ಅಮೆರಿಕಾದಲ್ಲಿ ನಿ‍ಷೇಧವಾಗಲಿರುವ ವಿಶ್ವದ ಟಾಪ್ ಸ್ಮಾರ್ಟ್‌ಫೋನ್‌: ಭಾರತದಲ್ಲಿ ಬಹುಬೇಡಿಕೆಯಲ್ಲಿದೆ..!

|

ವಿಶ್ವ ಸ್ಮಾರ್ಟ್‌ ಫೋನ್ ಮಾರುಕಟ್ಟೆಯಲ್ಲಿ ನಂ.3 ಸ್ಥಾನವನ್ನು ಅಲಂಕರಿಸಿ, ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಂಡಿರುವ ಹಾನರ್ ಮದರ್ ಕಂಪನಿ ಹುವಾವೆ ಅಮೆರಿಕಾದಲ್ಲಿ ಬ್ಯಾನ್ ಆಗುವ ಸಾಧ್ಯತೆ ಇದೆ. ಇದರೊಂದಿಗೆ ಅಮೆರಿಕಾದಲ್ಲಿ ZTE ಸ್ಮಾರ್ಟ್‌ಫೋನ್ ಸಹ ಬ್ಯಾನ್ ಆಗುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಹುವಾವೆ ಭಾರೀ ನಷ್ಟವನ್ನು ಅನುಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ ಎನ್ನಲಾಗಿದೆ.

ಅಮೆರಿಕಾದಲ್ಲಿ ನಿ‍ಷೇಧವಾಗಲಿರುವ ವಿಶ್ವದ ಟಾಪ್ ಸ್ಮಾರ್ಟ್‌ಫೋನ್‌

ಅಮೆರಿಕಾದಲ್ಲಿ ನಡೆಯುವ ಘಟನೆಗಳು ಚೀನಾದಲ್ಲಿ ಸೋರಿಕೆಯಾಗುತ್ತಿದ್ದು, ಇದು ಅಮೆರಿಕಾದ ಭದ್ರತೆಗೆ ಧಕ್ಕೆಯನ್ನು ಉಂಟು ಮಾಡುತ್ತಿದೆ, ಅದರಲ್ಲೂ ಹುವಾವೆ ಮತ್ತು ZTE ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದು, ಈ ಹಿನ್ನಲೆಯಲ್ಲಿ US ಸರಕಾರದಲ್ಲಿ ಯಾವುದೇ ಇಲಾಖೆಯಲ್ಲಿ ಹುವಾವೆ ಮತ್ತು ZTE ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುವುದನ್ನು ನಿಷೇಧಿಸುವ ಬೆಲ್‌ವೊಂದು ಶೀಘ್ರವೇ ಮಂಡನೆಯಾಗಲಿದೆ.

ಓದಿರಿ: ಇತಿಹಾಸದ ಶಾಪಿಂಗ್‌ ಸೇಲ್: ಅಮೆಜಾನ್‌ನಲ್ಲಿ ಮೊಬೈಲ್-TVಗಳ ಗ್ರೇಟ್ ಡೀಲ್..!

ಮಾಹಿತಿ ಕಳ್ಳತನ:

ಮಾಹಿತಿ ಕಳ್ಳತನ:

ಅಮೆರಿಕಾದ ಗುಪ್ತಚರದ ಮಾಹಿತಿಯ ಪ್ರಕಾರ ಹುವಾವೆ ಮತ್ತು ZTE ಸ್ಮಾರ್ಟ್‌ಫೋನ್‌ಗಳು ಗುಪ್ತವಾಗಿ ಚೀನಾದ ಸರ್ವರ್ ಗಳಿಗೆ ಮಾಹಿತಿಯನ್ನು ರವಾನಿಸುತ್ತಿದೆ ಎನ್ನಲಾಗಿದೆ. ಇದು ದೇಶದ ಭದ್ರತೆಗೆ ಮಾರಕವಾಗಲಿದೆ ಎಂದ ವರದಿ ಮಾಡಿವೆ. ಈ ಹಿನ್ನಲೆಯಲ್ಲಿ ಅಮೆರಿಕಾ ಸರಕಾರವೂ ಹುವಾವೆ ಮತ್ತು ZTE ಸ್ಮಾರ್ಟ್‌ಫೋನ್‌ಗಳನ್ನು ಶೀಘ್ರವೇ ನಿಷೇಧಿಸಲಿದೆ.

How to Sharing a Mobile Data Connection with Your PC (KANNADA)
ಆಸ್ಟ್ರೇಲಿಯಾದಲ್ಲೂ ನಿ‍ಷೇಧದ ಸಾಧ್ಯತೆ:

ಆಸ್ಟ್ರೇಲಿಯಾದಲ್ಲೂ ನಿ‍ಷೇಧದ ಸಾಧ್ಯತೆ:

ಇದೇ ಮಾದರಿಯಲ್ಲಿ ಹುವಾವೆ ಮತ್ತು ZTE ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಮಾಹಿತಿಯನ್ನು ಕದಿಯುತ್ತಿರುವ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದಲ್ಲೂ ನಿ‍ಷೇಧದವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೈಬರ್ ವಾರ್:

ಸೈಬರ್ ವಾರ್:

ಚೀನಾ ತನ್ನ ವಿರೋಧಿ ರಾಷ್ಟ್ರಗಳ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಮುಂದಿನ ದಿನದಲ್ಲಿ ಇದು ಸೈಬರ್ ವಾರ್ ನಡೆಸಲಿದೆ ಎನ್ನಲಾಗಿದೆ. ಇದಲ್ಲದೇ ವೈರಸ್ ಗಳನ್ನು ನಿರ್ಮಿಸಲು ಸಹ ಈ ಮಾಹಿತಿಯನ್ನು ಹ್ಯಾಕರ್ ಗಳಿಗೆ ನೀಡುತ್ತಿದೆ ಎನ್ನಲಾಗಿದೆ.

ಈ ಹಿಂದೆಯೂ ಆಗಿತ್ತು:

ಈ ಹಿಂದೆಯೂ ಆಗಿತ್ತು:

ಇದೇ ಮಾದರಿಯಲ್ಲಿ ಚೀನಾ ಮೂಲದ ಹಲವು ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದವೂ ಈ ಹಿನ್ನಲೆಯಲ್ಲಿ ಅವುಗಳನ್ನು ಬ್ಯಾನ್ ಮಾಡಲಾಗಿತ್ತು. ಅಮೆಜಾನ್ ಬ್ಲೂ ಸ್ಮಾರ್ಟ್‌ಫೋನ್‌ಗಳನ್ನು ಮಾರುವುದನ್ನು ನಿಲ್ಲಿಸಿತ್ತು.

Best Mobiles in India

English summary
US government ban using Huawei and ZTE phones. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X