Home
ಸುದ್ದಿಜಾಲ

3,990ರೂ.ಗಳ ಬೆಲೆಯ ಬೋಟ್‌ನ ಈ ಪೋರ್ಟಬಲ್ ಸ್ಪೀಕರ್‌ಗೆ 62% ರಿಯಾಯಿತಿ!

ಸ್ಮಾರ್ಟ್‌ ಪೋರ್ಟಬಲ್ ಸ್ಪೀಕರ್‌ಗಳು (Portable speaker) ಈಗಂತೂ ಅತಿ ಹೆಚ್ಚು ಸೇಲ್ ಆಗುತ್ತಿರುವ ಡಿವೈಸ್‌ಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿವೆ. ಅದರಲ್ಲೂ ಪ್ರಮುಖ ಕಂಪೆನಿಗಳು ಆಗಾಗ್ಗೆ ಹೊಸ ಹೊಸ ಪೋರ್ಟಬಲ್ ಸ್ಪೀಕರ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಿದ್ದು, ಈ ಮೂಲಕ ಬಳಕೆದಾರರು ಅದ್ಭುತ ಮನರಂಜನೆ ಪಡೆದುಕೊಳ್ಳಬಹುದಾಗಿದೆ.

ಹೌದು, ಪೋರ್ಟಬಲ್ ಸ್ಪೀಕರ್‌ಗಳ ಮೂರ್ತಿ ಚಿಕ್ಕದಾದ್ರೂ ಅದರಿಂದ ಬರುವ ಸೌಂಡ್‌ ಮಾತ್ರ ಭರ್ಜರಿಯಾಗಿಯೇ ಇರುತ್ತದೆ. ಆ ರೀತಿಯ ಅತ್ಯುತ್ತಮ ಸೌಂಡ್‌ ನೀಡುವ ಸ್ಪೀಕರ್‌ಗಳಲ್ಲಿ ಬೋಟ್ ಸ್ಟೋನ್ 250 ಪೋರ್ಟಬಲ್ ಸ್ಪೀಕರ್ ಸಹ ಒಂದು. ಈ ಸ್ಪೀಕರ್‌ಗೆ ಇದೀಗ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ 62% ರಿಯಾಯಿತಿ ಘೋಷಣೆ ಮಾಡಲಾಗಿದೆ. ಹಾಗಿದ್ರೆ, ಈ ಸ್ಪೀಕರ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ಬೆಲೆ ತಿಳಿಯಲು ಈ ಲೇಖನ ಓದಿರಿ.

3,990ರೂ.ಗಳ ಬೆಲೆಯ ಬೋಟ್‌ನ ಈ ಪೋರ್ಟಬಲ್ ಸ್ಪೀಕರ್‌ಗೆ 62% ರಿಯಾಯಿತಿ!

ಬೋಟ್ ಸ್ಟೋನ್ 250 ಪೋರ್ಟಬಲ್ ಸ್ಪೀಕರ್ ಫೀಚರ್ಸ್‌: ಈ ಡಿವೈಸ್‌ (boAt Stone 250 Portable Speaker) ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸಿದರೆ ಉತ್ತಮ. ಅದರಂತೆ ಈ ಸ್ಪೀಕರ್ RGB LED ಲೈಟ್‌ ಆಯ್ಕೆ ಪಡೆದುಕೊಂಡಿದ್ದು, ಪ್ರತಿ ಪ್ಲೇಬ್ಯಾಕ್ ಸೆಷನ್‌ಗಳಿಗೆ ಮೂಡ್ ಅನ್ನು ಬದಲಾಯಿಸಬಹುದು. ಇದರೊಂದಿಗೆ 5W RMS ಧ್ವನಿ ನಿಮ್ಮನ್ನೂ ತಲ್ಲೀನಗೊಳಿಸುತ್ತದೆ.

ಇದರೊಂದಿಗೆ ವಿವಿಧ ಕಂಟ್ರೋಲ್‌ ಬಟನ್‌ ಆಯ್ಕೆ ನೀಡಲಾಗಿದ್ದು, ಪ್ಲೇಬ್ಯಾಕ್, ವಾಲ್ಯೂಮ್ ಮಟ್ಟವನ್ನು ಅತ್ಯಂತ ಸುಲಭವಾಗಿ ಕಮಾಂಡ್ ಮಾಡಲು ಇದು ಮಾಡಲಿದೆ. ಅದರಲ್ಲೂ ಈ ವೈರ್‌ಲೆಸ್ ಸ್ಪೀಕರ್‌ನ ಪೋರ್ಟಬಿಲಿಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವುದರಿಂದ ತುಂಬಾ ಹಗುರವಾಗಿದೆ. ಈ ಕಾರಣಕ್ಕೆ ನೀವು ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು.

ಇದರ ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದರೆ ಈ ಡಿವೈಸ್‌ ಬ್ಲೂಟೂತ್‌ ಆವೃತ್ತಿ v5.0 ಅನ್ನು ಹೊಂದಿದ್ದು, ಈ ಮೂಲಕ ಸಂಬಂಧಿತ ಡಿವೈಸ್‌ಗಳನ್ನು ಕ್ಷಣ ಮಾತ್ರದಲ್ಲಿ ಕನೆಕ್ಟ್ ಮಾಡಬಹುದು. ಹಾಗೆಯೇ ಟಿಎಫ್‌ ಕಾರ್ಡ್‌, AUX ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯಗಳನ್ನು ಈ ಡಿವೈಸ್‌ನಲ್ಲಿ ಕಲ್ಪಿಸಿಕೊಡಲಾಗಿದ್ದು, ಎಲ್ಲಾ ರೀತಿಯಲ್ಲೂ ಬಳಕೆಗೆ ಯೋಗ್ಯವಾಗಿದೆ. ಇದರೊಂದಿಗೆ ಈ ಡಿವೈಸ್‌ IPX7 ರೇಟಿಂಗ್‌ ಹೊಂದಿದ್ದು, ಎಲ್ಲಿಬೇಕಾದರೂ ಬಳಕೆಗೆ ಯೋಗ್ಯವಾಗಿದೆ.

ಬೋಟ್ ಸ್ಟೋನ್ 250 ಪೋರ್ಟಬಲ್ ಬ್ಯಾಟರಿ ಸಾಮರ್ಥ್ಯ : ಈ ಡಿವೈಸ್‌ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ನಿರಂತರವಾಗಿ ಎಂಟು ಗಂಟೆಗಳ ಬ್ಯಾಕಪ್‌ ನೀಡಲಿದೆ. ಆದರೆ, ಇಷ್ಟು ಸಮಯ ಬಳಕೆ ಮಾಡಬೇಕು ಎಂದರೆ 60% ವಾಲ್ಯೂಮ್ ಮಟ್ಟದಲ್ಲಿ ಎಲ್‌ಇಡಿ ಆಪ್‌ ಮಾಡಿ ಬಳಕೆ ಮಾಡಬೇಕಿದೆ. ಇನ್ನು ಈ ಸ್ಪೀಕರ್ ಚಾರ್ಜಿಂಗ್‌ಗಾಗಿ ಟೈಪ್-ಸಿ ಇಂಟರ್ಫೇಸ್ ಅನ್ನು ಹೊಂದಿದೆ.

ಬೋಟ್ ಸ್ಟೋನ್ 250 ಪೋರ್ಟಬಲ್ ಸ್ಪೀಕರ್ ಬೆಲೆ ಹಾಗೂ ಆಫರ್‌ ವಿವರ: ಈ ಬೋಟ್ ಸ್ಟೋನ್ 250 ಪೋರ್ಟಬಲ್ ಸ್ಪೀಕರ್‌ನ ಸಾಮಾನ್ಯ ಬೆಲೆ 3,990ರೂ.ಗಳಾಗಿದೆ. ಆದರೆ, ನೀವು ಇದನ್ನು ಈಗ 1,499ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ 62% ರಿಯಾಯಿತಿ ನೀಡಿದೆ. ಈ ಮೂಲಕ ಖರೀದಿದಾರರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಬೋಟ್ ಸ್ಟೋನ್ 135 ಬ್ಲೂಟೂತ್ ಸ್ಪೀಕರ್‌ಗೂ 50% ರಿಯಾಯಿತಿ: ಇದರೊಂದಿಗೆ ಬೋಟ್ ಸ್ಟೋನ್ 135 ಬ್ಲೂಟೂತ್ ಸ್ಪೀಕರ್‌ (boAt Stone 135 Bluetooth Speaker) ಅಮೆಜಾನ್‌ನಲ್ಲಿ ಭಾರೀ ರಿಯಾಯಿತಿ ನೀಡಲಾಗಿದೆ. ಈ ಡಿವೈಸ್‌ 1,990ರೂ.ಗಳ ಬೆಲೆ ಹೊಂದಿದ್ದು, ನೀವು ಈಗ 999ರೂ.ಗಳಿಗೆ ಡಿವೈಸ್‌ ಖರೀದಿ ಮಾಡಬಹುದಾಗಿದೆ. ಅಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಡಿವೈಸ್‌ ಲಭ್ಯ.

3,990ರೂ.ಗಳ ಬೆಲೆಯ ಬೋಟ್‌ನ ಈ ಪೋರ್ಟಬಲ್ ಸ್ಪೀಕರ್‌ಗೆ 62% ರಿಯಾಯಿತಿ!

ಈ ಡಿವೈಸ್‌ 80% ವಾಲ್ಯೂಮ್‌ನಲ್ಲಿ 11 ಗಂಟೆಗಳವರೆಗೆ ಪ್ಲೇಬ್ಯಾಕ್ ಅನ್ನು ನೀಡಲಿದೆ. ಜೊತೆಗೆ ನೀರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಹೊಂದಿರುವುದರ ಜೊತೆಗೆ ಹಗುರವಾದ ಈ ಸ್ಪೀಕರ್‌ ಅನ್ನು ಪಾರ್ಟಿ ಮಾಡುವಾಗ ಹಾಗೂ ಇನ್ನಿತರೆ ಮನರಂಜನೆ ಸಮಯದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಷ್ಟು ಮಾತ್ರವಲ್ಲದೆ ಹ್ಯಾಂಡ್ಸ್-ಫ್ರೀ ಕರೆ ಮಾಡುವ ಫೀಚರ್ಸ್‌ ಆಯ್ಕೆ ಸಹ ಇದರಲ್ಲಿದ್ದು, ಇದಕ್ಕಾಗಿ ಇನ್‌ಬಿಲ್ಟ್‌ ಮೈಕ್ ಆಯ್ಕೆ ನೀಡಲಾಗಿದೆ.

Best Mobiles in India

English summary
Boat Stone 250 Portable Speaker got 62% off on leading e-commerce site Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+