Home
ಸುದ್ದಿಜಾಲ

ಬೋಟ್‌ ಸಂಸ್ಥೆಯ ಈ ಸ್ಮಾರ್ಟ್‌ವಾಚ್‌ಗೆ ಸಖತ್ ಡಿಸ್ಕೌಂಟ್‌!..ಕಡಿಮೆ ಬೆಲೆಗೆ ಲಭ್ಯ!

ಟೆಕ್‌ ಮಾರುಕಟ್ಟೆಯಲ್ಲಿ ಬೋಟ್‌ ಸಂಸ್ಥೆಯು ಹಲವು ಸ್ಮಾರ್ಟ್‌ ಡಿವೈಸ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿವೆ. ಅದರಲ್ಲಿಯೂ ಇತ್ತೀಚಿಗೆ ಬೋಟ್‌ ಸ್ಮಾರ್ಟ್‌ವಾಚ್‌ಗಳು ಹೆಚ್ಚಿನ ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಬೋಟ್ ವೇವ್ ಎಲೆಕ್ಟ್ರಾ (boAt Wave Electra) ಸ್ಮಾರ್ಟ್‌ವಾಚ್‌ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರನ್ನು ಆಕರ್ಷಿಸಿದೆ.

ಹೌದು, ಜನಪ್ರಿಯ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ (boAt Wave Electra) ಬೋಟ್ ವೇವ್ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ಗೆ 77% ರಿಯಾಯಿತಿ ಕಾಣಿಸಿದೆ. ಈ ಡಿವೈಸ್‌ ಬೆಲೆಯು 7,990 ರೂ. ಆಗಿದ್ದು, 1,799ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಬ್ಯಾಂಕ್‌ ಆಫರ್‌ ಹಾಗೂ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಸಹ ದೊರೆಯುತ್ತದೆ.

ಬೋಟ್‌ ಸಂಸ್ಥೆಯ ಈ ಸ್ಮಾರ್ಟ್‌ವಾಚ್‌ಗೆ ಸಖತ್ ಡಿಸ್ಕೌಂಟ್‌!..ಕಡಿಮೆ ಬೆಲೆಗೆ ಲಭ್ಯ!

ಬೋಟ್ ವೇವ್ ಎಲೆಕ್ಟ್ರಾ ಡಿಸ್‌ಪ್ಲೇ : ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ 1.81 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಹೆಚ್‌ಡಿ ರೆಸಲ್ಯೂಶನ್ ಮತ್ತು 550 ನಿಟ್ಸ್‌ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅಲ್ಯೂಮಿನಿಯಂ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ. ಜೊತೆಗೆ ಸ್ಮಾರ್ಟ್‌ವಾಚ್‌ IP68 ಪ್ರಮಾಣೀಕರಿಸಿದ ವಾಟರ್‌ ಮತ್ತು ಡಸ್ಟ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಅಂದರೆ ನೀವು ಈ ಸ್ಮಾರ್ಟ್‌ವಾಚ್‌ ಧರಿಸಿಕೊಂಡು ಸ್ವಿಮ್ಮಿಂಗ್‌ ಸಹ ಮಾಡಬಹುದಾಗಿದೆ.

ಬೋಟ್‌ ಸಂಸ್ಥೆಯ ಈ ಸ್ಮಾರ್ಟ್‌ವಾಚ್‌ಗೆ ಸಖತ್ ಡಿಸ್ಕೌಂಟ್‌!..ಕಡಿಮೆ ಬೆಲೆಗೆ ಲಭ್ಯ!

ಸ್ಟೋರೇಜ್‌ ಆಯ್ಕೆ ಎಷ್ಟು : ಇನ್ನು ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ ಫೀಚರ್ಸ್‌ಗಳಲ್ಲಿ ಹೈಲೈಟ್‌ ಅಂದರೆ ಇದರ ಬ್ಲೂಟೂತ್ ಕಾಲ್‌ ಫೀಚರ್ಸ್‌ ಆಗಿದೆ. ಏಕೆಂದರೆ ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಡಿವೈಸ್‌ಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ನೀವು 50 ಕಂಟ್ಯಾಕ್ಟ್‌ಗಳನ್ನು ಸ್ಟೋರೇಜ್‌ ಮಾಡಬಹುದು. ಅಲ್ಲದೆ ನೇರವಾಗಿ ನಿಮ್ಮ ಸಂಪರ್ಕಗಳಿಗೆ ಕರೆ ಮಾಡುವುದಕ್ಕೆ ಡಯಲ್‌ಪ್ಯಾಡ್‌ ಅನ್ನು ಬಳಸಬಹುದಾಗಿದೆ.

ಬೋಟ್‌ ಸಂಸ್ಥೆಯ ಈ ಸ್ಮಾರ್ಟ್‌ವಾಚ್‌ಗೆ ಸಖತ್ ಡಿಸ್ಕೌಂಟ್‌!..ಕಡಿಮೆ ಬೆಲೆಗೆ ಲಭ್ಯ!

ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯ : ಈ ಸ್ಮಾರ್ಟ್‌ವಾಚ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡರಲ್ಲೂ ಕಾರ್ಯ ನಿರ್ವಹಿಸುತ್ತಿರುವುದರಿಂದ ನೀವು ಗೂಗಲ್‌ ಅಸಿಸ್ಟೆಂಟ್‌ ಮತ್ತು ಆಪಲ್‌ ಸಿರಿಯನ್ನು ಬಳಸಬಹುದಾಗಿದೆ. ಈ ಮೂಲಕ ಡಿಜಿಟಲ್‌ ಅಸಿಸ್ಟೆಂಟ್‌ ಅನ್ನುಸಮರ್ಪಕವಾಗಿ ಬಳಸುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಗೇಮ್‌ಗಳಿಗೆ ಕೂಡ ಅವಕಾಶವನ್ನು ನೀಡಲಿದೆ. ಇದರಲ್ಲಿ Whack-A-Mole.oaboat ಸೇರಿದಂತೆ ಹಲವು ಗೇಮ್‌ಗಳನ್ನು ನೀಡಲಾಗಿದೆ.

ಪ್ರಮುಖ ಫೀಚರ್ಸ್‌ : ಬೋಟ್‌ ವೇವ್‌ ಎಲೆಕ್ಟ್ರಾ ಸ್ಮಾರ್ಟ್‌ವಾಚ್‌ ನಲ್ಲಿ ರನ್ನಿಂಗ್‌, ಸೈಕ್ಲಿಂಗ್, ಜಂಪಿಂಗ್ ಮತ್ತು ಎಲಿಪ್ಟಿಕಲ್ ಸೇರಿದಂತೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ಹಾರ್ಟ್‌ಬೀಟ್‌ ಮಾನಿಟರ್‌, SpO2 ಮಾನಿಟರ್ ಮತ್ತು ಸ್ಲೀಪ್ ಟ್ರ್ಯಾಕರ್ ಅನ್ನು ಕೂಡ ನೀಡಲಾಗಿದೆ.

ಇತರೆ ಫೀಚರ್ಸ್‌ ಹೀಗಿವೆ : ಇದರಲ್ಲಿ ನೀವು ಡೈಲಿ ಆಕ್ಟಿವಿಟಿ ಟ್ರ್ಯಾಕರ್, ಉಸಿರಾಟದ ಟ್ರೈನಿಂಗ್‌ ಮತ್ತು ಹೈಡ್ರೇಶನ್‌ ಆಲರ್ಟ್‌ ಅನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಸ್ಕ್ವೇರ್‌ ಡಯಲ್‌ ಅನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 7 ದಿನಗಳವರೆಗೆ ಮತ್ತು ಬ್ಲೂಟೂತ್ ಕರೆಗೆ ಬಳಸಿದಾಗ 2 ದಿನಗಳವರೆಗಿನ ಬ್ಯಾಟರಿ ಬಾಳಿಕೆ ನೀಡಲಿದೆ.

ಕಲರ್‌ ಆಯ್ಕೆ ಮತ್ತು ಲಭ್ಯತೆ : ಬೋಟ್‌ ಸಂಸ್ಥೆಯು ವೇವ್‌ ಎಲೆಕ್ಟ್ರಾ (boAt Wave Electra) ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ ಮತ್ತು ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರು ಈ ಸ್ಮಾರ್ಟ್‌ವಾಚ್‌ ಅನ್ನು ಖರೀದಿಸಬಹುದಾಗಿದೆ.

Best Mobiles in India

English summary
boAt Wave Electra is at a 77% Discount on Amazon. Check Offer Price, specification and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+