ಬೋಸ್ ಪರಿಚಯಿಸಲಿದೆ 'ಆಡಿಯೊ ಕನ್ನಡಕ'!..ಹೇಗಿದೆ ಗೊತ್ತಾ ಈ ಡಿವೈಸ್!
ಜನಪ್ರಿಯ ಆಡಿಯೊ ಕಂಪನಿ ಬೋಸ್ ಉತ್ಪನ್ನಗಳ ಬಗ್ಗೆ ಸಾಮಾನ್ಯವಾಗಿ ಮ್ಯೂಸಿಕ್ ಪ್ರಿಯರು ತಿಳಿದುಕೊಂಡಿರುತ್ತಾರೆ. ಆದರೆ ಕಂಪನಿಯು ಈಗ ಬಿಡುಗಡೆ ಮಾಡಲಿರುವ ಹೊಸ ಆಡಿಯೊ ಉತ್ಪನ್ನದ ಬಗ್ಗೆ ತಿಳಿದ್ರೆ ನೀವು ಅಚ್ಚರಿಗೊಳ್ಳುತ್ತಿರಾ. ಏಕೆಂದರೇ ಈ ಹೊಸ ಉತ್ಪನ್ನ ಸಂಪೂರ್ಣ ವಿಭಿನ್ನವಾಗಿದ್ದು, ಕೇವಲ ಆಡಿಯೊ ಡಿವೈಸ್ ಅಷ್ಟೇ ಅಲ್ಲದೇ ಓಪೆನ್ ಏರ್ ಐ ಗ್ಲಾಸ್(eyewear) ಡಿವೈಸ್ ಆಗಿದೆ.

ಹೌದು, ಬೋಸ್ ಆಡಿಯೊ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಇದೀಗ ಐವೇರ್ ಉತ್ಪನ್ನಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಇವು ಸಾಮಾನ್ಯ ಕನ್ನಡಕದಂತಲ್ಲ. ಬದಲಾಗಿ ಈ ಕನ್ನಡಕದಲ್ಲಿ ಓಪೆನ್ ಏರ್ ಮಾದರಿಯ ರಚನೆಯಿದ್ದು, ಗ್ರಾಹಕರು ಮ್ಯೂಸಿಕ್ ಸ್ಟ್ರೀಮಿಂಗ್ ಮಾಡಬಹುದು, ಕರೆಗಳನ್ನು ಸ್ವೀಕರಿಸಬಹುದು ಮತ್ತು ಕರೆಗಳನ್ನು ಮಾಡಬಹುದು ಜೊತೆಗೆ ವರ್ಚುವಲ್ ಅಸಿಸ್ಟಂಟ್ ಸೌಲಭ್ಯ ಇರಲಿವೆ.

ಬೋಸ್ ಕಂಪನಿಯ ಹೊಸ ಐವೇರ್ ಆಲ್ಟೊ ಮತ್ತು ರೊಂಡೊ ಮಾದರಿಯ ಎರಡು ಡಿಸೈನ್ ರಚನೆಯ ಆಯ್ಕೆಯನ್ನು ಒಳಗೊಂಡಿರಲಿವೆ. ಈ ಐವೇರ್ ಡಿವೈಸ್ ಎರಡು ಫ್ರೇಮ್‌ಗಳು ಶೇ. 99% UVA/UVB ತರಂಗಾಂತರಗಳನ್ನು ತಡೆಹಿಡಿಯುತ್ತವೆ. ಹಾಗಾದರೇ ಬೋಸ್ ಕಂಪನಿಯ ಹೊಸ ಐವೇರ್ ಆಡಿಯೊ ಡಿವೈಸ್‌ಗಳು ಏನೆಲ್ಲಾ ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆಯಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಏನಿದು ಐವೇರ್ ಡಿವೈಸ್
ಬೋಸ್ ಕಂಪನಿಯು ಆಡಿಯೊ ಡಿವೈಸ್‌ನಲ್ಲಿ ಹೊಸತನಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕನ್ನಡಕದ ಜೊತೆಗೆ ಆಡಿಯೊ ಸೌಲಭ್ಯ ನೀಡಲು ಪ್ರಯತ್ನಿಸಿದೆ. ಈ ಐವೇರ್ ಆಡಿಯೊ ಡಿವೈಸ್‌ಗಳು ವಾಯರ್‌ಲೆಸ್ ಹೆಡ್‌ಫೋನ್‌ಗಳಂತೆ ಇರಲಿದ್ದು, ಕನ್ನಡಕದ ಫ್ರೇಮ್‌ಗಳಿಂದ ಕಿವಿಗಳಿಗೆ ಸೌಂಡ್ ಕೇಳುವ ರಚನೆ ಇರಲಿದೆ. ಹಾಗೆಯೇ ವಾಯಿಸ್ ಗ್ರಹಿಸಲು ಮೈಕ್ರೋಫೋನ್ ರಚನೆಯನ್ನು ಸಹ ಒಳಗೊಂಡಿದೆ.

ರಚನೆ ಹೇಗಿದೆ
ನೋಡಲು ಸನ್‌ಗ್ಲಾಸ್‌ನಂತೆ ಕಂಡರೂ ಈ ಐವೇರ್ ಡಿವೈಸ್ ಸಾಮಾನ್ಯ ಕನ್ನಡಕದಂತೆ ಅಲ್ಲ. ಕನ್ನಡಕದ ಫ್ರೇಮ್‌ನಲ್ಲಿ ಸ್ಪೀಕರ್ಸ್‌ಗಳಿದ್ದು, ಜೊತೆಗೆ ಪುಟ್ಟ ಮೈಕ್ರೋಫೋನ್ ಸಹ ನೀಡಲಾಗಿದೆ. ಬಲಗಡೆ ಮಲ್ಟಿಫಂಗಷನಲ್ ಬಟನಗಳನ್ನು ಒಳಗೊಂಡಿದ್ದು, AR ಆಪ್ಸ್‌ಗಳನ್ನು ಒಳಗೊಂಡಿದೆ. ಹಾಗೆಯೇ ವಾಯಿಸ್ ಕಮಾಂಡ್ ಸೌಲಭ್ಯವನ್ನು ಪಡೆದಿದೆ.

ವಾಯಿಸ್ ಕಂಟ್ರೋಲ್
ಬೋಸ್ ಸಂಸ್ಥೆಯ ಹೊಸ ಐವೇರ್ ಡಿವೈಸ್‌ಗಳು ವಾಯಿಸ್ ಕಮಾಂಡ್ ಸೌಲಭ್ಯವನ್ನು ಇನ್‌ಬಿಲ್ಟ್ ಹೊಂದಿದ್ದು, ಗೂಗಲ್ ಅಸಿಸ್ಟಂಟ್ ಮತ್ತು ಆಪಲ್ ಸಿರಿ ವಾಯಿಸ್ ಕಮಾಂಡ್‌ಗಳನ್ನು ಬೆಂಬಲಿಸಲಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಮಾದರಿಯ ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ಆ ಮೂಲಕ ಫೋನಿಂದಲೇ ನಿಯಂತ್ರಿಸಬಹುದು.

ಬ್ಯಾಟರಿ ಬಾಳಿಕೆ
ಬೋಸ್ ಐವೇರ್ ಆಡಿಯೊ ಡಿವೈಸ್ ಸುಮಾರು 12 ಗಂಟೆಗಳ ಸ್ಟ್ಯಾಂಡ್ ಬೈ ಬ್ಯಾಟರಿ ಬಾಳಿಕೆ ಸೌಲಭ್ಯವನ್ನು ಪಡೆದುಕೊಂಡಿದೆ. ಕೇವಲ ಎರಡು ಗಂಟೆಗಳಲ್ಲಿ ಬ್ಯಾಟರಿಯನ್ನು ಪೂರ್ಣ ಚಾರ್ಜ್ ಮಾಡಬಹುದಾಗಿದೆ. ನಿರಂತರ ಪ್ಲೇಬ್ಯಾಕ್ ಇದ್ದಾಗ ಸುಮಾರು 3.5 ಗಂಟೆಗಳ ಬ್ಯಾಟರಿ ಲೈಫ್ ದೊರೆಯಲಿದೆ.

ಬೆಲೆ ಮತ್ತು ಲಭ್ಯತೆ
ಬೋಸ್ ಕಂಪನಿಯ ಐವೇರ್ ಡಿವೈಸ್ ಫ್ರೇಮ್ ಆರಂಭಿಕ ಬೆಲೆಯು 21,900ರೂ.ಗಳ ಹಾಗೂ ಲೆನ್ಸ್‌ಗಳು 1,990ರೂ ಮತ್ತು 2,990ರೂ.ಗಳು ಆಗಿರಲಿವೆ ಎನ್ನಲಾಗಿದೆ. ಇನ್ನು ಈ ಐವೇರ್ ಉತ್ಪನ್ನಗಳು ಇದೇ ಜೂನ್ 20ರಂದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆಗಳಿವೆ.


Click it and Unblock the Notifications








