Home
ಸುದ್ದಿಜಾಲ

ಬೋಟ್ ಎನಿಗ್ಮಾ Z20 ಸ್ಮಾರ್ಟ್‌ವಾಚ್‌ ಲಾಂಚ್! ಮೆಟಲ್ ಬಾಡಿ, ಬೆಲೆ ಎಷ್ಟು?

ಬೋಟ್‌ (boAt) ಈಗಾಗಲೇ ಸಾಕು ಎನಿಸುವಷ್ಟು ಭಿನ್ನ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಅನಾರವಣ ಮಾಡಿದೆ. ಆದರೆ, ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಪ್ರತಿಕ್ಷಣವೂ ಹೊಸ ಹೊಸ ತಂತ್ರಜ್ಞಾನಗಳು ಮುನ್ನೆಲೆ ಬರುತ್ತಿದ್ದು, ಅದರಂತೆ ಸುಧಾರಿತ ಫೀಚರ್ಸ್‌ನೊಂದಿಗೆ ಇದೀಗ ಬೋಟ್‌ ಹೊಸ ಸ್ಮಾರ್ಟ್‌ವಾಚ್‌(Smartwatch) ಅನ್ನು ಅನಾವರಣ ಮಾಡಿದೆ.

ಹೌದು, ಬೋಟ್‌ ಎನಿಗ್ಮಾ Z20 ಸ್ಮಾರ್ಟ್‌ವಾಚ್‌ (boAt Enigma Z20) ಅನ್ನು ಅನಾವರಣ ಮಾಡಲಾಗಿದ್ದು, ಈ ವಾಚ್‌ ಬ್ಲೂಟೂತ್ ಕರೆ ಸೌಲಭ್ಯ ದೊಂದಿಗೆ ವಿಶೇಷ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಮೆಟಲ್ ಬಾಡಿ ವಿನ್ಯಾಸವು ದೀರ್ಘಬಾಳಿಕೆಗೆ ಸಾಕ್ಷಿಯಾಗಿದೆ. ಹಾಗಿದ್ರೆ, ಈ ವಿಶೇಷ ಸ್ಮಾರ್ಟ್‌ವಾಚ್‌ ಬೆಲೆ ಹಾಗೂ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬೋಟ್ ಎನಿಗ್ಮಾ Z20 ಸ್ಮಾರ್ಟ್‌ವಾಚ್‌ ಲಾಂಚ್! ಮೆಟಲ್ ಬಾಡಿ, ಬೆಲೆ ಎಷ್ಟು?

ಬೋಟ್‌ ಎನಿಗ್ಮಾ Z20 ಸ್ಮಾರ್ಟ್‌ವಾಚ್‌: ಈ ಸ್ಮಾರ್ಟ್‌ವಾಚ್‌ (BoAt Enigma Z20) 1.51 ಇಂಚಿನ ದೊಡ್ಡ ಟಿಎಫ್‌ಟಿ ಎಲ್‌ಸಿಡಿ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದು 100+ ವಾಚ್ ಫೇಸ್‌ಗಳಿಗೆ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ 360 x 360 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದ್ದು, 600 ನಿಟ್ಸ್‌ ಗರಿಷ್ಠ ಬ್ರೈಟ್ ನೆಸ್‌ ಆಯ್ಕೆ ಮೂಲಕ ಉತ್ತಮ ಎನಿಸಿದೆ.

ಇದರೊಂದಿಗೆ ಈ ವಾಚ್‌ ಬ್ಲೂಟೂತ್ ಕರೆ ಸೌಲಭ್ಯ ಪಡೆದಿದ್ದು, ಇದಕ್ಕಾಗಿ ಇನ್‌ಬಿಲ್ಟ್‌ ಮೈಕ್ ಮತ್ತು ಡಯಲ್ ಪ್ಯಾಡ್ ಆಯ್ಕೆ ಮೂಲಕ ಉತ್ತಮ ಎನಿಸಿದೆ. ಹಾಗೆಯೇ 250 ಸಂಪರ್ಕಗಳನ್ನು ಸೇವ್‌ ಮಾಡಲು ಅನುಕೂಲ ಮಾಡಿಕೊಡಲಿದೆ. ಅದರಲ್ಲೂ ಈ ವಾಚ್‌ನಲ್ಲಿ ಇರುವ ಐಷಾರಾಮಿ ಲೋಹದ ಬಾಡಿ ಹಾಗೂ ಕ್ರಿಯಾತ್ಮಕ ಕ್ರೌನ್‌ ಬಟನ್‌ ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದೆ.

ಬೋಟ್ ಎನಿಗ್ಮಾ Z20 ಸ್ಮಾರ್ಟ್‌ವಾಚ್‌ ಲಾಂಚ್! ಮೆಟಲ್ ಬಾಡಿ, ಬೆಲೆ ಎಷ್ಟು?

ಹಾಗೆಯೇ ಆರೋಗ್ಯ ಸಂಬಂಧಿ ವಿಚಾರದಲ್ಲೂ ಈ ಸ್ಮಾರ್ಟ್‌ವಾಚ್‌ ಒಂದು ಕೈ ಮುಂದೆ ಇದೆ. ಇದು ಹೃದಯ ಬಡಿತ ಸೆನ್ಸರ್‌, SpO2 ಮತ್ತು ನಿದ್ರೆಯನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡುತ್ತದೆ. ಜೊತೆಗೆ 100+ ಸ್ಪೋರ್ಟ್ಸ್ ಮೋಡ್‌ ಆಯ್ಕೆ ಇದ್ದು ಈ ಮೂಲಕ ಯಾವುದೇ ದೈಹಿಕ ಚಟುವಟಿಕೆಯನ್ನು ಟ್ರ್ಯಾಕ್‌ ಮಾಡಬಹುದಾಗಿದೆ ಇದರಿಂದ ನಿಮ್ಮ ನಿತ್ಯದ ದೈನಂದಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಈ ವಾಚ್‌ ಇನ್‌ಬಿಲ್ಟ್‌ ತುರ್ತು SOS ಫೀಚರ್ಸ್‌ ಆಯ್ಕೆ ಪಡೆದಿದ್ದು, ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆ, ಕುಳಿತುಕೊಳ್ಳುವ ಎಚ್ಚರಿಕೆಗಳು, ಕ್ಯಾಮೆರಾ ಕಂಟ್ರೋಲ್‌, ಇನ್‌ಬಿಲ್ಟ್‌ ಗೇಮ್‌ಗಳು , ಮ್ಯೂಸಿಕ್‌ ಕಂಟ್ರೋಲ್‌, ಹವಾಮಾನ, ಅಲಾರ್ಮ್, ಕೌಂಟ್‌ಡೌನ್, ಸ್ಟಾಪ್‌ವಾಚ್, ಡಿಎನ್‌ಡಿ, ಫೈಂಡ್ ಮೈ ಫೋನ್‌ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಈ ಸ್ಮಾರ್ಟ್‌ ವಾಚ್‌ ಪಡೆದುಕೊಂಡಿದೆ. ಮಿಗಿಲಾಗಿ ಈ ವಾಚ್‌ IP68 ರೇಟಿಂಗ್‌ ಹೊಂದಿದ್ದು, ಇದರಿಂದ ನೀರು ಹಾಗೂ ಧೂಳಿನಿಂದ ಆಗುವ ಸಮಸ್ಯೆಗಳಿಗೆ ಹೆದರಬೇಕಿಲ್ಲ.

ಬೋಟ್ ಎನಿಗ್ಮಾ Z20 ಸ್ಮಾರ್ಟ್‌ವಾಚ್‌ ಲಾಂಚ್! ಮೆಟಲ್ ಬಾಡಿ, ಬೆಲೆ ಎಷ್ಟು?

ಬೋಟ್‌ ಎನಿಗ್ಮಾ Z20 ಸ್ಮಾರ್ಟ್‌ವಾಚ್‌ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್ ಐದು ನದಿಗಳ ಬ್ಯಾಟರಿ ಬ್ಯಾಕಪ್‌ ಪಡೆದಿದ್ದು, ವಿಶೇಷ ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಅದರಂತೆ ಜೆಟ್ ಬ್ಲಾಕ್‌ನಲ್ಲಿ ಕಾಣಿಸಿಕೊಂಡಿರುವ ಸ್ಮಾರ್ಟ್‌ವಾಚ್‌ಗೆ 3,299 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಬ್ರೌನ್ ಲೆದರ್ ಮತ್ತು ಮೆಟಲ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ಇರುವ ಸ್ಮಾರ್ಟ್‌ವಾಚ್‌ಗೆ 3499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ವಾಚ್‌ ಅನ್ನು ಅಮೆಜಾನ್‌ ಹಾಗೂ ಬೋಟ್‌ನ ಅಧಿಕೃತ ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

ಗಮನಿಸಬೇಕಾದ ಮಾಹಿತಿ ಏನೆಂದರೆ ಈ ಸ್ಮಾರ್ಟ್‌ವಾಚ್‌ನ ಮೂಲ ಬೆಲೆ 9,999 ರೂ.ಗಳು ಆದರೆ ಲಾಂಚ್‌ ಆಫರ್ ಭಾಗವಾಗಿ ಈ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ಬ್ಯಾಂಕ್‌ ಆಫರ್ ಸಹ ಇದ್ದು, ಈ ವಾಚ್‌ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ ಸಿಟಿಬ್ಯಾಂಕ್ ಕಾರ್ಡ್ ನಾನ್-ಇಎಂಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಫೆಡರಲ್ ಬ್ಯಾಂಕ್ ಮಾಸ್ಟರ್ ಕಾರ್ಡ್ ಡೆಬಿಟ್ ಕಾರ್ಡ್ ಅಲ್ಲದ ಇಎಮ್‌ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, AU ಬ್ಯಾಂಕ್ ಡೆಬಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ ಸೇರಿದಂತೆ ಅನೇಕ ಬ್ಯಾಂಕ್‌ ಆಫರ್ ಅನ್ನು ಪಡೆಯಬಹುದಾಗಿದೆ.

Best Mobiles in India

English summary
boAt Enigma Z20 Smartwatch has been unveiled and this watch has got a selection of special features including Bluetooth calling facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+