Earbuds: ಬೋಸ್ಟನ್ ಲೆವಿನ್ ಸ್ಟಾರ್ಮ್ 9 ಇಯರ್‌ಬಡ್ಸ್ ಲಾಂಚ್! ಫೀಚರ್ಸ್ ಏನಿವೆ? ಬೆಲೆ ಎಷ್ಟು?
ಬೋಸ್ಟನ್ ಲೆವಿನ್ (Boston Levin) ಈಗಾಗಲೇ ಸಾಕಷ್ಟು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗಳಿಗೆ ಪರಿಚಯಿಸುವ ಮೂಲಕ ತನ್ನದೇ ಆದ ರೀತಿಯಲ್ಲಿ ಸ್ಮಾರ್ಟ್ ಡಿವೈಸ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿದೆ. ಈ ನಡುವೆ ಬೋಸ್ಟನ್ ಲೆವಿನ್ ಹೊಸ TWS ಇಯರ್‌ಬಡ್ಸ್ ಅನ್ನು ಲಾಂಚ್ ಮಾಡಿದೆ.
ಹೌದು, ಬೋಸ್ಟನ್ ಲೆವಿನ್ ಇದೀಗ ಹೊಸ TWS ಇಯರ್‌ಬಡ್ಸ್ ಅನ್ನು ಲಾಂಚ್ ಮಾಡಲಾಗಿದೆ. ಇದಕ್ಕೆ ಬೋಸ್ಟನ್ ಲೆವಿನ್ ಸ್ಟಾರ್ಮ್ 9 (Boston Levin Storm 9 TWS earbuds) ಎಂದು ಹೆಸರಿಸಲಾಗಿದ್ದು, ಹಗುರವಾದ ಮತ್ತು ಬಾಳಿಕೆ ಬರುವ ಕೇಸ್‌ನೊಂದಿಗೆ ಪ್ಯಾಕ್ ಆಗಿದೆ. ಅಷ್ಟೇ ಅಲ್ಲದೆ ಬ್ಯಾಟರಿ ಶೇಕಡಾವಾರು ತೋರಿಸಲು ಎಲ್‌ಸಿಡಿ ಡಿಜಿಟಲ್ ಡಿಸ್‌ಪ್ಲೇ ಆಯ್ಕೆಯನ್ನೂ ಸಹ ನೋಡಬಹುದು. ಹಾಗಿದ್ರೆ, ಈ ಇಯರ್‌ಬಡ್ಸ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರದ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ಬೋಸ್ಟನ್ ಲೆವಿನ್ ಸ್ಟಾರ್ಮ್ 9 ಫೀಚರ್ಸ್: ಈ ಈ ಇಯರ್‌ಬಡ್ಸ್ ಹಿತಕರವಾದ ವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಕೊಳ್ಳಲಿವೆ. ಅದರಲ್ಲೂ ಚರ್ಮ ಸ್ನೇಹಿ ಸಿಲಿಕೋನ್ ಫಿನಿಶ್ ಹೊಂದಿದ್ದು, ಇದರಿಂದ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಂದರೆ ಇಯರ್‌ಬಡ್‌ಗಳು ನಿಮ್ಮ ಕಿವಿಗೆ ಆರಾಮವಾಗಿ ಹೊಂದಿಕೊಳ್ಳುತ್ತವೆ. ಜೊತೆಗೆ ನೀವು ಯಾವುದೇ ಸಮಸ್ಯೆ ಇಲ್ಲದೆ ದಿನವಿಡೀ ಅವುಗಳನ್ನು ಧರಿಸಿಕೊಂಡು ಸಂಗೀತ ಆಲಿಸಬಹುದಾಗಿದೆ.
ಈ ಇಯರ್‌ಬಡ್ಸ್ 13mm ಸ್ಪೀಕರ್ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರು ಉತ್ತಮವಾದ ಬೇಸ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಡಿಜಿಟಲ್ ಡಿಸ್‌ಪ್ಲೇ ಕೇಸ್ ಆಯ್ಕೆ ಇದ್ದು, ಇದರಲ್ಲಿ ಚಾರ್ಜಿಂಗ್ ಎಷ್ಟಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡಲಿದೆ. ಹಾಗೆಯೇ ನಿಮ್ಮ ಡಿವೈಸ್‌ಗಳಿಗೆ ಸಂಪರ್ಕಿಸಲು ಬ್ಲೂಟೂತ್ ಆವೃತ್ತಿ v5.2 ಆಯ್ಕೆ ನೀಡಲಾಗಿದೆ.

ಇಷ್ಟೇ ಅಲ್ಲದೆ ಇಯರ್‌ಬಡ್ಸ್ ಟಚ್ ಕಂಟ್ರೋಲ್ ಆಯ್ಕೆ ಪಡೆದಿದ್ದು, ಈ ಮೂಲಕ ಕರೆಗಳು, ಮ್ಯೂಸಿಕ್ ಮತ್ತು ನಿಮ್ಮ ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅದರಂತೆ ಇನ್‌ಬಿಲ್ಟ್ ಮೈಕ್ರೊಫೋನ್ ಆಯ್ಕೆ ಇದ್ದು, ಕರೆ ಸಂದರ್ಭದಲ್ಲಿ ಯಾವುದೇ ಗೊಂದಲ ಇಲ್ಲದ ವಾಯ್ಸ್ ಅನ್ನು ಈ ಮೂಲಕ ಆಲಿಸಿಕೊಳ್ಳಬಹುದು ಮತ್ತು ಬಹು ಕಾರ್ಯಗಳಿಗಾಗಿ ಬಟನ್ ಕಂಟ್ರೋಲ್ ಅನ್ನು ಸಹ ಈ ಇಯರ್‌ಬಡ್ಸ್ ಹೊಂದಿದೆ.
ಬೋಸ್ಟನ್ ಲೆವಿನ್ ಸ್ಟಾರ್ಮ್ 9 ಬ್ಯಾಟರಿ ಹಾಗೂ ಇತರೆ: ಈ ಇಯರ್‌ಬಡ್ಸ್ ಅನ್ನು ಒಂದು ಬಾರಿ ಪೂರ್ಣವಾಗಿ ಚಾರ್ಜಿಂಗ್ ಮಾಡಿದ್ರೆ ಬರೋಬ್ಬರಿ ಏಳು ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಜೊತೆಗೆ ಈ ಇಯರ್‌ಬಡ್ಸ್ ನೀರು ಮತ್ತು ಬೆವರುವಿಕೆಯಿಂದ ಮುಕ್ತಿ ಪಡೆಯಲು IPX5 ರೇಟಿಂಗ್ ಅನ್ನು ಹೊಂದಿದೆ. ಅಂದರೆ ನೀವು ಈ ಡಿವೈಸ್ ಅನ್ನು ವ್ಯಾಯಾಮದ ಸಮಯದಲ್ಲಿ ಅಥವಾ ಮಳೆಯಲ್ಲಿಯೂ ಸಹ ಬಳಕೆ ಮಾಡಬಹುದಾಗಿದೆ. ಇದೆಲ್ಲವನ್ನೂ ಒಳಗೊಂಡಂತೆ 110g ತೂಕವನ್ನು ಹೊಂದಿದೆ.
ಈ ಸಂಬಂಧ ಉದ್ಘಾಟನಾ ಸಮಾರಂಭದಲ್ಲಿ ಬೋಸ್ಟನ್ ಲೆವಿನ್‌ನ ಸಿಇಒ ಉದಿತ್ ಅಗರ್ವಾಲ್ ಮಾತನಾಡಿ, ನಯವಾದ, ದೃಢವಾದ ವಿನ್ಯಾಸವನ್ನು ಹೊಂದಿರುವ, ಸ್ಟಾರ್ಮ್ 9 ಇಯರ್‌ಬಡ್ಸ್ ಐಷಾರಾಮಿ ವಾಯ್ಸ್ ಗುಣಮಟ್ಟ ಮತ್ತು ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ಜೊತೆಗೆ ಸಂಚಾರ ಮಾಡುವವರಿಗೆ ಆದರ್ಶ ಆಡಿಯೊ ಪಾರ್ಟನರ್ ಆಗಿ ಸೇವೆ ನೀಡಲಿದೆ. ಅಷ್ಟೇ ಅಲ್ಲದೆ ನಿರಂತರ ರೀಚಾರ್ಜ್ ಅಗತ್ಯವಿಲ್ಲದೇ ಉತ್ತಮ ಮನರಂಜನೆ ಪಡೆಯಬಹುದು ಎಂದು ಹೇಳಿದ್ದಾರೆ.

ಬೋಸ್ಟನ್ ಲೆವಿನ್ ಸ್ಟಾರ್ಮ್ 9 ಬೆಲೆ ಹಾಗೂ ಲಭ್ಯತೆ: ಈ ಇಯರ್‌ಬಡ್ಸ್ ವಿಶೇಷ ಲಾಂಚ್ ಬೆಲೆ 999ರೂ.ಗಳಾಗಿದೆ. ಇದನ್ನು ಎರಡು ಬಣ್ಣಗಳಲ್ಲಿ ಅಂದರೆ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಯಲ್ಲಿ ಪರಿಚಯಿಸಲಾಗಿದ್ದು, ನೀವು ಇದನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೂ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








