ಜಸ್ಟ್ 3,299 ರೂ..! 1 ವರ್ಷ ವಾರಂಟಿ.. ಸದ್ದಿಲ್ಲದೆ ಎಂಟ್ರಿಕೊಟ್ಟ ಹೊಸ ಬೋಟ್ ಸ್ಮಾರ್ಟ್‌ವಾಚ್!
ಹೊಸ ಸ್ಮಾರ್ಟ್‌ವಾಚ್ ಖರೀದಿಸುವವರಿಗೆ ಸಿಹಿ ಸುದ್ದಿ. ನೀವು ಹೊಸ ಸ್ಮಾರ್ಟ್‌ವಾಚ್ ಖರೀದಿಸಲು ಯೋಜಿಸುತ್ತಿದ್ದರೆ, ಬ್ರ್ಯಾಂಡ್ ಬೋಟ್ (BoAt) ನಿಮಗಾಗಿ ಹೊಸ ಬೋಟ್ ಲೂನಾರ್ ಓಯಸಿಸ್ (BoAt Lunar Oasis) ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಸ್ಮಾರ್ಟ್‌ವಾಚ್‌ಗೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ಸೇರಿಸಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, ಗ್ರಾಹಕರು ಈ ಸ್ಮಾರ್ಟ್‌ವಾಚ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಿಂದ ಖರೀದಿಸಲು ಸಾಧ್ಯವಾಗುತ್ತದೆ. ಹೊಸ ಬೋಟ್ ಲೂನಾರ್ ಓಯಸಿಸ್ ವಾಚ್‌ನ ಬೆಲೆ ಎಷ್ಟು? ಮತ್ತು ಕಂಪನಿಯು ಈ ವಾಚ್‌ನಲ್ಲಿ ಯಾವ ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ? ಇಂಬಿತ್ಯಾದಿ ವಿವಿರಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್‌ವಾಚ್‌ಗಳು ಸಹ ಬೇಡಿಕೆ ಪಡೆದುಕೊಂಡಿವೆ. ಈ ನಿಟ್ಟಿನಲ್ಲಿ ತರಹೇವಾರಿ ಸ್ಮಾರ್ಟ್‌ವಾಚ್ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇನ್ನು ಯುವಜನತೆಯನ್ನೇ ಟಾರ್ಗೆಟ್ ಮಾಡಿಕೊಂಡು ಕೆಲವು ಸಂಸ್ಥೆಗಳು ಆಕರ್ಷಕ ಸ್ಮಾರ್ಟ್‌ವಾಚ್ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದೇ ಹಾದಿಯಲ್ಲಿ ಇದೀಗ ಬೋಟ್ ಸಂಸ್ಥೆಯು ಹೊಸ ವಾಚ್ ಲಾಂಚ್ ಮಾಡಿದೆ. ಇದುವೇ ಬೋಟ್ ಲೂನಾರ್ ಓಯಸಿಸ್ ಸ್ಮಾರ್ಟ್‌ವಾಚ್ ಆಗಿದೆ.

ಮುಖ್ಯಾಂಶಗಳು
- BoAt Lunar Oasis ಭಾರತದಲ್ಲಿ 3,500 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ.
- ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲ್ ಸಪೋರ್ಟ್ ಮತ್ತು IP68 ರೇಟಿಂಗ್ ಪಡೆದಿದೆ.
- ಇದನ್ನು boAtನ ಅಧಿಕೃತ ವೆಬ್‌ಸೈಟ್ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಬಹುದು.
BoAt At Wave Sigma 3 ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದ ನಂತರ, ಹೋಮ್‌ಗ್ರೋನ್ ಬ್ರ್ಯಾಂಡ್ ಭಾರತೀಯ ಗ್ರಾಹಕರಿಗೆ ಹೊಸ ಸ್ಮಾರ್ಟ್ ವಾಚ್ ಅನ್ನು ಘೋಷಿಸಿದೆ. ಹೊಸ ಬೋಟ್ ಲೂನಾರ್ ಓಯಸಿಸ್ 1.43-ಇಂಚಿನ ಅಲ್ಟ್ರಾ AMOLED ಡಿಸ್ಪ್ಲೇ, ಬ್ಲೂಟೂತ್ ಕಾಲ್ ಸಪೋರ್ಟ್, IP68 ರೇಟಿಂಗ್, ಹಲವಾರು ಆರೋಗ್ಯ ಮತ್ತು ಫಿಟ್ನೆಸ್ ಮಾನಿಟರಿಂಗ್ ಫಿಚರ್ಸ್‌ಗಳು ಮತ್ತು ಇನ್ನಿತರ ವಿಶೇಷತೆಗಳನ್ನು ಹೊಂದಿದೆ. ಹೊಸ boAt ಸ್ಮಾರ್ಟ್‌ವಾಚ್‌ನ ಬೆಲೆ, ವೈಶಿಷ್ಟ್ಯಗಳು ಮತ್ತು ಪರ್ಯಾಯಗಳನ್ನು ಪರಿಶೀಲಿಸಿ.
ಬೋಟ್ ಲೂನಾರ್ ಓಯಸಿಸ್ ಬೆಲೆ ಎಷ್ಟು?
ಕಂಪನಿಯು ಈ ಹೊಸ ಬೋಟ್ ಲೂನಾರ್ ಓಯಸಿಸ್ ವಾಚ್ ಅನ್ನು ಭಾರತದಲ್ಲಿ 3,299 ರೂ. ಬೆಲೆಗೆ ಪರಿಚಯಿಸಿದೆ. ಇದು ಮೂರು ಬಣ್ಣಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ನೀವು ಈ ಸ್ಮಾರ್ಟ್‌ವಾಚ್ ಅನ್ನು ಆಲಿವ್ ಗ್ರೀನ್ ಮ್ಯಾಗ್ನೆಟಿಕ್ ಸಿಲಿಕೋನ್ ಸ್ಟ್ರಾಪ್, ಆಕ್ಟಿವ್ ಬ್ಲ್ಯಾಕ್ ಸಿಲಿಕೋನ್ ಸ್ಟ್ರಾಪ್ ಮತ್ತು ಬ್ಲ್ಯಾಕ್ ಮೆಟಲ್ ಸ್ಟ್ರಾಪ್ ಬಣ್ಣಗಳಲ್ಲಿ ಖರೀದಿಸಬಹುದು. ಇದು boAt-lifestyle.com, Amazon.in ಮತ್ತು Flipkart.comನಲ್ಲಿ ಲಭ್ಯವಿರುತ್ತದೆ.
ಬೋಟ್ ಲೂನಾರ್ ಓಯಸಿಸ್‌ನ ವಿಶೇಷತೆಗಳು
ಈ ವಾಚ್‌ನಲ್ಲಿ, ಕಂಪನಿಯು 1.43 ಇಂಚಿನ AMOLED ಡಿಸ್ಪ್ಲೇಯನ್ನು ನೀಡಿದೆ. ಇದು 600nits ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಬೋಟ್ ಲೂನಾರ್ ಓಯಸಿಸ್ 2.5D ವೃತ್ತಾಕಾರದ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಲ್‌ವೆಸ್ ಆನ್ (always on display) ಬೆಂಬಲದೊಂದಿಗೆ ಬರುತ್ತದೆ.
ಈ ಸ್ಮಾರ್ಟ್‌ವಾಚ್ GPS, MapmyIndia ಚಾಲಿತ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಬೆಂಬಲದಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ಗಡಿಯಾರವು ರಕ್ತದ ಆಮ್ಲಜನಕದ ಮಟ್ಟ ಮತ್ತು ಹೃದಯ ಬಡಿತವನ್ನು ಮೇಲ್ವಿಚಾರಣೆ ಮಾಡುವ ಸೌಲಭ್ಯವನ್ನು ಹೊಂದಿದೆ. ಇದಲ್ಲದೆ, ಈ ಗಡಿಯಾರವು ನಿದ್ರೆ ಮತ್ತು ಒತ್ತಡದ ಮೇಲ್ವಿಚಾರಣೆಯಂತಹ ವೈಶಿಷ್ಟ್ಯಗಳನ್ನು ಸಹ ನೀಡುತ್ತಿದೆ.
ಬ್ಲೂಟೂತ್ ಕಾಲ್ ಫೀಚರ್ ಲಭ್ಯ
ಬೋಟ್ ಲೂನಾರ್ ಓಯಸಿಸ್‌ನಲ್ಲಿ 700ಕ್ಕೂ ಹೆಚ್ಚು ಸಕ್ರಿಯ ವಿಧಾನಗಳನ್ನು ಒದಗಿಸಲಾಗಿದೆ. ಬೋಟ್ ಕ್ರೆಸ್ಟ್ ಅಪ್ಲಿಕೇಶನ್ ಮೂಲಕ ನೀವು ಈ ಸ್ಮಾರ್ಟ್‌ವಾಚ್ ಅನ್ನು ಸಹ ನಿಯಂತ್ರಿಸಬಹುದು. ಇದರಲ್ಲಿ ನೀವು ಬ್ಲೂಟೂತ್ ಕಾಲ್ ಮಾಡುವ ವೈಶಿಷ್ಟ್ಯವನ್ನು ಸಹ ಪಡೆಯುತ್ತೀರಿ. ಇದರ ಸಹಾಯದಿಂದ ನೀವು ವಾಚ್ ಮೂಲಕ ನೇರವಾಗಿ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ.
ಒಮ್ಮೆ ಚಾರ್ಜ್ ಮಾಡಿದ್ರೆ, 7 ದಿನ ಕಿರಿಕಿರಿ ಇರಲ್ಲ
ಈ ವಾಚ್‌ನ ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಇದು 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಗಡಿಯಾರವು 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ನೀವು ಮೆಸೇಜ್‌ಗೆ ರಿಪ್ಲೆ, ಮ್ಯೂಸಿಕ್ ಮತ್ತು ಕ್ಯಾಮೆರಾ ನಿಯಂತ್ರಣ, ಅಪ್ಲಿಕೇಶನ್ ಅಧಿಸೂಚನೆಗಳು ಸೇರಿದಂತೆ ಈ ವಾಚ್‌ನಲ್ಲಿ ಹವಾಮಾನ ಅಪ್ಡೇಟ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು.

ಬೋಟ್ ಲೂನಾರ್ ಓಯಸಿಸ್ ಸಂಪೂರ್ಣ ಫೀಚರ್ಸ್
- ಡಿಸ್ಪ್ಲೇ: 1.43″ (466 x 466 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ, 600 nits ಬ್ರೈಟ್‌ನೆಸ್, ಆಲ್‌ವೆಸ್ ಆನ್ (always on display) ಡಿಸ್ಪ್ಲೇ.
- ಪ್ರೊಸೆಸರ್: boAt X1 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ.
- OS: Cres+ OS ನಿಂದ ನಡೆಸಲ್ಪಡುತ್ತಿದೆ.
- ಬ್ಯಾಟರಿ: 300mAh ಬ್ಯಾಟರಿ, 7 ದಿನಗಳ ಬ್ಯಾಟರಿ ಬಾಳಿಕೆ, ಬ್ಲೂಟೂತ್ ಕರೆಯೊಂದಿಗೆ 2 ದಿನಗಳವರೆಗೆ ಬಾಳಿಕೆ.
- ಆರೋಗ್ಯ ಮೇಲ್ವಿಚಾರಣೆ: ಹೃದಯ ಬಡಿತ, SpO2, ದೈನಂದಿನ ಚಟುವಟಿಕೆ ಟ್ರ್ಯಾಕರ್ ಮತ್ತು sedentary reminders
- ವಾರಂಟಿ: 1 ವರ್ಷದ ವಾರಂಟಿ
- ಪ್ರೊಟೆಕ್ಷನ್: IP68 ಧೂಳು ಮತ್ತು ನೀರು ನಿರೋಧಕ
- ಸಿಲಿಕೋನ್ ಮತ್ತು ಲೋಹದ ಪಟ್ಟಿಗಳು.
- ಕ್ರೆಸ್ಟ್ ಅಪ್ಲಿಕೇಶನ್ ಮೂಲಕ DIY ಗ್ರಾಹಕೀಯಗೊಳಿಸಬಹುದಾದ ಗಡಿಯಾರ ಮುಖಗಳು
- ಬ್ಲೂಟೂತ್ ಕಾಲ್ ಸಪೋರ್ಟ್ (v5.3)
- ಕ್ವಿಕ್ ಡಯಲ್ ಪ್ಯಾಡ್, ಸೇವ್ ಕಾಂಟಾಕ್ಟ್ ಇನ್ ದಿ ವಾಚ್, ಕ್ಯೂಆರ್ ಟ್ರೇ (QR Tray)
- ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಬೆಂಬಲ (ಕ್ರೆಸ್ಟ್ ಅಪ್ಲಿಕೇಶನ್ ಮೂಲಕ)
- 700+ ಸ್ಪೋಟ್ಸ್ ಮಾಡೆಲ್
- ಇತರೆ ವೈಶಿಷ್ಟ್ಯಗಳು: ಕ್ಯಾಮರಾ ಕಂಟ್ರೋಲ್, ಗೇಮ್ಸ್, ಮ್ಯೂಸಿಕ್ ಕಂಟ್ರೋಲ್, ಹವಾಮಾನ, ಅಲರ್ಟ್, ಕೌಂಟ್‌ಡೌನ್, ಸ್ಟಾಪ್‌ವಾಚ್, DND, Find My Phone
- ಕ್ವಿಕ್ SOS, ಲೈವ್ ಸ್ಪೋಟ್ಸ್ ಅಪ್ಡೇಟ್
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications