Home
ಸುದ್ದಿಜಾಲ

Smartwatch: ಬೋಸ್ಟನ್ ಲೆವಿನ್ ಇನ್ಫಿನಿಟಿ ಸ್ಮಾರ್ಟ್‌ವಾಚ್‌ ಲಾಂಚ್‌; ಅಮೋಲೆಡ್‌ ಡಿಸ್ಪ್ಲೇ... ಬೆಲೆ ಎಷ್ಟು?

ಸ್ಮಾರ್ಟ್‌ವಾಚ್‌ಗಳು (Smartwatch) ಇಂದು ಅತ್ಯಂತ ಜನಪ್ರಿಯ ಸ್ಮಾರ್ಟ್‌ಡಿವೈಸ್‌ ಆಗಿ ಗುರುತಿಸಿಕೊಂಡಿವೆ. ಈ ಕಾರಣಕ್ಕೆ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಸಹ ಸ್ಮಾರ್ಟ್‌ವಾಚ್ ತಯಾರು ಮಾಡಿ ಲಾಂಚ್ ಮಾಡುತ್ತಿವೆ. ಈ ನಡುವೆ ಬೋಸ್ಟನ್ ಲೆವಿನ್ ಹೊಸ ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಿದೆ. ಈ ವಾಚ್‌ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.

ಹೌದು, ಬೋಸ್ಟನ್ ಲೆವಿನ್‌ (Boston Levine) ಡೈನಾಮಿಕ್ ಮತ್ತು ನವೀನ ಆಡಿಯೋ ಮತ್ತು ಟೆಕ್ ಬ್ರ್ಯಾಂಡ್ ಆಗಿದ್ದು, ಈ ವಿಭಾಗದ ಉದ್ಯಮದಲ್ಲಿ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮುತ್ತಿದೆ. ಅದರಂತೆ ಈಗ ಬೋಸ್ಟನ್ ಲೆವಿನ್ ಇನ್ಫಿನಿಟಿ (Boston Levin Infinity) ಎಂಬ ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಈ ಸ್ಮಾರ್ಟ್‌ವಾಚ್‌ ಚೌಕಾಕಾರದ ಡಯಲ್ ಆಯ್ಕೆ ಪಡೆದುಕೊಂಡಿದೆ ಹಾಗೆಯೇ ತ್ವಚೆ-ಸ್ನೇಹಿ ಸಿಲಿಕೋನ್ ಪಟ್ಟಿ ಆಯ್ಕೆ ಸಹ ನೀಡಿರುವುದು ವಿಶೇಷ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಬೋಸ್ಟನ್ ಲೆವಿನ್ ಇನ್ಫಿನಿಟಿ ಸ್ಮಾರ್ಟ್‌ವಾಚ್‌ ಲಾಂಚ್‌; ಅಮೋಲೆಡ್‌ ಡಿಸ್ಪ್ಲೇ...

ಬೋಸ್ಟನ್ ಲೆವಿನ್ ಇನ್ಫಿನಿಟಿ ಡಿಸ್‌ಪ್ಲೇ ವಿವರ: ಈ ವಾಚ್‌1.85 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ (AMOLED display) ಆಯ್ಕೆ ಪಡೆದುಕೊಂಡಿದ್ದು, ಈ ಡಿಸ್‌ಪ್ಲೇ 380×420 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ ಗಟ್ಟಿಯಾದ ಗ್ಲಾಸ್‌ನಿಂದ ರಕ್ಷಣೆ ಪಡೆದುಕೊಂಡಿದ್ದು, ಸ್ಮಾರ್ಟ್‌ವಾಚ್‌ ಬಳಕೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿದೆ.

ಬೋಸ್ಟನ್ ಲೆವಿನ್ ಇನ್ಫಿನಿಟಿ ಫೀಚರ್ಸ್: ಈ ಸ್ಮಾರ್ಟ್‌ವಾಚ್‌ ಬಲವಾದ ಸತು ಮಿಶ್ರಲೋಹದಿಂದ ಮಾಡಿದ ಚೌಕಾಕಾರದ ಡಯಲ್ ಆಯ್ಕೆ ಪಡೆದುಕೊಂಡಿದ್ದು, ಇದು ಆರಾಮದಾಯಕ ಮತ್ತು ತ್ವಚೆ-ಸ್ನೇಹಿ ಸಿಲಿಕೋನ್ ಪಟ್ಟಿ ಆಯ್ಕೆಯೊಂದಿಗೆ ಬಂದಿದೆ. ಇದರೊಂದಿಗೆ ಇನ್‌ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್ ಆಯ್ಕೆ ಇದ್ದು, ಈ ಮೂಲಕ ನೀವು ಉತ್ತಮವಾಗಿ ಕರೆಯಲ್ಲಿ ತೊಡಗಿಕೊಳ್ಳಬಹುದು.

ಇಷ್ಟೇ ಅಲ್ಲದೆ ಎನ್‌ಎಫ್‌ಸಿ ಮತ್ತು ಭದ್ರತಾ ಲಾಕ್‌ನಂತಹ ಅಪರೂಪದ ಫೀಚರ್ಸ್‌ ಆಯ್ಕೆ ಸಹ ಈ ವಾಚ್‌ನಲ್ಲಿದೆ. ಇದರೊಂದಿಗೆ ಈ ವಾಚ್ ಜಿ-ಸೆನ್ಸರ್, ಡಯಲ್ ಪ್ಯಾಡ್ ಮತ್ತು ಸಂದೇಶ ಕಳುಹಿಸುವಿಕೆ ಮತ್ತು ಸಾಮಾಜಿಕ ಮಾಧ್ಯಮಕ್ಕಾಗಿ ಇನ್‌ಬಿಲ್ಟ್ ಆಪ್‌ ಗಳನ್ನೂ ಸಹ ಈ ವಾಚ್‌ ಹೊಂದಿದೆ. ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ ಆಯ್ಕೆ ಇದರಲ್ಲಿದ್ದು, ಈ ಮೂಲಕ ನಿಮ್ಮಿಷ್ಟದ ರೀತಿಯಲ್ಲಿ ವಾಚ್‌ ಅನ್ನು ಹೊಂದಿಸಿಕೊಳ್ಳಬಹುದು.

ಈ ಸ್ಮಾರ್ಟ್‌ವಾಚ್‌ ಹವಾಮಾನ ಮುನ್ಸೂಚನೆಗಳು, ರಿಮೋಟ್ ಕಂಟ್ರೋಲ್‌ಗಳು ಆಯ್ಕೆಯನ್ನೂ ಸಹ ನೀಡಲಾಗಿದೆ. ಇದರೊಂದಿಗೆ ಆರೋಗ್ಯ ವಿಚಾರಕ್ಕೆ ಸಂಬಂಧಪಟ್ಟಂತೆ SpO2, ಹೃದಯ ಬಡಿತ, ಸ್ಟೆಪ್ಸ್‌ ಎಣಿಕೆ, ಮೈಲೇಜ್ ಟ್ರ್ಯಾಕಿಂಗ್, ಸ್ಲೀಪ್ ಟ್ರ್ಯಾಕಿಂಗ್, ಸೆಡೆಂಟರಿ ರಿಮೈಂಡರ್ ಸೇರಿದಂತೆ ಹಲವಾರು ಆರೋಗ್ಯ ಸಂಬಂಧಿ ಫೀಚರ್ಸ್‌ ಇದ್ದು,
ಎಚ್ಚರಿಕೆಗಳು ಹಾಗೂ ನೋಟಿಫಿಕೇಶನ್‌ ಆಯ್ಕೆಯನ್ನೂ ಸಹ ಈ ವಾಚ್‌ ಹೊಂದಿದೆ.

ಹೆಚ್ಚುವರಿಯಾಗಿ ಈ ವಾಚ್‌ ಬ್ಲೂಟೂತ್ ಆವೃತ್ತಿ v5.0 ನಲ್ಲಿ ಕಾರ್ಯನಿರ್ವಹಿಸಲಿದ್ದು, ಫಿಟ್‌ಕ್ಲೌಡ್‌ಪ್ರೊ (FitCloudPro) ಆಪ್‌ಗೆ ಬೆಂಬಲ ನೀಡಲಿದೆ. ಇದರೊಂದಿಗೆ IP68 ರೇಟಿಂಗ್‌ ಹೊಂದಿದ್ದು, ನೀರು ಹಾಗೂ ಬೆವರಿನಿಂದ ರಕ್ಷಣೆ ಪಡೆದುಕೊಳ್ಳಲಿದೆ. ಈ ಮೂಲಕ ನೀವು ವಾಚ್‌ ಅನ್ನು ಹೊರಾಂಗಣ ಹಾಗೂ ಹೊರಾಂಗಣದಲ್ಲಿ ಬಳಕೆ ಮಾಡಬಹುದಾಗಿದೆ. ಹಾಗೆಯೇ ಆಂಡ್ರಾಯ್ಡ್‌ 4.4+ ಮತ್ತು ಐಓಎಸ್‌ 9.0+ ಗೆ ಬೆಂಬಲ ನೀಡಲಿದೆ.

ಬೋಸ್ಟನ್ ಲೆವಿನ್ ಇನ್ಫಿನಿಟಿ ಬ್ಯಾಟರಿ ಸಾಮರ್ಥ್ಯ: ಈ ಹೊಸ ಸ್ಮಾರ್ಟ್‌ವಾಚ್‌ ಅನ್ನು ನೀವು ಒಂದು ಬಾರಿಗೆ ಪೂರ್ಣವಾಗಿ ಚಾರ್ಜಿಂಗ್‌ ಮಾಡಿದ್ರೆ 5 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ 30 ದಿನಗಳವರೆಗೆ ಸ್ಟ್ಯಾಂಡ್‌ಬೈ ನೀಡಲಿದೆ ಎಂದು ಕಂಪೆನಿ ತಿಳಿಸಿದೆ. ಈ ಸ್ಮಾರ್ಟ್‌ವಾಚ್‌ ಚಾರ್ಜ್‌ 2 ಗಂಟೆ ಸಮಯ ತೆಗೆದುಕೊಳ್ಳಲಿದೆ. ಇದರೊಂದಿಗೆ ಈ ವಾಚ್‌ 39 ಗ್ರಾಂ ತೂಕ ಹೊಂದಿದೆ.

ಬೋಸ್ಟನ್ ಲೆವಿನ್ ಇನ್ಫಿನಿಟಿ ಸ್ಮಾರ್ಟ್‌ವಾಚ್‌ ಲಾಂಚ್‌; ಅಮೋಲೆಡ್‌ ಡಿಸ್ಪ್ಲೇ...

ಬೋಸ್ಟನ್ ಲೆವಿನ್ ಇನ್ಫಿನಿಟಿ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ ಅನ್ನು 1,799ರೂ.ಗಳ ಬೆಲೆಗೆ ಪರಿಚಯಿಸಲಾಗಿದೆ. ಇದನ್ನು ಖರೀದಿ ಮಾಡಲು ನೀವು ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ಗೆ (Amazon) ಭೇಟಿ ನೀಡಿ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಮೂರು ಬಣ್ಣಗಳಲ್ಲಿ ಕಂಡು ಬಂದಿದೆ. ಅಂದರೆ ರೋಸ್ ಗೋಲ್ಡ್, ಕಪ್ಪು ಮತ್ತು ಬೂದು ಬಣ್ಣದಲ್ಲಿ ಈ ವಾಚ್‌ ಕಾಣಿಸಿಕೊಂಡಿದೆ.

Best Mobiles in India

English summary
Boston Levin Infinity smartwatch has been launched with a square dial option as well as a skin-friendly silicone strap option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+