Home
ಸುದ್ದಿಜಾಲ

ಅಮೆಜಾನ್‌ನಲ್ಲಿ ಬೋಟ್‌ನ ಸ್ಪೀಕರ್‌ಗಳಿಗೆ ಭರ್ಜರಿ ಡಿಸ್ಕೌಂಟ್, ಉಳಿತಾಯ ಪಕ್ಕಾ!

ಬೋಟ್‌ನ(boAt) ಸ್ಪೀಕರ್‌ಗಳು ಸಾಮಾನ್ಯವಾಗಿ ಹೆಚ್ಚಿನ ಬೆಲೆ ಹೊಂದಿರುತ್ತವೆ. ಆದರೆ ಈಗ ನೀವು ನಿರೀಕ್ಷೆ ಮಾಡಿರದ ಬೆಲೆಗೆ ಬೋಟ್‌ನ ಬ್ಲೂಟೂತ್‌ ಪೋರ್ಟಬಲ್‌ ಸ್ಪೀಕರ್‌ (Bluetooth portable speaker) ಖರೀದಿ ಮಾಡಬಹುದಾಗಿದೆ. ಅಂದರೆ 4,990 ರೂ.ಗಳ ಬೆಲೆ ಹೊಂದಿರುವ ಈ ಡಿವೈಸ್‌ ಈಗ ಅಗ್ಗದ ದರದಲ್ಲಿ ಲಭ್ಯ ಆಗುತ್ತಿದೆ.

ಹೌದು, ಬೋಟ್‌ ಸಂಸ್ಥೆಯ ಬೋಟ್ ಸ್ಟೋನ್ 650 10W (boAt Stone 650 10W) ಬ್ಲೂಟೂತ್ ಸ್ಪೀಕರ್ ಮೇಲೆ 66% ರಿಯಾಯಿತಿ ನೀಡಲಾಗಿದೆ. ಈ ಮೂಲಕ ಕೈಗೆಟಕುವ ದರದಲ್ಲಿ ಈ ಅತ್ಯುತ್ತಮ ಡಿವೈಸ್‌ ಅನ್ನು ಖರೀದಿ ಮಾಡಬಹುದು. ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಸಹ ಬರುತ್ತಿದ್ದು, ಈ ಡಿವೈಸ್‌ ಮೂಲಕ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಡಿವೈಸ್‌ನ ಆಫರ್‌ ಬೆಲೆ ಏನು?, ಪ್ರಮುಖ ಫೀಚರ್ಸ್‌ ಏನು ಎಂದು ತಿಳಿಯೋಣ ಬನ್ನಿ.

ಅಮೆಜಾನ್‌ನಲ್ಲಿ ಬೋಟ್‌ನ ಸ್ಪೀಕರ್‌ಗಳಿಗೆ ಭರ್ಜರಿ ಡಿಸ್ಕೌಂಟ್, ಉಳಿತಾಯ ಪಕ್ಕಾ!

ಬೋಟ್ ಸ್ಟೋನ್ 650 10W ಆಫರ್‌ ವಿವರ: ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ಈ ಆಫರ್‌ ಘೋಷಣೆ ಮಾಡಲಾಗಿದೆ. ಅಂದರೆ ಈ ಬ್ಲೂಟೂತ್ ಸ್ಪೀಕರ್ 4,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು ಕೇವಲ 1,699ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಂದರೆ, ಈ ಡಿವೈಸ್‌ಗೆ ಅಮೆಜಾನ್ 66% ರಿಯಾಯಿತಿ ನೀಡಿದೆ.

ಬೋಟ್ ಸ್ಟೋನ್ 650 10W ಫೀಚರ್ಸ್ ವಿವರ: ಬೋಟ್ ಸ್ಟೋನ್ 650 ಅದ್ಭುತ ವಿನ್ಯಾಸವನ್ನು ಹೊಂದಿದ್ದು, ಇದು ಟ್ಯಾಂಕ್‌ ಆಕಾರ ಪಡೆದಿದೆ. ಅಂದರೆ ಘನಾಕೃತಿಯ ವಿನ್ಯಾಸವನ್ನು ಹೊಂದಿದೆ. ವಜ್ರದ ಆಕಾರದಲ್ಲಿ ಸ್ಪೀಕರ್ ಗ್ರಿಲ್ ಅಂಚುಗಳು ಮತ್ತು ಎರಡೂ ತುದಿಗಳಲ್ಲಿ ಹೊಂದಾಣಿಕೆಯ ರಬ್ಬರ್ ಕವರ್‌ಗಳ ಆಯ್ಕೆ ಪಡೆದಿದ್ದು, ಇದೆಲ್ಲಕ್ಕಿಂತ ಮಿಗಿಲಾಗಿ IPX5 ರೇಟಿಂಗ್‌ ಪಡೆದಿದೆ. ಇದರಿಂದಾಗಿ ನೀವು ನೀರು ಹಾಗೂ ಧೂಳಿನಿಂದ ಹಾಳಾಗುತ್ತದೆ ಎಂಬ ಚಿಂತೆಯನ್ನೇ ಮಾಡಬೇಕಿಲ್ಲ.

ಇದರೊಂದಿಗೆ 10W ಪವರ್ ಔಟ್‌ಪುಟ್ ಮತ್ತು 5W ಡ್ಯುಯಲ್-ಡ್ರೈವರ್ ಆಡಿಯೊ ರಚನೆಯೊಂದಿಗೆ ಉತ್ತಮ ಸಂಗೀತ ಅನುಭವ ನೀಡುವ ಈ ಡಿವೈಸ್‌ ಸ್ಪೀಕರ್‌ಗಳ ಹಿಂಭಾಗದಲ್ಲಿ ಹೆಚ್ಚುವರಿ ನಿಷ್ಕ್ರಿಯ ಬೇಸ್‌ ರೇಡಿಯೇಟರ್ ಆಯ್ಕೆಯನ್ನು ಪಡೆದುಕೊಂಡಿದೆ. ಇದು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸಬ್ ವೂಫರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಬೇಸ್‌-ಹೆವಿ ಸಾಂಗ್‌ಗಳಿಗೆ ಇನ್ನಷ್ಟು ಹೆಚ್ಚಿನ ಬೇಸ್ ಆಯ್ಕೆಯನ್ನು ನೀಡುವ ಮೂಲಕ ಉತ್ತಮ ಮನರಂಜನೆ ನೀಡಲಿದೆ.

ಅದೆಲ್ಲಕ್ಕಿಂತ ಮಿಗಿಲಾಗಿ ಬಹಳ ಶಕ್ತಿಯುತ 1800mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಈ ಮೂಲಕ ನಿರಂತರವಾಗಿ 7 ಗಂಟೆಗಳವರೆಗೆ ಪ್ಲೇ ಬ್ಯಾಕ್‌ ಟೈಮ್‌ ನೀಡಲಿದೆ. ಈ ಡಿವೈಸ್‌ ಅನ್ನು ನೀವು ಪ್ರವಾಸಕ್ಕೆ ಹೋದಾಗ ಅಥವಾ ಒಬ್ಬರೇ ಇದ್ದಾಗ ಹಾಗೂ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಬಳಕೆ ಮಾಡಬಹುದಾಗಿದೆ.

ಈ ಸ್ಪೀಕರ್‌ನೊಂದಿಗೆ ಬೋಟ್‌ನ ಮತ್ತೊಂದು ಸ್ಪೀಕರ್‌ ಸಹ ದೊಡ್ಡ ಆಫರ್‌ ಪಡೆದಿದೆ. ಅಂದರೆ ಅಮೆಜಾನ್‌ನಲ್ಲಿ ಬೋಟ್‌ ಸ್ಟೋನ್‌ 180 5W (boAt Stone 180 5W) ಭಾರೀ ಆಫರ್‌ ನೀಡಲಾಗಿದೆ. ಅಂದರೆ ಇದಕ್ಕೆ 56% ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಮೂಲಕ ನೀವು 1,099ರೂ.ಗಳಿಗೆ ಇದನ್ನು ಖರೀದಿ ಮಾಡಬಹುದು. ಇದರ ಸಾಮಾನ್ಯ ದರ
2,490ರೂ.ಗಳಾಗಿದೆ.

ಉಳಿದಂತೆ ಈ ಡಿವೈಸ್‌1.75 ಇಂಚಿನ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಶಕ್ತಿಯುತ ಮತ್ತು ಆಕರ್ಷಕ ಧ್ವನಿಯನ್ನು ಒದಗಿಸುತ್ತದೆ. ಅಂದರೆ 5W ನಲ್ಲಿ ಅದ್ಭುತವಾದ ಹೈ-ಡೆಫಿನಿಷನ್ ಆಡಿಯೊವನ್ನು ಒದಗಿಸುತ್ತದೆ. ಜೊತೆಗೆ 800mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ನೀಡಲಾಗಿದ್ದು, 10 ಗಂಟೆಗಳವರೆಗೆ ಮ್ಯೂಸಿಕ್‌ ಆಲಿಸಬಹುದು. ಹಾಗೆಯೇ ಇದು ಕೇವಲ 1.5 ಗಂಟೆಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ.

ಅಮೆಜಾನ್‌ನಲ್ಲಿ ಬೋಟ್‌ನ ಸ್ಪೀಕರ್‌ಗಳಿಗೆ ಭರ್ಜರಿ ಡಿಸ್ಕೌಂಟ್, ಉಳಿತಾಯ ಪಕ್ಕಾ!

ಇಷ್ಟೇ ಅಲ್ಲದೆ ಎರಡು ಸ್ಟೋನ್ 180 ಡಿವೈಸ್‌ಗಳನ್ನು ಒಂದೇ ಡಿವೈಸ್‌ಗೆ ಕನೆಕ್ಟ್ ಮಾಡಬಹುದು. ಈ ಮೂಲಕ ವಾಲ್ಯೂಮ್ ಅನ್ನು ದ್ವಿಗುಣಗೊಳಿಕೊಳ್ಳಬಹುದಾಗಿದೆ. ಇದು ಸಹ IPX7 ರೇಟಿಂಗ್‌ ಅನ್ನು ಹೊಂದಿದ್ದು, ಇದು ನೀರು ಮತ್ತು ಬೆವರು ನಿರೋಧಕವಾಗಿದೆ. ಉಳಿದಂತೆ ಆಕ್ಸ್‌ ಪೋರ್ಟ್ ಮತ್ತು ಎರಡು ಬ್ಲೂಟೂತ್ ಕನೆಕ್ಟ್‌ ಸೌಲಭ್ಯ ಒಳಗೊಂಡಿದೆ.

Best Mobiles in India

English summary
Big discount has been given for Boat Stone 650 10W and Boat Stone 180 5W by boAt company. You can buy these at a cheap price on Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+