ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದ 25 ವರ್ಷದ ನಫೀಸಾ ಅಲಿಯಾಸ್ ಜಿಯಾ ಖಾನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿರುವ ತಮ್ಮ ನಿವಾಸ ಸಾಗರ್ ಸಂಗೀತ್ ಕಟ್ಟಡದಲ್ಲಿ ನೇಣಿಗೆ ಶರಣಾಗಿದ್ದಾರೆ. ಜಿಯಾ ಖಾನ್ ಸಾವಿಗೆ ಏನು ಕಾರಣ ಎಂದು ಇನ್ನೂ ತಿಳಿದು ಬಂದಿಲ್ಲ.
ಬ್ರಿಟನ್ ಮೂಲದ 25 ವರ್ಷ ವಯಸ್ಸಿನ ಜಿಯಾ ಖಾನ್ ನಿನ್ನೆ ತಡರಾತ್ರಿ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.ಜಿಯಾ ಖಾನ್ ಅವರ ಮನೆ ಕೆಲಸದವರು, ನೆರೆ ಮನೆಯವರು, ಸೆಕ್ಯುರಿಟಿಗಳನ್ನು ವಿಚಾರಣೆ ನಡೆಸಲಾಗಿದ್ದು ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಜಿಯಾ ಖಾನ್ ಸಾವಿಗೆ ಬಾಲಿವುಡ್ ಗಣ್ಯರು ಟ್ವೀಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ ಬಾಲಿವುಡ್ ಸೆಲೆಬ್ರಿಟಿಗಳ ಟ್ವೀಟ್‌ಗಳು ನಿಮಗಾಗಿ ಇಲ್ಲಿವೆ.ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ.