ಬೌಲ್ಟ್ ಸ್ಟರ್ಲಿಂಗ್ ಸ್ಮಾರ್ಟ್‌ವಾಚ್ ಲಾಂಚ್; ಫೀಚರ್ಸ್ ಮಾತ್ರ ಮಸ್ತ್! ಬೆಲೆ ಇಷ್ಟೇ!
ಬೌಲ್ಟ್ (Boult) ತನ್ನದೇ ಆದ ಧರಿಸಬಹುದಾದ ಸ್ಮಾರ್ಟ್ ಡಿವೈಸ್‌ಗಳನ್ನು ಪರಿಚಯಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಈ ನಡುವೆ ಹೊಸ ಸ್ಮಾರ್ಟ್ ವಾಚ್ ಬೌಲ್ಟ್ ಸ್ಟರ್ಲಿಂಗ್ (Boult Sterling smartwatch) ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ವಾಚ್ ನಯವಾದ ವಿನ್ಯಾಸ, ಎಚ್‌ಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ.
ಹೌದು, ಬೌಲ್ಟ್ ಸ್ಮಾರ್ಟ್‌ವಾಚ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಬೌಲ್ಟ್ ಸ್ಟರ್ಲಿಂಗ್ ವಾಚ್ ಅನ್ನು ಅನಾವರಣ ಮಾಡಲಾಗಿದ್ದು, ಈ ವಾಚ್ ಬ್ಲೂಟೂತ್ ಕರೆ, ವಾಯ್ಸ್ ಅಸಿಸ್ಟೆಂಟ್, IP67 ನೀರಿನ ಪ್ರತಿರೋಧ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್ ಅನ್ನು ತನ್ನದಾಗಿಸಿಕೊಂಡಿದೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಬೌಲ್ಟ್ ಸ್ಟರ್ಲಿಂಗ್ ಡಿಸ್‌ಪ್ಲೇ ವಿವರ: ಈ ವಾಚ್ ವಿವಿಧ ಬಳಕೆದಾರರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಫೀಚರ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. ಅದರಂತೆ 360*360 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 700 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇರುವ 1.52 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆಯನ್ನು ಈ ವಾಚ್ ಹೊಂದಿದೆ. ಇದರೊಂದಿಗೆ ಉತ್ತಮ ಅನುಭವಕ್ಕಾಗಿ 60Hz ರಿಫ್ರೆಶ್ ರೇಟ್ ಆಯ್ಕೆಯನ್ನು ಈ ವಾಚ್‌ನಲ್ಲಿ ನೀಡಲಾಗಿದೆ.
ಬೌಲ್ಟ್ ಸ್ಟರ್ಲಿಂಗ್ ಫೀಚರ್ಸ್: ಇನ್ನು ಹಗುರವಾದ ವಿನ್ಯಾಸವನ್ನು ಹೊಂದಿರುವ ಈ ವಾಚ್ SpO2 ರಕ್ತದ ಆಮ್ಲಜನಕ ಮಾನಿಟರ್, ರಕ್ತದೊತ್ತಡ ಮಾನಿಟರ್ ಮತ್ತು ಹೃದಯ ಬಡಿತ ಮಾನಿಟರ್‌ನಂತಹ ಆರೋಗ್ಯ ಮೇಲ್ವಿಚಾರಣಾ ಸೌಲಬ್ಯಗಳನ್ನು ಹೊಂದಿದ್ದು, ಮಹಿಳಾ ಬಳಕೆದಾರರು ಈ ಸ್ಮಾರ್ಟ್‌ವಾಚ್‌ನೊಂದಿಗೆ ತಮ್ಮ ಋತುಚಕ್ರವನ್ನು ಟ್ರ್ಯಾಕ್ ಮಾಡಬಹುದಾಗಿದೆ. ಇದರ ಜೊತೆಗೆ, ನಿದ್ರೆಯ ಟ್ರ್ಯಾಕಿಂಗ್, ನೀರು ಕುಡಿಯುವ ಜ್ಞಾಪನೆ ಮತ್ತು ಕುಳಿತುಕೊಳ್ಳುವ ಜ್ಞಾಪನೆಯು ಈ ವಾಚ್‌ನ ಫೀಚರ್ಸ್‌ಗಳಲ್ಲಿ ಪ್ರಮುಖವಾಗಿವೆ.
ಅದರಲ್ಲೂ ಫಿಟ್ನೆಸ್ ಉತ್ಸಾಹಿಗಳಿಗೆ ಈ ಸ್ಟರ್ಲಿಂಗ್ ಸ್ಮಾರ್ಟ್‌ವಾಚ್ ಅತ್ಯುತ್ತಮ ಆಯ್ಕೆ ಎನ್ನಬಹುದು. ಇದು 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಆಯ್ಕೆ ಪಡೆದಿದ್ದು, 150+ ಕ್ಲೌಡ್-ಆಧಾರಿತ ವಾಚ್ ಫೇಸ್ ಅನ್ನು ಸಹ ನೀಡಲಿದೆ. ಇದರೊಂದಿಗೆ ಬಳಕೆದಾರರು ತಮ್ಮ ಶೈಲಿ ಮತ್ತು ಮನಸ್ಥಿತಿಗೆ ಅನುಗುಣವಾಗಿ ತಮ್ಮ ಡಿವೈಸ್ ಅನ್ನು ವೈಯಕ್ತೀಕರಿಸಲು ಅನುವು ಮಾಡಿಕೊಡುತ್ತದೆ.
ಇದರೊಂದಿಗೆ ಜ್ಞಾಪನೆಗಳು ಮತ್ತು ಸ್ಮಾರ್ಟ್ ಡಿವೈಸ್ ಕಂಟ್ರೋಲ್ ಹಾಗೂ ನೈಜ-ಸಮಯದ ಹವಾಮಾನ ನವೀಕರಣದ ಮಾಹಿತಿಯನ್ನು ಈ ವಾಚ್ ನೀಡಲಿದ್ದು, ಎಐ ವಾಯ್ಸ್ ಅಸಿಸ್ಟೆಂಟ್ ಮೂಲಕ ಹೆಚ್ಚು ಆಕರ್ಷಕವಾಗಿದೆ. ಇದರ ಜೊತೆಗೆ ಫೈಂಡ್ ಮೈ ಫೋನ್ ಫೀಚರ್ಸ್ ಆಯ್ಕೆ ಸಹ ಇದ್ದು ಗೇಮಿಂಗ್‌ಗಾಗಿ ನಾಲ್ಕು ಮಿನಿ ಗೇಮ್ ಆಯ್ಕೆಯನ್ನು ನೀಡಿರುವುದು ಈ ವಾಚ್‌ಗೆ ಇನ್ನಷ್ಟು ಮೆರಗು ನೀಡಲಿದೆ.
ಬೌಲ್ಟ್ ಸ್ಟರ್ಲಿಂಗ್ ಸ್ಮಾರ್ಟ್ ವಾಚ್ ಬೆಲೆ ಮತ್ತು ಲಭ್ಯತೆ: ಗ್ರಾಹಕರು ಈ ಸ್ಮಾರ್ಟ್ ವಾಚ್ 1,599ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದನ್ನು ಬೌಲ್ಟ್‌ನ ಅಧಿಕೃತ ವೆಬ್‌ಸೈಟ್ (www.boultaudio.com) ಹಾಗೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿಯೂ ಇದನ್ನು ಖರೀದಿ ಮಾಡಬಹುದು. ಬೌಲ್ಟ್ ಸ್ಟರ್ಲಿಂಗ್ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅಂದರೆ ಮಿಡ್ನೈಟ್ ಮರೈನ್, ಕಾರ್ಬನ್ ಕಾಪರ್ ಮತ್ತು ಸ್ಕಾರ್ಲೆಟ್ ಎಬೊನಿ ಬಣ್ಣದಲ್ಲಿ ಲಭ್ಯ.

ಈ ನಡುವೆ ಹ್ಯಾಮರ್ ಭಾರತದಲ್ಲಿ ಆಕ್ಟಿವ್ 3.0 ಯುನಿಸೆಕ್ಸ್ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ವಾಚ್ ಬ್ಲೂಟೂತ್ ಕರೆ ಮತ್ತು 5 ದಿನಗಳ ಬ್ಯಾಟರಿ ಅವಧಿಯೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ 1.39 ಇಂಚಿನ IPS ಡಿಸ್ಪ್ಲೇ, ಸತು ಮಿಶ್ರಲೋಹ ನಿರ್ಮಾಣ ಮತ್ತು ನ್ಯಾವಿಗೇಷನ್‌ಗಾಗಿ ಡಿಜಿಟಲ್ ಕ್ರೌನ್ ಬಟನ್ ಆಯ್ಕೆ ಹೊಂದಿದ್ದು, ಹೃದಯ ಬಡಿತ ಮಾನಿಟರಿಂಗ್‌ನಂತಹ ಆರೋಗ್ಯ ಮತ್ತು ಫಿಟ್‌ನೆಸ್ ಫೀಚರ್ಸ್ ಅನ್ನು ಈ ವಾಚ್ ಹೊಂದಿದೆ.


Click it and Unblock the Notifications








