Subscribe to Gizbot

ಈ ಆಪ್‌ನಲ್ಲಿ ಫ್ಲೈಟ್ ಟಿಕೇಟ್ ಬುಕ್ ಮಾಡಿ: ಬೆಂಗಳೂರು-ಡೆಲ್ಲಿ ವಿಮಾನ ದರ ರೂ. 99 ಮಾತ್ರವೇ..!

Written By:

ವಿಮಾನ ಯಾನ ದುಬಾರಿ ಎನ್ನುತ್ತಿದ್ದವರಿಗೆ ಏರ್‌ಏಷ್ಯಾ ಶಾಕಿಂಗ್ ಆಫರ್ ವೊಂದನ್ನು ನೀಡಿದೆ. KSRTC ಬಸ್ಗಿಂತಲೂ ಕಡಿಮೆ ಬೆಲೆಗೆ ಫ್ಲೈಟ್ ಟಿಕೇಟ್ ಆಫರ್ ಮಾಡುತ್ತಿದೆ. ಹಬ್ಬದ ಸಂಭ್ರಮದಲ್ಲಿದ್ದವರಿಗೆ ರೂ.99ಕ್ಕೆ ವಿಮಾನದ ಟಿಕೇಟ್ ನೀಡುವ ಮೂಲಕ ಏರ್ಏಷ್ಯಾ ಹಬ್ಬ ಸಂಭ್ರಮವನ್ನು ಮತ್ತಷ್ಟು ಏರಿಕೆ ಮಾಡಿದೆ.

ಬೆಂಗಳೂರು-ಡೆಲ್ಲಿ ವಿಮಾನ ದರ ರೂ. 99 ಮಾತ್ರವೇ..!

ದೇಶದ ಏಳು ಪ್ರಮುಖ ನಗರಗಳಿಗೆ ಪ್ರಯಾಣಿಸುವವರಿಗೆ ರೂ.99ಕ್ಕೆ ಏರ್‌ ಟಿಕೇಟ್‌ ನೀಡಲಿದೆ. ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಪ್ರಯಾಣಿಸುವವರಿಗೆ ಏರ್‌ಏಷ್ಯಾ ಭರ್ಜರಿ ಆಫರ್‌ ನೀಡಿದೆ.

ಓದಿರಿ: ಅಮೆರಿಕಾದಲ್ಲಿ ನಿ‍ಷೇಧವಾಗಲಿರುವ ವಿಶ್ವದ ಟಾಪ್ ಸ್ಮಾರ್ಟ್‌ಫೋನ್‌: ಭಾರತದಲ್ಲಿ ಬಹುಬೇಡಿಕೆಯಲ್ಲಿದೆ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಏಷ್ಯಾ ಆಪ್‌ನಲ್ಲಿ ಬುಕ್ ಮಾಡಬೇಕು:

ಏರ್‌ಏಷ್ಯಾ ಆಪ್‌ನಲ್ಲಿ ಬುಕ್ ಮಾಡಬೇಕು:

ಏರ್‌ಏಷ್ಯಾ ಬಿಡುಗಡೆ ಮಾಡಿರುವ ಆಪ್ ಮತ್ತು ಏರ್‌ಏಷ್ಯಾ ವೆಬ್‌ಸೈಟಿನಲ್ಲಿ ಹೋಗಿ ಟಿಕೇಟ್ ಬುಕ್ ಮಾಡುವವರಿಗೆ ಮಾತ್ರವೇ ಈ ಕಡಿಮೆ ಬೆಲೆಯ ಪ್ರಯಾಣವು ದೊರೆಯಲಿದೆ ಎನ್ನಲಾಗಿದೆ.

Honor 9 Lite with four cameras (KANNADA)
ಜನವರಿ 21ರವರೆಗೆ ಆಫರ್:

ಜನವರಿ 21ರವರೆಗೆ ಆಫರ್:

ಏರ್‌ಏಷ್ಯಾ ಹಬ್ಬದ ಸಂಭ್ರಮದಲ್ಲಿ ಘೋಷಣೆ ಮಾಡಿರುವ ಈ ಆಫರ್ ನಲ್ಲಿ, ಪ್ರಯಾಣಿಕರು ಜನವರಿ 21ರ ವರೆಗೆ ಟಿಕೇಟ್ ಬುಕ್ ಮಾಡಬಹುದಾಗಿದೆ. ರೂ.99ರ ಬೆಸಿಕ್ ಪ್ರೈಸ್ ನಲ್ಲಿ ದೊರೆಯಲಿದ್ದು, ಜನವರಿ 15 ರಿಂದ ಜುಲೈ 31ರೊಳಗೆ ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಪ್ರಯಾಣಿಕರು ಪ್ರಯಾಣ ಬೆಳೆಸಬಹುದಾಗಿದೆ.

 ವಿದೇಶಗಳಿಗೂ ಕಡಿಮೆ:

ವಿದೇಶಗಳಿಗೂ ಕಡಿಮೆ:

ಇದೇ ಸಂದರ್ಭದಲ್ಲಿ ಏರ್‌ಏಷ್ಯಾ ವಿದೇಶಿಯ ಪ್ರಯಾಣಕ್ಕೂ ಆಫರ್ ನೀಡಿದ್ದು, ಕೇವಲ ರೂ.1,499ಕ್ಕೆ 10 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸುವ ಅವಕಾಶವನ್ನು ಮಾಡಿಕೊಟ್ಟಿದೆ. ಆಕ್ಲೆಂಡ್‌‌, ಬಾಲಿ, ಬ್ಯಾಂಕಾಕ್‌‌, ಕೌಲಾಲಂಪುರ್‌‌, ಮೆಲ್ಬೋರ್ನ್, ಸಿಂಗಪುರ್ ಮತ್ತು ಸಿಡ್ನಿಗಳಿಗೆ ಕಡಿಮೆ ಬೆಲೆಗೆ ಹೋಗಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Book AirAsia Tickets At Base Fare Of Rs. 99 To 7 Cities. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot