Home
ಸುದ್ದಿಜಾಲ

boAt: ಭಾರತದಲ್ಲಿ ಬೋಟ್ ಎನಿಗ್ಮಾ ಸ್ವಿಚ್ ಸ್ಮಾರ್ಟ್‌ವಾಚ್‌ ಶೀಘ್ರದಲ್ಲೇ ಲಭ್ಯ! 11 ಸಾವಿರ ರೂ.ಗಳ ರಿಯಾಯಿತಿ

ಬೋಟ್(boAt) ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್‌ ಇರುವ ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಧರಿಸಬಹುದಾದ ಹಾಗೂ ಸ್ಪೀಕರ್‌ಗಳ ವಿಭಾಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ. ಈ ಬೆಳವಣಿಗೆ ನಡುವೆ ಇದೀಗ ಬೋಟ್‌ ಭಾರತದಲ್ಲಿ ಎನಿಗ್ಮಾ ಸ್ವಿಚ್ ಸ್ಮಾರ್ಟ್‌ವಾಚ್‌ (boAt ENIGMA SWITCH ) ಲಭ್ಯತೆ ಬಗ್ಗೆ ಮಾಹಿತಿ ನೀಡಿದೆ.

ಹೌದು, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ, ದೇಶೀಯ ಕಂಪನಿಯ ಬೋಟ್‌ ತನ್ನ ಎನಿಗ್ಮಾ ಸರಣಿಯ (ENIGMA series) ಸ್ಮಾರ್ಟ್‌ವಾಚ್‌ಗಳನ್ನು ಲಾಂಚ್‌ ಮಾಡಿದೆ. ಅದರಂತೆ ಬೋಟ್ ಎನಿಗ್ಮಾ ಸ್ವಿಚ್ ಎಂಬ ಹೆಸರಿನ ವಾಚ್‌ ಅನ್ನು ಈ ಸಾಲಿಗೆ ಸೇರಿಸಲಾಗಿದೆ. ಈ ವಿಶೇಷ ಸ್ಮಾರ್ಟ್‌ವಾಚ್‌ ಇತರೆ ಸ್ಮಾರ್ಟ್‌ವಾಚ್‌ಗಳಿಗಿಂತ ಭಿನ್ನ ಎನಿಸಿಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಪರಿಚಯಾತ್ಮಕ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಬೋಟ್ ಎನಿಗ್ಮಾ ಸ್ವಿಚ್ ಸ್ಮಾರ್ಟ್‌ವಾಚ್‌ ಶೀಘ್ರದಲ್ಲೇ ಲಭ್ಯ!

ಬೋಟ್ ಎನಿಗ್ಮಾ ಸ್ವಿಚ್: ಪ್ರೀಮಿಯಂ ಲೋಹದ ವಿನ್ಯಾಸದೊಂದಿಗೆ ಲಾಂಚ್‌ ಆಗಿದ್ದ ಎನಿಗ್ಮಾ ಸರಣಿಯ ಸ್ಮಾರ್ಟ್‌ವಾಚ್‌ಗಳ ಶ್ರೇಣಿಯನ್ನು ಇದೀಗ ಎನಿಗ್ಮಾ ಸ್ವಿಚ್ ಮೂಲಕ ವಿಸ್ತರಣೆ ಮಾಡಲಾಗಿದೆ. ಈ ಹೊಸ ಬೋಟ್ ಎನಿಗ್ಮಾ ಸ್ವಿಚ್ ಸ್ಮಾರ್ಟ್‌ವಾಚ್ 1.39 ಇಂಚಿನ ರೌಂಡ್ ಡಿಸ್‌ಪ್ಲೇನಲ್ಲಿ ಕಾಣಿಸಿಕೊಂಡಿದ್ದು, ಅದರ ಅಂಚಿನಲ್ಲಿ ಕ್ರಿಯಾತ್ಮಕ ಕ್ರೌನ್‌ ಬಟನ್‌ ಆಯ್ಕೆ ನೀಡಲಾಗಿದೆ. ಇದು ಸಿಲಿಕೋನ್ ಮತ್ತು ಮೆಟಲ್ ಬಾಡಿ ಸ್ಟ್ರಾಪ್ ಆಯ್ಕೆಗಳಲ್ಲಿ ಲಭ್ಯ ಇದ್ದು, ಈ ಡಯಲ್ ಅನ್ನು ಸಂಪೂರ್ಣವಾಗಿ ಬೇರೆ ಮಾಡುವ ಮೂಲಕ ಇದನ್ನು ಲೋಹದ ಅಥವಾ ಸಿಲಿಕೋನ್ ಬಾಡಿಗೆ ಸೇರಿಸಬಹುದಾಗಿದೆ.

ಈ ಸ್ಮಾರ್ಟ್‌ವಾಚ್‌ನ ಫೀಚರ್ಸ್‌ ಬಗ್ಗೆ ಹೇಳುವುದಾದರೆ ಇದು ಬ್ಲೂಟೂತ್ ಕರೆ ಫೀಚರ್ಸ್‌ ಅನ್ನು ಬೆಂಬಲಿಸಲಿದ್ದು, ಇದಕ್ಕಾಗಿ ಇನ್‌ಬಿಲ್ಟ್ ಡಯಲ್ ಪ್ಯಾಡ್ ಮತ್ತು ಸಂಪರ್ಕಗಳನ್ನು ಸೇವ್‌ ಮಾಡಿಕೊಳ್ಳುವ ಅನುಕೂಲ ಮಾಡಿಕೊಡಲಾಗಿದೆ. ಇದರೊಂದಿಗೆ ಹೃದಯ ಬಡಿತ ಸೆನ್ಸರ್‌, SpO2 ಮಾನಿಟರ್, ಸ್ಲೀಪ್ ಮಾನಿಟರ್, ಚಟುವಟಿಕೆ ಟ್ರ್ಯಾಕರ್, ಉಸಿರಾಟ ಆರೋಗ್ಯ ಸೇರಿದಂತೆ ಅನೇಕ ಆಕರ್ಷಕ ಆರೋಗ್ಯ ಫೀಚರ್ಸ್‌ ಅನ್ನು ಈ ವಾಚ್‌ ಪಡೆದಿದೆ.

ಭಾರತದಲ್ಲಿ ಬೋಟ್ ಎನಿಗ್ಮಾ ಸ್ವಿಚ್ ಸ್ಮಾರ್ಟ್‌ವಾಚ್‌ ಶೀಘ್ರದಲ್ಲೇ ಲಭ್ಯ!

ಇದರೊಂದಿಗೆ 100 ಕ್ಕೂ ಹೆಚ್ಚು ಸ್ಪೋರ್ಟ್‌ ಮೋಡ್‌ ಆಯ್ಕೆ ಪಡೆದಿದ್ದು, ಇದರ ಇತರೆ ಗಮನಾರ್ಹ ಫೀಚರ್ಸ್‌ ಏನೆಂದರೆ ವಾಯ್ಸ್ ಅಸಿಸ್ಟೆಂಟ್‌ ಹಾಗೂ ಫೈಂಡ್‌ ಮೈ ಫೋನ್, ಸ್ಮಾರ್ಟ್ ನೋಟಿಫಿಕೇಶನ್‌, ಮ್ಯೂಸಿಕ್‌ ಮತ್ತು ಕ್ಯಾಮೆರಾ ಕಂಟ್ರೋಲ್‌, ಅಲಾರಂ ಸೇರಿದಂತೆ ಅಗತ್ಯ ಫೀಚರ್ಸ್‌ ಅನ್ನು ಈ ಸ್ಮಾರ್ಟ್‌ವಾಚ್‌ ಪಡೆದುಕೊಂಡಿದೆ. ಎಲ್ಲಕ್ಕಿಂತ ಮಿಗಿಲಾಗಿ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್‌ ಪಡೆದಿದೆ. ಈ ಮೂಲಕ ನೀವು ಈ ಸ್ಮಾರ್ಟ್‌ವಾಚ್‌ ಅನ್ನು ಎಲ್ಲಿಬೇಕಾದರೂ ಬಳಕೆ ಮಾಡಬಹುದಾಗಿದೆ.

ಈ ಸ್ಮಾರ್ಟ್‌ವಾಚ್‌ ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜ್‌ ಮಾಡಿದ್ರೆ ಹತ್ತು ದಿನಗಳ ಬ್ಯಾಕಪ್‌ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ iOS 9 ಮತ್ತು ಅದಕ್ಕೂ ಹೆಚ್ಚಿನ ಹಾಗೂ ಆಂಡ್ರಾಯ್ಡ್‌ 6 ಮತ್ತು ಅದಕ್ಕೂ ಹೆಚ್ಚಿನ ಓಎಸ್‌ ಆವೃತ್ತಿಗಳಿಗೆ ಈ ಸ್ಮಾರ್ಟ್‌ವಾಚ್ ‌ ಬೆಂಬಲ ನೀಡಲಿದ್ದು, ಫಿಟ್‌ನೆಸ್‌ ಪ್ರಿಯರಿಗೆ ಹಾಗೂ ಯುವಕರಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.

ಭಾರತದಲ್ಲಿ ಬೋಟ್ ಎನಿಗ್ಮಾ ಸ್ವಿಚ್ ಸ್ಮಾರ್ಟ್‌ವಾಚ್‌ ಶೀಘ್ರದಲ್ಲೇ ಲಭ್ಯ!

ಬೋಟ್ ಎನಿಗ್ಮಾ ಸ್ವಿಚ್ ಬೆಲೆ ಮತ್ತು ಲಭ್ಯತೆ: ಭಾರತೀಯ ಮಾರುಕಟ್ಟೆಯಲ್ಲಿ ಬೋಟ್ ಎನಿಗ್ಮಾ ಸ್ವಿಚ್ ಸ್ಮಾರ್ಟ್ ವಾಚ್ 14,999 ರೂ. ಗಳ ಸಾಮಾನ್ಯ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಆದರೆ ನೀವು ಇದನ್ನು ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಮೂಲಕ ಪರಿಚಯಾತ್ಮಕ ಬೆಲೆ 3,799 ರೂ.ಗಳಿಗೆ ಶೀಘ್ರದಲ್ಲೇ ಖರೀದಿ ಮಾಡಬಹುದಾಗಿದೆ. ಈ ಮೂಲಕ ಬರೋಬ್ಬರಿ ಹನ್ನೊಂದು ಸಾವಿರ ಹಣ ಉಳಿತಾಯ ಮಾಡಬಹುದಾಗಿದೆ.

Best Mobiles in India

English summary
boAt has informed about the availability of boAt Enigma Switch Smartwatch. Accordingly, this watch will soon be available in India at an offer price of Rs.3799.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+