Home
ಸುದ್ದಿಜಾಲ

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ 'ಕಾರ ಡ್ಯಾಶ್‌ಬೋರ್ಡ್' ಕ್ಯಾಮೆರಾ; ಬೆಲೆ ಅಗ್ಗ, ಮಸ್ತ್‌ ಫೀಚರ್ಸ್‌!

ಬೌಲ್ಟ್ (BOULT) ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಕಾರ ಡ್ಯಾಶ್‌ ಬೋರ್ಡ್‌ ಕ್ಯಾಮೆರಾ ಬಿಡುಗಡೆ ಮಾಡಿದ್ದು, ಅದುವೇ ಬೌಲ್ಟ್ ಕ್ರೂಸ್‌ಕ್ಯಾಮ್ X1 ಮತ್ತು X1 GPS (BOULT CruiseCam X1 and X1 GPS) ಆಗಿದೆ. ಈ ಮೂಲಕ ತನ್ನ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಣೆ ಮಾಡಿದೆ. ಬೌಲ್ಟ್ ಕ್ರೂಸ್‌ಕ್ಯಾಮ್ X1 ಸರಣಿಯು 1080p ಫುಲ್‌ ಹೆಚ್‌ಡಿ ರೆಸಲ್ಯೂಶನ್ ಪಡೆದಿದ್ದು, ರಸ್ತೆಯ ವಿಡಿಯೋಗಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಅಲ್ಲದೇ ಈ ಡಿವೈಸ್‌ನ ರಚನೆಯೂ ಸಹ ಆಕರ್ಷಕ ಎನಿಸುವಂತಿದೆ.

ಹೌದು, ಜನಪ್ರಿಯ ಬೌಲ್ಟ್ (BOULT) ಸಂಸ್ಥೆಯು ನೂತನವಾಗಿ ಬೌಲ್ಟ್ ಕ್ರೂಸ್‌ಕ್ಯಾಮ್ X1 ಮತ್ತು X1 GPS ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅವುಗಳ ಪೈಕಿ ಬೌಲ್ಟ್ ಕ್ರೂಸ್‌ಕ್ಯಾಮ್ X1 ಕಾರ ಡ್ಯಾಶ್‌ ಬೋರ್ಡ್‌ ಕ್ಯಾಮೆರಾ ಆಗಿದ್ದು, ಈ ಡಿವೈಸ್‌ 360 ಡಿಗ್ರಿ ತಿರುಗುವ ರಚನೆ ಅನ್ನು ಪಡೆದಿದೆ. ಇನ್ನು ಬೌಲ್ಟ್ ಕ್ರೂಸ್‌ಕ್ಯಾಮ್ X1 GPS ಡಿವೈಸ್‌ ಜಿಪಿಎಸ್‌ ವ್ಯವಸ್ಥೆ ಆಗಿದ್ದು, ಇದು ವಾಹನದ ರಿಯಲ್‌ ಟೈಮ್‌ ಟ್ರ್ಯಾಕಿಂಗ್‌ ಹಾಗೂ ಸ್ಪೀಡ್‌ ಮಾಹಿತಿ ಒಳಗೊಂಡಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ 'ಕಾರ ಡ್ಯಾಶ್‌ಬೋರ್ಡ್' ಕ್ಯಾಮೆರಾ; ಬೆಲೆ?

ಈ ಡಿವೈಸ್‌ ಅಲ್ಯುಮಿನಿಯಂ ರಚನೆಯನ್ನು ಪಡೆದಿದ್ದು, ಇದು 170 ಡಿಗ್ರಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಸೌಲಭ್ಯ ಪಡೆದಿದೆ. ಅಂದಹಾಗೆ ಬೌಲ್ಟ್ ಕ್ರೂಸ್‌ಕ್ಯಾಮ್ X1 ಡಿವೈಸ್‌ 5,999 ರೂ. ಗಳ ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಆರಂಭಿಕ ಕೊಡುಗೆಯಾಗಿ 2,999 ರೂ. ಗಳಿಗೆ ಲಭ್ಯ. ಹಾಗೆಯೇ ಬೌಲ್ಟ್ ಕ್ರೂಸ್‌ಕ್ಯಾಮ್ X1 GPS ಡಿವೈಸ್‌ 3,999ರೂ. ಗಳ ಲಾಂಚ್‌ ಆಫರ್‌ ದರದಲ್ಲಿ ಖರೀದಿಗೆ ಸಿಗಲಿದೆ. ಹಾಗಾದರೇ ಈ ಹೊಸ ಡಿವೈಸ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬೌಲ್ಟ್ ಕ್ರೂಸ್‌ಕ್ಯಾಮ್ X1 - ಫೀಚರ್ಸ್‌

ಬೌಲ್ಟ್ ಕ್ರೂಸ್‌ಕ್ಯಾಮ್ X1 ಡಿವೈಸ್‌ ಕಾರ ಡ್ಯಾಶ್‌ಬೋರ್ಡ್ ಕ್ಯಾಮೆರಾವು ಅಪಘಾತಗಳ ಮೇಲೆ ತುರ್ತು ವೀಡಿಯೊ ರೆಕಾರ್ಡಿಂಗ್‌ಗೆ ಅನುಕೂಲ ಎನಿಸುತ್ತದೆ. ಇದು ಪ್ರತ್ಯೇಕ ಆಪ್‌ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವೈ ಫೈ ಮೂಲಕ ಸ್ಮಾರ್ಟ್‌ಫೋನ್‌ಗಳಿಗೆ ಕನೆಕ್ಟಿವಿಟಿ, ವೀಡಿಯೊ ಗ್ಯಾಲರಿ, ವೈಫೈ ಲೈವ್‌ ಸ್ಟ್ರೀಮಿಂಗ್ ಮತ್ತು ನಿರಂತರ ಸಂಪರ್ಕ ಮತ್ತು ನಿಯಂತ್ರಣಕ್ಕಾಗಿ ರೆಕಾರ್ಡ್ ಮಾಡಿದ ವಿಡಿಯೋಗಳಿಗೆ ಕ್ವಿಕ್‌ ಆಕ್ಸಸ್‌ ಲಭ್ಯ.

ಈ ಡಿವೈಸ್‌ ದೀರ್ಘ ಬಾಳಿಕೆ ಬರುವ ಅಲ್ಯೂಮಿನಿಯಂ ಮಿಶ್ರಲೋಹ ರಚನೆ ಪಡೆದಿದ್ದು, ಇದರೊಂದಿಗೆ ಬಿಲ್ಟ್‌ಇನ್‌ 5G ಸೆನ್ಸಾರ್‌ನ ಮೂಲಕ ಆಕ್ಸಿಡೆಂಟ್ ( collision ) ಪತ್ತೆಹಚ್ಚುವಿಕೆ ಯೊಂದಿಗೆ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಇನ್ನು ಈ ಸಾಧನವು ಲಿಥಿಯಂ ಬ್ಯಾಟರಿಗಳ ಬದಲಿಗೆ ಸೂಪರ್ ಕೆಪಾಸಿಟರ್ ಅನ್ನು ಬಳಸುತ್ತದೆ, ತೀವ್ರ ತಾಪಮಾನದಲ್ಲಿ ಬಾಳಿಕೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಬೆಲೆ ಮಾಹಿತಿ ಮತ್ತು ಲಭ್ಯತೆ

ಬೌಲ್ಟ್ ಕ್ರೂಸ್‌ಕ್ಯಾಮ್ X1 ಡಿವೈಸ್‌ 5,999 ರೂ. ಗಳ ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಆರಂಭಿಕ ಕೊಡುಗೆಯಾಗಿ 2,999 ರೂ. ಗಳಿಗೆ ಲಭ್ಯ. ಹಾಗೆಯೇ ಬೌಲ್ಟ್ ಕ್ರೂಸ್‌ಕ್ಯಾಮ್ X1 GPS ಡಿವೈಸ್‌ 6,999 ರೂ. ಗಳ ಪ್ರೈಸ್‌ ಟ್ಯಾಗ್‌ ಪಡೆದಿದ್ದು, ಆದರೆ ಲಾಂಚ್‌ ಆಫರ್‌ನಲ್ಲಿ ಈ ಡಿವೈಸ್‌ 3,999 ರೂ. ಗಳ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಅಂದಹಾಗೆ ಈ ಎರಡೂ ಹೊಸ ಡಿವೈಸ್‌ಗಳು Amazon.in Flipkart ಹಾಗೂ BOULTaudio.com ವೆಬ್‌ಸೈಟ್‌ನಲ್ಲಿ ಆಸಕ್ತ ಗ್ರಾಹಕರು ಖರೀದಿ ಮಾಡಬಹುದು.

Best Mobiles in India

English summary
BOULT CruiseCam X1 and X1 GPS Dashcams launched in India. check Offer Price, features and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+