ಬೌನ್ಸ್ EV ಸ್ಕೂಟರ್ ಡಿಸೆಂಬರ್ 2ಕ್ಕೆ ಲಾಂಚ್!..ಬ್ಯಾಟರಿ ಇಲ್ಲದೆ ಖರೀದಿಸಬಹುದು!
ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಈ ನಿಟ್ಟಿನಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ನೂತನವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಈ ಸಾಲಿಗೆ ಈಗ ಬೌನ್ಸ್ ಕಂಪನಿಯು ಸಹ ಸೇರ್ಪಡೆ ಆಗಿದೆ. ಬೌನ್ಸ್ ನೂತನವಾಗಿ ಬೌನ್ಸ್ ಇನ್ಫಿನಿಟಿ (Bounce Infinity) ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಕೂಟರ್ ಅನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬೌನ್ಸ್ ಸಂಸ್ಥೆಯು ಹೊಸ ಎಲೆಕ್ಟ್ರಿಕ್ ವಾಹನವನ್ನು ಇದೇ ಡಿಸೆಂಬರ್ 2 ರಂದು ದೇಶದಲ್ಲಿ ಬಿಡುಗಡೆ ಮಾಡಲಿದೆ. ಅದೇ ದಿನ ಮುಂಗಡ ಬುಕಿಂಗ್ ಸಹ ಪ್ರಾರಂಭವಾಗುತ್ತದೆ. ಹೊಸ ಬೌನ್ಸ್ EV ಸ್ಕೂಟರ್ ಖರೀದಿಸಲು ಇಚ್ಛಿಸುವ ಗ್ರಾಹಕರು ಕೇವಲ 499 ರೂ.ಗೆ ಬುಕ್ ಮಾಡಬಹುದು. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆ ಮುಂದಿನ ವರ್ಷ ಪ್ರಾರಂಭವಾಗುತ್ತವೆ. ಗ್ರಾಹಕರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬ್ಯಾಟರಿ ಇಲ್ಲದೇ ಖರೀದಿ ಮಾಡಬಹುದಾಗಿದೆ. ಅದೂ ಹೇಗೆ ಅಂತೀರಾ ಮುಂದೆ ಓದಿರಿ.

ಬ್ಯಾಟರಿ ಇಲ್ಲದೇ ಖರೀದಿಸಬಹುದು!
ಬೌನ್ಸ್ ಸಂಸ್ಥೆಯು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 'Battery as a service' ಆಯ್ಕೆಯನ್ನು ಸಹ ನೀಡುತ್ತಿದೆ. ಗ್ರಾಹಕರು ಬ್ಯಾಟರಿ ಇಲ್ಲದೆಯೇ ಸ್ಕೂಟರ್ ಅನ್ನು ಖರೀದಿಸಬಹುದಾಗಿದೆ. ಇದರಿಂದ ಗ್ರಾಹಕರ ಬ್ಯಾಟರಿ ಹೊಂದಿರುವ ಸ್ಕೂಟರ್‌ಗಿಂತಲೂ ಶೇ.40 ರಷ್ಟು ಕಡಿಮೆ ವೆಚ್ಚದಲ್ಲಿ ಸ್ಕೂಟರ್ ಲಭ್ಯವಾಗಲಿದೆ. ಇನ್ನು ಬ್ಯಾಟರಿ ಇಲ್ಲದೆ ವಾಹನ ಖರೀದಿಸಿದರೆ ನಂತರ ಬೌನ್ಸ್‌ನ ಬ್ಯಾಟರಿ-ಸ್ವಾಪಿಂಗ್ ನೆಟ್‌ವರ್ಕ್ ಬಳಸಲು ಸಾಧ್ಯ. ಈ ಸೇವೆಯಲ್ಲಿ ಬೌನ್ಸ್‌ನ ಸ್ವಾಪಿಂಗ್ ನೆಟ್‌ವರ್ಕ್‌ನಿಂದ ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯೊಂದಿಗೆ ಖಾಲಿ ಬ್ಯಾಟರಿಯನ್ನು ವಿನಿಮಯ ಮಾಡಿಕೊಂಡಾಗ ಬ್ಯಾಟರಿ ಸ್ವಾಪ್‌ಗಳಿಗೆ ಮಾತ್ರ ಪಾವತಿಸಲು ಸಾಧ್ಯವಾಗುತ್ತದೆ.
ಬ್ಯಾಟರಿ ವಿಶೇಷ
ಬೌನ್ಸ್ ಸಂಸ್ಥೆಯ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಡಿಟ್ಯಾಚೇಬಲ್ ಲಿಥಿಯಂ-ಐಯಾನ್ ಬ್ಯಾಟರಿ ಅನ್ನು ಒಳಗೊಂಡಿರಲಿದೆ. ಗ್ರಾಹಕರು ಅಗತ್ಯವಿದ್ದರೆ ಈ ಬ್ಯಾಟರಿಯನ್ನು ಸ್ಕೂಟರ್‌ನಿಂದ ತೆಗೆಯಬಹುದು. ಅಲ್ಲದೇ ಅವರ ಅಗತ್ಯಕ್ಕೆ ಅನುಗುಣವಾಗಿ ಚಾರ್ಜ್ ಮಾಡಬಹುದು.
ಬೆಲೆಯ ಮಾಹಿತಿ
ಬೌನ್ಸ್ ಸಂಸ್ಥೆಯ ನೂತನ ಹೊಸ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯ ಮಾಹಿತಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ಸ್ಕೂಟರ್ ಇದೇ ಡಿಸೆಂಬರ್ 2 ರಂದು ಭಾರತದಲ್ಲಿ ಅನಾವರಣ ಮಾಡಲಿದೆ. ಇನ್ನು ಬರಲಿರುವ ಈ ಹೊಸ ಇ ಸ್ಕೂಟರ್ ಓಲಾ ಇವಿ ಸ್ಕೂಟರ್ ಸೇರಿದಂತೆ ಕೆಲವು ಜನಪ್ರಿಯ ಇವಿ ಸ್ಕೂಟರ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಹಾಗೆಯೇ ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಸಹ ಗ್ರಾಹಕರ ಗಮನ ಸೆಳೆದಿದೆ. ಈ ಸ್ಕೂಟರ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಸಿಗಲಿದೆ. ಓಲಾ ಇ-ಸ್ಕೂಟರ್‌ನ ಕೆಲವು ಫೀಚರ್ಸ್ ತಿಳಿಯೋಣ.
* ಓಲಾ ಇ-ಸ್ಕೂಟರ್‌ನ ಆಕರ್ಷಕ ಫೀಚರ್ ಎಂದರೇ ಇದನ್ನು ಹೋಮ್ ಚಾರ್ಜರ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ ಮನೆಯಲ್ಲಿ ಅಳವಡಿಸಲಾಗಿರುವ ಸಾಮಾನ್ಯ ಸಾಕೆಟ್ ನಿಂದ ಸ್ಕೂಟರ್ ಅನ್ನು ಚಾರ್ಜ್ ಮಾಡಬಹುದು.
* ಓಲಾ ಇ-ಸ್ಕೂಟರ್ ಗರಿಷ್ಠ ವೇಗ ಗಂಟೆಗೆ 90 ಕಿಮೀ ಆಗಿರುತ್ತದೆ.
* ಓಲಾ ಇ-ಸ್ಕೂಟರ್ ಅನ್ನು 18 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು. ಅದಕ್ಕಾಗಿ ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
* ಸ್ಮಾರ್ಟ್ ಫೋನ್ ಸಂಪರ್ಕವು ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿಯೂ ಲಭ್ಯವಿರುತ್ತದೆ.
* ಬೂಟ್ ಸ್ಥಳದ ದೃಷ್ಟಿಯಿಂದ ಇದು ಆಕರ್ಷಕವಾಗಿದೆ.
ಎರಡು ಹೆಲ್ಮೆಟ್‌ಗಳನ್ನು ಬೂಟ್ ಜಾಗದಲ್ಲಿ ಇಡುವ ಅವಕಾಶ ಹೊಂದಿರಲಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಸ್ಕೂಟರ್‌ನ ಬೂಟ್ ಜಾಗದಲ್ಲಿ ಕೇವಲ ಒಂದು ಹೆಲ್ಮೆಟ್ ಅನ್ನು ಮಾತ್ರ ಇಡಲು ಸ್ಥಳಾವಕಾಶ ನೀಡಿರುತ್ತಾರೆ.


Click it and Unblock the Notifications