ಫ್ಲಿಪ್‌ಕಾರ್ಟ್‌ನಲ್ಲಿ 'ಬೌನ್ಸ್‌ ಇನ್ಫಿನಿಟಿ ಇ1' ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಗೆ ಲಭ್ಯ!..ಬೆಲೆ ಎಷ್ಟಿದೆ?

|

ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಬೌನ್ಸ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ ಬೌನ್ಸ್ ಇನ್ಫಿನಿಟಿ ಇ1 (Bounce Infinity E1) ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ (Electric Scooter)‌ ಬುಕಿಂಗ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಸ್ಕೂಟರ್‌ ಮಾರಾಟವು ನಡೆಯುತ್ತಿದೆ. ಸ್ಕೂಟರ್, ಕಾರ ಅಥವಾ ಇತರೆ ವಾಹನಗಳ ಖರೀದಿ ಡೀಲರ್‌ಶಿಪ್‌ಗಳ ಮೂಲಕ ನಡೆಯುತ್ತದೆ. ಆದ್ರೆ, ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ನಡೆಯುತ್ತಿರುವುದು ಹೊಸ ಪರಿಕಲ್ಪನೆಯಾಗಿದೆ.

ಬ್ಯಾಟರಿ

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಬೌನ್ಸ್ ಇನ್ಫಿನಿಟಿ ಇ1 (Bounce Infinity E1) ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಬಹುದಾಗಿದೆ. ಇನ್ನು ಸಂಸ್ಥೆಯು ಈ ಸ್ಕೂಟರ್‌ ಅನ್ನು ಬ್ಯಾಟರಿ ಸಹಿತ ಮತ್ತು ಬ್ಯಾಟರಿ ರಹಿತವಾಗಿ ಖರೀದಿಸಲು ಅವಕಾಶ ನೀಡಿದೆ. ಆನ್‌ಲೈನ್‌ ತಾಣದ ಮೂಲಕ ಖರೀದಿ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಹಾಗೂ ಈ ಸ್ಕೂಟರ್‌ನ ಫೀಚರ್ಸ್‌ಗಳೆನು? ಬೆಲೆ ಎಷ್ಟು? ಇತ್ಯಾದಿ ಮಾಹಿತಿಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಕೂಟರ್ ಲಭ್ಯತೆ

ಸ್ಕೂಟರ್ ಲಭ್ಯತೆ

ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆದಾಗ್ಯೂ, ಪ್ರಸ್ತುತ ಉತ್ಪನ್ನವು ಲಭ್ಯವಿಲ್ಲ ಎಂದು ತೋರಿಸುತ್ತಿದೆ. ಆರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ನವದೆಹಲಿ ಈ ಐದು ರಾಜ್ಯಗಳಲ್ಲಿ ಮಾತ್ರ ಲಭ್ಯವಿರುತ್ತದೆ ಎಂದು ಕಂಪನಿ ಘೋಷಿಸಿದೆ. ಜುಲೈ 22 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಸ್ಕೂಟರ್ ಮಾರಾಟವಾಗಲಿದೆ.

ಖರೀದಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಖರೀದಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಗ್ರಾಹಕರು ಆನ್‌ಲೈನ್‌ನಲ್ಲಿ ಯಾವುದಾದರೂ ಉತ್ಪನ್ನ ಖರೀದಿಸುವ ಮಾದರಿಯಲ್ಲಿಯೇ ಖರೀದಿಸಬಹುದು. ಆದಾಗ್ಯೂ, ಆಟೋಮೊಬೈಲ್ ಖರೀದಿಸುವಾಗ ಪಾವತಿ ವಿಧಾನ ಭಿನ್ನವಾಗಿರುತ್ತದೆ. ಎಕ್ಸ್‌-ಶೋರೂಮ್‌ ದರ ನೀಡಬೇಕು ಹಾಗೂ ಅದರೊಂದಿಗೆ ಗ್ರಾಹಕರು ನೋಂದಣಿ ಶುಲ್ಕಗಳು ಮತ್ತು ವಿಮೆ ಶುಲ್ಕ ಸಹ ನೀಡಬೇಕಿರುತ್ತದೆ.

ಸಂಪರ್ಕಿಸುತ್ತಾರೆ

ಖರೀದಿದಾರರು ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಸ್ಕೂಟರ್‌ನ ಎಕ್ಸ್ ಶೋ ರೂಂ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅದು ಮುಗಿದ ನಂತರ, ಬ್ರ್ಯಾಂಡ್‌ನ ಅಧಿಕೃತ ವಿತರಕರು ಖರೀದಿದಾರರನ್ನು ಸಂಪರ್ಕಿಸುತ್ತಾರೆ. ಅವರು RTO ನೋಂದಣಿ ಮತ್ತು ವಿಮೆಯೊಂದಿಗೆ ಖರೀದಿದಾರರಿಗೆ ಸಹಾಯ ಮಾಡುತ್ತಾರೆ. ಖರೀದಿದಾರನು ಅಧಿಕೃತ ಡೀಲರ್‌ಗೆ ಎಲ್ಲಾ ನೋಂದಣಿ, ವಿಮೆ ಮತ್ತು ಇತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

ಸ್ಕೂಟರ್‌ ಯಾವಾಗ ಸಿಗುತ್ತದೆ?

ಸ್ಕೂಟರ್‌ ಯಾವಾಗ ಸಿಗುತ್ತದೆ?

ಬೌನ್ಸ್ ಸಂಸ್ಥೆಯ ಪ್ರಕಾರ, ಗ್ರಾಹಕರು ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಬುಕಿಂಗ್ ಮಾಡಿದ 15 ದಿನಗಳ ನಂತರ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಆಯಾ ಮಾಲೀಕರಿಗೆ ತಲುಪಿಸಲಾಗುತ್ತದೆ.

ಈ ಸ್ಕೂಟರ್‌ ಬೆಲೆ ಎಷ್ಟು?

ಈ ಸ್ಕೂಟರ್‌ ಬೆಲೆ ಎಷ್ಟು?

ಬೌನ್ಸ್ ಇನ್ಫಿನಿಟಿ ಇ1 ಸ್ಕೂಟರ್‌ ಬೆಲೆಯು 79,999 (ಎಕ್ಸ್-ಶೋ ರೂಂ) ಆಗಿದೆ. ಇನ್ನು ಈ ಸ್ಕೂಟರ್ ಸ್ಪೋರ್ಟಿ ರೆಡ್, ಸ್ಪಾರ್ಕಲ್ ಬ್ಲ್ಯಾಕ್, ಪರ್ಲ್ ವೈಟ್, ಡೆಸಾಟ್ ಸಿಲ್ವರ್ ಮತ್ತು ಕಾಮೆಟ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 3 ವರ್ಷ/ 50,000 ಕಿಮೀ ವಾರಂಟಿ ಪಡೆದಿದೆ.

ಟಿವಿಎಸ್‌ ಐಕ್ಯೂಬ್‌ (TVS iQube)

ಟಿವಿಎಸ್‌ ಐಕ್ಯೂಬ್‌ (TVS iQube)

ಟಿವಿಎಸ್‌ ಸಂಸ್ಥೆಯು ಟಿವಿಎಸ್‌ ಐಕ್ಯೂಬ್‌ (TVS iQube) ಹೆಸರಿನ ಎಲೆಕ್ಟ್ರಿಕ್ ಅನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಈ ಇ-ಸ್ಕೂಟರ್ LED ಹೆಡ್‌ಲ್ಯಾಂಪ್‌ಗಳು, ದೊಡ್ಡ ಸ್ಟೋರೇಜ್‌ ಸ್ಥಳ ಮತ್ತು ಬೆಳಕಿನೊಂದಿಗೆ ಬೂಟ್ ಸ್ಪೇಸ್‌ನೊಳಗೆ USB ಪೋರ್ಟ್ ಅನ್ನು ಹೊಂದಿದೆ. ಇದು 4.4kW ಮೋಟಾರ್‌ನಿಂದ ಚಾಲಿತವಾಗಿದ್ದು, 75km ವ್ಯಾಪ್ತಿಯೊಂದಿಗೆ 78kmph ಗರಿಷ್ಠ ವೇಗವನ್ನು ನೀಡುತ್ತದೆ. ಸ್ಕೂಟರ್ 0 ರಿಂದ 40 ಕಿಮೀ ವೇಗವನ್ನು 4.2 ಸೆಕೆಂಡುಗಳಲ್ಲಿ ಪಡೆಯುತ್ತದೆ. 80% ಬ್ಯಾಟರಿ ಮಟ್ಟವನ್ನು ಚಾರ್ಜ್ ಮಾಡಲು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಅಥರ್ 450/ 450X

ಅಥರ್ 450/ 450X

ಅಥರ್ ಪ್ರಸ್ತುತ ದೇಶದಲ್ಲಿ EV ದ್ವಿಚಕ್ರ ವಾಹನ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಅಥರ್ ಸಂಸ್ಥೆಯ ಹೊಸ ಅಥರ್ 450 (Ather 450) ಮತ್ತು ಅಥರ್ 450X (Ather 450X) ಈ ಎರಡು ಸ್ಕೂಟರ್‌ಗಳು ಹಿಂದಿನ ಮಾದರಿಗಳಿಂದ ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಬರುತ್ತವೆ. ಅಥರ್ 450X ಇ-ಸ್ಕೂಟರ್ 2.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಕಾಂಪ್ಯಾಕ್ಟ್ ಮತ್ತು ನಯವಾದ ವಿನ್ಯಾಸವನ್ನು ಹೊಂದಿದೆ. ಇದು 116km ದೂರದ ವ್ಯಾಪ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಮತ್ತು 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಹಾಗೆಯೇ ಇದು ಗಂಟೆಗೆ 80 ಕಿಮೀ ವೇಗವನ್ನು ತಲುಪಬಹುದು.

ಹೀರೋ ಫೋಟಾನ್ (Hero Electric Photon Hx)

ಹೀರೋ ಫೋಟಾನ್ (Hero Electric Photon Hx)

ಹೀರೋ ಫೋಟಾನ್ HX 26Ah ಬ್ಯಾಟರಿ ಮತ್ತು ಕಾರ್ಯಕ್ಷಮತೆಗಾಗಿ 1.8kW ಮೋಟಾರ್ ಅನ್ನು ಒಳಗೊಂಡಿರುವ ಸಾಧಾರಣ ಫೀಚರ್ಸ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು 45kmph ಆಗಿದೆ ಮತ್ತು ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 108km ವ್ಯಾಪ್ತಿಯನ್ನು ನೀಡುತ್ತದೆ. ಫೋಟಾನ್ HX ನ ಬ್ಯಾಟರಿಯು 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಭಾರತೀಯ ರಸ್ತೆಗಳಲ್ಲಿ ಓಡಿಸಲು ಸ್ಕೂಟರ್ ಅನ್ನು ನೋಂದಾಯಿಸುವ ಅಗತ್ಯವಿದೆ. ಇದು ಕಪ್ಪು ಮತ್ತು ಚಿನ್ನದ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯ.

ಓಲಾ S1 ಮತ್ತು S1 ಪ್ರೊ (Ola)

ಓಲಾ S1 ಮತ್ತು S1 ಪ್ರೊ (Ola)

ಓಲಾ, ಭಾರತದ ಓಲಾ S1 ಮತ್ತು ಓಲಾ S1 ಪ್ರೊ ಹೆಸರಿನೊಂದಿಗೆ ತನ್ನದೇ ಆದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ. ಸ್ಟ್ಯಾಂಡರ್ಡ್ Ola S1 ಒಂದೇ ಚಾರ್ಜ್‌ನಲ್ಲಿ 121km ವರೆಗೆ ತೆಗೆದುಕೊಳ್ಳಬಹುದು ಆದರೆ ಓಲಾ S1 ಪ್ರೊ ಮಾದರಿಯು 181 km ಗರಿಷ್ಠ ವ್ಯಾಪ್ತಿಯನ್ನು ಹೊಂದಿದೆ. S1 ಸ್ಕೂಟರ್ ನ ಗರಿಷ್ಠ ವೇಗ 90kmph ಮತ್ತು ಓಲಾ S1 ಪ್ರೊ ಸ್ಕೂಟರ್ ವೇಗ 115kmph ಆಗಿದೆ. ಇದು 7 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಕೀಲೆಸ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
Bounce Infinity E1 Electric Scooter Flipkart Sale Today: Here’s Complete Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X