ಬೋಸ್‌ ಸಂಸ್ಥೆಯಿಂದ ಹೊಸ 'ನಾಯಿಸ್ ಕ್ಯಾನ್ಸಲೇಷನ್ ಹೆಡ್‌ಫೋನ್‌' ಲಾಂಚ್!

|

ಮ್ಯೂಸಿಕ್ ಕೇಳಲು ಬಹುತೇಕರು ಹೆಡ್‌ಫೋನ್‌ಗೆ ಮೋರೆ ಹೋಗುತ್ತಾರೆ ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ಅನೇಕ ಹೆಡ್‌ಫೋನ್‌ಗಳು ಲಗ್ಗೆ ಇಡುತ್ತಲೇ ಇವೆ. ಆದರೆ ಮ್ಯೂಸಿಕ್ ಪ್ರಿಯರು ಈಗಂತೂ ನಾಯಿಸ್‌ಲೆಸ್‌ ಮಾದರಿಯ ಹೆಡ್‌ಫೋನ್‌ಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ನಾಯಿಸ್‌ಲೆಸ್‌ ಹೆಡ್‌ಫೋನ್‌ಗಳಿಗೆ ಡಿಮ್ಯಾಂಡ್ ಅಧಿಕವಾಗಿದೆ. ಹೀಗಾಗಿ ಬೋಸ್‌ ಕಂಪೆನಿ ಸಹ ನಾಯಿಸ್‌ಲೆಸ್‌ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಬೋಸ್‌ ಸಂಸ್ಥೆಯಿಂದ ಹೊಸ 'ನಾಯಿಸ್ ಕ್ಯಾನ್ಸಲೇಷನ್ ಹೆಡ್‌ಫೋನ್‌' ಲಾಂಚ್!

ಹೌದು, ಜನಪ್ರಿಯ ಆಡಿಯೊ ಉಪಕರಣ ತಯಾರಿಕಾ ಸಂಸ್ಥೆ ಬೋಸ್‌ ಇದೀಗ ಭಾರತೀಯ ಮಾರುಕಟ್ಟೆಗೆ ಹೊಸದಾಗಿ ನಾಯಿಸ್ ಕ್ಯಾನ್ಸಲೇಷನ್ಹೆಡ್‌ಫೋನ್‌ 700 ಅನ್ನು ಲಾಂಚ್ ಮಾಡಿದೆ. ಬ್ಯಾಕ್‌ ಮತ್ತು ಸಿಲ್ವರ್ ಎರಡು ವೇರಿಯಂಟ್‌ ಮಾದರಿಗಳಲ್ಲಿ ಬಿಡುಗಡೆ ಆಗಿರುವ ಈ ಡಿವೈಸ್‌ 34,500ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದೆ. ಬೋಸ್‌ ಸ್ಟೋರ್‌, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳಲ್ಲಿ ಲಭ್ಯವಿದ್ದು, ಗ್ರಾಹಕರು (ಅಗಷ್ಟ 22) ಪ್ರಿ-ಆರ್ಡರ್ ಮಾಡಬಹುದಾಗಿದೆ.

ಬೋಸ್‌ ಸಂಸ್ಥೆಯಿಂದ ಹೊಸ 'ನಾಯಿಸ್ ಕ್ಯಾನ್ಸಲೇಷನ್ ಹೆಡ್‌ಫೋನ್‌' ಲಾಂಚ್!

ಬೋಸ್‌ ನಾಯಿಸ್‌ಲೆಸ್‌ ಹೆಡ್‌ಫೋನ್‌ 700 ಡಿವೈಸ್‌ಗಳು ಹಗುರವಾದ ರಚನೆಯನ್ನು ಪಡೆದಿದ್ದು, ಶಬ್ದ ರಹಿತವಾದ ಕಂಫರ್ಟ್‌ ಅನುಭವ ನೀಡುವ ವಿನ್ಯಾಸ್‌ ಹೊಂದಿದೆ ಹಾಗೆಯೇ ಈ ಹೆಡ್‌ಫೋನ್‌ ಮಡಚುವ ಸೌಲಭ್ಯವನ್ನು ಸಹ ಪಡೆದಿದೆ. ಇದರೊಂದಿಗೆ ಪ್ರಮುಖ ವಾಯಿಸ್‌ ಅಸಿಸ್ಟಂಟ್‌ಗಳ ಸೇವೆಗಳಾದ ಗೂಗಲ್ ಅಸಿಸ್ಟಂಟ್, ಐಫೋನ್ ಸಿರಿ ಮತ್ತು ಅಮೆಜಾನ್ ಅಲೆಕ್ಸಾಗಳ ಬೆಂಬಲ ಸಹ ಪಡೆದಿದೆ.

ಬೋಸ್‌ ಸಂಸ್ಥೆಯಿಂದ ಹೊಸ 'ನಾಯಿಸ್ ಕ್ಯಾನ್ಸಲೇಷನ್ ಹೆಡ್‌ಫೋನ್‌' ಲಾಂಚ್!

ಬೋಸ್‌ ಹೆಡ್‌ಫೋನ್‌ಗಳು 'ಬೋಸ್ AR ಸೌಲಬ್ಯವನ್ನು ಹೊಂದಿದ್ದು, ವಿಶ್ವದ ಮೊದಲ ಆಡಿಯೊ ವರ್ಧಿತ ರಿಯಾಲಿಟಿ ಪ್ಲಾಟ್‌ಫಾರ್ಮ್ ಎಂದು ಗುರುತಿಸಿಕೊಂಡಿದೆ. ಹಾಗೆಯೇ ಬಾಹ್ಯ ಸೌಂಡ್‌ ಅನ್ನು ತಡೆಹಿಡಿಯಲು 6 ಮೈಕ್ರೊಫೋನ್‌ಗಳು ಕೆಲಸ ಮಾಡಲಿವೆ. ಹೀಗಾಗಿ ಮ್ಯೂಸಿಕ ಕೇಳುವಾಗ ಬಾಹ್ಯ ಶಬ್ದ ಕೇಳುಗರ ಕಿವಿಯನ್ನು ತಲುಪುವುದಿಲ್ಲ. ಮತ್ತು ಈ ಡಿವೈಸ್‌ ಸಂಭಾಷಣೆ ಮೋಡ್ ಸಹ ಒಳಗೊಂಡಿದೆ ಎಂದು ಕಂಪನಿಯು ಹೇಳಿದೆ.

<strong>ಓದಿರಿ : ನೋಕಿಯಾ ವಾಯರ್‌ಲೆಸ್ ಇಯರ್‌ಫೋನ್‌ಗಳು ಈಗ ಕಡಿಮೆ ಬೆಲೆಗೆ ಲಭ್ಯ! </strong>ಓದಿರಿ : ನೋಕಿಯಾ ವಾಯರ್‌ಲೆಸ್ ಇಯರ್‌ಫೋನ್‌ಗಳು ಈಗ ಕಡಿಮೆ ಬೆಲೆಗೆ ಲಭ್ಯ!

ಕಂಪೆನಿಯ ಈ ಹೊಸ ಹೆಡ್‌ಫೋನ್‌ಗಳ ಬ್ಯಾಟರಿ ಬಾಳಿಕೆ ಅತ್ಯುತ್ತಮವಾಗಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 20 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಬಲ್ಲ ಸಾಮರ್ಥ್ಯ ಪಡೆದಿವೆ. ಮೂರು ಬಟನ್‌ಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಒಂದು ಆನ್ ಬಟನ್, ಇನ್ನೊಂದು ಪವರ್ ಆಫ್ ಬಟನ್ ಮತ್ತೊಂದು ಬಟನ್ ಶಬ್ದ ತಡೆಯುವ ಆಯ್ಕೆ ಹೊಂದಿದೆ. ಹಾಗೆಯೇ ಕಂಪೆನಿಯು ಶೀಘ್ರದಲ್ಲೇ ನಾಯಿಸ್‌ಲೆಸ್‌ ಸೌಲಭ್ಯ ಬೋಸ್‌ ಇಯರ್‌ಬಡ್ಸ್‌ 500 ಡಿವೈಸ್‌ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

<strong>ಓದಿರಿ : ಡಿಶ್‌ಟಿವಿಯಿಂದ ಕೇವಲ 399ರೂ.ಗಳಿಗೆ 'ಡಿ2ಎಚ್‌ ಮ್ಯಾಜಿಕ್ ಸ್ಟಿಕ್'!</strong>ಓದಿರಿ : ಡಿಶ್‌ಟಿವಿಯಿಂದ ಕೇವಲ 399ರೂ.ಗಳಿಗೆ 'ಡಿ2ಎಚ್‌ ಮ್ಯಾಜಿಕ್ ಸ್ಟಿಕ್'!

Best Mobiles in India

English summary
The new Bose headphones come with two color variants and a price tag of Rs 34,500. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X