Home
ಸುದ್ದಿಜಾಲ

ಬೋಟ್ ಅಲ್ಟಿಮಾ ವೋಗ್‌ ಸ್ಮಾರ್ಟ್‌ವಾಚ್‌: ಅತ್ಯಾಕರ್ಷಕ ವಿನ್ಯಾಸ, ಬೊಂಬಾಟ್‌ ಫೀಚರ್ಸ್‌!

ಸ್ಮಾರ್ಟ್‌ವಾಚ್‌ (smartwatch) ಅನ್ನು ಇಂದು ಬಹುಪಾಲು ಜನರು ಖರೀದಿ ಮಾಡುತ್ತಾರೆ. ಈ ವಾಚ್‌ಗಳು ಕೇವಲ ಸಮಯವನ್ನಷ್ಟೇ ತಿಳಿಸದೆ ಬಳಕೆದಾರರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವುದರಿಂದಾಗಿ ಈ ವಾಚ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆ ಬೋಟ್‌ ಹೊಸ ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಿದೆ.

ಹೌದು, ಸ್ಮಾರ್ಟ್‌ವಾಚ್‌ ಗಳ ತಯಾರಿಕೆಯಲ್ಲಿ ತನ್ನದೇ ಆದ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿರುವ ಬೋಟ್‌ ಇದೀಗ ಬೋಟ್ ಅಲ್ಟಿಮಾ ವೋಗ್‌ (boAt Ultima Vogue) ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ವಾಚ್‌ 1.96 ಇಂಚಿನ ದೊಡ್ಡ ಡಿಸ್‌ಪ್ಲೇ ಹೊಂದಿದ್ದು, ಫೋನ್‌ ಸಂಖ್ಯೆಗಳನ್ನು ಉಳಿಸುವ ಫೀಚರ್ಸ್‌ ಪಡೆದಿದೆ.ಹಾಗಿದ್ರೆ ಈ ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ಬೋಟ್ ಅಲ್ಟಿಮಾ ವೋಗ್‌ ಸ್ಮಾರ್ಟ್‌ವಾಚ್‌: ಅತ್ಯಾಕರ್ಷಕ ವಿನ್ಯಾಸ,ಬೊಂಬಾಟ್‌ ಫೀಚರ್ಸ್

ಬೋಟ್ ಅಲ್ಟಿಮಾ ವೋಗ್ ಫೀಚರ್ಸ್‌: ಬ್ಲೂಟೂತ್ ಕರೆ ಸೌಲಭ್ಯದೊಂದಿಗೆ ಹೊಸ ಸ್ಮಾರ್ಟ್ ವಾಚ್ ಅನ್ನು ಅನಾವರಣ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಬೋಟ್ ವೇವ್ ಜೆನೆಸಿಸ್ ನಂತರ ಈ ವಾಚ್‌ ಅನ್ನು ಅನಾವರಣ ಮಾಡಿದ್ದು, ಹೊಸ ಸ್ಮಾರ್ಟ್‌ವಾಚ್‌ ಖರೀದಿ ಮಾಡಲು ಮುಂದಾಗಿರುವ ಗ್ರಾಹಕರಿಗೆ ಹೊಸ ಅನುಭವ ನೀಡಲು ಬೋಟ್‌ ಮುಂದಾಗಿದೆ.

ಅದರಲ್ಲೂ ಈ ಸ್ಮಾರ್ಟ್‌ವಾಚ್‌ ಸಿಲಿಕಾನ್, ಲೆದರ್ ಮತ್ತು ಮೆಟಾಲಿಕ್ ಸ್ಟ್ರಾಪ್‌ಗಳ ಆಯ್ಕೆಯೊಂದಿಗೆ ಬಾಗಿದ ಅಂದರೆ ಕರ್ವ್ಡ್ ಚದರ ಡಯಲ್ ವಿನ್ಯಾಸವನ್ನು ಹೊಂದಿದ್ದು, 1.96 ಇಂಚಿನ ದೊಡ್ಡ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ನೀಡಲಾಗಿದೆ. ಇದು ಆಲ್‌ವೇಸ್‌ ಆನ್‌ ಫೀಚರ್ಸ್‌ ಪಡೆದುಕೊಂಡಿದೆ. ಇದರೊಂದಿಗೆ ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳಿಗೆ ಬೆಂಬಲ ಸಹ ನೀಡಲಿದೆ. ಮತ್ತು 410 x 502 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಇದ್ದು, 600 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ.

ಉಳಿದಂತೆ ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್ ಮೈಕ್, ಡಯಲ್ ಪ್ಯಾಡ್ ಅನ್ನು ಹೊಂದಿದ್ದು, 20 ಸಂಪರ್ಕಗಳನ್ನು ಸೇವ್‌ ಮಾಡಿಕೊಳ್ಳಲು ಅನುಮತಿ ನೀಡುತ್ತದೆ. ಇದರೊಂದಿಗೆ ಸ್ಮಾರ್ಟ್ ವಾಚ್ ಹೃದಯ ಬಡಿತ, SpO2, ಋತುಚಕ್ರ, ಒತ್ತಡ ಮತ್ತು ನಿದ್ರೆ ಟ್ರ್ಯಾಕ್ ಸೇರಿದಂತೆ ವಿವಿಧ ಆರೋಗ್ಯ ಮೇಲ್ವಿಚಾರಣಾ ಕಾರ್ಯವನ್ನು ಮಾಡುತ್ತದೆ. ಜೊತೆಗೆ 100+ ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಇದ್ದು ನಿಮ್ಮ ನಿತ್ಯದ ಚಟುವಟಿಕೆಗೆ ಯೋಗ್ಯವಾಗಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ IP67 ರೇಟಿಂಗ್ ಅನ್ನು ಹೊಂದಿದ್ದು, ನೀರು ಹಾಗೂ ಧೂಳಿಗೆ ಭಯಪಡುವ ಅವಶ್ಯಕತೆ ಇಲ್ಲ. ಇದರೊಂದಿಗೆ ಎಐ ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲ ಪಡೆದಿದ್ದು, ಈ ಮೂಲಕ ನೀವು ಸುಲಭವಾಗಿ ವಾಚ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಹಾಗೂ ಗೂಗಲ್‌ ಫಿಟ್ ಮತ್ತು ಆಪಲ್‌ ಹೆಲ್ತ್‌ ನೊಂದಿಗೆ ಈ ವಾಚ್‌ ಹೊಂದಿಕೊಳ್ಳಲಿದ್ದು, ಈ ಮೂಲಕ ನಿಮ್ಮ ನಿತ್ಯದ ಆರೋಗ್ಯ ಹಾಗೂ ಫಿಟ್‌ನೆಸ್‌ ಮಾಹಿತಿಯನ್ನು ಟ್ರ್ಯಾಕ್‌ ಮಾಡಬಹುದಾಗಿದೆ.

ಇಷ್ಟೇ ಅಲ್ಲದೆ ಈ ವಾಚ್‌ ಕುಳಿತುಕೊಳ್ಳುವ ಎಚ್ಚರಿಕೆಗಳು, ಕ್ಯಾಮೆರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್, ಹವಾಮಾನ, ಅಲಾರ್ಮ್, ಕೌಂಟ್‌ಡೌನ್, ಸ್ಟಾಪ್‌ವಾಚ್, ಡಿಎನ್‌ಡಿ, ಫೈಂಡ್‌ ಮೈ ಫೋನ್‌ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ ಸಂಬಂಧಿ ಫೀಚರ್ಸ್‌ ಪಡೆದಿದೆ. ಇದರಿಂದಾಗಿ ನೀವು ಈ ವಾಚ್ ನಲ್ಲಿ ಹಲವು ಸೌಕರ್ಯ ಪಡೆದುಕೊಳ್ಳಬಹುದು. ಇದೆಲ್ಲದರ ಜೊತೆಗೆ 240mAh ಸಾಮರ್ಥ್ಯದ ಬ್ಯಾಟರಿ ಇದ್ದು, ಇದು 7 ದಿನಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ.

ಬೋಟ್ ಅಲ್ಟಿಮಾ ವೋಗ್‌ ಸ್ಮಾರ್ಟ್‌ವಾಚ್‌: ಅತ್ಯಾಕರ್ಷಕ ವಿನ್ಯಾಸ,ಬೊಂಬಾಟ್‌ ಫೀಚರ್ಸ್

ಬೋಟ್ ಅಲ್ಟಿಮಾ ವೋಗ್ ಫೀಚರ್ಸ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ಗೆ ಮೆಟಲ್ ಬ್ಲ್ಯಾಕ್, ಬ್ರೌನ್ ಲೆದರ್, ಜೆಟ್ ಬ್ಲ್ಯಾಕ್, ಬೀಜ್ ಮತ್ತು ಡೀಪ್ ಬ್ಲೂ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ. ಲೆದರ್ ಮತ್ತು ಸಿಲಿಕೋನ್ ಸ್ಟ್ರಾಪ್ ವೇರಿಯಂಟ್‌ಗೆ 2999 ರೂ.ಗಳ ಬೆಲೆ ಇದ್ದರೆ ಮೆಟಾಲಿಕ್ ಸ್ಟ್ರಾಪ್ ವೇರಿಯಂಟ್‌ಗೆ 3299ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ವಾಚ್‌ ಅನ್ನು ನೀವು ಅಮೆಜಾನ್‌ ಹಾಗೂ ಬೋಟ್‌ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Boat has just unveiled the Boat Ultima Vogue smartwatch. This smartwatch has a large display of 1.96 inches.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+