Home
ಸುದ್ದಿಜಾಲ

ಬೋಟ್‌ನಿಂದ ಮಕ್ಕಳಿಗಾಗಿಯೇ ವಿಶೇಷ ಹೆಡ್‌ಫೋನ್‌ ಲಾಂಚ್‌; ಅಂತಹುದ್ದೇನಿದೆ ಇದರಲ್ಲಿ!?

ಬೋಟ್‌ನ (Boat) ಧರಿಸಬಹುದಾದ ಸ್ಮಾರ್ಟ್‌ ಡಿವೈಸ್‌ಗಳು ಬಹಳ ಜನಪ್ರಿಯತೆ ಪಡೆದಿವೆ. ಈ ಕಂಪೆನಿಯಿಂದ ಯಾವುದೇ ಹೊಸ ಡಿವೈಸ್‌ ಲಾಂಚ್‌ ಆದರೂ ಸಹ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದ್ದು, ಈ ನಡುವೆ ಬೋಟ್‌ ಮಕ್ಕಳಿಗಾಗಿಯೇ ಹೊಸ ವೈರ್‌ಲೆಸ್ ಹೆಡ್‌ಫೋನ್‌ (Wireless headphones) ಅನ್ನು ಲಾಂಚ್ ಮಾಡಿದೆ.

ಹೌದು, ಬೋಟ್‌ ಇದೀಗ ಮಕ್ಕಳಿಗಾಗಿ ತನ್ನ ವೈರ್‌ಲೆಸ್ ಬ್ಲೂಟೂತ್ ಹೆಡ್‌ಫೋನ್‌ಗಳ ವಿಭಾಗವಾದ ರಾಕಿಡ್ ರಶ್ (Rockid Rush wireless headphones) ಅನ್ನು ಪ್ರಾರಂಭಿಸುವುದರೊಂದಿಗೆ ಬೋಟ್ ತನ್ನ ಉತ್ಪನ್ನದ ಪೋರ್ಟ್‌ಫೋಲಿಯೊವನ್ನು ವಿಸ್ತರಣೆ ಮಾಡಿಕೊಂಡಿದೆ. ಈ ಸೀಮಿತ ಆವೃತ್ತಿಯ ಬ್ಲೂಟೂತ್ ಹೆಡ್‌ಫೋನ್‌ 10 ಗಂಟೆಗಳ ಬ್ಯಾಟರಿ ನೊಂದಿಗೆ 30 ಎಂಎಂ ಡ್ರೈವರ್ ಮೂಲಕ ಉತ್ತಮ ಅನುಭವ ನೀಡಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ತಿಳಿಯೋಣ ಬನ್ನಿ.

ಬೋಟ್‌ನಿಂದ ಮಕ್ಕಳಿಗಾಗಿಯೇ ವಿಶೇಷ ಹೆಡ್‌ಫೋನ್‌ ಲಾಂಚ್‌; ಅಂತಹುದ್ದೇನಿದೆ ಇದರಲ್ಲಿ?

ರಾಕಿಡ್ ರಶ್ ವೈರ್‌ಲೆಸ್ ಹೆಡ್‌ಫೋನ್‌ ಫೀಚರ್ಸ್‌: ಮಕ್ಕಳ ಹೆಡ್‌ಫೋನ್‌ ವಿಭಾಗದ ಮಾರುಕಟ್ಟೆಗೆ ಪದಾರ್ಪಣೆ ಮಾಡಿರುವ ಬೋಟ್, ಈ ಹೊಸ ವೈರ್‌ಲೆಸ್ ಹೆಡ್‌ಫೋನ್‌ ಮೂಲಕ ಅವರನ್ನು ರಂಜಿಸಲಿದೆ. ಅಂದರೆ ಹೆಡ್‌ಫೋನ್‌ ಸುರಕ್ಷಿತ ಆಡಿಯೊ ಮಟ್ಟಗಳಿಗಾಗಿ ವಿಶೇಷವಾಗಿ ಟ್ಯೂನ್ ಮಾಡಲಾದ ಡ್ರೈವರ್‌ಗಳೊಂದಿಗೆ ಪ್ಯಾಕ್ ಆಗಿದ್ದು, ಮೃದುವಾದ ಇಯರ್ ಕಪ್‌ಗಳು ಹಾಗೂ ಹೊಂದಿಕೊಳ್ಳುವ ಶೈಲಿಯೊಂದಿಗೆ ಮಕ್ಕಳನ್ನು ಆಕರ್ಷಿಸಲಿದೆ.

ಅದರಲ್ಲೂ ಬೆಲೆಬಾಳುವ ಲೆದರ್‌ ಅನ್ನು ಇದರಲ್ಲಿ ಬಳಕೆ ಮಾಡಲಾಗಿದ್ದು, ಬಳಕೆ ಮಾಡುವಾಗ ಸುರಕ್ಷಿತ ಮತ್ತು ಆರಾಮದಾಯಕ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಪರಿಸರ ಸ್ನೇಹಿಯೂ ಹೌದು. ಜೊತೆಗೆ ಈ ಹೆಡ್‌ಫೋನ್‌ 30mm ಡ್ರೈವರ್‌ಗಳೊಂದಿಗೆ ಕಾಣಿಸಿಕೊಂಡಿದ್ದು, 35 dB ವರೆಗಿನ ಶಬ್ದ ರದ್ದತಿಗೆ ಹೆಚ್ಚುವರಿಯಾಗಿ 85 dB ಧ್ವನಿ ಮಿತಿಯನ್ನು ಹೊಂದಿದೆ.

ಇನ್ನು ವಾಲ್ಯೂಮ್ ಮತ್ತು ಟ್ರ್ಯಾಕ್ ಬದಲಾವಣೆಗಾಗಿ ಟಚ್ ಕಂಟ್ರೋಲ್‌ ಆಯ್ಕೆ, ಮಲ್ಟಿ-ಡಿವೈಸ್ ಪೇರಿಂಗ್‌ಗಾಗಿ ಡ್ಯುಯಲ್-ಕನೆಕ್ಟಿವಿಟಿ ಬ್ಲೂಟೂತ್ ಆವೃತ್ತಿ 5.3 ಮತ್ತು ಫೋನ್ ಕರೆ ಮತ್ತು ಧ್ವನಿ ಸಹಾಯಕ್ಕೆ ಆನ್‌ಬೋರ್ಡ್ ಮೈಕ್ರೊಫೋನ್ ಜೊತೆಗೆ ಹಲವಾರು ಆಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಅದರಲ್ಲೂ 20Hz-20KHz ಆವರ್ತನದೊಂದಿಗೆ ನಿಮಗೆ ಉತ್ತಮ ಸೌಂಡ್‌ ನೀಡಲಿವೆ.

10m ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿರುವ ಈ ಹೆಡ್‌ಫೋನ್ ವ ರ್ಧಿತ ಆಡಿಯೊ ಅನುಭವಕ್ಕಾಗಿ ಹೆಚ್‌ಡಿ ಧ್ವನಿ ಗುಣಮಟ್ಟವನ್ನು ಪಡೆದುಕೊಂಡಿದೆ. ಅಷ್ಟು ಮಾತ್ರವಲ್ಲದೆ ಮಕ್ಕಳು ಯಾವುದೇ ವಸ್ತುಗಳನ್ನು ಬೇಗ ಹಾಳು ಮಾಡಿಕೊಳ್ಳುವ ಹಿನ್ನೆಲೆ ಈ ಹೆಡ್‌ಫೋನ್‌ಗಳನ್ನು ಬಾಳಿಕೆ ಬರುವಂತೆ ಮಾಡಲು ಗಟ್ಟಿಮುಟ್ಟಾದ ವಸ್ತುಗಳಿಂದ ವಿನ್ಯಾಸಗೊಳಿಸಲಾಗಿದೆ ಎಂದು ಬೋಟ್ ಹೇಳಿಕೊಂಡಿದೆ.

ಇದಲ್ಲದೆ ಈ ಹೆಡ್‌ಫೋನ್ ಕಸ್ಟಮೈಸ್ ಮಾಡಬಹುದಾದ ಸ್ಟಿಕ್ಕರ್‌ಗಳೊಂದಿಗೆ ವ್ಯಾಪಕ ಶ್ರೇಣಿಯ ಬಣ್ಣಗಳು ಮತ್ತು ಆಕಾರಗಳಲ್ಲಿ ಕಂಡುಬಂದಿದ್ದು, ಈ ಮೂಲಕ ಮಕ್ಕಳು ತಮ್ಮದೇ ಆದ ಹೆಡ್‌ಫೋನ್ ವಿನ್ಯಾಸವನ್ನು ಕ್ಯೂರೇಟ್ ಮಾಡಲು ಮತ್ತು ಅವರ ಆಲಿಸುವ ಅವಧಿಗಳನ್ನು ವೈಯಕ್ತೀಕರಿಸಲು ಅನುವು ಮಾಡಿಕೊಡುತ್ತದೆ. ಉಳಿದಂತೆ ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ 10 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಲಭ್ಯ.

ರಾಕಿಡ್ ರಶ್ ವೈರ್‌ಲೆಸ್ ಹೆಡ್‌ಫೋನ್‌ ಬೆಲೆ ಹಾಗೂ ಲಭ್ಯತೆ: ಈ ಬ್ಲೂಟೂತ್ ಹೆಡ್‌ಫೋನ್‌ 1,499ರೂ.ಗಳ ಆಫರ್‌ ಬೆಲೆ ಹೊಂದಿದೆ. ಬಳಕೆದಾರರು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಬೋಟ್‌ನ ಅಧಿಕೃತ ವೆಬ್‌ಸೈಟ್‌ಗಳಿಂದ ಇದನ್ನು ಖರೀದಿ ಮಾಡಬಹುದಾಗಿದೆ. ವಿಶೇಷ ಮಾಹಿತಿ ಏನೆಂದರೆ ಇದು ಸೀಮಿತ ಆವೃತ್ತಿಯ ಹೆಡ್‌ಫೋನ್‌ ಆಗಿದ್ದು, ಆಯ್ದ ನಗರಗಳಲ್ಲಿನ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿಯೂ ಲಭ್ಯವಿದೆ.

ಬೋಟ್‌ನಿಂದ ಮಕ್ಕಳಿಗಾಗಿಯೇ ವಿಶೇಷ ಹೆಡ್‌ಫೋನ್‌ ಲಾಂಚ್‌; ಅಂತಹುದ್ದೇನಿದೆ ಇದರಲ್ಲಿ?

ಇದರೊಂದಿಗೆ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆಯೊಂದಿಗೆ ಬೋಟ್‌ ವೇವ್‌ ಸಿಗ್ಮಾ ಸ್ಮಾರ್ಟ್ ವಾಚ್ (Boat Wave Sigma Smart Watch) ಅನ್ನು ಸಹ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನ ನಿರೋಧಕತೆಗಾಗಿ IP67 ರೇಟಿಂಗ್‌ನೊಂದಿಗೆ ಕಂಡುಬಂದಿದ್ದು, 7,499 ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಆದರೆ ನೀವು ಇದನ್ನು ಪರಿಚಯಾತ್ಮಕ ಬೆಲೆ 1,299ರೂ.ಗಳ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ.

ಈ ಸ್ಮಾರ್ಟ್ ವಾಚ್ ಸಕ್ರಿಯ ಕಪ್ಪು, ಕೂಲ್ ಬ್ಲೂ, ಜೇಡ್ ಪರ್ಪಲ್, ಚೆರ್ರಿ ಬ್ಲಾಸಮ್ ಮತ್ತು ಕೂಲ್ ಗ್ರೇ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಮೆಟಲ್ ಬ್ಲ್ಯಾಕ್ ಕಲರ್ ಆಯ್ಕೆಯು ಮೆಟಾಲಿಕ್ ಸ್ಟ್ರಾಪ್ ಅನ್ನು ಸಹ ನೀಡಲಿದೆ. ಇದನ್ನು ನೀವು ಶೀಘ್ರದಲ್ಲೇ ಕಂಪನಿಯ ಅಧಿಕೃತ ವೆಬ್‌ಸೈಟ್ ಹಾಗೂ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಅಮೆಜಾನ್‌ನಲ್ಲಿ ನಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
boat has just launched the Rockid Rush Wireless Headphone in its wireless Bluetooth headphones category for kids. It will provide a great experience with a 30mm driver with 10 hours of battery life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+