಿನಗಳ ಬ್ಯಾಕಪ್ ಸಿಗಲಿದೆ.

ಈ ಸ್ಮಾರ್ಟ್‌ವಾಚ್‌ಗಳ ಬೆಲೆ ಹಾಗೂ ಲಭ್ಯತೆ: ಬೋಟ್ ವೇವ್ ಅಸ್ಟ್ರಾ ಸ್ಮಾರ್ಟ್‌ವಾಚ್‌ಗೆ 1,799 ರೂ.ಗಳನ್ನು ನಿಗದಿ ಮಾಡಲಾಗಿದ್ದು, ಪ್ರಿಮಿಯಾ ಸೆಲೆಸ್ಟಿಯಲ್ ಬೋಟ್ ವಾಚ್‌ಗೆ 1,899ರೂ. ಹಾಗೂ ಬೋಟ್ ವೇವ್ ಕಾನ್ವೆಕ್ಸ್ ಸ್ಮಾರ್ಟ್‌ವಾಚ್‌ಗೆ 2,899ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್ ವಾಚ್‌ಗಳು ರಿಲಯನ್ಸ್ ಡಿಜಿಟಲ್, ವಿಜಯ್ ಸೇಲ್ಸ್, ಕ್ರೋಮಾ ಮತ್ತು ಜಿಯೋಮಾರ್ಟ್ ಸೇರಿದಂತೆ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿವೆ.


Click it and Unblock the Notifications








