ಬೌಲ್ಟ್ ಕ್ರಾಫ್ಟ್ ಸ್ಮಾರ್ಟ್‌ವಾಚ್ ಲಾಂಚ್; ಅತ್ಯಾಕರ್ಷಕ ಶೈಲಿ, ಅಗ್ಗದ ಬೆಲೆ!
ಸ್ಮಾರ್ಟ್‌ವಾಚ್‌ಗಳು ಇಂದು ಸುಧಾರಿತ ಫೀಚರ್ಸ್‌ನೊಂದಿಗೆ ಬಳಕೆದಾರರಿಗೆ ವಿಭಿನ್ನ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾ ಬರುತ್ತಿವೆ. ಅದರಂತೆ ಸ್ಮಾರ್ಟ್‌ವಾಚ್ ತಯಾರಿಕಾ ಕಂಪೆನಿಗಳು ಆಗಾಗ್ಗೆ ಹೊಸ ಹೊಸ ವಿಶೇಷ ಶೈಲಿಯ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಬೌಲ್ಟ್(Boult) ಸಹ ಆಕರ್ಷಕ ವಾಚ್ ಅನ್ನು ಲಾಂಚ್ ಮಾಡುವ ಮೂಲಕ ಭಾರೀ ಸದ್ದು ಮಾಡುತ್ತಿದೆ.
ಹೌದು, ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ರೀತಿಯ ಸ್ಮಾರ್ಟ್‌ವಾಚ್‌ಗಳು (Smartwatch) ಲಭ್ಯ ಇದ್ದು, ಈ ಸಾಲಿಗೆ ಈಗ ಹೊಸದಾಗಿ ಬೌಲ್ಟ್ ಆಡಿಯೋ ಕ್ರಾಫ್ಟ್ ಬ್ಲೂಟೂತ್ ಕಾಲಿಂಗ್ ವಾಚ್ (Boult Craft smartwatch) ಸೇರಿಕೊಳ್ಳಲಿದೆ. ಈ ಸ್ಮಾರ್ಟ್‌ವಾಚ್ 1.83 ಡಿಸ್ಪ್ಲೇಯೊಂದಿಗೆ ಬ್ಲೂಟೂತ್ ಕಾಲ್ ಸೌಲಭ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೆ ಕೈಗೆಟಕುವ ದರದಲ್ಲಿ ಈ ವಾಚ್ ಲಭ್ಯ, ಹಾಗಿದ್ರೆ ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಬೌಲ್ಟ್ ಆಡಿಯೋ ಕ್ರಾಫ್ಟ್ ಬ್ಲೂಟೂತ್ ಕಾಲಿಂಗ್ ವಾಚ್: ಈ ತಿಂಗಳ ಆರಂಭದಲ್ಲಿ ಬೌಲ್ಟ್ ಸ್ಟರ್ಲಿಂಗ್ ಪ್ರೊ (Boult Sterling Pro) ಅನ್ನು ಲಾಂಚ್ ಮಾಡಿದ ನಂತರ ಈಗ ಈ ವಾಚ್ ಅನ್ನು ಅನಾವರಣ ಮಾಡಲಾಗಿದೆ.ಇದು ಹಗುರವಾದ ಪಾಲಿಕಾರ್ಬೊನೇಟ್ ಚೌಕಟ್ಟಿನಲ್ಲಿ ಇರಿಸಲಾಗಿರುವ ಚದರ-ಡಯಲ್ ಅನ್ನು ಹೊಂದಿದ್ದು, ಬದಿಯಲ್ಲಿ ನರ್ಲ್ಡ್ ವಿನ್ಯಾಸವನ್ನು ಪಡೆದಿದೆ. ಇದರೊಂದಿಗೆ ಹಲವು ಬಣ್ಣದ ಪಟ್ಟಿಯ ಆಯ್ಕೆಗಳನ್ನು ಸಹ ಈ ವಾಚ್ ಪಡೆದುಕೊಂಡಿದೆ.
ಈ ಸ್ಮಾರ್ಟ್‌ವಾಚ್ 1.83 ಇಂಚಿನ ಆಲ್‌ವೇಸ್ ಆನ್ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 240 x 284 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಅಷ್ಟೇ ಅಲ್ಲದೆ ಇದು ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ಸ್ಮಾರ್ಟ್‌ಫೋನ್ ಓಪನ್ ಮಾಡದೆಯೇ ಕರೆಯಲ್ಲಿ ತೊಡಗಿಕೊಳ್ಳಬಹುದು.
ಇದರೊಂದಿಗೆ ವಾಯ್ಸ್ ಅಸಿಸ್ಟೆಂಟ್ ಆಯ್ಕೆಯೂ ಸಹ ಇರುವುದರಿಂದ ನೀವು ಈ ವಾಚ್ ಅನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದಾಗಿದೆ. ಜೊತೆಗೆ ಸ್ಮಾರ್ಟ್ ವಾಚ್ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ ಮತ್ತು ರಕ್ತದೊತ್ತಡ ಟ್ರ್ಯಾಕಿಂಗ್ ಸೇರಿದಂತೆ ಅನೇಕ ಆರೋಗ್ಯ ಸಂಬಂಧಿ ವಿಷಯಗಳನ್ನು ಈ ವಾಚ್ ಮೇಲ್ವಿಚಾರಣೆ ಮಾಡಲಿದೆ.
ಈ ಬೌಲ್ಟ್ ಕ್ರಾಫ್ಟ್ 100+ ಸ್ಪೋರ್ಟ್ಸ್ ಮೋಡ್, ಸ್ಮಾರ್ಟ್ ನೋಟಿಫಿಕೇಶನ್ ಬೆಂಬಲ ಪಡೆದಿದ್ದು, ಈ ವಾಚ್ ಅನ್ನು ನೀವು ಯಾವುದೇ ಬಿಸಿಲು, ಬಿರುಗಾಳಿ ಅಥವಾ ಎಂತಹುದೇ ಪರಿಸ್ಥಿತಿಯಲ್ಲಿಯೂ ಬಳಕೆ ಮಾಡಬಹುದು. ಯಾಕೆಂದರೆ ಇದು IP68 ರೇಟಿಂಗ್ ಪಡೆದಿದೆ. ಹಾಗೆಯೇ ಬ್ಲೂಟೂತ್ ಆವೃತ್ತಿ 5.3 ಅನ್ನು ನೀಡಲಾಗಿದ್ದು, ಇದು ಸುಲಭ ಕನೆಕ್ಟಿವಿಟಿಗೆ ಅನುಕೂಲ ಮಾಡಿಕೊಡುತ್ತದೆ.
ಇದಿಷ್ಟೇ ಅಲ್ಲದೆ ಕೆಲವು ಆಕರ್ಷಕ ಫೀಚರ್ಸ್ ಸಹ ಈ ವಾಚ್‌ನಲ್ಲಿದೆ. ಅಂದರೆ ಕುಳಿತುಕೊಳ್ಳುವ ಜ್ಞಾಪನೆಗಳು, ಕುಡಿಯುವ ನೀರಿನ ಜ್ಞಾಪನೆಗಳು, ಹವಾಮಾನ ವಿವರಗಳು, ಫೋನ್ ಫೈಂಡ್ ಸೇರಿದಂತೆ ಅನೇಕಲ ಫೀಚರ್ಸ್ ಈ ವಾಚ್‌ನಲ್ಲಿ ಇದ್ದು, ಇದು ನಿಮ್ಮ ಕೈನಲ್ಲಿ ಇದ್ದರೆ ನೀವು ಸ್ಮಾರ್ಟ್‌ಫೋನ್ ಕಡೆ ಕಣ್ಣನ್ನೇ ಆಯಿಸುವುದಿಲ್ಲವೇನೋ. ಪ್ರಮುಖವಾಗಿ ಈ ವಾಚ್ ತೂಕ ಕೇವಲ 36.5 ಗ್ರಾಂ ಇದ್ದು, ನಿಮ್ಮ ಕೈಮೇಲೆ ಇದೆಯೋ ಇಲ್ಲವೋ ಎಂಬಂತೆ ಭಾಸವಾಗುತ್ತದೆ. ಇದೆಲ್ಲದಕ್ಕೂ ಮಿಗಿಲಾಗಿ ಈ ಸ್ಮಾರ್ಟ್‌ವಾಚ್ 7 ದಿನಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ.

ಬೌಲ್ಟ್ ಆಡಿಯೋ ಕ್ರಾಫ್ಟ್ ಬ್ಲೂಟೂತ್ ಕಾಲಿಂಗ್ ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್‌ನ ಪ್ರಮುಖ ವಿಷಯಕ್ಕೆ ಬರುವುದಾದರೆ ನೀವು ಇದನ್ನು ಕೇವಲ 1,199 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಪರಿಚಯಾತ್ಮಕ ಬೆಲೆಯಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಏರಿಳಿತ ಆಗಬಹುದು. ಹಾಗೆಯೇ ಈ ವಾಚ್ ಬ್ಲೂ, ಗ್ರೇಪ್ ಪರ್ಪಲ್, ಸ್ಮೋಕಿ ವೈಟ್ ಮತ್ತು ಟಾರ್ಮ್ಯಾಕ್ ಕಪ್ಪು ಬಣ್ಣಗಳಲ್ಲಿ ಬರುತ್ತದೆ. ಇದನ್ನು ನೀವು ಕಂಪನಿಯ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ಖರೀದಿ ಮಾಡಬಹುದು.


Click it and Unblock the Notifications








