ಬೋಟ್‌ನಿಂದ ಮತ್ತೊಂದು ಅತ್ಯಾಕರ್ಷಕ ಸ್ಮಾರ್ಟ್‌ವಾಚ್ ಲಾಂಚ್! ಬೆಲೆ ಇಷ್ಟೊಂದು ಕಡಿಮೆನಾ?
ಬೋಟ್ ಕಂಪೆನಿ ತನ್ನ ವಿವಿಧ ಗ್ಯಾಜೆಟ್ಸ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಸ್ಮಾರ್ಟ್‌ವಾಚ್ ವಲಯದಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಇದೀಗ ಹೊಸ ಬೋಟ್ ಲೂನಾರ್ ಕಾಮೆಟ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಇದು ಬಲಭಾಗದಲ್ಲಿ ಕ್ರಿಯಾತ್ಮಕ ಕಿರೀಟವನ್ನು ಹೊಂದಿದ್ದು, ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದೆ.
ಹೌದು, ಬೋಟ್ ಲೂನಾರ್ ಕಾಮೆಟ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಲಾಂಚ್ ಆಗಿದೆ. ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದ್ದು, ಸ್ಮಾರ್ಟ್‌ಫೋನ್ ಕರೆಗಳನ್ನು ವಾಚ್ ಮೂಲಕ ನಿಯಂತ್ರಿಸಬಹುದಾಗಿದೆ. ಇದಕ್ಕಾಗಿ ಮೈಕ್ರೊಫೋನ್ ಮತ್ತು ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಲೂನಾರ್ ಕಾಮೆಟ್ ಫೀಚರ್ಸ್ ಹೇಗಿದೆ?
ಬೋಟ್ ಲೂನಾರ್ ಕಾಮೆಟ್ ಸ್ಮಾರ್ಟ್‌ವಾಚ್ 1.39-ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದೆ. ಇದು ಸುತ್ತಿನ ಡಯಲ್ ಅನ್ನು ಹೊಂದಿದ್ದು, ಸ್ಕ್ರೀನ್ 500 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ನೀಡಲಿದೆ. ಈ ಸ್ಮಾರ್ಟ್‌ವಾಚ್ ವೇಕ್ ಗೆಸ್ಚರ್ ಅನ್ನು ಬೆಂಬಲಿಸಲಿದ್ದು, ನೀವು ಬಟನ್ ಅನ್ನು ಒತ್ತುವ ಬದಲು ಡಿಸ್‌ಪ್ಲೇ ಆನ್ ಮಾಡಲು ನಿಮ್ಮ ಕೈ ಎತ್ತಿದರೆ ಸಾಕು.
ಬೋಟ್ ಲೂನಾರ್ ಕಾಮೆಟ್ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದೆ. ಇದು ಬಲಭಾಗದಲ್ಲಿ ಕ್ರಿಯಾತ್ಮಕ ಕಿರೀಟವನ್ನು ಹೊಂದಿದ್ದು, ಸ್ಮಾರ್ಟ್ ವಾಚ್ ಅನ್ನು ನ್ಯಾವಿಗೇಟ್ ಮಾಡಲು ಬಳಸಬಹುದಾಗಿದೆ. ಇವುಗಳ ಮೂಲಕ ಅಪ್ಲಿಕೇಶನ್‌ಗಳನ್ನು ಬ್ರೌಸ್ ಮಾಡಲು ಸಾಧ್ಯವಾಗಲಿದೆ. ಇದಲ್ಲದೆ ವಿವಿಧ ಆಯ್ಕೆಗಳು ಮತ್ತು ಮೆನು ಸೆಟ್ಟಿಂಗ್ಸ್‌ಗಳನ್ನು ಪ್ರವೇಶಿಸಲು ಇದನ್ನು ಬಳಸಬಹುದು.
ಇನ್ನು ಬೋಟ್ ಲೂನಾರ್ ಕಾಮೆಟ್ ಸ್ಮಾರ್ಟ್‌ವಾಚ್‌ನ ಮೇನ್ ಹೈಲೈಟ್ ಎಂದರೆ ಬ್ಲೂಟೂತ್ ಕಾಲಿಂಗ್ ಫೀಚರ್ಸ್. ಇದರ ಮೂಲಕ ಸ್ಮಾರ್ಟ್‌ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಸ್ಮಾರ್ಟ್ ವಾಚ್ ಅನ್ನು ಬಳಸಬಹುದು. ಇದು ಅಂತರ್ನಿರ್ಮಿತ ಮೈಕ್ರೊಫೋನ್ ಮತ್ತು ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ಬಳಕೆದಾರರು ನೇರವಾಗಿ 10 ಸಂಪರ್ಕಗಳನ್ನು ಉಳಿಸಬಹುದು. ಇದು ಲೋಕಲ್ ಡಯಲ್ ಪ್ಯಾಡ್ ಅನ್ನು ಸಹ ನೀಡುತ್ತದೆ ಇದರಿಂದ ನೀವು ಹೊಸ ಕರೆ ಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ತೆಗೆದುಕೊಳ್ಳಬೇಕಾಗಿಲ್ಲ.
ಇದರೊಂದಿಗೆ ಸ್ಮಾರ್ಟ್ ವಾಚ್ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ. ಇದು ನಿಮ್ಮ ಜಿಮ್ ವರ್ಕ್‌ಔಟ್‌ಗಳು, ರನ್ನಿಂಗ್, ವಾಕಿಂಗ್ ಮತ್ತು ಸೈಕ್ಲಿಂಗ್ ಸೇರಿದಂತೆ ಎಲ್ಲಾ ರೀತಿಯ ಫಿಸಿಕಲ್ ಆ್ಯಕ್ಟಿವಿಟಿಯನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡುತ್ತವೆ. ಅಲ್ಲದೆ ನಿಮ್ಮ ನಿದ್ರೆ, ಹೃದಯ ಬಡಿತ, SpO2 ಲೆವೆಲ್ ಮತ್ತು ದೈನಂದಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡಲಿದೆ. ಜೊತೆಗೆ ಕ್ಯಾಮರಾ ಕಂಟ್ರೋಲ್, ಮ್ಯೂಸಿಕ್ ಕಂಟ್ರೋಲ್, ಸ್ಟಾಪ್‌ವಾಚ್, ಹವಾಮಾನ, ಫೈಂಡ್ ಮೈ ಫೋನ್ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಬೋಟ್ ಲೂನಾರ್ ಕಾಮೆಟ್ ಬೆಲೆ ಮತ್ತು ಲಭ್ಯತೆ
ಬೋಟ್ ಲೂನಾರ್ ಕಾಮೆಟ್ ಸ್ಮಾರ್ಟ್‌ವಾಚ್ ಭಾರತದಲ್ಲಿ 1,299 ರೂ. ಬೆಲೆಯನ್ನು ಪಡೆದುಕೊಂಡಿದೆ. ಇದನ್ನು Amazon ಮತ್ತು boAt ನ ಅಧಿಕೃತ ವೆಬ್‌ಸೈಟ್ ಮೂಲಕ ಸೆಪ್ಟೆಂಬರ್ 30ರಿಂದ ಖರೀದಿಸಬಹುದಾಗಿದೆ. ಇದು ಡೀಪ್ ಪರ್ಪಲ್, ಆಕ್ಟಿವ್ ಬ್ಲ್ಯಾಕ್, ರಾಯಲ್ ಆರೆಂಜ್ ಮತ್ತು ಆಲಿವ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಇದು ಮೆಟಲ್ ಗ್ರೇ ರೂಪಾಂತರವನ್ನು ಸಹ ಹೊಂದಿದೆ.


Click it and Unblock the Notifications








