Home
ಸುದ್ದಿಜಾಲ

Smartwatch: ಜಿಯೋ ಇ-ಸಿಮ್ ಬೆಂಬಲದೊಂದಿಗೆ ಬೋಟ್ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್: ವಿಶೇಷತೆ ಏನು?

ಸ್ಮಾರ್ಟ್‌ವಾಚ್‌ಗಳು(Smartwatch) ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಫೀಚರ್ಸ್‌ ಪಡೆಯುವ ಮೂಲಕ ಸ್ಮಾರ್ಟ್‌ಫೋನ್‌ಗಳನ್ನೇ ಮೀರಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತಿವೆ. ಅದರಂತೆ ಈಗ ಇ-ಸಿಮ್‌ (eSIM) ಆಯ್ಕೆಯೊಂದಿಗೆ ವಾಚ್‌ ಪರಿಚಯಿಸಲು ಬೋಟ್‌ ಹಾಗೂ ಜಿಯೋ ಒಪ್ಪಂದ ಮಾಡಿಕೊಂಡಿವೆ.

ಹೌದು, ಸ್ಮಾರ್ಟ್‌ವಾಚ್‌ಗಳು ಇಂದು ಹೆಚ್ಚಿನ ಬೇಡಿಕೆ ಪಡೆದಿವೆ. ಈ ಕಾರಣಕ್ಕೆ ಕಂಪೆನಿಗಳು ಭಿನ್ನ ಫೀಚರ್ಸ್‌ ಆಯ್ಕೆ ಇರುವ ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು. ಈ ವಾಚ್‌ಗಳ ಸಾಲಿನಲ್ಲಿ ಈಗ ಬೋಟ್ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್ (Boat Lunar Pro LTE Smartwatch) ವಿಶೇಷವಾಗಿ ಗುರುತಿಸಿಕೊಳ್ಳಲಿದೆ. ಈ ವಾಚ್‌ ಹೊಸ ರೀತಿಯ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌ ಏನು ಹಾಗೂ ಇದು ಹೇಗೆ ಕೆಲಸ ಮಾಡಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜಿಯೋ ಇ-ಸಿಮ್ ಬೆಂಬಲದೊಂದಿಗೆ ಬೋಟ್ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್...

ಬೋಟ್ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್: ಇಂಡಿಯಾ ಟುಡೇ ವರದಿ ಪ್ರಕಾರ ಬೋಟ್‌ ಇದೀಗ ಜಿಯೋ (Jio) ಸಹಯೋಗದೊಂದಿಗೆ ಬೋಟ್ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್ ಅನ್ನು ಘೋಷಣೆ ಮಾಡಿದೆ. ಈ ವಾಚ್‌ ತಡೆರಹಿತ ಸಂಪರ್ಕಕ್ಕಾಗಿ ಇ-ಸಿಮ್‌ ಬೆಂಬಲ ಪಡೆದಿದ್ದು, ಇದರೊಂದಿಗೆ ಇನ್‌ಬಿಲ್ಟ್‌ ಜಿಪಿಎಸ್‌ (Inbuilt GPS) ಆಯ್ಕೆ ಸಹ ಇದೆ. ಇದರಿಂದಾಗಿ ಬಳಕೆದಾರರು ತಮ್ಮ ಜೊತೆಗೆ ಯಾವುದೇ ಫೋನ್‌ ತೆಗೆದುಕೊಂಡು ಹೋಗದೆ ಇದ್ದರೂ ಸಹ ಎಲ್ಲಾ ರೀತಿಯ ಸಂವಹನವನ್ನು ಈ ವಾಚ್‌ ಮೂಲಕವೇ ನಡೆಸಬಹುದಾಗಿದೆ.

ಈ ಸ್ಮಾರ್ಟ್‌ವಾಚ್‌ 1.39 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದರಲ್ಲಿನ ಹೆಚ್ಚಿನ ನಿಟ್ಸ್‌ ಬ್ರೈಟ್‌ನೆಸ್‌ನಿಂದಾಗಿ ನೇರ ಸೂರ್ಯನ ಬೆಳಕಿನಲ್ಲಿಯೂ ಸಹ ಸ್ಪಷ್ಟ ಗೋಚರತೆಯನ್ನು ಖಾತ್ರಿಪಡಿಸುತ್ತದೆ. ಇದರಲ್ಲಿನ ಜಿಪಿಎಸ್‌ ಸೌಲಭ್ಯದಿಂದಾಗಿ ಸೈಕ್ಲಿಂಗ್ ಅಥವಾ ಹೈಕಿಂಗ್‌ನಂತಹ ಚಟುವಟಿಕೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಮಾರ್ಗಗಳನ್ನು ನಿಖರವಾಗಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಅದರಲ್ಲೂ ವಾಚ್‌ ಹೊರಾಂಗಣ ಉತ್ಸಾಹಿಗಳಿಗೆ ಉತ್ತಮ ಆಯ್ಕೆಯಾಗಿರಲಿದೆ.

ಜಿಯೋ ಇ-ಸಿಮ್ ಬೆಂಬಲದೊಂದಿಗೆ ಬೋಟ್ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್...

ಇದನ್ನು ಒಂದು ಬಾರಿಗೆ ಪೂರ್ಣವಾಗಿ ಚಾರ್ಜಿಂಗ್‌ ಮಾಡಿದ್ರೆ 5 ದಿನಗಳವರೆಗೆ ಬ್ಯಾಕಪ್‌ ನೀಡಲಿದೆ ಹಾಗೂ ಇದರ ಸ್ಟ್ಯಾಂಡ್ ಬೈ ಟೈಮ್ 30 ದಿನಗಳಾಗಿದೆ. ಇದಕ್ಕಾಗಿ ಈ ವಾಚ್‌ 577 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಜೊತೆಗೆ IP68 ರೇಟಿಂಗ್‌ ಪಡೆದಿದ್ದು, ಈ ಮೂಲಕ ನೀವು ಯಾವುದೇ ನೀರು ಅಥವಾ ಬೆವರಿನಿಂದ ಸಮಸ್ಯೆ ಆಗುತ್ತದೆ ಎಂದು ಅಂದುಕೊಳ್ಳುವ ಹಾಗಿಲ್ಲ. ಈ ವಾಚ್‌ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳೆರೆಡಕ್ಕೂ ಬೆಂಬಲ ನೀಡುತ್ತದೆ.

ಇದರೊಂದಿಗೆ ಹೃದಯ ಬಡಿತ ಮಾನಿಟರ್, ಬ್ಲಡ್ ಆಕ್ಸಿಜನ್ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು ಫಿಟ್‌ನೆಸ್ ಟ್ರ್ಯಾಕರ್ ಸೇರಿದಂತೆ ಆರೋಗ್ಯ ಮೇಲ್ವಿಚಾರಣೆ ಮಾಡುವ ಮೂಲಕ ಲೂನಾರ್ ಪ್ರೊ LTE ದೃಢವಾದ ಫಿಟ್‌ನೆಸ್-ಟ್ರ್ಯಾಕಿಂಗ್ ಡಿವೈಸ್‌ ಆಗಿ ಕೆಲಸ ಮಾಡುತ್ತದೆ. ಈ ಫೀಚರ್ಸ್‌ನಿಂದಾಗಿ ಬಳಕೆದಾರರು ಅತ್ಯುತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ.

ಈ ಸಂಬಂಧ ಬೋಟ್‌ನ ನ ಸಹ-ಸಂಸ್ಥಾಪಕ ಮತ್ತು ಸಿಎಮ್‌ಓ ಅಮನ್ ಗುಪ್ತಾ ಅವರು ಮಾಹಿತಿ ನೀಡಿದ್ದು, ಜಿಯೋ ಜೊತೆಗಿನ ಪಾಲುದಾರಿಕೆಯ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. LTE ಸ್ಮಾರ್ಟ್‌ವಾಚ್‌ಗಾಗಿನ ನಮ್ಮ ಸಹಯೋಗವು ಅತ್ಯಾಧುನಿಕ ತಂತ್ರಜ್ಞಾನದ ಪ್ರವೇಶವನ್ನು ಮುಕ್ತಗೊಳಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೊಡುಗೆಯು ಕನೆಕ್ಟಿವಿಟಿ ವಿಷಯದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.

ಹಾಗೆಯೇಜಿಯೋದ ವಕ್ತಾರರು ಈ ಬಗ್ಗೆ ಮಾತನಾಡಿ, ಇದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಜಿಯೋದ ದೃಢವಾದ 4G ನೆಟ್‌ವರ್ಕ್‌ನಿಂದ ನಡೆಸಲ್ಪಡುವ LTE ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸುವಲ್ಲಿ ಬೋಟ್‌ ನೊಂದಿಗೆ ಪಾಲುದಾರರಾಗಲು ನಾವು ರೋಮಾಂಚನಗೊಂಡಿದ್ದೇವೆ. ಈ ಸಹಯೋಗವು ನಾವೀನ್ಯತೆಗಾಗಿ ನಮ್ಮ ಸಮರ್ಪಣೆಯನ್ನು ಒತ್ತಿಹೇಳುತ್ತದೆ. ನಮ್ಮ ಗ್ರಾಹಕರು ಅತ್ಯುತ್ತಮವಾದ ತಂತ್ರಜ್ಞಾನವನ್ನು ಪಡೆಯುವುದನ್ನು ಈ ಮೂಲಕ ಖಚಿತಪಡಿಸುತ್ತದೆ ಎಂದಿದ್ದಾರೆ.

ಜಿಯೋ ಇ-ಸಿಮ್ ಬೆಂಬಲದೊಂದಿಗೆ ಬೋಟ್ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್...

ಈ ಸ್ಮಾರ್ಟ್‌ವಾಚ್‌ ಯಾವಾಗ ಲಭ್ಯ?: ಈ ವಿಶೇಷ ಸ್ಮಾರ್ಟ್‌ವಾಚ್‌ ಮುಂಬರುವ ವಾರಗಳಲ್ಲಿ ಲಾಂಚ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಬೋಟ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ. ಈ ಮೂಲಕ ಸ್ಮಾರ್ಟ್‌ವಾಚ್‌ ಧರಿಸುವ ವ್ಯಕ್ತಿಗಳಲ್ಲಿ ನೀವು ಭಿನ್ನವಾಗಿ ಗುರುತಿಸಿಕೊಳ್ಳಬಹುದಾಗಿದೆ.

Best Mobiles in India

English summary
Boat Lunar Pro LTE smartwatch with Jio e-SIM support has been announced. Boat and Jio have entered into an agreement in this regard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+